Advertisement

ಜೂನಿಯರ್ ಸಂಪಿಗೆ

ಬರ ನೀಗುವ ಕೆರೆಗೇಕೆ ಬರೆ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಬರ ನೀಗುವ ಕೆರೆಗೇಕೆ ಬರೆ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಇದನ್ನೆಲ್ಲಾ ಕೇಳುತ್ತಿದ್ದ ವಿದ್ಯಾರ್ಥಿಗಳಿಗಂತೂ, ತಮ್ಮ ತಮ್ಮ ಊರನ್ನು ಉಳಿಸಿಕೊಳ್ಳಲು, ತಮ್ಮ ಊರಿನ ಪರಿಸರ, ಕೆರೆ-ಕಟ್ಟೆಗಳನ್ನು ಕಾಪಾಡಲು ಪಣತೊಡಲೇಬೇಕು, ಕೈಲಾದದ್ದು ಮಾಡಲೇಬೇಕೆಂಬ ಉತ್ಕಟ ಉಮೇದು ಹುಟ್ಟಿತು. ವಿಚಾರ ಸಂಕಿರಣದ ಮುಖ್ಯ ಭಾಗವಾಗಿ ವಿದ್ಯಾರ್ಥಿಗಳಿಂದ ವಿಚಾರ ವಿನಿಮಯ, ತಮ್ಮ ಯೋಜನೆಗಳ ವಿವರಣೆ, ಸಾಕ್ಷ್ಯಚಿತ್ರ ಪ್ರದರ್ಶನ ಬಾಕಿಯಿತ್ತು. ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮನಸ್ಪೂರ್ತಿಯಾಗಿ ಸಂಜೆಯವರೆಗೂ ಭಾಗವಹಿಸಿದ ಕಾವ್ಯ, ತನ್ನ ಮುಂದಿನ ಲೇಖನದಲ್ಲಿ ಕೆರೆಗಳ ಬಗ್ಗೆ ಏನು ಬರೆಯಬೇಕೆಂದು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಂಡಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಐದನೆಯ ಕತೆ

read more
ಬೇಟೆಗಾರ ಕೀಟವೇ ಬೇಟೆಯಾದಾಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಬೇಟೆಗಾರ ಕೀಟವೇ ಬೇಟೆಯಾದಾಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಈ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕೇಳುತ್ತಾ, ವಿಭಾಗೆ ಬಸ್ ಹೊರಟದ್ದೇ ತಿಳಿದಿರಲಿಲ್ಲ. ಅಕ್ಕ ನೀರು ಕುಡಿಯೋಕೆ ಅಂತ ಮಾತು ನಿಲ್ಲಿಸಿದಾಗ, ಕಿಟಕಿಯಾಚೆ ನೋಡಿ, “ಓಹ್! ಆಗ್ಲೆ ಇಷ್ಟು ಮುಂದೆ ಬಂದುಬಿಟ್ವಾ? ಸರಿ, ನೀನು ಮುಂದುವರೆಸು ಕಾವ್ಯಕ್ಕಾ” ಎಂದಳು. “ಹೂಂ, ನಿಮ್ ಭಾವ ಮಾತ್ರ ಅಲ್ಲ, ನಾನೂ ನೋಡಿದೀನಿ ಈ ‘ಕೀಟಗಳನ್ನ ತಿನ್ನೋ ಗಿಡಗಳನ್ನ’ ಗೊತ್ತಾ?” ಎಂದಳು ಕಾವ್ಯಾ ಕೀಟಲೆ ಮಾಡುತ್ತಾ. ಆಗ ವಿಭಾ ನಗುತ್ತಾ, “ಅಯ್ಯೋ! ನೀನೂ ಅಂದ್ರೇನು ಸುಮ್ನೇನಾ ಅಕ್ಕಾ? ನೀನೇನು ನೋಡಿದ್ದು? ಎಲ್ಲಿ ನೋಡ್ದೆ? ಹೇಳ್ಬೇಕು ತಾನೆ ಮತ್ತೆ” ಎಂದು ಅಕ್ಕನಿಗೆ ಪೂಸಿ ಹೊಡೆದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ನಾಲ್ಕನೆಯ ಕತೆ

read more
ಕವಾಟದಾಟ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಕವಾಟದಾಟ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

“ಅಕ್ಕಾ, ಈ ಕವಾಟ ನಮ್ಮ ಹೃದಯದಲ್ಲೂ ಇರತ್ತೆ ಅಲ್ವಾ?” ಎಂದಳು ವಿಭಾ. ಆಗ ಕಾವ್ಯ ನೀರು ಕುಡಿಯುತ್ತಾ “ಹೌದು ವಿಭಾ, ಹೃದಯದಲ್ಲೂ ಹೀಗೆ ರಕ್ತವು ಸರಿಯಾದ ದಿಕ್ಕಿನಲ್ಲಿ ಮಾತ್ರ ಹರೀಬೇಕು ಅನ್ನೋ ಕಾರಣದಿಂದ ವಿವಿಧ ಬಗೆಯ ಕವಾಟಗಳು ಅಂದ್ರೆ ‘ವಾಲ್ವ್’ಗಳು ಇವೆ. ಅವು ರಕ್ತವು ವಾಪಸ್ ಬರದಂತೆ ರಪ್ಪನೆ ಮುಚ್ಚಿಕೊಳ್ಳುತ್ವೆ” ಎಂದು ಹೇಳ್ತಾ, ಕುಡಿಯುತ್ತಿದ್ದ ನೀರು ಗಂಟಲು ಹತ್ತಿ, ಕೆಮ್ಮುವುದಕ್ಕೆ ಶುರು ಮಾಡಿದಳು. ಆಗ ವಿಭಾ ಅಕ್ಕನ ಬೆನ್ನು ಸವರಿ, “ತಲೆ ಮೇಲೆತ್ತು” ಎಂದು ಉಪಚರಿಸುತ್ತಾ, “ಅದಕ್ಕೇ, ನೀರು ಕುಡಿಯುವಾಗ ಮಾತಾಡಬಾರದು ಕಾವ್ಯಕ್ಕಾ” ಎಂದಳು; ಅವಳ ಮಾತಿನಲ್ಲಿದ್ದ ಕೊಂಚ ಕಕ್ಕುಲಾತಿ, ಕೊಂಚ ತರಲೆತನವನ್ನು ಗಮನಿಸಿದ ಕಾವ್ಯಳಿಗೆ ವಿಭಾಳನ್ನು ನೋಡಿ ನಗೆಯುಕ್ಕಿತು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಮೂರನೆಯ ಕತೆ

read more
ಧಮನಿ-ಧಮನಿಯೊಳಗೇನಿದು ಮಾಯೆ!: ಕ್ಷಮಾ ವಿ.ಭಾನುಪ್ರಕಾಶ್ ಕಥಾ ಸರಣಿ

ಧಮನಿ-ಧಮನಿಯೊಳಗೇನಿದು ಮಾಯೆ!: ಕ್ಷಮಾ ವಿ.ಭಾನುಪ್ರಕಾಶ್ ಕಥಾ ಸರಣಿ

“ಕಾವ್ಯಕ್ಕಾ, ಗಿಡಗಳ ಒಳಗೆ ಇರೋ ಆಹಾರವಾಹಕ – ಜಲವಾಹಕಗಳ ಹಾಗೆ ನಮ್ಮೊಳಗೆ ಇರೋ ‘ಪೈಪ್’ಗಳ ಬಗ್ಗೆ ತಿಳ್ಸ್ತೀನಿ ಅಂದಿದ್ಯಲ್ಲ?” ಎಂದಳು. “ಜಾಣೆ ವಿಭಾ, ಮರ್ಯೋದೇ ಇಲ್ಲ ಅಲ್ವಾ? ಹೇಳ್ತೀನಿ ಕೇಳು. ಏನ್ಮಾಡೋದು, ನಾವು ಗಿಡ ಮರಗಳ ಹಾಗೆ ನಮ್ಮೊಳಗೇ ‘ಬೆಳಕಡುಗೆ’ ಅಂದ್ರೆ ‘ಫೋಟೋಸಿಂಥೆಸಿಸ್’ ಮಾಡಿ ಆಹಾರ ತಯಾರು ಮಾಡ್ಕೊಳ್ಳಕ್ಕಾಗಲ್ವಲ್ಲ? ಅದಕ್ಕೆ ದಿನವಿಡೀ ಅಡುಗೆ-ತಿಂಡಿ ಅದೂ ಇದೂ ಅಂತ ಮಾಡ್ತಾ ಇರ್ಬೇಕು!” ಎಂದು ಮಾತು ಮುಂದುವರಿಸುವಾಗ ವಿಭಾ “ಹೇ ಹೋಗಕ್ಕಾ! ನಮ್ಮೊಳಗೇ ನಾವು ಗಿಡಗಳ ಹಾಗೆ ಊಟ ರೆಡಿ ಮಾಡಿಕೊಂಡ್ಬಿಟ್ರೆ, ರುಚಿಯಾದ ಚುರುಮುರಿ, ಪಾನಿಪೂರಿ ಎಲ್ಲಾ ಮಿಸ್ ಆಗಲ್ವಾ? ನೀನೊಳ್ಳೆ! ಇವಾಗಿರೋದೇ ಸರಿಯಾಗಿದೆ ನೋಡು!” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಎರಡನೆಯ ಕತೆ

read more
ಕ್ಷಮಾ ವಿ. ಭಾನುಪ್ರಕಾಶ್‌ ಹೊಸ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ” ಇಂದಿನಿಂದ

ಕ್ಷಮಾ ವಿ. ಭಾನುಪ್ರಕಾಶ್‌ ಹೊಸ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ” ಇಂದಿನಿಂದ

“ನಮ್ಮ ತೋಟದಲ್ಲಿ ಎಲ್ಲೆಡೆಯೂ ಕಾಣುವ ಹನಿನೀರಾವರಿ ಪೈಪುಗಳಂತೆ ಈ ಜಲವಾಹಕ ಮತ್ತು ಆಹಾರವಾಹಕ ಕೊಳವೆಗಳೂ, ಸಸ್ಯದ ತುಂಬೆಲ್ಲಾ ಇರತ್ವೆ ಅಲ್ವಾ? ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಾ ಗಿಡಮರಗಳನ್ನ ಚೆನ್ನಾಗಿಡತ್ವೆ” ಎಂದಳು ನಗುತ್ತಾ. “ಹೌದು ಕಣೋ, ಹಾಗೇನೇ. ಇಲ್ಲಿ ನೋಡು, ಈ ಎಲೆಯನ್ನ!” ಎಂದು ತನ್ನ ಅಂಗಳದಲ್ಲೇ ಸೊಂಪಾಗಿ ಬೆಳೆದಿದ್ದ ಮಲ್ಲಿಗೆಯ ಬಳ್ಳಿಯಿಂದ ಎಲೆಯೊಂದನ್ನು ತೋರಿಸುತ್ತಾ! “ಈ ಎಲೆಯಲ್ಲಿ ಆಚೀಚೆ ಕಾಣುವ ಗೆರೆಗಳನ್ನ ಗಮನಿಸು; ಅದೇ ರೀತಿ ಇಲ್ಲಿ ಅಂಗಳದಲ್ಲಿರುವ ಎಲ್ಲಾ ಗಿಡಗಳನ್ನೂ ಗಮನಿಸು. ಎಲ್ಲಾ ಎಲೆಗಳಲ್ಲೂ ಹೀಗೆ ಗೆರೆಗಳು ಕಾಣಿಸುತ್ತಲ್ವಾ? ಅದೇ ಈ ಜಲವಾಹಕ-ಆಹಾರವಾಹಕಗಳ ಕಂತೆ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಹೊಸ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

read more
ಮೂಡಿಗೆರೆಯ ಕಾರ್ಗಾಲದ ಮೋಡಿ

ಮೂಡಿಗೆರೆಯ ಕಾರ್ಗಾಲದ ಮೋಡಿ

ಈ ಗಾಳಿ ಮಳೆ ಕಾಟ ಒಂದೆರಡಲ್ಲ. ಕಳ್ಳರೂ ಬೀಳುವುದುಂಟು. ಗಾಳಿ ಮಳೆ ಕತ್ತಲೆ ಒಳ್ಳೆಯ ಕಾಲ ಅವರಿಗೆ. ಇಂತದೇ ಮತ್ತೊಂದು ಕಗ್ಗತ್ತಲು ರಾತ್ರೆ. ಇನ್ನೂ ನಿದ್ದೆ ಬಂದಿಲ್ಲ. ಕಿಟಕಿಗೆ ಯಾರೋ ಟಾರ್ಚು ಬಿಡುತ್ತಿದ್ದಾರೆ. ಹೆದರಿ ನೀರಾದೆ. ಆ ಬೆಳಕು ಪಕ್ಕದ ಕಿಟಕಿಗೂ ಹೋಯ್ತು. ಇನ್ನೂ ಹೆದರಿಕೆ ಹೆಚ್ಚಾಯ್ತು. ಎದೆ ಡವಡವ ಗುಟ್ಟಿತು. ಎಲ್ಲಾ ಎದುರಿಸಬೇಕಲ್ಲಾ. ಗಟ್ಟಿ ಮನಸ್ಸು ಮಾಡಿ ಎದ್ದು ಕೂತೆ. ಟಾರ್ಚು ಬೆಳಕು ದೂರ ಸರಿಯಿತು. ಮೆಲ್ಲಕೆ ಎದ್ದು ನಿಂತೆ. ಇನ್ನೂ ದೂರ ದೂರ ಹೋಯಿತು ಬೆಳಕು. ಸುಸ್ತು ನಾನು. ಅಷ್ಟರಲ್ಲಿ ಜಗ್ ಜಗ್ ಬೆಳಕು ಹತ್ತಾರು ಆಯಿತು. ಏನದು ಬೆಳುಕು ಎಂಬ ಕುತೂಹಲದ ಬಗ್ಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಬರಹ ಇಂದಿನ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ  

read more
ಬೆದರುಬೊಂಬೆ ಮತ್ತು ದಿಲ್ದಾರ್ ಹಕ್ಕಿ: ಎಂ ಆರ್ ಭಗವತಿ ಬರೆದ ಮಕ್ಕಳ ಕಥೆಗಳು

ಬೆದರುಬೊಂಬೆ ಮತ್ತು ದಿಲ್ದಾರ್ ಹಕ್ಕಿ: ಎಂ ಆರ್ ಭಗವತಿ ಬರೆದ ಮಕ್ಕಳ ಕಥೆಗಳು

ಪ್ರತಿರಾತ್ರಿ ಬೆಳದಿಂಗಳ ಮೋಡವೊ೦ದು ಹೊಲದಲ್ಲಿ ನಿಂತ ಬೆದರು ಬೊಂಬೆಯನ್ನು ಮಾತನಾಡಿಸಿ ಹೋಗುತ್ತಿತ್ತು. ಬೆದರು ಬೊಂಬೆ ಮೋಡದ ಕುಶಲ…

read more
ಅಂದು ಅಕ್ಟೋಬರ್ ನ ಎರಡನೇ ದಿವಸವಾಗಿತ್ತು…..

ಅಂದು ಅಕ್ಟೋಬರ್ ನ ಎರಡನೇ ದಿವಸವಾಗಿತ್ತು…..

ಅವರ ಕೋಲು ಹಿಡಿದು ‘ಹೀಗೆ ಬನ್ನಿ ತಾತ.. ನಾವೆಲ್ರೂ ನಿಮಗೋಸ್ಕರವೇ ಕಾಯ್ತಿದ್ವಿ..’ ಎನ್ನುತ್ತಾ ತನ್ನ ಶಾಲೆಯ ಕಡೆಗೆ ಕರೆದೊಯ್ಯತೊಡಗಿದ. ಆ ಹಾದಿಯಲ್ಲಿ ನಡೆಯುತ್ತಾ ಸ್ವತಃ ಗಾಂಧಿ ಬೆರಗಾಗಿದ್ದರು.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ