ದ್ವೈತ
ಭ್ರಮೆಗಳು ಮನುಷ್ಯನನ್ನು ಪೊರೆಯುತ್ತವೆ
ಹಲವು
ಷರತ್ತುಗಳೊಂದಿಗೆ,
ಒಂದಿಷ್ಟು
ಗಡುವುಗಳೊಂದಿಗೆ,
ಇನ್ನು ಕೆಲವು-
ಬೇಷರತ್ತಾಗಿ, ನಿರವಧಿಯವರಗೆ..
ಮತ್ತದು ನಿರಸನಗೊಳ್ಳುವತನಕ
ಮನುಷ್ಯನಿಗೆ ಅವನ್ನು
ತಾನೇ ಪೊರೆಯುತ್ತಿರುವೆ-
ನೆಂಬ ನಿರಾತಂಕ
ಭ್ರಮೆ- ಎಂಬ ಪೊಳ್ಳು
ಕಳಚಿ ಹಾರಿ ಹೋದಾಗ
ಆಹಾ! ತಾನು ವಿವೇಕಿಯಾದೆ-
ಎಂದುಕೊಳ್ಳುತ್ತಾನೆ- ಇನ್ನೊಂದು ಭ್ರಮೆ-
ಯ ಪ್ರವೇಶವಾಗುವವರೆಗೆ!
ತೀರ ಯೋಚನೆ ಮಾಡಬೇಡಿ;
ಬದುಕೇ ಒಂದು ಭ್ರಮೆ-
ಎಂದು!
ಮುಕ್ತಿಯೂ ಒಂದು ಭ್ರಮೆ-
ಇರಬಹುದಲ್ಲವೇ?
ಮುಕ್ತನೆಂಬ ಅರಿವು
ತನ್ನೊಳಗ
ಬಯಲು
ಮಾಡುವವರೆಗೆ!
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಇಷ್ಟವಾಯಿತು