ಇದ್ದಷ್ಟು ಇರಲಿ…: ಎಸ್ ನಾಗಶ್ರೀ ಅಜಯ್ ಅಂಕಣ
ತೀರ ಅತಿಯೆನಿಸುವಷ್ಟು ಅಲ್ಲದಿದ್ದರೂ ನಾವೆಲ್ಲರೂ ಒಂದಿಲ್ಲೊಮ್ಮೆ ಈಗಿರುವುದೇ ಚೆಂದ ಎಂದುಕೊಳ್ಳಲು ಆಸೆಪಟ್ಟವರೇ. ಬಡತನ, ಅನಾರೋಗ್ಯ, ಅಜ್ಞಾನಗಳನ್ನು ರಮ್ಯವಾಗಿ ಚಿತ್ರಿಸುತ್ತಾ ಪರಿಶ್ರಮದಿಂದ ಮೇಲೇರಿದವರ ಸಾಧನೆಯನ್ನು ಕಡೆಗಣಿಸಿ ಮಾತನಾಡುತ್ತಾ ಹುಸಿ ಆನಂದ ಹೊಂದಿದವರೇ. ಬಹಳಷ್ಟು ಸಲ ಎದುರಿನವರ ಮೂಗಿನ ನೇರಕ್ಕೆ ಮಾತನಾಡಿ ‘ಒಳ್ಳೆಯವರಾಗಿ’ ಕಾಣುವ ಆಸೆಯೇ ಡೋಂಗಿಗಳ ಬಡಾಯಿಗೆ ಜೈಹೋ ಎನ್ನುವಂತೆ ಮಾಡಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ
ಬಂದೇ ಬಿಟ್ಟ ಆಲ್ಫ್ರೆಡ್: ಡಾ. ವಿನತೆ ಶರ್ಮ ಅಂಕಣ
ನಾಲ್ಕು ದಿನಗಳ ಹಿಂದೆ ಅಂದರೆ ಮಂಗಳವಾರದಿಂದ ನಮ್ಮ ಸ್ಥಳೀಯ ನಗರಪಾಲಿಕೆಗಳು ನೂರಾರು ನಿರ್ಧಾರಗಳನ್ನು ತೆಗೆದುಕೊಂಡಿವೆ. ‘ಸೇಫ್ಟಿ ಫಸ್ಟ್’ ಎನ್ನುವ ಮಂತ್ರವನ್ನು ಜಪಿಸಿ ನಮ್ಮ ಯೂನಿವರ್ಸಿಟಿಗಳು, ಶಾಲೆಗಳು, ಅಂಗಡಿ ವಹಿವಾಟುಗಳು, ಕಚೇರಿಗಳು ಬಾಗಿಲು ಮುಚ್ಚಿದವು. ಅದಕ್ಕೆ ಮುನ್ನ ಮಂಗಳವಾರದಿಂದ ಎಲ್ಲಾ ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನರ ನೂಕುನುಗ್ಗಲು. ಆಹಾರ ಪದಾರ್ಥ, ಕುಡಿಯುವ ನೀರು, ಟಾಯ್ಲೆಟ್ ಪೇಪರ್ ರೋಲ್, ಇತ್ಯಾದಿಗಳು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮಾಯ! ಬ್ರೆಡ್, ಹಾಲು, ಮೊಟ್ಟೆಗಳು ಸಿಕ್ಕುವುದೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ನಾವು ಗುರುವಾರ ಅಲ್ಲಿಇಲ್ಲಿ ಹುಡುಕಾಡಿದ್ದಾಯ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಮನೆವಾಳ್ತೆ ಎಂಬ ಹೊನ್ನ ಸಂಕೋಲೆ: ಎಲ್.ಜಿ.ಮೀರಾ ಅಂಕಣ
ಅವಳ ಗಂಡನ ಮನೆಯವರು, ಸೊಸೆ ತಮ್ಮ ಮನೆಯನ್ನು ಬಿಟ್ಟು ಹೋದದ್ದು ದೊಡ್ಡ ವಿಷಯವೇನಲ್ಲ ಎಂಬಂತೆ ಇನ್ನೊಂದು ಹುಡುಗಿಯನ್ನು ಸೊಸೆಯಾಗಿ ತಂದುಕೊಳ್ಳುತ್ತಾರೆ! ಸಿನಿಮಾ ಕೊನೆಯಾಗುವ ಹೊತ್ತಿನಲ್ಲಿ ಈ ಹೊಸಹುಡುಗಿಯ ಮೂಕದುಡಿಮೆ ಪ್ರಾರಂಭವಾಗಿರುತ್ತದೆ! ಅಲ್ಲಿಗೆ `ಒಬ್ಬ ಸೊಸೆಯ `ಪ್ರತಿಭಟನೆ’ಯಿಂದ ಅಸೂಕ್ಷ್ಮ, ಪುರಾತನ, ಹಾಗೂ ಕೋಣನ ಚರ್ಮದ ಗಂಡಾಳಿಕೆಯ ವ್ಯವಸ್ಥೆಗೆ ಏನೂ ಪರಿಣಾಮವಾಗುವುದಿಲ್ಲ, ಅದರ ಕೂದಲು ಸಹ ಕೊಂಕುವುದಿಲ್ಲ, ಅದು ಮಾಡಿಟ್ಟಿರುವ `ಮನೆ’ಗಳಲ್ಲಿ ಮನೆವಾಳ್ತೆ ದುಡಿತ ಮಾಡಲು ಒಬ್ಬ ಮೂಗಬಸವಿ ಹೋದರೆ ಇನ್ನೊಬ್ಬ ಮೂಗಬಸವಿ ಬರುತ್ತಾಳೆ, ಮೂಗಬಸವಿಯರಿಗೇನೂ ಕೊರತೆ ಇಲ್ಲ ನಮ್ಮ ಸಮಾಜದಲ್ಲಿ’ ಎಂಬ ನಿರ್ದಯಿ ಸಂದೇಶ ಸಿಗುತ್ತದೆ ನೋಡುಗರಿಗೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಆತಿಥ್ಯದ ಮುಖಗಳು: ಎಸ್. ನಾಗಶ್ರೀ ಅಜಯ್ ಅಂಕಣ
ಮಾತಾಡಿದರೂ ಅಂತಸ್ತು ಪ್ರದರ್ಶಿಸುವ, ತಾವೆಷ್ಟು ಅನುಕೂಲಸ್ಥರು, ಬುದ್ಧಿವಂತರು, ಜಗದ ಎಲ್ಲ ಸಮಾಚಾರ ಬಲ್ಲವರು ಎಂಬ ಒಣಪ್ರತಿಷ್ಠೆ ತೋರ್ಪಡಿಸುವ ಪ್ರಚಾರತಂತ್ರದ ಗಿಮಿಕ್ಕು ಮಾತ್ರವೇ. ಗಂಡ-ಹೆಂಡತಿ ಮನೆಯಲ್ಲಿ ಕಾದಾಡುವ ಬದಲು ಅಲ್ಲಿ ಕಣ್ಣಲ್ಲೇ ಗುರಾಯಿಸ್ತಾ, ‘ನಿಂಗಿದು ಬೇಕಿತ್ತಾ ಮಗನೆ?’ ಎಂಬ ಸಂದೇಶ ರವಾನಿಸುತ್ತಾ ಕಾಲ ತಳ್ಳಬೇಕು. ಸದ್ಯ ಗಂಟೆಗೆ ಅರವತ್ತೇ ನಿಮಿಷ ಅನ್ನಿಸುವಾಗಲೇ ತರಬೇತುಗೊಂಡ ನಾಯಿಯಂತೆ ಊಟ, ತಿಂಡಿ, ಕಾಫಿ ವಾಸನೆ ಹಿಡಿದು ಊಟದ ಆಟ ಮುಗಿಸಿ, ತಾಂಬೂಲ ಪಡೆದು ‘ಬರ್ತೀವಿ’ ಎನ್ನಬೇಕು. ’ಸಂತೋಷ’ ಎನ್ನುವರು. ಅದು ಬಂದಿದ್ದಕ್ಕೋ ಹೊರಟಿದ್ದಕ್ಕೋ ಯೋಚಿಸದೆ ಮನೆಯ ದಾರಿ ಹಿಡಿಯಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ
ಕನ್ನಡ –ಇಂಗ್ಲಿಷ್ ಅನುವಾದಗಳಲ್ಲಿ ಪದ ಕಚಗುಳಿ: ಸುಮಾವೀಣಾ ಸರಣಿ
ಇತ್ತೀಚೆಗೆ ಕೆಪಿಎಸ್ಸಿ ಪೂರ್ವಭಾವೀ ಪರೀಕ್ಷೆ ನಡೆಯಿತು. ಆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅಚ್ಚಾಗಿದ್ದ ಪ್ರಶ್ನೆಗಳು ಸರಿ ಇದ್ದವು. ಅವೇ ಪ್ರಶ್ನೆಗಳು ಕನ್ನಡಕ್ಕೆ ಅನುವಾದ ಮಾಡುವಾಗ ದೋಷಗಳು ಸಂಭವಿಸಿದ್ದವು. ಆದಕಾರಣ ಪರೀಕ್ಷೆಯನ್ನೆ ರದ್ದುಮಾಡಿ ಇಲ್ಲವಾದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರನ್ನು ಪಾಸು ಮಾಡಿ ಎನ್ನುವ ಬೇಡಿಕೆಗಳು ಬಂದವು. ಕಳೆದ ಶನಿವಾರದ ವರದಿಯ ಪ್ರಕಾರ ಪೂರ್ವಭಾವಿ ಪರೀಕ್ಷೆಯ ಗೊಂದಲಗಳು ಇತ್ಯರ್ಥವಾಗುವವರೆಗೆ ಮುಖ್ಯ ಪರೀಕ್ಷೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ
ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ
ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ತಂತಿ ಮೇಲೆ ನಡೆದು ಮುಳ್ಳು ತೆಗೆದವರು: ಎಲ್.ಜಿ.ಮೀರಾ ಅಂಕಣ
ಮಾರನೆಯ ದಿನ ಬೆಳಿಗ್ಗೆ ಮಹೇಶ್ ನಾಯ್ಡು ಬಂದಾಗ ಅವನನ್ನು ಕಾಲೇಜಿನ ಮೈದಾನದ ದೂರದ ಒಂದು ಕಲ್ಲುಬೆಂಚಿಗೆ ಕರೆದುಕೊಂಡು ಹೋಗಿ ಆತ ಮಾಡಿದ ತಪ್ಪು ಕೆಲಸದ ಬಗ್ಗೆ ಮತ್ತು ಇದು ಇಡೀ ಕಾಲೇಜಿಗೆ ಗೊತ್ತಾದರೆ ತಾನು ಯಾವ ಪರಿಸ್ಥಿತಿಯಲ್ಲಿರಬಹುದು ಎಂದು ಊಹಿಸುವಂತೆ ಅವನಿಗೆ ಹೇಳಿದರು. ಮೊದಮೊದಲು ತಾನು ಏನೂ ತಪ್ಪು ಮಾಡಿಲ್ಲ ಎಂದು ವಾದಿಸಿದ ಆತ ನಂತರ ಕಾಂತಿ ಮೇಡಂರ ಗಂಭೀರ ಮುಖ ಮತ್ತು ತೂಕವಾದ ಮಾತುಗಳ ಮುಂದೆ ನಿರುತ್ತರನಾದ, ಮತ್ತು ತಾನು ಆ ಪದ ಬಳಸಿದ್ದು ತಪ್ಪು ಎಂದು ಒಪ್ಪಿಕೊಂಡ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿಮೂರನೆಯ ಬರಹ
ಹೊಸವರ್ಷ, ಹೊಸಜೀವನದ ಮಜಲುಗಳು: ವಿನತೆ ಶರ್ಮ ಅಂಕಣ
ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಯಾಕೆ ಮಾಡುತ್ತೇವೆ ನಾವು ಮನುಷ್ಯರು ಬದುಕಿನೊಂದಿಗೆ ಇಷ್ಟೊಂದು ಚೌಕಾಸಿ!?: ಎಲ್.ಜಿ.ಮೀರಾ ಅಂಕಣ
ಕೋತಿಗಳನ್ನು ಹಿಡಿಯುವವರು ಒಂದು ಉಪಾಯ ಮಾಡುತ್ತಾರಂತೆ. ಚಿಕ್ಕ ಬಾಯಿಯುಳ್ಳ ಒಂದು ತಂಬಿಗೆಯಂತಹ ಪಾತ್ರೆಯೊಳಗೆ ಒಂದಿಷ್ಟು ಕಡಲೆಕಾಯಿಗಳನ್ನು ತಾವು ಹಿಡಿಯಬಯಸುವ ಕೋತಿಗೆ ಕಾಣಿಸುವ ಹಾಗೆ ಹಾಕುತ್ತಾರಂತೆ. ಕೋತಿ ಆ ಕಡಲೆಕಾಯಿಗಳನ್ನು ತಿನ್ನುವ ಆಸೆಯಿಂದ ಆ ತಂಬಿಗೆಯೊಳಕ್ಕೆ ಕೈಹಾಕುತ್ತದೆ, ತನ್ನ ಮುಷ್ಟಿಯಲ್ಲಿ ಆ ಕಡಲೆಕಾಯಿಗಳನ್ನು ಹಿಡಿದುಕೊಳ್ಳುತ್ತದೆ. ತಂಬಿಗೆಯಿಂದ ತನ್ನ ಕೈ ಹೊರತೆಗೆಯದಿದ್ದರೆ ಕೋತಿಗೆ ತಪ್ಪಿಸಿಕೊಂಡು ಓಡಿಹೋಗಲಾಗುವುದಿಲ್ಲ, ಆದರೆ ಕಡಲೆಕಾಯಿಯ ಮೇಲಿನ ಆಸೆಯು ಅವುಗಳನ್ನು ವಾಪಸ್ ತಂಬಿಗೆಗೆ ಹಾಕಲು ಕೋತಿಗೆ ಬಿಡುವುದಿಲ್ಲ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ









