Advertisement
ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

ಪ್ರಭುವೆ

ಹಚ್ಚಿಕೊಂಡ ನಂಬಿಕೆಯೊಂದು
ಕಾಯುವ ಬಯಕೆ ಹುಟ್ಟಿಸುತ್ತದೆ ಪ್ರಭುವೇ.

ಕಾಲ ಭಾವಗಳ ಮಾಗಿಸಬಹುದು
ಬಾಗಬಹುದು ಬಲು ಗಟ್ಟಿ
ಎನಿಸಿದ್ದ ಒಳಗಿನ ಒಣ ಅಹಮ್ಮು.

ಬರಡು ಎದೆಯಲ್ಲೂ ಕಳೆಹೂವುಗಳು
ಅರಳಿ ಅಸಡ್ಡೆಯಲ್ಲಿ ಬಿಗಿದ ಈ
ತುರುಬಿಗಿಡುವ ಆಸೆಯುದಿಸಬಹುದು.

ಭೂತದ ಬೇತಾಳ ಈ ಹೆಗಲಿಂದ
ಜಿಗಿದು ನೇತಾಡಿದ ಮರದಡಿಯಲ್ಲೇ
ಕುಳಿತು ಹೊಸ ಮಾದರಿ ಕನಸ
ಹೆಣೆಯಬಹುದು.

ಹಿಡಿ ಮಣ್ಣಿನಲ್ಲಿ ಜಗ ಅಡಗಿರುವ
ಕುರಿತು ತಡವಾಗಿಯಾದರೂ
ಅರಿವಾಗಬಹುದು.
ನಾಳಿನ ಸೂರ್ಯನೆದೆಯಲ್ಲಿ
ಬಾಳಿನ ಬಣ್ಣ ತುಳುಕಾಡಬಹುದು.

ಹಣೆಯ ಹಳೆ ಬರಹ ಬರೆದವ
ಬದಲಿಸಿ ಶುಭವಾಗಲಿ ಎಂದಾಗ
ಹೊಸದಾಗಿ ಸಪ್ತಪದಿ ಬಯಕೆ
ಮೂಡಬಹುದು..

ಅತಿಯೆಂದು ಹಂಗಿಸದಿರು ಪ್ರಭುವೇ…

ಮರಳುಗಾಡಿಗೂ ಆಗಾಗ ಅತಿವೃಷ್ಟಿ
ಯೋಗವಿದೆ.
ನಡುದಾರಿಯಲ್ಲೂ ಬೀಜವೊಂದು
ಕುಡಿಯೊಡೆದ ಕುರುಹಿದೆ.

ಎದೆ ಕಿಟಿಕಿಯ ಗಾಜು ಒರೆಸಿಡುತ್ತೇನೆ ನಾನೇ
ಬೆಳಕು ಬಾಗಿ ಒಳಗಿಳಿಯಲು
ತುಸುವಾದರೂ ಸಹಕರಿಸು ಪ್ರಭುವೆ.

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. RAJIV N. MAGAL

    ಬಹಳವೇ ಉತ್ತಮ ಪದಗಳ ಬಳಕೆ! ಅರ್ಥವತ್ತಾದ ಕವಿತೆ! ಭಾವನೆಗಳ ಪ್ರದರ್ಶನ! ಓದುವುದು ಡಿಜಿಟಲ್ ಮಾಧ್ಯಮದ ಮೂಲಕ…..ಬರೆಯುವುದು almost ಮಾಯ…..ವಾಸ್ತವ ಹೀಗಿರುವಾಗ ಭಾವನಾತ್ಮಕ ಕವಿತೆಗಳನ್ನು ಬರೆಯುವ ಹವ್ಯಾಸವನ್ನು ಇನ್ನೂ, I repeat ಇನ್ನೂ, ಕರಗತ ಮಾಡಿಕೊ೦ಡಿರುವ ನ೦ದಿನಿ ವಿಶ್ವನಾಥ್ ಹೆದ್ದುರ್ಗ ಅವರಿಗೆ ಅಭಿನ೦ದನೆಗಳು!

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ