Advertisement
ವೀಣಾ ನಿರಂಜನ ಬರೆದ ಈ ದಿನದ ಕವಿತೆ

ವೀಣಾ ನಿರಂಜನ ಬರೆದ ಈ ದಿನದ ಕವಿತೆ

ಇಷ್ಟ ರೋಗ

ನಿಶ್ಚಿತವಾಗಿಯೂ
ಇದೊಂದು ರೋಗ
ಅವಳೇ ಇಷ್ಟ ಪಟ್ಟು
ಹಚ್ಚಿಕೊಂಡದ್ದು

ಎಲ್ಲೆಂದರಲ್ಲಿ ತುರಿಕೆ
ಪರಚಿಕೊಂಡು ಮೈ ಎಲ್ಲ
ಗಾಯ
ಅವಳಿಗೆ ಹುಚ್ಚು
ಹಿಡಿಯುವುದೊಂದೆ ಬಾಕಿ

ಪ್ರತಿ ಬಾರಿಯೂ ಕೆರೆದಾಗ
ಆಹಾ ಎಂಥ ಸುಖವಾಗುತ್ತಿತ್ತು
ಆದರೆ
ಹಿತವಾಗಿದ್ದು ಎಲ್ಲಿಗೆ
ಉರಿಯುವ ದೇಹದ ಪದರಕ್ಕೊ
ಅಥವಾ
ಹೀಗೆ ಮಾಡೆಂದು
ಹೇಳಿದ ಮನಸ್ಸಿಗೊ

ಮೊದಮೊದಲು
ಹಿತವೆಂದುಕೊಂಡವಳಿಗೆ
ಕಂಡೂ ಕಂಡೂ
ಹಗಲು ಬಾವಿಗೆ ಬಿದ್ದ ಅನುಭವ
ಪರಚಿಕೊಂಡಲೆಲ್ಲ
ಹೆಪ್ಪುಗಟ್ಟಿದ ರಕ್ತದ ಕಲೆ
ಮೈ ತುಂಬ ಗಾಯ

ಹೀಗೇ
ಪರಚಿಕೊಂಡು ಗಾಯ
ಮಾಡಿ ಕೊಳ್ಳುವುದರಲ್ಲಿ
ಮತ್ತು
ಗಾಯಗಳನ್ನು ಕೆದಕುವುದರಲ್ಲಿ
ಸುಖವಿಲ್ಲ
ಎಂದು ಅವಳಿಗೆ
ಗೊತ್ತಾಗುವ ಹೊತ್ತಿಗೆ
ಗಾಯಗಳು ಅವಳನ್ನು
ಆಳತೊಡಗಿದ್ದವು
ಆಳವಾಗಿ ಬೇರೂರಿ.

ವೀಣಾ ನಿರಂಜನ ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯವರು.
ಅಂಚೆ ಇಲಾಖೆಯಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷ ಸೇವೆ ಸಲ್ಲಿಸಿದ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಇವರು ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.
ಸಾಹಿತ್ಯದಲ್ಲಿ ಆಸಕ್ತಿ. ಕಾವ್ಯವೆಂದರೆ ಪ್ರೀತಿ.
ವೀಣಾ ಅವರ ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Harinath Babu V

    ಹೌದು
    ತುರಿಕೆಯೇ ಹಾಗೆ
    ತುರಿಸಿಕೊಂಡ ಸುಖ‌ಒಂದೆಡೆಗಾದರೆ ಅದರಿಂದಾದ ಗಾಯ ಗಾಯದ ನೋವು ಮತ್ತು ಅದರ ಕುರುಹು ಸದಾ ಕಾಡುವಂಥಾದ್ದೆ
    ಬಾಹ್ಯವಷ್ಟೆ ಅಲ್ಲ ಅಂತರಂಗಕ್ಕೂ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ