Advertisement
ಭಾರತಿ ಹೆಗಡೆ ಬರೆದ ಈ ದಿನದ ಕವಿತೆ

ಭಾರತಿ ಹೆಗಡೆ ಬರೆದ ಈ ದಿನದ ಕವಿತೆ

ಕೊಟ್ಟುಬಿಡು ಹೂವೊಂದನು…

ಈ ಹರಿಯುತಿಹ ನೆತ್ತರಿನ ಹೊಳೆಯಲ್ಲಿ
ತುಸುವೂ ತೋಯದ
ತನ್ನೊಳಗೇ ಬಚ್ಚಿಟ್ಟುಕೊಂಡ ಬೆಳಕಲಿ
ಅರಳಿದ ಹೂವೊಂದನ್ನು ಕೊಟ್ಟುಬಿಡು ನನಗೆ

ಹತ್ತಿಯಂಥಾ ಬೆಳ್ಳನೆಯ ಹಿಮದ ಹನಿಗಳಲಿ
ಮಿಂದು ಬಿರಿದ
ಬೇರಿನೊಳಗಣ ಪರಿಮಳವ ಹೊತ್ತ
ಒಂದು ಹೂವನ್ನು ಕೊಟ್ಟುಬಿಡು ನನಗೆ

ಈ ಬೆಳಗಿನ ಮೌನಗರ್ಭವ ಸೀಳಿ
ಒಂದು ಚೆಂದನೆಯ ಆಲಾಪದ
ನಾದಕ್ಕೆ ಬಾಗುವಂತಹ
ಹೂವೊಂದನ್ನು ಕೊಟ್ಟುಬಿಡು ನನಗೆ

ಎಂದೂ ಮುಗಿಯದ ಹಾದಿಯ ತಿರುವಿನ ಪಥಿಕನೇ
ನಿನ್ನ ವಿಷದ ಬಟ್ಟಲಿನಲ್ಲದ್ದಿದ
ಗುಲ್ಕುಂದದ ಸಿಹಿ ನನ್ನ ಆವರಿಸುವುದಕ್ಕಿಂತ ಮುಂಚೆ
ದಯಪಾಲಿಸು ನನ್ನೇ ನಾ ಮರೆಯುವ
ಅಮಲಿನಂತಹ ಹೂವ ಪರಿಮಳವನ್ನು

About The Author

ಭಾರತಿ ಹೆಗಡೆ

ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಮೊದಲ ಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು(ಕಥಾ ಸಂಕಲನ), ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ