ಕವಿಜೋಡಿಯ ದುರಂತಗೀತ
ಕವಿಜೋಡಿಯ ದುರಂತ ಅಂತ್ಯವೂ ಬಹಳ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಕಾವ್ಯದೇವಿಯೇ ಹೇಳಿ ಮಾಡಿಸಿದಂಥ ಜೋಡಿಯೊಂದು ಪರಸ್ಪರರ ವಿಶ್ವಾಸ ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ. ತನ್ನ ಗಂಡ ಆಸಿಯಾ ಎಂಬುವವಳ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದೆ ತಮ್ಮಿಬ್ಬರ ಪ್ರೇಮದ ಕುರುಹಾಗಿದ್ದ ಕವಿಕುಟೀರದಿಂದ ಅವನ ಕವಿತೆ-ಟಿಪ್ಪಣಿಗಳ ಪುಸ್ತಕವನ್ನು ಸುಟ್ಟು ಟೆಡ್ ನನ್ನು ಹೊರಹಾಕುವುದು..
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ
ಸುಳಿಯ ಸೆಳವಿಗೆ ಸಿಲುಕದೇ…
ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಮೇಕಪ್ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್ ಬರೆಯುವ “ರಂಗ ವಠಾರ” ಅಂಕಣ
ಟಿಶ್ಯೂಮಾರುವ ಹುಡುಗ ಸುಳ್ಳು ಹೇಳಲಿ ಬಿಡಿ
ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಪ್ರವೇಶ ಮಾಡುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ.
ದಾದಾಪೀರ್ ಜೈಮನ್ ಬರೆಯುವ ಅಂಕಣ
ಆಶ್ರಯ ಕೊಡು-ಕೊಳ್ಳುವಿಕೆಯ ಕಹಿ ಸತ್ಯ
ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ದುಬಾರಿ ಲೋಕದಲ್ಲಿ ರಂಗಪ್ರದರ್ಶನಗಳ ಪೂರ್ವಾಪರ
ಧೈರ್ಯ ಮಾಡಿ ರಂಗಮಂದಿರದ ಬಾಡಿಗೆ ಕಟ್ಟಿ ನಾಟಕ ಮಾಡಲು ಮುಂದಾಗುತ್ತೇವೆ ಅಂತಿಟ್ಟುಕೊಳ್ಳಿ. ಜನ ಬರಬೇಕಲ್ಲ ? ಪೆಟ್ರೋಲ್ ದರ ಯಾವ ಶಿಖರವನ್ನ ಗುರಿಯಾಗಿಟ್ಟುಕೊಂಡಿದೆ ಎನ್ನುವುದು ತಿಳಿಯುತ್ತಿಲ್ಲ. ಅಡುಗೆ ಅನಿಲ ದರ ಕೇಳಿದರೆ ಎದೆ ಸ್ಫೋಟಗೊಳ್ಳುತ್ತದೆ. ಅಡುಗೆಗೆ ಬಳಸುವ ಎಣ್ಣೆ ತನಗೆ ಬೆಲೆ ಬರುತ್ತಿರುವುದಕ್ಕೆ ವ್ಯರ್ಥವಾಗಿ ಹಿಗ್ಗುತ್ತಿದೆ. ನೀವು ರಂಗಮಂದಿರಗಳ ಬಾಡಿಗೆ ದರ ಏರಿಸಿದರೆ ನಾವು ರಂಗತಂಡಗಳವರು ಏನು ಮಾಡಬೇಕು? ಎನ್. ಸಿ. ಮಹೇಶ್. ಬರಹ
ಒಳ್ಳೆಯ ಮತ್ತು ಕೆಟ್ಟ ಸಮಾಚಾರಗಳ ಬೇವುಬೆಲ್ಲ
ಶುಭಕೃತ್ ಸಂವತ್ಸರವು ಅಡಿಯಿಟ್ಟಿದೆ. ಆದರೆ ಕಾಲವು ಅದೇ ಪ್ರಕಾರ ಒಳಿತುಕೆಡುಕುಗಳನ್ನು ಒಟ್ಟಿಗೆ ಕಟ್ಟಿಕೊಂಡು ಸಾಗುತ್ತಿದೆ. ಪ್ರಕೃತಿ ವಿಕೋಪವೆಂಬ ಬೇವು, ಮಾನವೀಯತೆ ಎಂಬ ಬೆಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ ಟೆನಿಸ್ ಪಟು ಆಶ್ ಬಾರ್ಟಿ ನಿವೃತ್ತಿಯ ಬೇಸರ. ಆದರೆ ಅವರ ಮುಂದಿನ ನಿರ್ಧಾರ ಖುಷಿ ಕೊಡುವುದು. ಪ್ರವಾಹವು ನೋವು ಕೊಡುವುದು. ಡಾ. ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಪತ್ರದಲ್ಲಿ ಅಲ್ಲಿನ ಕ್ಷೇಮ ಸಮಾಚಾರಗಳನ್ನು ತಿಳಿಯೋಣ.
ಚೂಟಿ ಹುಡುಗನ ಸೃಜನಶೀಲತೆ ಹೇಳಿದ ಪಾಠ
ಯಾವಾಗ ಅಧ್ಯಾಪಕನಾಗಿ ಶಾಲೆ ಸೇರಿ, ನಾನೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾಡಲು ಪ್ರಾರಂಭ ಮಾಡಿದೆನೋ, ಮಕ್ಕಳಿಗೆ ಪರೀಕ್ಷೆಯ ತಯಾರಿಯ ಬಗ್ಗೆ ಹೇಳಬೇಕಾಗಿ ಬಂತೋ ಆಗ ಪೇಚಿಗೆ ಸಿಲುಕುತ್ತಿದ್ದೆ. ಮಕ್ಕಳಿಗೆ ಪರೀಕ್ಷಾ ತಯಾರಿಯ ಉಪದೇಶ ಮಾಡುವಾಗ ನಾನು ಕೇಳಿದ ನನ್ನಪ್ಪನ ಮತ್ತು ನನ್ನ ಗುರುಗಳ ಮಾತುಗಳು ನನಗೆ ಅರಿವಿಲ್ಲದಂತೆ ಬಾಯಿಗೆ ಬಂದು ಬಿಡುತ್ತಿತ್ತು. ಉಪದೇಶವನ್ನು ಮಾಡಿದ ಬಳಿಕವೂ ಮಕ್ಕಳು ಉತ್ತರಪತ್ರಿಕೆಯಲ್ಲಿ ಬಿಟ್ಟ ಖಾಲಿ ಜಾಗಗಳನ್ನು ನೋಡಿದಾಗ ನನ್ನ ಉಪದೇಶಗಳು ಪ್ರಯೋಜನಕ್ಕೆ ಬಾರದೇ ಇರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ
ನಾಲ್ಕು ರಾಜ್ಯಗಳ ಏಳಿಗೆಯ ಅವಲೋಕನ
ಕೃತಿಯು ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳನ್ನು ಆದರ್ಶವಾಗಿರಿಸಿಕೊಂಡು ಕಳೆದ ನೂರು ವರ್ಷಗಳಿಂದ ಆದ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನೂರು ವರ್ಷಗಳ ಮುಂಚೆ ಪರಿಗಣನೆಗೆ ತೆಗೆದುಕೊಂಡ ನಾಲ್ಕೂ ರಾಜ್ಯಗಳು ಹೆಚ್ಚುಕಮ್ಮಿ ಒಂದೇ ಪರಿಸ್ಥಿತಿಯಲ್ಲಿದ್ದವು. ಆದರೆ ಉಪರಾಷ್ಟ್ರೀಯತೆಯ ಪ್ರಜ್ಞೆ ಬೆಳೆಸಿಕೊಂಡ ತಮಿಳುನಾಡು ಮತ್ತು ಕೇರಳ ಪ್ರಗತಿ ಹೊಂದಿದರೆ ಆ ಪ್ರಜ್ಞೆ ಬೆಳೆಸಿಕೊಳ್ಳಲು ವಿಫಲವಾದ ರಾಜ್ಯಗಳು ಹೇಗೆ ಹಿಂದುಳಿದಿವೆ ಅನ್ನುವುದನ್ನು ವಿವರಿಸಲಾಗಿದೆ.
ರುಚಿಯ ದಾರಿ ಹಿಡಿದವರ ಕಥೆ
ಕೋವಿಡ್ ಮೊದಲನೇ ಅಲೆಯ ಕಾರಣದಿಂದ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದರು. ಮತ್ತೊಂದಿಷ್ಟು ಕಡೆ ಪರ್ಸಂಟೇಜ್ ಸ್ಯಾಲರಿಗೆ ಬಂದು ನಿಂತಿತ್ತು. ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಮಿಸಸ್ ಪ್ರೆಸಿಲ್ಲಾ ಅವರನ್ನು ಹೆಚ್ಚುವರಿ ಹುದ್ದೆಗಳನ್ನು ವಜಾ ಮಾಡುವ ನೆಪ ಹೇಳಿ ಕೆಲಸದಿಂದ ತೆಗೆದು ಹಾಕಿದ್ದರು. ಅವರೇ ರೆಫರ್ ಮಾಡಿದ್ದ, ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಇಂಗ್ಲಿಷ್ ಭಾಷಾ ಅಧ್ಯಾಪಕರಾಗಿ ಸೇರಿಕೊಂಡರು. ನಾವೀಗ ಸಹೋದ್ಯೋಗಿಗಳಾಗಿದ್ದೆವು. ಜಂಕ್ಷನ್ ಪಾಯಿಂಟ್ ಅಂಕಣದಲ್ಲಿ ದಾದಾಪೀರ್ ಜೈಮನ್ ಬರಹ









