ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ…: ಲಕ್ಷ್ಮಣ ವಿ.ಎ. ಅಂಕಣ
“ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು.”
ಅಳುವ ಕಂದನಿಗಾಗಿ.. ಅತ್ತಿತ್ತ ನೋಡುತ್ತಾ…: ಶ್ರೀಹರ್ಷ ಅಂಕಣ
“ಕ್ಯಾಪಿಟಲಿಸಂನ ಕೀಲುಗೊಂಬೆಗಳಾಗಿ ಬದುಕುತ್ತಿರುವ ಜನರಿಗೆ ವಿಕಾಸವಾದವನ್ನು ಯೊಚಿಸುವ ವ್ಯವಧಾನವೆಲ್ಲಿದೆ? ತಾವೇ ಕಟ್ಟಿಕೊಂಡ ಸಮಾಜದ ಸರಳುಗಳೊಳಗೆ ಬಂಧಿಯಾಗಿ ಒದ್ದಾಡುತ್ತಿರುವ, ಹುಚ್ಚು ಓಟದೊಳಗೆ ನಮ್ಮನ್ನು ನಾವೇ ಕಳೆದುಕೊಂಡ ನತದೃಷ್ಟ ಪೀಳಿಗೆ ನಮ್ಮದು! ಹಣ ಸಂಪಾದಿಸಲು ಬಂಜೆತನ ತಂದುಕೊಳ್ಳುವುದು, ಕಳೆದುಹೋದ ಫಲವತ್ತತೆಯನ್ನು ಕೊಂಡುಕೊಳ್ಳಲು ಮತ್ತೆ ಅದೇ ಹಣ ಖರ್ಚು ಮಾಡುವುದು! ಎಷ್ಟು ಸೂಕ್ಷ್ಮವಾಗಿ ನಮ್ಮನ್ನು ಈ ಬಂಡವಾಳಶಾಹಿ ವ್ಯವಸ್ಥೆಯು ಯಾವ ಗುರಿಯೂ ಇಲ್ಲದಂತೆ ಓಡುವಂತೆ ಮಾಡುತ್ತದೆ.”
ಕಥಾಲೋಕದ ‘ಹೊಸನೀರು…’. : ಆಶಾ ಜಗದೀಶ್ ಅಂಕಣ
“ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು…”
ಇದು ಎಂಥ ಲೋಕವಮ್ಮ…! : ವಿನತೆ ಶರ್ಮ ಅಂಕಣ
“ಅತೀತ ಲೋಕಕ್ಕೆ ಹೋದವರಂತೆ ಅದೇನೋ ಶಕ್ತಿ ಅವರನ್ನ ವಾಪಸ್ ಎಳೆದು ಹಿಂದಿರುಗಿ ಬಂದವರಂತೆ ಕಾಣುತ್ತಿದ್ದ ಹಲವರು ಈ ಕ್ಯಾಂಪ್ ಸೈಟಿನಲ್ಲಿದ್ದರು. ನಾವೇನೂ ಪ್ರತಿದಿನವೂ ಇಲ್ಲಿಯೇ ಕಾಲ ಹಾಕುತ್ತ ಹಗಲು ಹೊತ್ತಿನಲ್ಲಿ ನೊಣವನ್ನೂ, ಸಂಜೆಯಲ್ಲಿ ಸೊಳ್ಳೆಯನ್ನೂ ಓಡಿಸುತ್ತಾ ಕೂತಿರಲಿಲ್ಲ. ಆದರೂವೆ ಅದ್ಯಾಕೊ ಹೋದ ದಿನದಿಂದ ಹಿಡಿದು ಕ್ರಮೇಣ ದಿನ ಕಳೆದಂತೆ ನಮಗೆ ಕಥೆ ಹೇಳುವ ಮಂದಿ ಹೆಚ್ಚಾದರು. ಮೊತ್ತಮೊದಲ ಕಥೆ ಹೇಳಿದ್ದು, ನಂತರ ಎಲ್ಲರನ್ನೂ ಮೀರಿಸಿ ಅತಿ ಹೆಚ್ಚು ಕಥೆ ಹೇಳಿದ್ದು…”
ನೀನ್ ಬಾ ಪೋಪಂ: ದಿಲೀಪ್ ಕುಮಾರ್ ಅಂಕಣ
“ಬೇಟೆಯಾಡಲು ಬಂದ ಶಂತನುವಿಗೆ ಬಹಳ ದೂರದಲ್ಲಿಂದಲೇ ಯೋಜನಗಂಧಿಯ ದೇಹದಿಂದ ಬರುತ್ತಿದ್ದ ವಾಸನೆ ಸೆಳೆಯುತ್ತದೆ. ಮೊದಲೇ ಬಳಲಿದ್ದವನು ಆ ವಾಸನೆಗೆ ಮರುಳಾಗಿ ದುಂಬಿಯಂತೆ ಅದನ್ನರಸಿ ಬರುತ್ತಾನೆ. ಬರುವಾಗಲೇ ಆ ಮಧುವಿನ ವಾಸನೆಗೆ ಸೋತವನು, ಎಳೆ ಜಿಂಕೆಯ ಹಾಗೆ ಕಣ್ಣುಗಳು ಇರುವವಳನ್ನು ಕಂಡು, ಕಂಡೊಡನೆ ಒಲಿದು, ಸತ್ಯ ಸಾಬೀತುಪಡಿಸಲು ಹಿಡಿಯುವ ದಿಬ್ಯದ ಹಾಗೆ ಅವಳನ್ನು ಹಿಡಿದು ಮಾತು ಪ್ರಾರಂಭ ಮಾಡುತ್ತಾನೆ.”
ನಿಂತ ನೆಲವು ಯಾರದು?: ಮಧುಸೂದನ್ ವೈ.ಎನ್ ಅಂಕಣ
“ಸುತ್ತಮುತ್ತಲ ಕಾರ್ಮಿಕ ಮಕ್ಕಳ ಬಗ್ಗೆ ನಮ್ಮ ಧೋರಣೆ ಹೀಗಿರಲು ಬೀದಿ ಬದಿಯಲ್ಲಿ ಅನಾಥ ಬಿದ್ದಿರುವ ಮಕ್ಕಳನ್ನಂತೂ ಕಂಡೂ ಕಾಣದಂತೆ ಒಂದು ಬಗೆಯಲ್ಲಿ ತಪ್ಪಿಸಿಕೊಂಡು ಓಡಿಬಿಡುತ್ತೇವೆ. ಅಲ್ಲಿ ಕನಿಕರವೂ ಇರುವುದಿಲ್ಲ, ಬದಲಾಗಿ ಎಷ್ಟೋ ಜನಕ್ಕೆ ಅವರು ಕಿರಿಕಿರಿ ಅನಿಸುತ್ತಾರೆ. ಮಕ್ಕಳ ಸಮಸ್ಯೆಗೆ ನಮಗೆ ತಕ್ಷಣಕ್ಕೆ ದೂರಲು ಸಿಗುವುದು ಹೆತ್ತವರು. ಸರ್ಕಾರಗಳೂ ಮೈಕೊಡವಿಕೊಳ್ಳುವುದರಿಂದ ಈ ಕಾರಣವನ್ನು ಎದುರಿಗಿಟ್ಟಿದ್ದೇನೆ.”
‘ಅಪ್ಪನ ಅಂಗಿ’ಗೆ ಬರೆದ ನನ್ನ ಮಾತುಗಳು: ಲಕ್ಷ್ಮಣ ವಿ ಎ ಅಂಕಣ
“ಬೆಳಕು ಹರಿಯುವಷ್ಟರಲ್ಲಿ ಬೆಂಗಳೂರು ತಲುಪಿದೆ. ಅವರಿವರ ವಿಚಾರಿಸಿ ಅಗ್ರಿ ಕಾಲೇಜಿನ ಬಸ್ಸು ಹತ್ತಿ ಪ್ರವೇಶ ಪರೀಕ್ಷೆಯನ್ನೂ ಬರೆದೆ. ಇನ್ನೇನು ಸಂಜೆಯಾಯಿತು ವಾಪಸು ಧಾರವಾಡಕ್ಕೆ ಬಸ್ಸಿರುವುದು ರಾತ್ರಿ ಒಂಬತ್ತೂವರೆಗೆ ಅಲ್ಲಿಯವರೆಗೂ ಏನು ಮಾಡುವುದು? ಸಿನೇಮಾ ನೋಡಲು ಮನಸಿರಲಿಲ್ಲ. ಏಕೆಂದರೆ ಕರೀಶ್ಮಾ ಕಪೂರಳ ಆ ಚೆಲುವು, ಕಾರಿನ ಹೆಡ್ ಲೈಟಿನಂತಹ ಅವಳ ಎರಡು ಕಣ್ಣುಗಳು…”
ಒಂದು ಬಾಗಿಲನ್ನು ಹೊಕ್ಕು ಹೊರಬಂದ ಮೇಲೆ…: ಆಶಾ ಜಗದೀಶ್ ಅಂಕಣ
“ಶಾಂತಿಯವರು ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯತೆಯನ್ನು ಕಾಣಬಹುದು. ಶಾಂತಿಯವರು ಕಥೆಯ ವಿಚಿತ್ರ ತಿರುವುಗಳು ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಆಕರ್ಷಕ ರೀತಿಯಿಂದಾಗಿ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ. ಜಯರಾಮ ಹುಚ್ಚನಾದ ಕಥೆ ಅದಕ್ಕೊಂದು ಉತ್ತಮ ನಿದರ್ಶನ. ಜಯರಾಮ ಹುಚ್ಚ ಯಾಕಾದ ಎನ್ನುವುದನ್ನು ತಿಳಿಯಲಿಕ್ಕೆ ನಾವು ಪೂರಾ ಕಥೆಯನ್ನು ಓದಲೇಬೇಕು.”
ಕೀಳರಿಮೆಯ ರೋಗಕ್ಕೆ ಶಿಕ್ಷಣದ ಮದ್ದರೆದು…: ಶ್ರೀಹರ್ಷ ಸಾಲಿಮಠ ಬರೆಯುವ ಹೊಸ ಅಂಕಣ
“ಒಮ್ಮೆ ಸೈಕಲ್ ಕೊಳ್ಳಲು ಹೋಗಿದ್ದಾಗ ನಾನು ಒಂದು ಸೈಕಲ್ಲನ್ನು ತೊರಿಸಿ “ಇದು ಎಷ್ಟು” ಅಂತ ಕೇಳಿದೆ. ಸೇಲ್ಸ್ ಮನ್ ಬಿಳಿಯ. ಆತ ಬೆಲೆ ಎಷ್ಟು ಅಂತ ಹೇಳದೆ “ಅದು ದುಬಾರಿ” ಎಂದಷ್ಟೇ ಹೇಳಿದ. ನೀನು ಕಂದುಬಣ್ಣದವನು ನಿನಗೆ ಅದನ್ನು ಕೊಳ್ಳುವ ಯೋಗ್ಯತೆಯಿಲ್ಲ ಎಂದು ಆತ ಪರೋಕ್ಷವಾಗಿ ಹೇಳಿದ್ದ. ಅಸಲಿಯತ್ತೆಂದರೆ ನಾನು ಕಟ್ಟುವ ತೆರಿಗೆಯೇ ಆತನ ಆದಾಯಕ್ಕಿಂತ ಹೆಚ್ಚಿತ್ತು!”









