Advertisement
ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ

ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ

ಸಂಭ್ರಮಿಸಿದ್ದೋ ಅಥವಾ ಭ್ರಮಿಸಿದ್ದೋ

ಮತ್ತೆ ಮತ್ತೆ
ಯಾಕೋ ನಿನ್ನನ್ನೇ
ಹುಡುಕುತ್ತಿರುತ್ತೇನೆ
ನೀನ್ಯಾರೆಂಬ ಅರಿವಾದರೂ
ನನಗುಂಟೊ ಇಲ್ಲವೊ

ನಿನ್ನ ಸಾಮೀಪ್ಯವನ್ನು
ಸಂಭ್ರಮಿಸಿದ್ದೋ
ಅಥವಾ
ಆಪ್ತರಾಗಿ ನಾವು
ಜೊತೆ ಜೊತೆಗೆ
ನಡೆದಂತೆ
ನಾನು ಭ್ರಮಿಸಿದ್ದೋ

ಎಲ್ಲವೂ ಸ್ಪಷ್ಟವಾಗೊ ಮುನ್ನ
ಅದ್ಯಾವುದೋ
ದಾರಿಯ ತಿರುವಲ್ಲಿ ನೀ
ಮರೆಯಾಗಿ
ನಾವು ಅಪರಿಚಿತರಾದಂತೆ

ಕಾಲಡಿಯ ಭೂಮಿ
ಮೇಲಿನ ಆಕಾಶ
ಒಂದೇ,
ಆದರೆ
ಸಾಗುವ ದಾರಿಗಳು
ಲೆಕ್ಕವಿರದಷ್ಟು

ಗುರುತುಳಿಸದೆ
ಸವೆಸಿದ ಹೆಜ್ಜೆಗಳು
ಮತ್ತೆಲ್ಲೋ ಸಂಧಿಸಬಹುದು
ಅಥವಾ
ವಿರುದ್ಧ ದಿಕ್ಕಿನಲ್ಲಿ
ಕೊನೆಗೊಳ್ಳಬಹುದು
ಮುಂದಿನದೆಲ್ಲವು
ಬರೀ ಅನುಭಾವ

 

ಭರತ್ ಕುತ್ತೆತ್ತೂರು ಮಂಗಳೂರಿನ ಕಾಟಿಪಳ್ಳ ಸಮೀಪದ ಕುತ್ತೆತ್ತೂರು ಗ್ರಾಮದ ನಿವಾಸಿ
ಖಾಸಗಿ ಉದ್ಯೋಗದಲ್ಲಿರುವ ಭರತ್ ಅವರಿಗೆ ಸಾಹಿತ್ಯದ ಓದು ಬರಹ ಮತ್ತು ಪ್ರವಾಸ ನೆಚ್ಚಿನ ಹವ್ಯಾಸಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ