ಶ್ರದ್ಧೆಯ ಮೂಲ ಎಲ್ಲಿದೆ?
ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ.
ಗಿರಿಜಾ ರೈಕ್ವ ಬರೆಯುವ ಪ್ರವಾಸ ಅಂಕಣ
ಬಂಗಾಳಕೊಲ್ಲಿಯ ಮೂಗುತಿ ವಜ್ರ ಅಂಡಮಾನ್
ಸಮುದ್ರದೆದುರು ನಾವೆಲ್ಲರೂ ಗುಬ್ಬಚ್ಚಿಗಳಂತೆ ಹಾರಾಡೋ ಹಕ್ಕಿಗಳು, ಒಮ್ಮೆ ನೀಲಿ ಮತ್ತೊಮ್ಮೆ ಕೆಂಪಾದ ಆಕಾಶ, ಕನಸಿನಲೋಕಕ್ಕೆ ಜಾರುಬಂಡಿಯಾಗೋ ನುಣುಪು ಪಾಚಿ ಕಟ್ಟೆಗಳು, ಎಲ್ಲಿಯೂ ಕಾಣದ ಆದಿವಾಸಿಗಳು, ಹೂವು ಮುಡಿದು ಓಡಾಡೋ ತಮಿಳು-ಬೆಂಗಾಳಿ ಹೆಣ್ಮಕ್ಕಳು, ಎಂದಿನಂತೆ ಏನೇನೋ ಧಾವಂತಹೊತ್ತ ಚಡಪಡಿಸೋ ಗಂಡಸರು, ಬೆರಳುಗಳು ಬೆಸಗೊಂಡಂತೆ ಇಷ್ಟಿಷ್ಟೇ ದೂರದಲ್ಲಿ ಅಂಟಿಕೊಂಡಿರೋ ಚಿಕ್ಕ ಚಿಕ್ಕ ದ್ವೀಪಗಳು, ಭೂಮಿಯೊಂದಿಗಿನ ರೋಮ್ಯಾನ್ಸ್ಗಾಗಿಯೇ ಹುಟ್ಟೋ ಸೂರ್ಯ ಇದು ಅಂಡಮಾನ್!
ಅಂಡಮಾನ್ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ
ಸಿಸಿಲಿಯ ಹಾಳು ಹಂಪೆ ಈ ಸಿರಕುಸಾ
ಇಲ್ಲೊಂದು ಕ್ಯಾಥೆಡ್ರೆಲ್ ಇದೆ. ಇದರ ಮೂಲ ಗ್ರೀಕ್ ದೇವಾಲಯ. ಕ್ರಿ.ಪೂ. ಐದನೇ ಶತಮಾದಲ್ಲಿ ಕಟ್ಟಿದ ಈ ದೇವಾಲಯದ ಕಂಬಗಳು ಈಗಲೂ ಹಾಗೆಯೇ ಇವೆ. ರೋಮನ್ ಆಳ್ವಿಕೆಯಲ್ಲಿ ರೋಮನ್ ದೇವಾಲಯವಾಗಿತ್ತು. ನಂತರ ಕ್ರೈಸ್ತ ಧರ್ಮ ಬಂದ ನಂತರ ಇದನ್ನು ಚರ್ಚ್ ಆಗಿ ಮಾರ್ಪಾಡು ಮಾಡಲಾಯಿತು. ಆಮೇಲೆ ಅರಬ್ಬರ ಆಳ್ವಿಕೆಯಲ್ಲಿ ಮಸೀದಿ ಮಾಡಲಾಯಿತು. ನಂತರ ಮತ್ತೆ ಇಟಾಲಿಯನ್ ಆಳ್ವಿಕೆ ಬಂದ ನಂತರ ಇದನ್ನು ಪುನಃ ಚರ್ಚ್ ಮಾಡಲಾಯಿತು. ನನಗೆ ತಿಳಿದ ಮಟ್ಟಿಗೆ ಗ್ರೀಕ್ ದೇವಾಲಯದಿಂದ ಹಿಡಿದು ರೋಮನ್ ದೇವಾಲಯವಾಗಿ, ನಂತರ ಚರ್ಚ್ ಆಗಿ, ತದನಂತರ ಮಸೀದಿಯಾಗಿ ಮತ್ತೆ ಚರ್ಚ್ ಆದ ಇತಿಹಾಸವಿರುವ ಸ್ಥಳ ಇದೊಂದೇ! ದೂರದ ಹಸಿರು ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ
‘ಒಬ್ಬ ಸಾಮಾನ್ಯನೂ ರಾಮನೇ ಆಗಬಹುದು’
ಚಿಕ್ಕಮಗಳೂರಿನಲ್ಲಿ ಬಾಬಾಬುಡನ್ ಗಿರಿಗೆ ತೆರಳಿ ದತ್ತಪೀಠದ ದರ್ಶನ ಪಡೆಯುವುದೊಂದು ಪ್ರೀತಿಯ ವಿಚಾರ. ಆದರೆ ಜನಜಂಗುಳಿಯ ನಡುವೆ ಕಿರಿದಾದ ಹಾದಿಯಲ್ಲಿ ಒಂದೊಂದೇ ಹೆಜ್ಜೆಯಿಟ್ಟು ಹೋದ ಬಳಿಕ ಮನಸ್ಸು ಮುದುಡಿದಂತಾಯಿತು. ನಿರಾಳವಾದ ವಾತಾವರಣದಲ್ಲಿ ಈ ಪರಿಸರವನ್ನು ಕಣ್ತುಂಬಿಕೊಂಡ ಬಾಲ್ಯದ ಕ್ಷಣಗಳು ನೆನಪಾದವು. ಅಲ್ಲಿಂದ ಕೋದಂಡ ರಾಮ ಸೀತಾದೇವಿ ಮತ್ತು ಲಕ್ಷ್ಮಣನೊಡನೆ ತ್ರಿಭಂಗಿಯಲ್ಲಿ ನಿಂತಿರುವ ದೇವಸ್ಥಾನಕ್ಕೆ ತೆರಳಿದಾಗ ಅಲ್ಲೊಂದು ಸುಂದರವಾದ ವಿವರಣೆ ಸಿಕ್ಕಿತು. ಚಿಕ್ಕಮಗಳೂರು ಪ್ರವಾಸದ ನೆನಪುಗಳ ಬುತ್ತಿಯನ್ನು ಉಣಬಡಿಸಿದ್ದಾರೆ ಅಂಜಲಿ ರಾಮಣ್ಣ.
ಗಿರಿಜಾ ರೈಕ್ವ ಬರೆಯುವ ಹೊಸ ಅಂಕಣ ‘ದೇವಸನ್ನಿಧಿ’
ತಿರಿಗಾಡಿದಷ್ಟೂ ಕಾಣುವ ಇಂತಹ ದೇಶಗಳ ಹಂಗಿಲ್ಲದ ನಂಬಿಕೆಗಳ ಪ್ರಪಂಚ ನನಗೊಂದು ಸೋಜಿಗ ಮತ್ತು ಭರವಸೆಯ ಸ್ಪರ್ಶಮಣಿಯಂತೆ ತೋರುತ್ತದೆ. ಕೆಲವು ವರ್ಷಗಳ ಹಿಂದೆ ಬಾಲ್ಟಿಕ್ ದೇಶಗಳಲ್ಲಿ ಅಲೆಯುತ್ತಿದ್ದೆ. ಆಗ ಹೋಗಿ ನೋಡಿದ್ದು ಲಿಥುಯೇನಿಯಾದಲ್ಲಿರುವ ‘ಹಿಲ್ ಆಫ್ ಕ್ರಾಸ್ʼ ಅನ್ನುವ ಗುಡ್ಡ. ಲಿಥೂಯೇನಿಯಾ ಬಾಲ್ಟಿಕ್ ಸಾಗರದ ನಡುವಿನ ಒಂದು ದೇಶ. ೧೪ ನೇ ಶತಮಾನದಿಂದ ಸೋವಿಯತ್ ರಷ್ಯಾದ ಆಳ್ವಿಕೆಯಲ್ಲಿದ್ದು ೧೯೯೧ ರಲ್ಲಿ ಸ್ವತಂತ್ರವಾದ ದೇಶ.
ಗಿರಿಜಾ ರೈಕ್ವ ಬರೆಯುವ ದೇಗುಲಗಳ ಕುರಿತ ಹೊಸ ಪ್ರವಾಸ ಅಂಕಣ “ದೇವಸನ್ನಿಧಿ” ಇಂದಿನಿಂದ
ದೀಪಧಾರಿಣಿಯ ಬೆಳಕಿನಲ್ಲಿ ಹೊಳೆದ ಮಿಂಚು
ಹೀಗೆಲ್ಲಾ ಓದುತ್ತಾ, ಫೋಟೊ ತೆಗೆಯುತ್ತಾ ಮುಂದೆ ಹೋಗುತ್ತಿದ್ದೆ. ಅಲ್ಲೇ ಅಲ್ಲೇ ಇನ್ನೊಂದು ಫಲಕ. ಅದರಲ್ಲಿ ಸಣ್ಣಸಣ್ಣ ಅಕ್ಷರಗಳು. ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದವರಿಗೆಲ್ಲಾ ತಿಳಿದೇ ಇರುತ್ತದೆ ರೋಗಿಯ ಹಾಸಿಗೆಯ ಪಕ್ಕದಲ್ಲಿ ಒಂದು ಕರೆಗಂಟೆಯ ಸ್ವಿಚ್ ಇರುತ್ತದೆ ಎನ್ನುವುದು. ಆಮ್ಲಜನಕದ ಸಿಲಿಂಡರ್ ಒಂದೊಮ್ಮೆ ಖಾಲಿಯಾಗಿದ್ದರೂ ಆತಂಕಗೊಳ್ಳದ ವ್ಯಕ್ತಿ ಈ ಕರೆಗಂಟೆ ಕೆಲಸ ಮಾಡದಿದ್ದರೆ ಮಾತ್ರ ಸಾವಿನಷ್ಟೇ ಭಯಬೀಳುವುದು ಖಚಿತ.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ
ಸಿಸಿಲಿಯನ್ ಡೈರೀಸ್: ಯುರೇಕಾ ನಗರಿ ಸಿರಕುಸಾ
ಸಿಸಿಲಿಯ ಹತ್ತು ದಿನದ ಪ್ರವಾಸದಲ್ಲಿ ಮೊದಲು ಭೇಟಿ ಕೊಟ್ಟಿದ್ದು “ಸಿರಕುಸಾ”ಗೆ. ಹೌದು! ಇದು ಆರ್ಕಿಮಿಡಿಸ್ ನ ಜನ್ಮಸ್ಥಳ ಹಾಗೂ ವಾಸಸ್ಥಳವಾಗಿತ್ತು. ಆರ್ಕಿಮಿಡಿಸ್ ಎಂದಾಕ್ಷಣ ಯುರೇಕಾ ಎಂದು ಮಾತ್ರ ತಿಳಿದಿದ್ದ ನನಗೆ, ಈ ಪ್ರವಾಸ ಬೇರೆಯ ಪ್ರಪಂಚವನ್ನೇ ತೆರೆದಿಟ್ಟಿತು. ಆರ್ಕಿಮಿಡಿಸ್ ತನ್ನ ಬುದ್ಧಿಮತ್ತೆಯನ್ನು ಉಪಯೋಗಿಸಿ ರಾಜ್ಯವು ಭದ್ರವಾಗಿರಲು ಬೇಕಾದ ಅನೇಕ ಸಲಹೆಗಳನ್ನು ಕೊಡುತ್ತಿದ್ದ. ಅವನ ರಾಜ್ಯ ಸಿರಕುಸಾದಲ್ಲಿ ಓಡಾಡಿದ ಅನುಭವಗಳನ್ನು ಗುರುದತ್ ಅಮೃತಾಪುರ ಅವರು ತಮ್ಮ ‘ದೂರದ ಹಸಿರು’ ಅಂಕಣದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಮಾರ್ಟಿನ್ ಲೂಥರ್ ಕಿಂಗ್ ನೆನಪಿನಲ್ಲಿ ಹಾಕಿದ ಹೆಜ್ಜೆಗಳು
ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಟ್ಯಾಗೋರರ ಮನೆಯಂಗಳದಲ್ಲಿ ಕಂಡ ಸತ್ಯಗಳು
ತಮ್ಮ 77ನೇ ಹುಟ್ಟುಹಬ್ಬದಂದು ಟ್ಯಾಗೋರರು ಇದೇ ಮನೆಯಿಂದ ’ಜನಮ್ ದಿನ್’ ಎನ್ನುವ ತಮ್ಮ ಕವಿತೆಯನ್ನು ಆಕಾಶವಾಣಿಯ ನೇರ ಪ್ರಸಾರದಲ್ಲಿ ಓದಿದ್ದರು. ದೇಶದ ಮೊಟ್ಟಮೊದಲ ನೇರ ಪ್ರಸಾರ ಆಕಾಶವಾಣಿಯಲ್ಲಿ ಅದಾಗಿತ್ತು. ಆದರೀಗ ಆ ಮನೆ ಇಳಿ ವೇಳೆಯ ಎಲ್ಲಾ ಅಪರ ಕೃತ್ಯಗಳಿಗೆ ಚಾವಡಿಯಾಗಿದೆಯೆಂದು ತಿಳಿಯಿತು. ಎಷ್ಟು ಆಸಕ್ತಿ ಉತ್ಸಾಹದಿಂದ ಅಲ್ಲಿಗೆ ಬಂದಿದ್ದೆನೋ ಅಷ್ಟೇ ಮನನೊಂದು ಅಲ್ಲಿ ನಿಂತಿದ್ದೆ. ಅಂಜಲಿ ರಾಮಣ್ಣ ಬರಹ