ಭಾರತ ಪಾಕಿಸ್ಥಾನ ಮತ್ತು ಶ್ರೀಲಂಕ 1984ರಿಂದ ಏಷ್ಯ ಕಪ್‌ನಲ್ಲಿ ಭಾಗವಹಿಸಿದೆ. 1986ರಲ್ಲಿ ಬಾಂಗ್ಲಾದೇಶ ಸೇರಿಕೊಂಡಿತು. ಹಾಂಕಾಂಗ್ ಮತ್ತು ಯುಏಇ 2004ರಲ್ಲಿ ಸೇರಿಕೊಂಡಿತು. ಆಫ್ಘಾನಿಸ್ಥಾನ 2014ರಲ್ಲಿ ಮತ್ತು ಈ ವರ್ಷ 2023ರಲ್ಲಿ ನೇಪಾಳ ಸೇರಲಿದೆ. ಬಹಳ ಕಡಿಮೆ ಸಮಯದಲ್ಲಿಯೇ ಆಫ್ಘಾನಿಸ್ಥಾನ ಒಳ್ಳೆಯ ಟೀಮ್ ಎಂದು ಹೆಸರು ಗಳಿಸಿದೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಏಷ್ಯ ಕಪ್‌ ಕುರಿತ ಬರಹ ನಿಮ್ಮ ಓದಿಗೆ

1983ರಲ್ಲಿ ಕೆಲವು ಏಷ್ಯ ದೇಶಗಳು ‘ಏಷ್ಯ ಕ್ರಿಕೆಟ್ ಕೌಂಸಿಲ್’ ಎನ್ನುವ ಸಂಸ್ಥೆ ಶುರು ಮಾಡಿ ಅಲ್ಲಿನ ದೇಶಗಳ ಕ್ರಿಕೆಟ್ ಆಟದ ಬೆಳವಣಿಗೆಗೆ ಏಷ್ಯ ಕಪ್ ಕ್ರಿಕೆಟ್ ಟೂರ್ನಮೆಂಟನ್ನು ಶುರು ಮಾಡಿದರು. ಎರಡು ವರ್ಷಕ್ಕೊಮ್ಮೆ ಈ ಟೂರ್ನಮೆಂಟನ್ನು ಆಡಲು ನಿರ್ಧಾರ ಮಾಡಲಾಯಿತು. ಮುಂಚೆ 50 ಓವರ್‌ಗಳ ಓಡಿಐನಿಂದ ಶುರು ಮಾಡಿ, ಈಗ ಅದರ ಜೊತೆಗೆ 20 ಓವರ್‌ನ ಟಿ20 ಟೂರ್ನಮೆಂಟನ್ನೂ ಸೇರಿಸಿದ್ದಾರೆ. ವರ್ಷ ಬಿಟ್ಟು ವರ್ಷಕ್ಕೆ ಒಡಿಐ ಮತ್ತು ಟಿ20ಐ ಪಂದ್ಯಗಳನ್ನು ಆಡುತ್ತಾರೆ.

1984ರಲ್ಲಿ ಮೊದಲ ಬಾರಿ ಷಾರ್ಜ ನಗರದಲ್ಲಿ ಆಡಲಾಯಿತು. ಇಷ್ಟರವರೆಗೆ ಆಡಿದ ಟೂರ್ನಮೆಂಟ್‌ಗಳಲ್ಲಿ ಭಾರತ ಒಡಿಐ ಕಪ್ 6 ಬಾರಿ ಗೆದ್ದಿದೆ. ಟಿ20 ಕಪ್ ಭಾರತ ಮತ್ತು ಶ್ರೀಲಂಕ ತಲಾ ಒಂದೊಂದು ಬಾರಿ ಗೆದ್ದಿದೆ.

ಅನೇಕ ಸರ್ತಿ ವೈಯುಕ್ತಿಕ ರಾಜಕಾರಣದಿಂದ ಒಂದಲ್ಲ ಒಂದು ದೇಶ ಏಷ್ಯ ಕಪ್ಪನ್ನು ಬಹಿಷ್ಕರಿಸಿದೆ. ಇಂದಿನ ರಾಜಕಾರಣದಲ್ಲಿ ಹಾಗಾಗುವುದು ಸಹಜ. 1986ರಲ್ಲಿ ಭಾರತ ಶ್ರೀಲಂಕಾದಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಲಿಲ್ಲ. 1991 ಮತ್ತು 1993ರಲ್ಲಿ ಪಾಕಿಸ್ಥಾನ ಭಾರತದಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಲು ನಿರಾಕರಿಸಿತು. ಇಷ್ಟಾದರೂ ಪಂದ್ಯಗಳು ಬೇರೆ ದೇಶದಲ್ಲಿ ಆಡಿಸಿದ್ದಾರೆ. ಪಂದ್ಯಗಳು ಬಹಿಷ್ಕಾರವಾಗಿಲ್ಲ.

2016ರಲ್ಲಿ ಟಿ20 ಏಷ್ಯಕಪ್ ಪಂದ್ಯಗಳು ಶುರುಮಾಡಿದರು. ಒಟ್ಟು ಭಾರತ 15 ಬಾರಿ ಆಡಿ, 7 ಬಾರಿ – 6 ಒಡಿಐ ಮತ್ತು 1 ಟಿ20 ಗೆದ್ದಿದೆ. ಶ್ರೀಲಂಕ 16 ಬಾರಿ ಆಡಿ, 6 ಬಾರಿ ಗೆದ್ದಿದೆ. ಪಾಕಿಸ್ತಾನ 2 ಬಾರಿ ಗೆದ್ದಿದೆ.

ಭಾರತ ಪಾಕಿಸ್ಥಾನ ಮತ್ತು ಶ್ರೀಲಂಕ 1984ರಿಂದ ಏಷ್ಯ ಕಪ್‌ನಲ್ಲಿ ಭಾಗವಹಿಸಿದೆ. 1986ರಲ್ಲಿ ಬಾಂಗ್ಲಾದೇಶ ಸೇರಿಕೊಂಡಿತು. ಹಾಂಕಾಂಗ್ ಮತ್ತು ಯುಏಇ 2004ರಲ್ಲಿ ಸೇರಿಕೊಂಡಿತು. ಆಫ್ಘಾನಿಸ್ಥಾನ 2014ರಲ್ಲಿ ಮತ್ತು ಈ ವರ್ಷ 2023ರಲ್ಲಿ ನೇಪಾಳ ಸೇರಲಿದೆ. ಬಹಳ ಕಡಿಮೆ ಸಮಯದಲ್ಲಿಯೇ ಆಫ್ಘಾನಿಸ್ಥಾನ ಒಳ್ಳೆಯ ಟೀಮ್ ಎಂದು ಹೆಸರು ಗಳಿಸಿದೆ.

ಬ್ಯಾಟ್ಸ್‌ಮನ್‌ಗಳಲ್ಲಿ ಸನತ್ ಜಯಸೂರ್ಯ 25 ಮ್ಯಾಚ್‌ಗಳಲ್ಲಿ ಅತಿ ಹೆಚ್ಚು 1220 ರನ್ 53.04 ಸರಾಸರಿಯಲ್ಲಿ ಹೊಡೆದರು. ಅವರ ವೈಯುಕ್ತಿಕ ಹೆಚ್ಚಿನ ಸ್ಕೋರ್ 130. ಭಾರತದ ಸಚಿನ್ ಟೆಂಡೂಲ್ಕರ್ 23 ಮ್ಯಾಚ್‌ಗಳಲ್ಲಿ 21 ಇನ್ನಿಂಗ್ಸ್ ಆಡಿ 971 ರನ್ ಹೊಡೆದರು. ಅದರ ಸರಾಸರಿ 51.10 ಆಗಿತ್ತು. ಅವರ ವೈಯುಕ್ತಿಕ್ವಾಗಿ ಅತ್ಯುತ್ತಮ ಸ್ಕೋರ್ 144 ಹೊಡೆದರು.

ಪಾಕಿಸ್ಥಾನದ ಶೋಯೇಬ್ ಮಲ್ಲಿಕ್ 17 ಮ್ಯಾಚ್‌ಗಳಲ್ಲಿ 15 ಇನ್ನಿಂಗ್ಸ್‌ನಲ್ಲಿ ಒಟ್ಟು 786 ರನ್ ಹೊಡೆದರು. ಅವರ ಅತ್ಯುತ್ತಮ ಸ್ಕೋರ್ 65.50 ಸರಾಸರಿಯಲ್ಲಿ 143.

ಅನೇಕ ಸರ್ತಿ ವೈಯುಕ್ತಿಕ ರಾಜಕಾರಣದಿಂದ ಒಂದಲ್ಲ ಒಂದು ದೇಶ ಏಷ್ಯ ಕಪ್ಪನ್ನು ಬಹಿಷ್ಕರಿಸಿದೆ. ಇಂದಿನ ರಾಜಕಾರಣದಲ್ಲಿ ಹಾಗಾಗುವುದು ಸಹಜ. 1986ರಲ್ಲಿ ಭಾರತ ಶ್ರೀಲಂಕಾದಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಲಿಲ್ಲ. 1991 ಮತ್ತು 1993ರಲ್ಲಿ ಪಾಕಿಸ್ಥಾನ ಭಾರತದಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಲು ನಿರಾಕರಿಸಿತು.

ಬೋಲಿಂಗ್‌ನಲ್ಲಿ 5 ಸ್ಥಾನದಲ್ಲಿ ಶ್ರೀಲಂಕ 4 ಸ್ಥಾನ ಗಳಿಸಿದೆ. ಮುತ್ತೈಯ್ಯ ಮುರಳಿಧರನ್ 24 ಮ್ಯಾಚ್ ಆಡಿ 30 ವಿಕೆಟ್, 28.83 ಸರಾಸರಿಯಲ್ಲಿ ಗಳಿಸಿದ್ದಾರೆ. ಅವರ ಅತ್ಯುತ್ತಮ ಬೋಲಿಂಗ್ ರೆಕಾರ್ಡ್‌ 5/31.

ಶ್ರೀಲಂಕಾದ ಮತ್ತೊಬ್ಬ ಆಟಗಾರ ಲಸಿತ್ ಮಲಿಂಗ 14 ಮ್ಯಾಚ್‌ಗಳಲ್ಲೇ 29 ವಿಕೆಟ್ ತೆಗೆದರು! 20.55 ಸರಾಸರಿಯಾಗಿತ್ತು. 5/31 ಅವರ ಅತ್ಯುತ್ತಮ ಬೋಲಿಂಗ್ ರೆಕಾರ್ಡ್‌. ಶ್ರೀಲಂಕಾದ ಅಜಂತ ಮೆಂಡಿಸ್ 8 ಮ್ಯಾಚ್‌ನಲ್ಲೇ 26 ವಿಕೆಟ್ ತೆಗೆದರು. ಅವರ ಅತ್ಯುತ್ತಮ ಬೋಲಿಂಗ್ ಮಾಡಿ 6 ವಿಕೆಟ್ ಕೇವಲ 13 ರನ್‌ಗೆ ತೆಗೆದರು!

ಶ್ರೀಲಂಕಾದ ಚಮಿಂದ ವಾಝ್ ನಾಲಕ್ಕನೇ ಬೋಲರ್ ಆಗಿದ್ದರು. ಪಾಕಿಸ್ಥಾನದ ಸಯೀದ್ ಅಜ್ಮಲ್ ಕೂಡ ಐದು ಆಟಗಾರರಲ್ಲಿ ಒಬ್ಬರಾಗಿದ್ದರು. ಅತಿಹೆಚ್ಚಿನ ಸ್ಕೋರ್ ಇಲ್ಲಿಯವರೆಗೆ…

ವಿರಾಟ್ ಕೊಹ್ಲಿ 2012ರಲ್ಲಿ ಪಾಕಿಸ್ಥಾನದ ವಿರುದ್ಧ : 183

ಒಂದು ಟೂರ್ನಮೆಂಟಿನ ಅತಿ ಹೆಚ್ಚು ಸ್ಕೋರ್: ಸನತ್ ಜಯಸೂರ್ಯ 2008ರಲ್ಲಿ : 378

ಅತ್ಯಂತ ಹೆಚ್ಚಿನ ಸರಾಸರಿ: ಸನತ್ ಜಯಸೂರ್ಯ (1990-2008): 53.04

ಅತ್ಯಂತ ಶತಕಗಳು: ಸನತ್ ಜಯಸೂರ್ಯ: 6

ಅತ್ಯಂತ ಅರ್ಧ ಶತಕಗಳು: ಕುಮಾರ ಸಂಗಕ್ಕಾರ: 12

ಅತಿ ಹೆಚ್ಚಿನ ಪಾಲುದಾರಿಕೆ: ಮೊಹಮ್ಮದ್ ಹಫೀಜ್ ಮತ್ತು ನಸೀರ್ ಜಾಮ್ಶೆಡ್ : 224 ( ಭಾರತದ ವಿರುದ್ಧ 2012)

(ಭಾರತ ಮತ್ತು ಪಾಕಿಸ್ಥಾನದ ಕ್ಯಾಪ್ಟನ್‌ಗಳು: ರೋಹಿತ್‌ ಶರ್ಮಾ ಹಾಗೂ ಬಾಬರ್‌ ಅಝಮ್)

ಏಷ್ಯ ಕಪ್ ಟಿ20ಐ:

ಅತಿ ಹೆಚ್ಚು ರನ್ ಗಳಿಕೆ: ಮೊಹಮ್ಮದ್ ರಿಝ್ವಾನ್ 281 (2022)

ಅತಿ ಹೆಚು ರನ್ ಗತಿ: ಭನುಕ ರಾಜಪಕ್ಷ : 149.21 ( 2022)

ಅತಿ ಹೆಚ್ಚು ಶತಕ: ವಿರಾಟ್ ಕೊಹ್ಲಿ 1 (2022), ಬಾಬರ್ ಹಯಾತ್ 1 (2016)

ಅತಿ ಹೆಚ್ಚು ರನ್ ಹೊಡೆದ ಗತಿ: ಸೂರ್ಯ ಕುಮಾರ್ ಯಾಧವ್ 261.53 (2022)

ಅತ್ಯುತ್ತಮ ಪಾಲುದಾರಿಕೆ: ಕೊಹ್ಲಿ ಮತ್ತು ಕೆ ಎಲ್. ರಾಹುಲ್. 119 (2022)

ಅತ್ಯುತ್ತಮ ಬೋಲಿಂಗ್ : ಭುವನೇಶ್ವರ್ ಕುಮಾರ್ ಆಫ್ಘಾನಿಸ್ಥಾನ್ ವಿರುದ್ಧ 5/4 (2022)

ಅತ್ಯಂತ ಹೆಚ್ಚು ವಿಕೆಟ್: ಭುವನೇಶ್ವರ್ ಕುಮಾರ್: 13 (2016-22)

ಒಂದೇ ಟೂರ್ನಮೆಂಟಲ್ಲಿ ಅತಿ ಹೆಚ್ಚು ವಿಕೆಟ್: ಅಮ್ಜದ್ ಜಾವೇದ್ 12 (2016)

ಅತಿ ಹೆಚ್ಚು ಔಟ್ ಮಾಡಿದ ವಿಕೆಟ್ ಕೀಪರ್: ಎಮ್. ಎಸ್. ಧೋನಿ: 7 ( 6 ಕ್ಯಾಚ್, ಇ ಸ್ಟಂಪ್)

2023ರಲ್ಲಿ ಏಷ್ಯ ಕಪ್ ಮುಗಿದ ಕೂಡಲೆ ಐಸಿಸಿ ಒಡಿಐ ಪಂದ್ಯಗಳು ಭಾರತದಲ್ಲಿ ಶುರುವಾಗಿಲಿದೆ. ಅದಕ್ಕೆ ಮುಂಚೆ ಏಷ್ಯ ಕಪ್ ಮ್ಯಾಚ್ಗಳು ನಾಂದಿ ಯಾಗುತ್ತೆ. ಏಷ್ಯ ಕಪ್ ಟೀಮ್‌ಗಳಿಗೆ ಒಳ್ಳೆಯ ಅಭ್ಯಾಸವಾಗುತ್ತೆ. ಏಷ್ಯ ಕಪ್ ಮ್ಯಾಚ್‌ಗಳು ಏಷ್ಯದ ಟೀಮುಗಳಿಗೆ ಪ್ರತಿವರ್ಷವೂ ಒಡಿಐ ಅಥವ ಟಿ20 ಮ್ಯಾಚ್‌ಗಳು ಆಡಿ ಆಯಾ ಟೀಮ್‌ಗಳಿಗೆ ಒಳ್ಳೆ ಫಾರ್ಮಿನಲ್ಲಿರುವುದಕ್ಕೆ ಸಹಾಯ ಮಾಡುತ್ತೆ.

ರಾಜಕಾರಣದಲ್ಲಿ ಎಷ್ಟು ವ್ಯತ್ಯಾಸಗಳಿದ್ದರೂ ವರ್ಷಕ್ಕೊಮ್ಮೆ ನಡೆಯುವ ಪಂದ್ಯಾವಳಿಗಳನ್ನು ಮರೆಯದೆ ಆಡಬೇಕು. ಈ ವರ್ಷವೂ ಭಾರತ ಮತ್ತು ಪಾಕಿಸ್ಥಾನದ ಪಂದ್ಯ ಶ್ರೀಲಂಕೆಯಲ್ಲಿ ನಡೆಯಿತು. ಮಳೆಯ ಕಾರಣದಿಂದ ಭಾರತದ ಇನಿಂಗ್ಸ್ ಮುಗಿದ ಮೇಲೆ ಆಟ ಮುಂದುವರಿಯಲಿಲ್ಲ.