Advertisement

ಪುಸ್ತಕ ಸಂಪಿಗೆ

ಪರಿಸರದ ಪಾಠಕ್ಕೆ ಇದೇ ಸೂಕ್ತ ತಾಣ!

ಪರಿಸರದ ಪಾಠಕ್ಕೆ ಇದೇ ಸೂಕ್ತ ತಾಣ!

ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಶಶಿಧರ ಹಾಲಾಡಿಯವರ “ನಾ ಸೆರೆಹಿಡಿದ ಕನ್ಯಾಸ್ತ್ರೀ” ಪ್ರಬಂಧ ಸಂಕಲನದ ಒಂದು ಬರಹ ನಿಮ್ಮ ಓದಿಗೆ

read more
ಹಳ್ಳಿಯ ಅಂತರಾತ್ಮದ ಆರ್ದ್ರ ಕಥನ

ಹಳ್ಳಿಯ ಅಂತರಾತ್ಮದ ಆರ್ದ್ರ ಕಥನ

ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ.
ಮಂಜಯ್ಯ ದೇವರಮನಿ ಕಥಾ ಸಂಕಲನ “ದೇವರ ಹೊಲ”ಕ್ಕೆ ಎಸ್. ಗಂಗಾಧರಯ್ಯ ಬರೆದ ಮುನ್ನುಡಿ

read more
ದೈನಿಕತೆಯಲ್ಲೆ ದೈವಿಕತೆ..

ದೈನಿಕತೆಯಲ್ಲೆ ದೈವಿಕತೆ..

ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ

read more
ಇದ್ದಂತೆ ಇರುವ ಪದ್ಯಸದ್ಯ

ಇದ್ದಂತೆ ಇರುವ ಪದ್ಯಸದ್ಯ

ಕವಿತೆ ಪ್ರಣಾಳಿಕೆಯೋ ವಾಗ್ವಾದವೋ ಉತ್ತರವೋ ಪ್ರತಿಭಟನೆಯೋ ಆಗಿ ಮೆರೆಯುತ್ತಿರುವ ದಿನಗಳಲ್ಲಿ ರಾಜು ಹೆಗಡೆ ಬರೆಯುತ್ತಿರುವ ಪದ್ಯಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಲು ಅಂಜಿಕೆಯಾಗುತ್ತದೆ. ನಮ್ಮ ಕಾವ್ಯದ ಓದನ್ನು ರಾಜಕೀಯ ನಿಲುವು, ಸೈದ್ಧಾಂತಿಕತೆ ಮತ್ತು ಸಾಮಾಜಿಕನಿಲುವುಗಳು ನಿರ್ಧರಿಸುವ ಕಾಲ ಇದು. ಶುದ್ಧಕವಿತೆ ಎಂಬ ಮಾತನ್ನು ಗೇಲಿ ಮಾಡಲಾಗುತ್ತದೆ ಮತ್ತು ಶುದ್ಧ ಸಾಹಿತ್ಯವನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಘೋಷಿತ ಗೊತ್ತುವಳಿಯಂಥ ಸಾಲುಗಳನ್ನು ಪದ್ಯಗಳೆಂದು ಕರೆಯಲಾಗುತ್ತಿದೆ.
ರಾಜು ಹೆಗಡೆ ಕವನ ಸಂಕಲನ “ಕಣ್ಣಿನಲಿ ನಿಂತ ಗಾಳಿ” ಗೆ ಜೋಗಿ ಬರೆದ ಮುನ್ನುಡಿ

read more
ಹೊಸ ಕಾಲವು ಕೊಟ್ಟ ದಿಟ್ಟತೆಯ ಕವಿತೆಗಳಿವೆಯಿಲ್ಲಿ!

ಹೊಸ ಕಾಲವು ಕೊಟ್ಟ ದಿಟ್ಟತೆಯ ಕವಿತೆಗಳಿವೆಯಿಲ್ಲಿ!

ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ.
ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕೃತಿಗೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

read more
“ಪಲಾಯನ”ದ ಕತೆಗಳು…

“ಪಲಾಯನ”ದ ಕತೆಗಳು…

ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ.
ಶಾರದಾ ಮೂರ್ತಿ ಬರೆದ “ ಪಲಾಯನ ಮತ್ತು ಇತರೆ ಕಥೆಗಳು” ಕಥಾಸಂಕಲನದ ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ

read more
ದಾರಕ್ಕೆ ಹಲವು ಸುತ್ತುಗಳು; ಆದರೆ ಗಂಟು ಮಾತ್ರ ಒಂದೇ

ದಾರಕ್ಕೆ ಹಲವು ಸುತ್ತುಗಳು; ಆದರೆ ಗಂಟು ಮಾತ್ರ ಒಂದೇ

ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ.
ಕುಸುಮಾ ಆಯರಹಳ್ಳಿ ಕಾದಂಬರಿ “ದಾರಿ”ಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ

read more
ಕನ್ನಡ ಪ್ರಬಂಧಲೋಕದ ಹೊಸ ಕಿಟಕಿ

ಕನ್ನಡ ಪ್ರಬಂಧಲೋಕದ ಹೊಸ ಕಿಟಕಿ

ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ.
ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ

read more
ಸಕೀನಾಳ ಮುತ್ತು: ರಮ್ಯತೆಯ ಹಿಂದಿನ ಅಸಂಗತತೆ

ಸಕೀನಾಳ ಮುತ್ತು: ರಮ್ಯತೆಯ ಹಿಂದಿನ ಅಸಂಗತತೆ

ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.
ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ