ತಂತ್ರಜ್ಞಾನದ ವ್ಯಾಖ್ಯೆಗಳು: ಕಮಲಾಕರ ಕಡವೆ ಬರೆಯುವ ಬೆರಗು ಮತ್ತು ಭೀತಿ ಅಂಕಣ- 4:
“ನಮ್ಮಲ್ಲಿ ಸಾಮಾನ್ಯಜ್ಞಾನವಾಗಿಹೋಗಿರುವ ಒಂದು ಭಾವವೆಂದರೆ ತಂತ್ರಜ್ಞಾನವೆನ್ನುವುದು ಆಧುನಿಕ ಬೆಳವಣಿಗೆಯೆಂದು. ಆದರೆ, ಸ್ವಲ್ಪವೇ ಕೆದಕಹೋದವರೂ ಕೂಡ ಬಲುಬೇಗ ಈ ಸಾಮಾನ್ಯಜ್ಞಾನದ ನೇಪಥ್ಯ ತಲುಪಿದಂತೆ, ಭ್ರಮೆಯ ಪರದೆ ಸರಿದು, ತಂತ್ರಜ್ಞಾನದ ಪುರಾತತ್ವ ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ತಂತ್ರಜ್ಞಾನದ ಕುರಿತು ನಿರ್ದಿಷ್ಟವಾದ ತತ್ವಶಾಸ್ತ್ರೀಯ ಬರಹಗಳು ಬಂದದ್ದು ಹತ್ತೊಂಬತ್ತನೇ ಶತಮಾನದಲ್ಲಿ.”
ಕಾಲದಲ್ಲಿ ಲೀನವಾಗುವುದೆಂದರೆ….: ಶೇಷಾದ್ರಿ ಗಂಜೂರು ಅಂಕಣ
“ಮ್ಯಾಕ್ಸ್‌ವೆಲ್ ನ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ “ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್‌ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ..”
ಮಹಾನತೆಯ ಅಹಂಕಾರದ ಹುಂಬತನ: ಶೇಷಾದ್ರಿ ಗಂಜೂರು ಅಂಕಣ
“ಅದು, ನಾವು ಸಾಮಾನ್ಯವಾಗಿ ಕಾಣುವ ಆರಡಿ-ಮೂರಡಿಯ ಗೋರಿಯಲ್ಲ; ಅದು ಹಲವಾರು ಕೋಣೆಗಳಿರುವ ಕಟ್ಟಡ. ಒಂದು ಕೋಣೆಯಲ್ಲಿ, ಶವಪೆಟ್ಟಿಗೆ ಇದೆ. ಆ ಶವಪೆಟ್ಟಿಗೆ ಮರದಿಂದ ಮಾಡಿದ್ದಾದರೂ, ಅದಕ್ಕೆ ಚಿನ್ನದ ಹಾಳೆಗಳನ್ನು ಲೇಪಿಸಲಾಗಿದೆ. ಆ ಶವಪೆಟ್ಟಿಗೆಯನ್ನು ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ ಇದೆ. ಅದೂ ಸಹ, ಮೊದಲನೆಯ ಶವಪೆಟ್ಟಿಗೆಯಂತಹುದೇ. ಅದನ್ನೂ ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ!”
ಕೊನೆಯಿಲ್ಲದ ಕತ್ತಲಲ್ಲಿ ಮೊಂಬತ್ತಿಯ ಬೆಳಕು: ಯೋಗೀಂದ್ರ ಮರವಂತೆ ಅಂಕಣ
“ಜಗತ್ತಿನ ದಿಕ್ಕು ದೆಸೆಗಳಿಗೆ ದೂರ ಪ್ರಯಾಣ ಮಾಡುತ್ತಾ ಅಲ್ಲಲ್ಲೇ ಹೊಸ ಆಕೃತಿ ಪಡೆಯುತ್ತ ಹೇಗೂ ಬದಲಾಗಿರುವ ಹಬ್ಬ ಈ ವರ್ಷ ಕೋವಿಡ್ ಕಾಲಕ್ಕೆ ಒಪ್ಪುವಂತೆ ಇನ್ನಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸೋಂಕು ಅಲೆಅಲೆಯಾಗಿ ಮತ್ತೊಮ್ಮೆ ಇನ್ನೊಮ್ಮೆ ವ್ಯಾಪಕವಾಗಿ ಹಬ್ಬಿ ಜೀವ ಜೀವನಗಳನ್ನು ಬೆದರಿಸುತ್ತಿರುವಾಗ ಹಬ್ಬದ ಆಚರಣೆ ಜೊತೆಗಿನ ಉಲ್ಲಾಸ ಹೊಂದಾಣಿಕೆ ಒಪ್ಪಂದಗಳಿಗೆ ಒಗ್ಗಿಕೊಂಡಿವೆ.”
ತಂತ್ರಜ್ಞಾನ ಅಂದರೆ ಏನು?: ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-3
“ಹಾಗೆ ನೋಡಿದರೆ, ನಾವಿರುವ ನಿಸರ್ಗವನ್ನು ನಮ್ಮ ಇರವಿಗೆ, ನಮ್ಮ ಬಾಳ್ವೆಗಾಗಿ ಬಳಸಿ, ನಾವೂ ಸಹ ಅಂತಹುದೇ ಸಂಪನ್ಮೂಲವಾಗುತ್ತ ಜೀವಿಸುವುದೇ ನಿಸರ್ಗ ನಿಯಮ ಎಂದೂ ನಾವು ಅನ್ನಬಹುದು. ಯಾವುದೇ ಸಂಸ್ಕೃತಿ ಸಂಪನ್ಮೂಲವಿಲ್ಲದೇ ಇರಲು ಸಾಧ್ಯವಿಲ್ಲ. ಆದರೆ, ಇದನ್ನೇ ಸರ್ವಸ್ವ ಎಂದು ನಂಬಿದರೆ – ಮನುಷ್ಯರನ್ನೂ ಸಹ ನಾವು ಇದೇ ಬಗೆಯ ಬಳಕೆಯ ವಸ್ತುವಾಗಿಸುವ ಅಪಾಯ ಉದ್ಭವಿಸುತ್ತದೆ..”
ನ್ಯೂರಾನ್ ಗಳ ಸುಳಿಯಲ್ಲಿ ನೆನಪಿನ ಕೊಂಡಿ…: ಶೇಷಾದ್ರಿ ಗಂಜೂರು ಅಂಕಣ
“ಈ ನ್ಯೂರಾನ್ ಗಳು ಒಂದಕ್ಕೊಂದು ಸಂಪರ್ಕಿಸುವ ಜಾಗಗಳಲ್ಲಿ, ಅವುಗಳು ತಾಗುವುದಿಲ್ಲ. ಬದಲಿಗೆ, ಅವುಗಳ ಮಧ್ಯೆ ಅತ್ಯಂತ ಸಣ್ಣದಾದ ಸಿನಾಪ್ಟಿಕ್ ಕ್ಲೆಫ್ಟ್ ಗಳೆನ್ನುವ ಜಾಗವಿರುತ್ತದೆ. ಎಲೆಕ್ಟ್ರಿಕ್ ಸಿಗ್ನಲ್ ಗಳು ಹಾಯದಂತಹ ಈ ಜಾಗಗಳಲ್ಲಿ, ಒಂದು ನ್ಯೂರಾನ್ ಇನ್ನೊಂದು ನ್ಯೂರಾನ್ ಗೆ ತನ್ನ ಸಂದೇಶ ರವಾನೆ ಮಾಡುವುದು. ರಾಸಾಯನಿಕ ಕಣಗಳ ಮೂಲಕ. “ನ್ಯೂರೋಟ್ರಾನ್ಸ್‌ಮಿಟರ್ಸ್” ಎನ್ನುವ ಈ ರಾಸಾಯನಿಕ ಕಣಗಳಲ್ಲಿ ಹಲವಾರು ತರಹದ ವೈವಿಧ್ಯಗಳಿದ್ದು, ..”
“ಮರೆವೇ ಮುಕ್ತಿ”: ಶೇಷಾದ್ರಿ ಗಂಜೂರು ಅಂಕಣ
“ಅವನ ಸರ್ಜರಿಯ ಕೆಲ ವರ್ಷಗಳ ನಂತರ ಅವನ ತಂದೆ ಮರಣ ಹೊಂದಿದರು. ಆ ವಿಷಯ ಅವನಿಗೆ ತಿಳಿದಾಗ ಎಲ್ಲರಂತೆಯೇ ಅವನು ದುಃಖಿತನಾದ. ಕೆಲವೇ ಸಮಯದಲ್ಲಿ ಮಾತುಕತೆ ಬೇರೆಡೆಗೆ ತಿರುಗಿತು; ಅವನಪ್ಪ ಸತ್ತಿದ್ದ ಸಂಗತಿ ಸಂಪೂರ್ಣವಾಗಿ ಮರೆಯಿತು. ಆ ಸಾವಿನ ನೋವು ಕ್ಷಣಮಾತ್ರದಲ್ಲಿ ಮರೆಯಾಯಿತು. ಕೆಲವು ಸಮಯದ ನಂತರ ಮತ್ತೊಮ್ಮೆ ತಂದೆಯ ಸಾವಿನ ವಿಚಾರವನ್ನು ಅವನಿಗೆ ತಿಳಿಸಿದಾಗ, ಅದೇ ಮೊದಲ ಬಾರಿಗೆ ತಂದೆಯ ಸಾವನ್ನು ತಿಳಿದಂತೆ ಅವನು ದುಃಖಿತನಾದ.”
ಕುಶಲದರ್ಜಿ ಗೋಪಾಲಿಯ ವ್ಯಾಕುಲಗಳು: ಎಸ್. ಸಿರಾಜ್ ಅಹಮದ್ ಅಂಕಣ
“ಹೀಗಿರುವಾಗ ಎಲ್ಲೋ ಏನೋ ತಪ್ಪಿದಂತೆ ಕಾಣುತ್ತಿತ್ತು. ಅವನ ಸಣ್ಣಪ್ರಾಯದ ಎರಡನೆಯ ಹೆಂಡತಿ ಅವನಿಗಿಂತ ಹೆಚ್ಚು ಸಮಯವನ್ನು ಅವನ ಪುಟ್ಟ ಅಂಗಡಿಯಲ್ಲಿ ಕಳೆಯಲು ಶುರು ಮಾಡಿದಳು. ಅವಳು ಯಾರು ಬಂದು ಏನು ಮಾತಾಡಿದರೂ ಗಂಡನನ್ನೇ ದಿಟ್ಟಿಸಿ ನೋಡುವಾಗ ಏನೋ ಕಸಿವಿಸಿಯಾಗುತ್ತಿತ್ತು. ಊದುಗೆನ್ನೆಯ, ಉರುಬಿದ ಹೊಟ್ಟೆಯ ಈ ಆಸಾಮಿಯ ಮೇಲೆ ಅವನ ಹೆಂಡತಿ ಯಾಕಿಷ್ಟು ನಿಗಾ ಇಡುತ್ತಿದ್ದಾಳೆಂದು ನಮಗೆ ಮೋಜೆನಿಸುತ್ತಿತ್ತು.”
ಮುರಿದ ಸೈಕಲ್ ಮತ್ತು ಹುಲಾ ಹೂಪ್ ಹುಡುಗಿ: ಯೋಗೀಂದ್ರ ಮರವಂತೆ ಅಂಕಣ
“ಬೀದಿಚಿತ್ರ ಕಲಾವಿದನ ಕಲೆ ಕಲ್ಪನೆಗೆ ಯಾವ ರಕ್ಷಣೆ ಆವರಣ ಇದ್ದರೂ, ಎಷ್ಟು ಜನರು ಬಂದು ಫೋಟೋ ತೆಗೆದರೂ, ಪತ್ರಿಕೆಗಳಲ್ಲಿ ಚರ್ಚೆ ಆದರೂ ಕಾಲಾನುಕ್ರಮದಲ್ಲಿ ಎಲ್ಲವೂ ಮರೆವಿಗೆ ಸರಿಯಬಹುದು. ಕೋವಿಡ್ ಕಾಲಕ್ಕೆಂದೇ ಕಟ್ಟಿದ ರೂಪಕ ಮತ್ತೆ ಹುಟ್ಟಿಸಿದ ಚರ್ಚೆ ಹೊಳಹುಗಳು ಕೆಲವು ದಿನಗಳಲ್ಲಿ ತಟಸ್ಥವಾಗಬಹುದು. ಬೀದಿಬದಿಯಲ್ಲಿ ಮುರಿದು ಬಿದ್ದಿರುವ….”









