ಸಮ-ಬೆಸಗಳ ಅರಿವು, ಹರಿವು: ವಿನತೆ ಶರ್ಮ ಅಂಕಣ
ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರಕ್ಕೆ ಭಾರತದ ಹೆಸರುವಾಸಿ ರೆಸ್ಟರೆಂಟ್ ‘ಶರವಣ ಭವನ’ ಕಾಲಿಟ್ಟಿದೆ. ಇದೇನು ಒಂದು ಹೇಳಿಕೊಳ್ಳುವಂತಹ ಸುದ್ದಿಯಾ ಎಂದು ಹುಬ್ಬೇರಿಸಬೇಡಿ ಎಂಬ ಕಳಕಳಿಯ ವಿನಂತಿ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ ಶರವಣ ಭವನವು ಬಂದು ನೆಲೆಯೂರಿ ಅಲ್ಲಿನ ಎಲ್ಲರೂ ಊಟ ತಿಂಡಿಗಳನ್ನು ಸವಿಯುತ್ತಿದ್ದಾಗ ಆಸ್ಟ್ರೇಲಿಯಾದ ಬೇರೆ ನಗರಗಳಲ್ಲಿ ದಕ್ಷಿಣ ಭಾರತೀಯರು ಹೊಟ್ಟೆ ಉರಿಸಿಕೊಳ್ಳುತ್ತಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಸಾಹೇಬರ ಟೇಪಿನೊಳಗೆ ನೀಲಿಯ ಗೋವಿಂದ: ಸುಧಾ ಆಡುಕಳ ಅಂಕಣ
ಬೇರೆ ದಿನಗಳಲ್ಲಿ ಬಾಯಿ ಮುಚ್ಚದಂತೆ ಸೋಬಾನೆ ಪದ ಹೇಳುವ ಗಣಪಿ, ಗೋಯ್ದು ಎಲ್ಲರನ್ನೂ ಎಷ್ಟು ಒತ್ತಾಯಿಸಿದರೂ ಬಾಯಿಬಿಡಲಿಲ್ಲ. “ಅದ ಪೆಟ್ಟಿಗಿ ಮುಂದೆಲ್ಲ ಹೇಳೂಕೆ ಆಗೂದಿಲ್ವೆ. ಹೆದ್ರೀಕಿ ಬರ್ತದೆ. ದೆನಿ ನಡಗಿ ಗಂಟಲು ಕಟ್ಟೋಯ್ತದೆ. ಮತ್ತೆ ಸಾಯೇಬ್ರು ಕೇಳಿದ್ರೆ ಕಿವಿ ಮುಚ್ಕಬೇಕಾಗೂದು.” ಎನ್ನುತ್ತಾ ಹಾಡಲು ನಿರಾಕರಿಸಿದರು. ಸಾಯೇಬರನ್ನು ನಿರಾಸೆಗೊಳಲಿಸಲು ಇಷ್ಟವಿಲ್ಲದ ನೀಲಿಯ ಅಪ್ಪ ಯಾವುದಾದರೂ ಹಾಡನ್ನು ಹೇಳುವಂತೆ ಮಗಳನ್ನು ಪುಸಲಾಯಿಸಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ
ಅಮೆರಿಕಾದ ಸ್ವಾತಂತ್ರೋತ್ಸವ: ಎಂ.ವಿ. ಶಶಿಭೂಷಣ ರಾಜು ಅಂಕಣ
ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ಈ ವರುಷದ ಸ್ವಾತಂತ್ರ್ಯ ದಿನವನ್ನು ಸುಮಾರು ಹನ್ನೊಂದು ಸಾವಿರ ಜನರಿಗೆ ಅಮೆರಿಕದ ಪೌರತ್ವ ಕೊಟ್ಟು ವಿಶೇಷವಾಗಿ ಆಚರಿಸುತ್ತಿದೆ. ಅಮೆರಿಕಾದ ಜನ ಸ್ವತಂತ್ರ ಪಡೆದು ತುಂಬಾ ಮುಂದೆ ಹೋಗಿದ್ದಾರೆ. ಪ್ರಪಂಚದ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಬಹುತೇಕ ಎಲ್ಲಾ ವಲಯಗಳಲ್ಲೂ ಬಲಾಢ್ಯ ದೇಶವಾಗಿ ಅಮೆರಿಕಾ ಹೊರಹೊಮ್ಮಿದೆ. ಪ್ರಪಂಚದ ಇತರ ದೇಶಗಳ ತನ್ನ ಪ್ರಭಾವ ಬೀರುವಷ್ಟು ಬೆಳೆದಿದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
ಅಸಾಂಜ್ ಮತ್ತು ಕೆಂಪು ಮಣ್ಣಿನ ಬೆಂಕಿ: ವಿನತೆ ಶರ್ಮ ಅಂಕಣ
ಈ ೨೧ ನೇ ಶತಮಾನದಲ್ಲಿ ಕೂಡ ಆಸ್ಟ್ರೇಲಿಯನ್ ಸಮಾಜದಲ್ಲಿ ತಮ್ಮ ಜನರನ್ನು ಕಪ್ಪು ಜನರು ಎಂದು ಕೀಳಾಗಿ ನೋಡುವುದನ್ನು ಪ್ರಶ್ನಿಸುವುದು, ‘ನಿಮ್ಮ ಬ್ಲಾಕ್ ಬಣ್ಣ, ಬ್ಲಾಕ್ ರೇಸಿಸಮ್’ ನಮ್ಮ Blak ಅಸ್ಮಿತೆಗೆ ಭಂಗ ತರುವುದಿಲ್ಲ, ನಮ್ಮ ಕೆಂಪು ಮಣ್ಣು, ಉರಿಯುವ ಸೂರ್ಯ ಇರುವ ತನಕವೂ ನಾವು ಈ ನೆಲದ ಮಕ್ಕಳು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಬರ್ರನೆ ಬಂತೋ ಮಣ್ಣಿನ ಲಾರಿ: ಸುಧಾ ಆಡುಕಳ ಅಂಕಣ
ಆಸೆಗಣ್ಣುಗಳಿಂದ ನೋಡುತ್ತಿರುವ ಹೆಣ್ಮಕ್ಕಳಿಗೂ ಗಂಡಸರ ಅಂಗಿಯನ್ನು ತೊಟ್ಟು ಬರುವುದಾದರೆ ಮಣ್ಣು ಹೊರುವ ಕೆಲಸ ನೀಡುವ ಆಮಿಷವೊಡ್ಡಲಾಯಿತು. ಏನಾದರಾಗಲಿ, ಕೈತುಂಬಾ ದುಡ್ಡು ಸಿಗುವುದಲ್ಲ ಎಂಬ ಆಸೆಯಿಂದ ಕೆಲವು ಹೆಣ್ಣು ಮಕ್ಕಳು ಮನೆಯವರ ಮಾತಿಗೆಲ್ಲ ತಲೆಕೆಡಿಸಿಕೊಳ್ಳದೇ ಅಣ್ಣಂದಿರ ಅಂಗಿಯನ್ನು ತಮ್ಮ ಲಂಗ ಬ್ಲೌಸಿನ ಮೇಲೆ ಹಾಕಿಕೊಂಡು ಸಿದ್ಧರಾಗಿಯೇಬಿಟ್ಟರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹನ್ನೊಂದನೆಯ ಕಂತು ನಿಮ್ಮ ಓದಿಗೆ
ಅಮೇರಿಕಾದ ಪೋಲಿಸಿನವರು…: ಎಂ.ವಿ. ಶಶಿಭೂಷಣ ರಾಜು ಅಂಕಣ
ತಮಗೆ ಯಾವುದೇ ತೊಂದರೆ ಇಲ್ಲದವರೆಗೆ ಇಲ್ಲಿನ ಪೋಲಿಸಿನವರು ಸೌಮ್ಯವಾಗಿ, ಗೌರವಿತವಾಗಿ ಮಾತನಾಡಿಸುತ್ತಾರೆ. ಸಾರ್ವಜನಕರಿಗೆ ತೊಂದರೆ ಕೊಡುವುದಿಲ್ಲ. ಸಾಧ್ಯವಾದಷ್ಟೂ ಸಹಾಯ ಮಾಡುತ್ತಾರೆ. ಆದರೆ ಅನುಮಾನ ಬಂದಲ್ಲಿ ಕೈಗೆ ಕೋಳ ಹಾಕಿ ಎಳೆದೊಯ್ಯುತ್ತಾರೆ. “ನಾನ್ಯಾರು ಗೊತ್ತಾ” ಎಂದು ಹೇಳುವವರು ಅಲ್ಲಿ ಇಲ್ಲಿ ಕಾಣಸಿಕ್ಕರೂ, ಅಂತವರಿಗೆ ಕ್ಯಾರೇ ಅನ್ನದೆ, ಕಾನೂನಿನಂತೆ ಕೆಲಸ ಮಾಡುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
ಯಮರಾಜ ಕರೆದಾಗ, ಹುಲುಮನುಷ್ಯರಾದಾಗ: ವಿನತೆ ಶರ್ಮ ಅಂಕಣ
ಈ ನನ್ನ ಎಲ್ಲಾ ಅವಾಂತರಗಳಲ್ಲಿ ನನಗೆ ನೆನಪಾಗುತ್ತಿದ್ದದ್ದು ಮೈಕಲ್ ಮೋಸ್ಲಿ ಮತ್ತು ಅವರ ಟಿವಿ ಕಾರ್ಯಕ್ರಮಗಳು. ಅವುಗಳಲ್ಲಿ ತೋರಿಸುತ್ತಿದ್ದ ಪ್ರಯೋಗಗಳನ್ನು ನಾವು ಸಾಮಾನ್ಯ ಜನರು ಎಚ್ಚರಿಕೆ ವಹಿಸದೆ ಅನುಕರಣೆ ಮಾಡಲು ಹೋದರೆ ಆಗುವ ಅನಾಹುತವನ್ನು ನಾನೇ ಅನುಭವಿಸಿದ್ದೆ. ಅನೇಕ ಬಾರಿ ‘ಆ ಯಾವುದೋ ದೇವತೆಗಳು ನನಗೆ ಎಚ್ಚರಿಕೆ ಕೊಟ್ಟರು. ಎಷ್ಟಾದರೂ ನಾನೊಬ್ಬ ಹುಲುಮಾನವಳು’ ಎಂದು ನನಗೆ ನಾನೇ ಹೇಳಿಕೊಂಡು ಅದನ್ನು ಬೇರೆಯವರಿಗೂ ಹೇಳಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಕುರ್ ಮಾವಡ ಕೊಂಡ ದೇವಡಾ…..: ಸುಧಾ ಆಡುಕಳ ಅಂಕಣ
ಮೊದಲು ಯಾರೆಲ್ಲ ಹೋಗುವವರೆಂದು ಪಟ್ಟಿಯಾಗಬೇಕು, ನಾಟಕದ ಟಿಕೇಟಿಗೆ ಹಣದ ಹೊಂದಿಕೆಯಾಗಬೇಕು, ಹುಡುಗಿಯರ ಅಣಿಯಾದ ದಿನ ಊರ ಹುಡುಗಿಯರಿಗೆ ಹಬ್ಬ. ತೋಟದ ತುಂಬೆಲ್ಲ ಅಲೆದು ಅಬ್ಬಲಿಗೆ ಹೂವನ್ನಾಯ್ದು ಕಟ್ಟುವ ಸಂಭ್ರಮವೇನು? ನಾಟಕ ನೋಡುವಾಗ ತಿನ್ನಲೆಂದು ಶೇಂಗಾ ಹುರಿಯುವ ಸಡಗರವೇನು? ಅತ್ತರಿನೆಣ್ಣೆಯನ್ನು ಪೂಸಿ ತಲೆಬಾಚುವ ಸಂಭ್ರಮವೇನು?
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹತ್ತನೆಯ ಕಂತು ನಿಮ್ಮ ಓದಿಗೆ
ಪ್ರೀತಿಯೆಂಬ ಭಾವ ಮಾತ್ರ ಸ್ಥಾಯಿಯಾಗಲಿ…: ಆಶಾ ಜಗದೀಶ್ ಅಂಕಣ
ನಂತರದ ನಾಲ್ಕೈದು ದಿನಗಳು ನಿತ್ಯದ ನಿಯತಿಯಲ್ಲಿಯೇ ಕಳೆದವು. ಅವಳು ನಮ್ಮಲ್ಲೇ ಒಬ್ಬಳಂತಾಗಿ ಹೋಗಿದ್ದಳು. ಯಾವ ಜನ್ಮದ ಋಣವೋ ಎಂಬಂತೆ. ಪ್ರತಿ ನಿತ್ಯ ಅವಳನ್ನು, ಅವಳ ಮಕ್ಕಳನ್ನು ನೋಡುವುದು ಅಭ್ಯಾಸವಾಯಿತು. ಇವತ್ತೂ ಎಂದಿನಂತೆಯೇ ಕೋಣೆಯ ಒಳ ಹೋಗಿ ಬಗ್ಗಿ ನೋಡಿದೆ. ಅವಳಾಗಲೀ ಅವಳ ಒಂದೇ ಒಂದು ಕೂಸೇ ಆಗಲೀ ಎಲ್ಲಿಯೂ ಕಾಣಲಿಲ್ಲ… ಮನಸು ಮುದುಡಿ ಕಣ್ಣುಗಳು ತುಂಬಿಕೊಂಡವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ