Advertisement

ಅಂಕಣ

ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ

ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ

“ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ…”

read more
ಶೃಂಗಾರ ಸಾರ ವರ್ಣನ-4: ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ

ಶೃಂಗಾರ ಸಾರ ವರ್ಣನ-4: ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ

“ಕವಿಯೊಬ್ಬ ಯಾವ ಭಾಗಕ್ಕೆ ಪ್ರಾಶಸ್ತ್ಯ ಕೊಟ್ಟು ರಚನೆ ಮಾಡುವನೋ ಅದನ್ನು ನಡೆಸಲು ಬಹಳ ಸೂಕ್ಷ್ಮ ಮತಿಯಾಗಿರಬೇಕು ಅನ್ನುವುದಕ್ಕೆ ಪಂಪನ ಈ ಭಾಗ ಉದಾಹರಣೆ ಅನಿಸುತ್ತದೆ. ಇಲ್ಲಿ ವಿಪ್ರಲಂಭ ಶೃಂಗಾರದ ವರ್ಣನೆಯೇ ಮುಖ್ಯವಾಗಿ ಇರುವಾಗ, ಅದರ ಮುಂದಿನ ಭಾಗವಾದ ಸಂಭೋಗವನ್ನು ವರ್ಣಿಸುವುದು ಅಥವಾ ಶೃಂಗಾರದೊಂದಿಗೆ….”

read more
ಎನ್ಸೈಕ್ಲೋಪಿಡಿಯಾದಿಂದ ವಿಕಿಪೀಡಿಯಾವರೆಗೂ….: ಮಧುಸೂದನ್ ವೈ.ಎನ್ ಅಂಕಣ

ಎನ್ಸೈಕ್ಲೋಪಿಡಿಯಾದಿಂದ ವಿಕಿಪೀಡಿಯಾವರೆಗೂ….: ಮಧುಸೂದನ್ ವೈ.ಎನ್ ಅಂಕಣ

“ಗೊತ್ತಿರಲಿ ಇದು ಲಾಭರಹಿತ ಸಾಮುದಾಯಿಕ ಸಂಸ್ಥೆ. ಯಾರೂ ಸಂಬಳಕ್ಕಾಗಿ ಇದನ್ನು ಮಾಡುತ್ತಿಲ್ಲ. ಜಗತ್ತೆ ಕೈಜೋಡಿಸಿ ತನಗೆ ಬೇಕಾದ ಉತ್ತಮ ವಿಶ್ವಕೋಶವನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ. ಪ್ರಪಂಚದ ಯಾವ ಮೂಲೆಯಿಂದಲಾದರೂ ಯಾರು ಬೇಕಾದರೂ ಇಲ್ಲಿ ಅಂಕಣ ಬರೆಯಬಹುದು, ಅಥವಾ ಇನ್ನೊಬ್ಬರು ಬರೆದದ್ದನ್ನು ತಿದ್ದಬಹುದು.”

read more
ದೇಸಿ ವಿದ್ಯಾರ್ಥಿಗಳ ವಿದೇಶಿ ಹಾಡುಪಾಡು: ವಿನತೆ ಶರ್ಮಾ ಅಂಕಣ

ದೇಸಿ ವಿದ್ಯಾರ್ಥಿಗಳ ವಿದೇಶಿ ಹಾಡುಪಾಡು: ವಿನತೆ ಶರ್ಮಾ ಅಂಕಣ

“ಇಷ್ಟೆಲ್ಲಾ ಆಗುವಷ್ಟರಲ್ಲಿ ಅವನ ಇಬ್ಬರು ಸ್ನೇಹಿತರು ವಾಪಸ್ ಹೈದರಾಬಾದಿನ ತಮ್ಮನೆಗೆ ವಾಪಸ್ಸಾಗಿದ್ದರು. ಇವನು ಆಶಾವಾದಿ, ದೇಶದ ಆರ್ಥಿಕತೆಗೆ ಅನುಕೂಲವಾಗುವ ಮತ್ತೊಂದು ಆರು ತಿಂಗಳ ಕೋರ್ಸಿಗೆ ಸೇರಿಕೊಂಡು ಪಾರ್ಟ್ ಟೈಮ್ ವಿದ್ಯಾರ್ಥಿಯಾದ. ಈಗ ಆ ಕೋರ್ಸನ್ನ ಮಾಡುತ್ತಲೇ ಜೀವನೋಪಾಯಕ್ಕಾಗಿ ಎರಡು ಕಡೆ ಕೆಲಸ ಮಾಡುತ್ತಿದ್ದಾನೆ. ಅವನ ಒಂದು ಉದ್ಯೋಗವಿರುವುದು ಪಿಜ್ಝಾ ಅಂಗಡಿಯಲ್ಲಿ..”

read more
ಸ್ಮಾಲ್ ಈಸ್ ಬ್ಯೂಟಿಫುಲ್: ಆಶಾ ಜಗದೀಶ್ ಅಂಕಣ

ಸ್ಮಾಲ್ ಈಸ್ ಬ್ಯೂಟಿಫುಲ್: ಆಶಾ ಜಗದೀಶ್ ಅಂಕಣ

“ತೋರುದತ್ತಳ ಕವಿತೆಗಳಲ್ಲಿ ಭಾರತದ ಆತ್ಮ ವ್ಯಕ್ತವಾಗುತ್ತದೆ. ರಾಮಾಯಣ, ಮಹಾಭಾರತ ಮತ್ತು ಪುರಾಣಪುಣ್ಯ ಕತೆಗಳ ವಸ್ತು, ನಾಯಕ, ನಾಯಕಿಯರು ಅವಳ ಕೈಯಲ್ಲಿ ಹೊಸದೇ ದೃಷ್ಟಿಯಿಂದ ಪುನರ್ವ್ಯಾಖ್ಯಾನಿಸಲ್ಪಡುತ್ತಾರೆ. ಅವಳು ತನ್ನ ಕಾವ್ಯ ಜೀವನದ ಪ್ರಾರಂಭದಲ್ಲಿ ಫ್ರೆಂಚ್ ಕವಿತೆಗಳನ್ನು ಅನುವಾದಿಸುತ್ತಾಳೆ. ಆಗ ಅವಳಿಗೆ ಬರೀ ಹತ್ತೊಂಬತ್ತು ವರ್ಷ.”

read more
ಕನ್ನಡಿಗರ ಕಣ್ಮಣಿಯಾಗಲಿ ಕನ್ನಡ:  ಡಾ. ಲಕ್ಷ್ಮಣ ವಿ.ಎ. ಅಂಕಣ

ಕನ್ನಡಿಗರ ಕಣ್ಮಣಿಯಾಗಲಿ ಕನ್ನಡ: ಡಾ. ಲಕ್ಷ್ಮಣ ವಿ.ಎ. ಅಂಕಣ

“ಮೊನ್ನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಂಚೆಕಚೇರಿಗೆ ತ್ವರಿತ ಅಂಚೆ ಸೇವೆಗೆ ಪೋಸ್ಟ್ ಮಾಡಲು ಹೋದಾಗ, ಕೌಂಟರಿನಲ್ಲಿರುವ ಟೈಪಿಸ್ಟ್ ವಿಳಾಸವನ್ನು ಇಂಗ್ಲಿಷ್ ನಲ್ಲಿ ಬರೆಯಲು ತಿಳಿಸಿದರು. ಏಕೆಂದರೆ ಅವರಿಗೆ ಕನ್ನಡ ಓದಲು ಟೈಪಿಸಲು ಬರುತ್ತಿರಲಿಲ್ಲ. ನಾನು ಇಂಗ್ಲಿಷ್ ನಲ್ಲಿ ಬರೆಯಲು ಸ್ಪಷ್ಟವಾಗಿ ನಿರಾಕರಿಸಿದೆ. ಏಕೆಂದರೆ ತಲುಪಬೇಕಾದ ವಿಳಾಸ ಕೂಡ ಕರ್ನಾಟಕದಲ್ಲಿ ಇತ್ತು.”

read more
ಕಪ್ಪೆ-ಮೀನುಗಳೂ ಮತ್ತು ತುಂಟ ಹುಡುಗರು: ಮುನವ್ವರ್ ಜೋಗಿಬೆಟ್ಟು ಅಂಕಣ

ಕಪ್ಪೆ-ಮೀನುಗಳೂ ಮತ್ತು ತುಂಟ ಹುಡುಗರು: ಮುನವ್ವರ್ ಜೋಗಿಬೆಟ್ಟು ಅಂಕಣ

“ಅಬ್ಬನ ಬ್ಯಾಟರಿ ಟಾರ್ಚು ತೆಗೆದು ಬಾಗಿಲ ಸಂದಿಗೆ ಬಿಟ್ಟೆ. ಬೆಳಕು ಬಿದ್ದೊಡನೆ ಕಂದು ಬಣ್ಣದ ಹಾವೊಂದು ಬೆಳಕಿನೆಡೆಗೆ ದುತ್ತನೆ ಹಾರಿ ಬಿತ್ತು. ಗಾಬರಿಯಿಂದ ಉಮ್ಮನನ್ನು ಕರೆದೆ. ಅಡುಗೆ ಮಾಡುತ್ತಿದ್ದ ಉಮ್ಮ ಓಡೋಡಿ ಬಂದವರೇ, ಹಾವನ್ನು ನೋಡುತ್ತಾ “ಓಹ್ ಬಾರಿ ಸಣ್ಣದು, ಕನ್ನಡಿ ಹಾವು. ನಿನ್ನ ಹಾಳಾಗಿ ಹೋದ ಕಪ್ಪೆಯ ಮೇಲಿನ ಕನಿಕರದಿಂದಲೇ ಅದು ಇಲ್ಲೇ ಬೇಟೆಗೆ ಬಂದು ಕುಳಿತಿದೆ…”

read more
ಮುಗಿಲಿನಿಂದುದುರುವ ಝಣ ಝಣ ಕಾಂಚಾಣ: ಮಧುಸೂದನ್ ವೈ.ಎನ್ ಅಂಕಣ

ಮುಗಿಲಿನಿಂದುದುರುವ ಝಣ ಝಣ ಕಾಂಚಾಣ: ಮಧುಸೂದನ್ ವೈ.ಎನ್ ಅಂಕಣ

“ಸಾಲು ಮರದ ತಿಮ್ಮಕ್ಕ ಮಕ್ಕಳಿಲ್ಲದ ಕಾರಣಕ್ಕೆ ಮರಗಳಿಗೆ ನೀರು ಹೊತ್ತೊಯ್ದಳು ಎಂಬಂತಹ ಸಾಮಾಜಿಕ ಸೇವೆ ಮಾಡಿರೆಂದು ಹೇರುತ್ತಿಲ್ಲ. ಇದೆಲ್ಲ ನಿಮಗಾಗಿ, ನಿಮ್ಮದೆ ಒಳಿತಿಗಾಗಿ, ನಿಮ್ಮ ಜೇಬಿನ ಹೊರೆ ಇಳಿಸಲಿಕ್ಕಾಗಿ. ಬಿಹಾರದ ಮಾಂಜಿ ಎಂಬುವವನ ಹೆಂಡತಿಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲಿಕ್ಕೆ ರಸ್ತೆಯಿರದೆ ಅವನ ಹೆಂಡತಿ ಅಸುನೀಗಿದಳಂತೆ.”

read more
ಕತ್ತಲು ಮತ್ತು ಬೆಳಕಿನ ಹಬ್ಬಗಳ ಸಂಭ್ರಮದಲ್ಲಿ…: ವಿನತೆ ಶರ್ಮ ಅಂಕಣ

ಕತ್ತಲು ಮತ್ತು ಬೆಳಕಿನ ಹಬ್ಬಗಳ ಸಂಭ್ರಮದಲ್ಲಿ…: ವಿನತೆ ಶರ್ಮ ಅಂಕಣ

“ನಮ್ಮ ಆಸ್ಟ್ರೇಲಿಯಾದಲ್ಲಿ ದೀಪಾವಳಿ ಸಮಯವೆಂದರೆ ಕತ್ತಲು ಕಡಿಮೆಯಾಗುತ್ತಾ ಹೋಗುವ ತದ್ವಿರುದ್ಧ ಕಾಲ. ಎಷ್ಟಾದರೂ ನಾವಿರುವುದು ದಕ್ಷಿಣ ಭೂಗೋಳದಲ್ಲಿ. ತಲೆಮೇಲಿನ ಉತ್ತರ ಗೋಳದಲ್ಲಿ ನಡೆಯುವ ಪ್ರಾಪಂಚಿಕ ವಹಿವಾಟುಗಳ ವಿರುದ್ಧ ದಿಕ್ಕಿನಲ್ಲಿ ನಮ್ಮ ಕಾಲ ನಡೆಯುತ್ತದೆ. ಹಬ್ಬದ ದಿನಗಳ ಸಂಜೆ ಮನೆತುಂಬಾ, ಅಂಗಳದಲ್ಲಿ ದೀಪ ಹಚ್ಚಲು….”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ