ಅವಳ ಪ್ರೀತಿಯ ವಾಂಛೆ
ಪ್ರತಿಸಾರಿ ಆವರಿಸಿ ಉಸಿರುಗಟ್ಟಿಸಿ ದಣಿಸಿ ನಗುವ ದುಶ್ಚಟ ಅವಳಿಗೆ .
ಕೊರಳ ಮೈ ಸ್ವರ್ಶ ಅರಸತ್ತಾ..ಬಯಸುತ್ತಾ .!
ತುಟಿಯಿಂದ ತುಟಿ ಹಿಂಡಿ ಹಿಪ್ಪೆಮಾಡಿ
ಎದೆಯ ಮೇಲಣ ತಲೆಯಿಟ್ಟು
ಹೆಣ್ಣು ಸರ್ಪದಂತೆ ಸರಿದಾಡಿ ಏಕಾ ಏಕಿ ದಾಳಿ ಮಾಡಿ.
ಬೆವರ ಹನಿಗಳೊಂದಿಗೆ ಪಿಸುಗುಟ್ಟುವ
ಅತಿರೇಕದ ವಾಂಛೆ ಅವಳದ್ದು.!
ದಣಿ ದಣಿಸಿ ಮತ್ತದೆ ಹುಸಿ ನಗು ನಕ್ಕು ಬರಿಗಾಲ
ಬೆರಳ ಗಂಧಕೆ ತಲೆದೂಗಿ.ತಿಂದು ತೇಗಿ,
ನಿಟ್ಟುಸಿರ ಹೊರದೂಡಿ
ಮಗದೊಮ್ಮೆ ದಣಿಸಲು ಹಠಮಾರಿಯಂತೆ
ಅನುವಾಗುತ್ತಾಳೆ .!
ಮುಂಗುರುಳ ತುದಿಯಿಂದ
ಏನೇನೊ ಗೀಚಿ ಕಣ್ಣ ರೆಪ್ಪೆಯ ತಂದು ಅಲ್ಲಲ್ಲಿ
ತಾಕಿಸಿ ಕಣ್ಣಮುಚ್ಚಾಲೆಯಾಡುತ್ತಾಳೆ.
ಮತ್ತೆಲ್ಲೊ ಮೌನದಿ ಕಣ್ಮರೆಯಾಗುತ್ತಾಳೆ!
ಕತ್ತು ಬಳಸಿ ಒತ್ತಿ ಹಿಡಿದು ಹಿತವಾಗೊಮ್ಮೆ
ಹಿಂಡಿ ವೇದನಿಸಿ.
ಏನನ್ನೊ ನೆನೆದು ಎದೆಯ ರೋಮ ತಣ್ಣಗಾಗುವಂತೆ
ನಿಟ್ಟುಸಿರ ಹೊರದೂಡುತ್ತಾಳೆ.!
ಅಂತರಂಗದ ಮನೆಯಲ್ಲಿ ಅವಳ ಪ್ರೀತಿಯ ವಾಂಛೆ
ಭೋರ್ಗರೆದು ಮರಳಿ ತಣ್ಣಗಾಗುವ ಶಾಂತ ಸಾಗರದ ಹಾಗೆ.!
ರಂಜಿತ್ ಕವಲಪಾರ ಭರವಸೆಯ ಯುವ ಬರಹಗಾರ.
ಇವರು ಕೊಡಗಿನ ಮಡಿಕೇರಿಯವರು.
(ಕಲೆ: ಪ್ಯಾಬ್ಲೋ ಪಿಕಾಸೋ)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಸೊಗಸಾಗಿದೆ
ಚೆನ್ನಾಗಿದೆ ತುಂಬಾ
ಕೊಡಗಿನ ಭರವಸೆಯ ಕವಿ ರಂಜಿತ್