ಕಡುನೋವಿನ ಕುರಿತು ಹಾಡೊಂದು ಬರೆಯಬಲ್ಲೆ ಈ ರಾತ್ರಿ..
ಖಾಲಿ ನಿಲ್ದಾಣದ ಕುರಿತು ಬರೆಯಬಲ್ಲೆ ಈ ರಾತ್ರಿ
ಹಾಡು ಹಕ್ಕಿಯ ರೆಕ್ಕೆ ಕತ್ತರಿಸುತಿದೆ ಹಾಳಾದ ಕಡು ಒಲವು
ವಲಸೆ ಹೊರಟವನ ಕುರಿತು ಬರೆಯಬಲ್ಲೆ ಈ ರಾತ್ರಿ
ಎದೆಯ ರುದ್ರಭೂಮಿಯಲ್ಲಿ ಮುಕ್ತಿ ಕಾಣದ ಎಷ್ಟೊಂದು
ಹೃದಯಗಳು..
ಹಚ್ಚಿಕೊಂಡ ನಂಬಿಕೆಯೊಂದು ಚುಚ್ಚಿ ನೋಯಿಸಿದ ಕುರಿತು ಬರೆಯಬಲ್ಲೆ ಈ ರಾತ್ರಿ
ಮಿಲನ ಮುಂಗಾರು, ಚುಂಬನದ ‘ಹನಿ’ಸೋನೆ
ಬೆದೆಗೆ ಬಯಲಾದ ಕಾಯ..
ಭರವಸೆಗಳೆಲ್ಲಾ ಬಸವಳಿದು ಬಳಲಿದ ಕುರಿತು ಬರೆಯಬಲ್ಲೆ ಈ ರಾತ್ರಿ..
ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಚೆನ್ನಾಗಿದೆ! ???
very nice poem nandini