Advertisement
ಕೊನೆ ಪಲ್ಲಕ್ಕಿ: ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಕೊನೆ ಪಲ್ಲಕ್ಕಿ: ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಕೊನೆ ಪಲ್ಲಕ್ಕಿ

ಹತ್ತದಿದ್ದರೂ ಯಾವ ಪಲ್ಲಕ್ಕಿನೂ
ಕೊನೆ ಪಲ್ಲಕ್ಕಿ ಹೂವು, ಪತ್ರಿ, ಊದಿನಕಡ್ಡಿ
ಅಲಂಕೃತ ಹತ್ತುವವರೇ ಎಲ್ಲ!

ಬುಸುಗುಡುವ ಉತ್ಕೃಷ್ಟ ಭಯದ ಸಾವು
ಡ್ರೋನ್ ನಂತೆ ತಲೆಯಿಂದ ಚೂರೇಚೂರು ಮೇಲೆ
ನಿತ್ಯ ಸುಳಿಯುವ ತಲೆನೋವಿನಂತೆ

ಚಿಂತೆಯಿಲ್ಲ ನನ್ನ ಪಲ್ಲಕ್ಕಿ
ಬಂದರೆ ಇದೋ ಹೊರಟೆನು
ಬಿಟ್ಟು ಎಲ್ಲರ ಹಿಂದೆ ನಗುತ್ತಲೇ

ನಾನಿದ್ದು, ಹೋದರೆ ನನ್ನ ಜೀವತಂತುಗಳು
ತೂಕದ ದುಃಖ ಯಾರಿಗೆ,ಹೋದವರ ಮುಂದೆ
ಬದುಕಿದ್ದವರಿಗೆ ಶಾಪ ಜೀವನ ಯಾವಾಗಲೂ

ಈಗ ಈ ಪಲ್ಲಕ್ಕಿಗಳ ಮೆರವಣಿಗೆ
ವಿಶ್ವವ್ಯಾಪಿ ಮದುವೆಗೆ ಹೋಗುವಂತೆ
ಜಾರುತ್ತಿದೆ ಕೈಯಿಂದ ಕೈ ಒಂದೊಂದೇ

ಹೇಳಿ ಸ್ವಾರ್ಥ ತಪ್ಪಾ?
ಕಣ್ಣೀರ ಅಂಬುಧಿಗೆ ಬೇಡ
ನನ್ನ ಪಾಲು, ಇರಲಿ ನನ್ನ ಜೀವ ತಂತುಗಳದೇ!!!


ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.

ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. ಸುಭಾಸ ಹಂಗರಕಿ

    ಒಂದಲ್ಲ ಒಂದು ದಿನ ಹತ್ತಲೇ ಬೇಕು ಈ ಪಲ್ಲಕ್ಕಿ

    Reply
    • ಮಾಲಾ ಅಕ್ಕಿಶೆಟ್ಟಿ

      ಹೌದು ಸರ್..ಅನಿವಾರ್ಯ

      Reply
  2. ಮಹಾಂತೇಶ್ ಬಾಳಿಗಟ್ಟಿ

    ತುಂಬಾ ಪ್ರಬುದ್ದತೆಯನ್ನು ಹೊಂದಿದ ಕವಿಯತ್ರಿ ಈ ರೀತಿ ಕವಿತೆ ಬರೆಯಬಲ್ಲರು. ನೀವು ಕವಿತೆಗಳನ್ನು ಬರೆಯುವದರಲ್ಲಿ ಪ್ರಾವೀನ್ಯತೆ ಹೊಂದಿದ್ದೀರಿ.

    Reply
    • ಮಾಲಾ ಅಕ್ಕಿಶೆಟ್ಟಿ

      Tq sir …

      Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ