Advertisement
ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

ಪ್ರೇತ 

ಸಂಜೆಗೆ
ಒಂಟಿಯಾಗಿ
ಈ ದಾರಿಯಲ್ಲಿ ಬರುವಾಗ
ಮೈ ಸವರಿಕೊಂಡೇ ನಡೆವ ಸೂಳೆ ಸೂರ್ಯ
ಪಂಚೆಯನ್ನು ಮೇಲಕ್ಕೆ ಹಾರಿಸುವ ಹಾದರಗಿತ್ತಿ ಗಾಳಿ
ಬೆನ್ನು ಬಿಡದೆ ಸುತ್ತುವ ಕುಲಟೆ ನೆರಳು
ರಾತ್ರಿಯನ್ನು ವಶ ಮಾಡಿಕೊಳ್ಳುತ್ತಿರುವ
ಕೆಂಪು ಕತ್ತಲಾಗುವ ಒಂದು ಸಂಜೆಗೆ
ಒಂಟಿಯಾಗಿ
ಈ ದಾರಿಯಲ್ಲಿ ಬರುವಾಗ

ಎರಡೂ ಬದಿಗಳಲ್ಲಿರುವ ಸೂಜಿ ಮರಗಳಂತೆ ಓಲಾಡಿಕೊಂಡಿರುತ್ತಿದ್ದ
ಈ ತಿರುವಿನಲ್ಲಿ ತಿರುಗುವಷ್ಟರಲ್ಲಿ

ಮಣ್ಣಲ್ಲಿ ಈವರೆಗೆ ಹುಟ್ಟಿದ ಎಲ್ಲಾ ಹೆಣ್ಣುಗಳು
ಮುಖಕ್ಕೆ ಬಣ್ಣ ಬಳಿದುಕೊಂಡು
ಮುಡಿಗೆ ಮಲ್ಲಿಗೆ ಮುಡಿದುಕೊಂಡು
ವಯ್ಯಾರ ಮಾಡಿಕೊಂಡು
ದಾರಿಯ ತುಂಬುತ್ತಾ
ಪ್ರಚಂಡ ಮಹಾಭೋಗಕ್ಕೆ ಆಹ್ವಾನಿಸುವುದನ್ನು ಕಂಡು
ದಿಗ್ಭ್ರಮೆಗೊಂಡು ಉದ್ರೇಕಗೊಂಡು
ಎಣಿಸಲಾರದಷ್ಟು ತುಟಿಗಳು ಮೊಲೆಗಳು
ಗುಪ್ತಾಂಗದಿಂದ ಧುಮ್ಮಿಕ್ಕಿ ಬಂದ
ಅಗಾಧ ನೀರಿನೊಳಗೆ
ಮುಳುಗಿ, ಮೇಲೆದ್ದು, ಮತ್ತೆ ಮುಳುಗಿ
ಸತ್ತ
ಉಬ್ಬಿ
ದಡಕ್ಕೆ ಬಿದ್ದ

ಸಂಜೆಗೆ
ಒಂಟಿಯಾಗಿ
ಈ ಅದೇ
ಶಪಿತ ವೇಶ್ಯಾ ನೆಲದ ಮೇಲೆ

ಅನಿತಾ ತಂಪಿ ಅವರು ಕೇರಳದ ಮಲಯಾಳಂ ಭಾಷೆಯ ಕವಿ, ಅನುವಾದಕಿ ಮತ್ತು ಪ್ರಬಂಧಕಾರರು. ಅವರ ಸಾಹಿತ್ಯ ಕೃತಿಗಳು ಭಾರತದಲ್ಲಿಯೂ ವಿದೇಶಗಳಲ್ಲಿಯೂ ಮೆಚ್ಚುಗೆ ಪಡೆದಿವೆ. ಅವರ ಬರಹಗಳು ಅನೇಕ ಭಾಷೆಗಳಿಗೆ ಅನುವಾದಗೊಂಡು ಜಾಗತಿಕ ನಿಯತಕಾಲಿಕೆಗಳು ಮತ್ತು ಸಂಕಲನಗಳಲ್ಲಿ ಪ್ರಕಟವಾಗಿವೆ. ಅವರು ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: ಮುತ್ತಮತಿಕ್ಕುಂಪೋಲ್ (2004), ಅಜಕಿಲ್ಲತವಯೆಲ್ಲಂ (2010), ಅಲಪ್ಪುಳ ವೆಲ್ಲಾಂ (2016), ಡಿಫರೆಂಟ್ ವಾಟರ್ (2018) ಮತ್ತು ಮುರಿಂಗ ವಝಾ ಕರಿವೆಪ್ಪು (2023). ಜುವಾನ್ ರಾಮೋನ್ ಜಿಮೆನೆಜ್, ಕಾರ್ಲೊ ಕೊಲೊಡಿ, ಲೆಸ್ ಮುರ್ರೆ ಮತ್ತು ಮೌರಿದ್ ಬರ್ಘೌಟಿ ಅವರ ಕೃತಿಗಳನ್ನು ಮಲಯಾಳಂಗೆ ಅನುವಾದಿಸಿದ್ದಾರೆ. [ಈ ಕವಿತೆಯನ್ನು ಕಾವ್ಯ ಸಂಜೆ ಅಂತಾರಾಷ್ಟ್ರೀಯ ಕಾವ್ಯಾನುವಾದ ಕಾರ್ಯಾಗಾರದಲ್ಲಿ ಅನುವಾದಿಸಲಾಗಿದೆ. ಮೂಲಕವಿಗಳು ಸಹ ಕಾರ್ಯಾಗಾರದಲ್ಲಿ ಇದ್ದದ್ದು ಮತ್ತು ಇಂಗ್ಲಿಷ್ ಭಾಷೆಯು ಒಂದು ಸೇತುವೆಯ ಹಾಗೆ ಕೆಲಸ ಮಾಡಿದರೂ ಮಲಯಾಳಂ ನುಡಿನಿನಾದ ಕನ್ನಡ ಭಾಷೆಯ ಅನುವಾದದಲ್ಲಿ ಮೂಡುವಲ್ಲಿ ಸಹಾಯ ಮಾಡಿದೆ. ಈ ಕವಿತೆಯ ಇಂಗ್ಲಿಷ್ ಅನುವಾದ ಮಾಡಿದವರು ಎ ಜೆ ಥಾಮಸ್.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ