ತರೀಕೆರೆ ಏರಿಯಾ – ಸಂತ ನಿಜಾಮುದ್ದೀನರ ಸಹವಾಸ
ಮೊಗಲರ ಕಾಲದ ವಿಶಿಷ್ಟ ಇಸ್ಲಾಮಿಕ್ ಸಂಸ್ಕೃತಿಯ ವಾಸನೆಯುಳ್ಳ ಅನೇಕ ಜಾಗಗಳು ದಿಲ್ಲಿಯಲ್ಲಿವೆ. ಅವುಗಳ ಲಕ್ಷಣವೆಂದರೆ-ಇಕ್ಕಟ್ಟಾದ ಗಲ್ಲಿಗಳು; ನುಸುಳಿ ನುಗ್ಗುವ ಸೈಕಲ್ ರಿಕ್ಷಾಗಳು; ಕಾಶ್ಮೀರಿ ಕಬಾಬ್ ಮಾಡುವ, ರೊಟ್ಟಿ, ಅತ್ತರು, ಟೋಪಿ, ಶ್ಯಾವಿಗೆ ಮಾರುವ ಅಂಗಡಿಗಳು.
ತರೀಕೆರೆ ಏರಿಯಾ: ನಮ್ಮಪ್ಪನ ತುಪಾಕಿ ಪುರಾಣ
ಅಪ್ಪನಿಗೆ ಕೋವಿಯ ಹುಚ್ಚು ಹಿಡಿದಿದ್ದು ಮಿಲಿಟರಿಯಿಂದ. ಅವನು ಯೌವನದಲ್ಲಿದ್ದಾಗ ಒಮ್ಮೆ ಅಮ್ಮನ ಜತೆ ಜಗಳ ಮಾಡಿಕೊಂಡು ತರೀಕೆರೆಗೆ ಹೋದನು. ಅಲ್ಲಿ ಮಿಲಿಟರಿಯವರು ದನದ ಜಾತ್ರೆಯ ಮೈದಾನದಲ್ಲಿ ತರುಣರನ್ನು ಸಾಲಾಗಿ ನಿಲ್ಲಿಸಿ ದೇಹಪರೀಕ್ಷೆ ಮಾಡುತ್ತಿದ್ದರು.
ತರೀಕೆರೆ ಏರಿಯಾ: ತೀರಿ ಹೋದ ಎರಡು ಜೀವಗಳು
ಬಂಡಾಯ ಸಾಹಿತ್ಯ ಚಳುವಳಿಯ ಸಮ್ಮೇಳನಗಳು ನಡೆಯುತ್ತಿದ್ದವು. ಯುವಕರಾಗಿದ್ದ ನಾವು ಹೆಗಲಿಗೊಂದು ಬ್ಯಾಗು ನೇತುಹಾಕಿಕೊಂಡು, ಅದರಲ್ಲಿ ಒಂದು ಜತೆ ಬಟ್ಟೆ ತುರುಕಿಕೊಂಡು, ಕರ್ನಾಟಕದ ಯಾವುದೊ ಒಂದು ಮೂಲೆಯ ಊರಿಗೆ ಹೋಗುತ್ತಿದ್ದೆವು.
ತರೀಕೆರೆ ಏರಿಯಾ: ತೇಜಸ್ವಿ ಇಲ್ಲದೇ `ನಿರುತ್ತರ`
ಹಕ್ಕಿ ಫೋಟೊಗಾಗಿ ಮರಸಿನಲ್ಲಿ ಕೂತಿದ್ದ ತೇಜಸ್ವಿಗೆ ಊಟಕ್ಕೆ ಕೂಗಿ ಕರೆದೊ, ಒಗ್ಗರಣೆಗೆ ಕರಿಬೇವಿನಸೊಪ್ಪು ತರಲೆಂದು ಹೋಗಿ ಹಕ್ಕಿ ಓಡಿಸಿಯೊ ಬೈಸಿಕೊಂಡಿದ್ದನ್ನು ರಾಜೇಶ್ವರಿ ಪ್ರೀತಿಯಿಂದ ನೆನೆದರು- ಹಾಗೆ ಬೈಯುವವರಿಲ್ಲವಲ್ಲ ಎಂಬ ಕೊರಗಿನಲ್ಲಿ.
ತರೀಕೆರೆ ಏರಿಯಾ: ಕೆಟ್ಟು ಬದುಕುತ್ತಿರುವ ಲಖನೊ
ಲಖನೊ ಹೋಗುವ ಬಯಕೆ ಈ ವರ್ಷದ ಆದಿಯಲ್ಲಿ ಈಡೇರಿತು. ಜೋಗಿಗೆ ಬೆನ್ನುಹತ್ತಿದ ಜೋಗಿಣಿಯಂತೆ ಬಾನು ಕೂಡ ಜತೆಗೆ ಹೊರಟಳು. ಬೆಂಗಳೂರು-ಗೋರಖಪುರ ರೈಲು ಹತ್ತಿ ಹೊರಟರೆ, ಕಾನ್ಪುರದಲ್ಲಿ ಬೆಳಕು ಹರಿಯುತ್ತದೆ.
ತರೀಕೆರೆ ಏರಿಯಾ:ಸಾಹಿತ್ಯ ಸಮ್ಮೇಳನ,ಮಂಡಕ್ಕಿ ಮತ್ತು ಬಂಡಾಯ
ಚಿತ್ರದುರ್ಗ ಸಮ್ಮೇಳನದಲ್ಲಿ ಕೆಲವು ಪುಸ್ತಕ ಮಾರಾಟಗಾರರು, ಮಿರ್ಚಿ ಮಾರುವ ಕಡೆ ಪುಸ್ತಕದ ಅಂಗಡಿ ಹಾಕಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತ ಮಾಡುತ್ತಿದ್ದರು. ಇದು ವ್ಯವಸ್ಥಾಪಕರ ಅಜಾಗರೂಕತೆ ಮತ್ತು ಅಸೂಕ್ಷ್ಮತೆಯಿಂದ ಆಗಿರುವ ಲೋಪ ನಿಜ.
ತರೀಕೆರೆ ಏರಿಯಾ: ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠರ ಕುರಿತು
ನರಳಿಕೆ ಪರಿತಾಪ ನೋವುಗಳಿಂದ ಬದುಕನ್ನು ಕೊನೆಗಾಣಿಸಿದ ಹಿರೇಮಠರ ಜೀವನ ಮಾತ್ರ, ಓದು ಬರೆಹ ಹೋರಾಟ ತಿರುಗಾಟ ಚರ್ಚೆ ಹಾಗೂ ತಾತ್ವಿಕ ಜಗಳಗಳಿಂದ ಕೂಡಿ ವರ್ಣರಂಜಿತವಾಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ನಾನು ಅವರ ಹೆಸರನ್ನು ಕೇಳಿದ್ದೆ.
ತರೀಕೆರೆ ಏರಿಯಾ: ಗೋವಿಂದರಾಜು ಮೇಷ್ಟರ ನೆನಪು
ಇಡೀ ಶಾಲೆಯಲ್ಲಿ ನಾನೊಬ್ಬನೇ ಮುಸ್ಲಿಂ ವಿದ್ಯಾರ್ಥಿ. ಹೆಚ್ಚಿನವರು ಲಿಂಗಾಯತ ಹುಡುಗರು. ಇಲಾಖೆಯಿಂದ ಯಾರಾದರೂ ಇನ್ ಸ್ಪೆಕ್ಷನ್ನಿಗೆ ಬಂದರೆ ಅಥವಾ ಊರ ಮುಖಂಡರು ಶಾಲೆಯತ್ತ ಬಂದರೆ, ಮೇಷ್ಟ್ರು ಹುಡುಗರ ಪರವಾಗಿ ನನ್ನನ್ನೂ, ಹುಡುಗಿಯರ ಪರವಾಗಿ ಚಂದ್ರಮ್ಮನನ್ನೂ ನಿಲ್ಲಿಸಿ ಪಾಠ ಓದಿಸುತ್ತಿದ್ದರು.
ತರೀಕೆರೆ ಏರಿಯಾ: ಮಳಖೇಡದಲ್ಲಿ ಎರಡು ದಿನ
ಮಳಖೇಡವು ರಾಷ್ಟ್ರಕೂಟರ (೮೧೮-೯೮೨) ರಾಜಧಾನಿ. ಅದು ಕಾಗಿಣಾ ಹೊಳೆಯ ದಡದಲ್ಲಿದೆ. ಬಿಜಾಪುರ ಬಿಟ್ಟರೆ ಬಹುತೇಕ ರಾಜಧಾನಿಗಳು ನದಿತೀರದಲ್ಲೇ ಬೀಡುಬಿಟ್ಟಿವೆ. ಸೈನಕ್ಕೂ ಪಟ್ಟಣಕ್ಕೂ ಅರಮನೆಗೂ ಬಹಳ ನೀರು ಬೇಕಷ್ಟೆ. ನಮ್ಮ ಆಧುನಿಕ ಮಹಾನಗರಗಳೂ ನದಿತೀರದದಲ್ಲೆ ಇವೆ.










