Advertisement

ಸರಣಿ-2

ಸಮೃದ್ಧ ಕಾಡಿನ ರೋಚಕ ಕಥೆಗಳು-೧೧: ರೂಪಾ ರವೀಂದ್ರ ಜೋಶಿ ಸರಣಿ

ಸಮೃದ್ಧ ಕಾಡಿನ ರೋಚಕ ಕಥೆಗಳು-೧೧: ರೂಪಾ ರವೀಂದ್ರ ಜೋಶಿ ಸರಣಿ

ಆದರೆ ಎಲ್ಲ ವೇಳೆ ಒಂದೇ ಥೆರನಾಗಿರದು. ಸತತವಾಗಿ ನಡೆಯುತ್ತಿದ್ದ ಅವರ ಕಳ್ಳ ದಂಧೆ ಮಟ್ಟ ಹಾಕಲು ಅದೆಷ್ಟೋ ದಿನಗಳಿಂದ ಅಧಿಕಾರಿಗಳು ಹೊಂಚು ಹಾಕುತ್ತಲೇ ಇದ್ದರೆನ್ನಿಸುತ್ತದೆ. ಒಮ್ಮೆ ಪೋಲೀಸರು ಅವರೆಲ್ಲರನ್ನೂ ಕೆಲಸದ ಜಾಗದಲ್ಲೇ ಅಡ್ಡ ಹಾಕಿದರು. ನಮ್ಮ ಆಳಿನ ಕಿರಿಯ ಮಗನೂ ಅದರೊಳಗಿದ್ದನಂತೆ. ಹೇಗೋ ಕಣ್ಣು ತಪ್ಪಿಸಿಕೊಂಡು ಓಡಿ ಬಂದು ಮನೆಯಲ್ಲಿ ಅಡಗಿದ್ದ. ಅವನಿಗೆ ಕೆಲಸ ಕೊಟ್ಟ ಹೆಗಡೆಯವರು ಇಲಾಖೆಯವರಿಗೆ ದುಡ್ಡು ತಿನ್ನಿಸಿ, ಅವನೇ ಆ ಕಳ್ಳ ನಾಟಾ ಕಡಿಯುವವರಿಗೆ ಮುಖ್ಯಸ್ಥ ಎಂದು ಬಿಂಬಿಸಿ, ಜಾರಿಕೊಂಡರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಇಪ್ಪತ್ತನೆಯ ಕಂತು

read more
ಸ್ತ್ರೀ ಎಂದರೆ ಅಷ್ಟೇ ಸಾಕೆ?: ಸುವರ್ಣ ಚೆಳ್ಳೂರು ಸರಣಿ

ಸ್ತ್ರೀ ಎಂದರೆ ಅಷ್ಟೇ ಸಾಕೆ?: ಸುವರ್ಣ ಚೆಳ್ಳೂರು ಸರಣಿ

ಅವರಿಗೆ ಊಟಕ್ಕಿಟ್ಟಾಗ ಎಲ್ಲಾ ಸವನಾಗಿರಬೊಕು. ಮೆತ್ತನ ರೊಟ್ಟಿ, ಪಲ್ಯ, ಶೇಂಗಾ ಪುಡಿ, ಅನ್ನ, ಬ್ಯಾಳಿ ಎಲ್ಲಾನೂ ಮಾಡಬೇಕಿತ್ತು, ಸ್ವಲ್ಪ ಉಪ್ಪು ಖಾರ ಆಚೀಚೆ ಆದ್ರು ಅವರ ಮುಖದಾಗ ಗೊತ್ತಾಕಿತ್ತು. ‘ಏನ್ ಅಡಗಿ ಮಾಡತಾವ ಏನ! ಉಪ್ಪಿಲ್ಲ ಹುಳಿ ಇಲ್ಲ ಖಾರಿಲ್ಲ’ ಅಂತ ಬೈಯ್ಯೊದು ಯಾವಾಗಲೂ ಇರ್ತಿತ್ತು. ಆದ್ರ ನನಗ್ಯಾವಾಗಲೂ ಅನ್ಸೊದು, ಒಂದು ರೊಟ್ಟಿ ಮಾಡಬೊಕಂದ್ರ ಹಿಂದ ಒಂದು ತಾಸಿನ ಕೆಲಸ ಮಾಡಿರ್ತಿವಿ, ನಾದಾದು, ತಟ್ಟಾದು, ಬೇಯ್ಸಾದು ಆಮ್ಯಾಗದಕೊಂದು ಪಲ್ಯ ಮಾಡಿ ಜೋಡಸಾದು, ಒಲಿಮುಂದ ಕುಂತು ಬೇವರು ಸುರಿಸಿಗ್ಯಂತ, ಬೆನ್ನಿನ್ಯಾಗ ಬೇವರೆಲ್ಲ ನೀರು ಹರದಂಗ ಹರದಿರುತ್ತ…
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

read more
ಎಲೆಹಕ್ಕಿ:  ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಎಲೆಹಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಎಲೆಹಕ್ಕಿಗಳಿಗೆ ಕೀಟಗಳು, ಜೇಡಗಳು, ಹಣ್ಣು, ಮಕರಂದ ಮುಂತಾದುವುಗಳೇ ಆಹಾರ. ಕುಳಿತಲ್ಲಿಂದಲೇ ಗುರಿಯಿಟ್ಟು ಎಗರಿ ಹಾರುತ್ತಿರುವ ಹುಳಗಳನ್ನು ಹಿಡಿದು ತಿಂದು, ಕೀಟ ನಿಯಂತ್ರಣ ಕಾರ್ಯವನ್ನು ಸಮರ್ಥವಾಗಿ ಮಾಡುತ್ತವೆ. ಹೂವುಗಳಿಂದ ಮಕರಂದ ಹೀರಲು ಎಲೆಹಕ್ಕಿಗಳು ಮಾಡುವ ಸರ್ಕಸ್ ನೋಡಲು ಬಹಳ ಚಂದ! ಹಣ್ಣು-ಮಕರಂದವಿರುವ ಮರದಲ್ಲಿ ನಾಲ್ಕಾರು ಎಲೆಹಕ್ಕಿಗಳು ಸೇರಿದರೆ ಇತರ ಪ್ರಭೇದದ ಹಕ್ಕಿಗಳಿಗೆ ಪ್ರವೇಶವೇ ಇಲ್ಲ!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

read more
ರಂಗ ಕಲಾವಿದೆಯರ ಬದುಕು…: ಚಿತ್ರಾ ವೆಂಕಟರಾಜು ಸರಣಿ

ರಂಗ ಕಲಾವಿದೆಯರ ಬದುಕು…: ಚಿತ್ರಾ ವೆಂಕಟರಾಜು ಸರಣಿ

ಹಾಗೆ ನೋಡಿದರೆ, ನಾಟಕಗಳಲ್ಲಿ ಅಭಿನಯಿಸುವ ಹೆಣ್ಣುಮಕ್ಕಳು ಸಮಾಜದ ಉಳಿದ ಹೆಣ್ಣುಮಕ್ಕಳಿಗಿಂತ ದಿಟ್ಟರಾಗಿರುತ್ತಾರೆ. ಹಾಗೆ ಮುಕ್ತವಾಗಿಲ್ಲದಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ನಾಟಕಾಭ್ಯಾಸದಲ್ಲಿ ಮೊದಲು ಹೇಳಿಕೊಡುವ ಪಾಠವೇ ಮುಜುಗರವನ್ನು ಬಿಟ್ಟು ಧೈರ್ಯವಾಗಿ ಅನಿಸಿದ್ದನ್ನು ಮಾಡುವುದು. ಹಾಗಾಗಿಯೇ ನಾಟಕದಲ್ಲಿ ಅಭಿನಯಿಸುವ ನಟಿಯರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದುಕಾಣುವಂತಿರುತ್ತದೆ. ಹೊಸದಾಗಿ ನಾಟಕಕ್ಕೆ ಬಂದಾಗ ಗುಬ್ಬಿಯಂತಿರುವ ನಟಿಯರು ದಿನ ಕಳೆದಂತೆ ರಂಗದ ಆಕಾಶದಲ್ಲಿ ಗರಿಬಿಚ್ಚಿ ಹಾರುತ್ತಾರೆ, ಬೀಳುತ್ತಾರೆ‌, ಸಾವರಿಸಿಕೊಂಡು ಮತ್ತೆ ಏಳುತ್ತಾರೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

read more
ಸಂದರ್ಶಕರಿಗೆ ಆಟ ಹಾಜರಾದವರಿಗೆ ಸಂಕಟ…: ಬಸವನಗೌಡ ಹೆಬ್ಬಳಗೆರೆ ಸರಣಿ

ಸಂದರ್ಶಕರಿಗೆ ಆಟ ಹಾಜರಾದವರಿಗೆ ಸಂಕಟ…: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ಘಟನೆಯಿಂದ ನಾನು ಕಲಿತ, ಪರರೂ ಅನುಸರಿಸಬಹುದಾದ ಒಂದು ಪಾಠವನ್ನು ನಾನಿಲ್ಲಿ ಹಂಚಿಕೊಳ್ಳ ಬಯಸುತ್ತೇನೆ. ನಾವು ಯಾವುದೇ ಸಂದರ್ಶನಕ್ಕೂ ಹಾಜರಾಗುವ ಮುನ್ನ ನಾವು ಅವರು ನೀಡಿದ್ದ ಸಮಯಕ್ಕಿಂತ ಮುಂಚಿತವಾಗಿ ಹೋಗಬೇಕು. ಅಲ್ಲದೇ ಅವರು ಕೋಪ ಬರುವಂತಹ ಯಾವುದೇ ಪ್ರಶ್ನೆಯನ್ನು ಕೇಳಿದ್ರೂ ಅವರು ನಿಮ್ಮ ಮಾತಿನ ಶೈಲಿ ಮತ್ತು ಸಹನೆ ಪರೀಕ್ಷಿಸುತ್ತಿದ್ದಾರೆ ಎಂದು ತಿಳಿಯಬೇಕು. ಸಾಧ್ಯವಾದಷ್ಟು ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬೇಕು. ಉತ್ತರ ಗೊತ್ತಿಲ್ಲದಿದ್ದಾಗ ಪ್ರಾಮಾಣಿಕವಾಗಿ ಗೊತ್ತಿಲ್ಲವೆಂದು ಹೇಳುವುದರ ಜೊತೆಗೆ ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಬೇಕೇ ಹೊರತು ತಪ್ಪು ಉತ್ತರ ಹೇಳಬಾರದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಒಂದಾದ ಮೇಲೊಂದು…: ಎಚ್. ಗೋಪಾಲಕೃಷ್ಣ ಸರಣಿ

ಒಂದಾದ ಮೇಲೊಂದು…: ಎಚ್. ಗೋಪಾಲಕೃಷ್ಣ ಸರಣಿ

ಬ್ಯಾಚುಲರ್ ಲೈಫ್‌ನ ಅಂದಿನ ನನ್ನ ರಾತ್ರಿ ಶಿಫ್ಟ್ ಕತೆ ಬೇರೆ ತೆರನಾದದ್ದು. ಒಂದು ಕಿಮೀ ಹಿಂದಿನ ಸ್ಟಾಪ್‌ನಲ್ಲಿ ಇಳಿದು ಅಲ್ಲಿ ಬಿಸಿ ಬಿಸಿ ಬಾದಾಮಿ ಹಾಲು ಎರಡು ಲೋಟ ಸುರಿದುಕೊಳ್ಳೋದು. ಅದಕ್ಕೆ ಮೊದಲು ಬನ್ನು ಚೌ ಚೌ ಬ್ರೆಡ್ ಟೋಸ್ಟ್ ಮುಕ್ಕಿ ಹೊಟ್ಟೆ ಹಗುರ ಮಾಡಿಕೊಳ್ಳುವುದು. ಆಗಿನ್ನೂ ಬ್ರೆಡ್ ಬನ್ ಒಳಗೆ ಕಾಂಗ್ರೆಸ್ ಹಾಕಿಕೊಂಡು ಆ ಅಂತ ಬಾಯಿಯನ್ನು ಹಿಪಪಾಟಮಸ್ ತರಹ ಅಗಲಿಸಿ ತಿನ್ನುವ ಕಲ್ಚರೇ ಹುಟ್ಟಿರಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೦ನೇ ಬರಹ ನಿಮ್ಮ ಓದಿಗೆ

read more
ಸುಂದರ ಕಾಡಿನ ರೋಚಕ ಕಥೆಗಳು-೧೦: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೧೦: ರೂಪಾ ರವೀಂದ್ರ ಜೋಶಿ ಸರಣಿ

ಹಾಗೇ ಕಾಡು ಹಳ್ಳದ ಹಸೀ ಮಣ್ಣನ್ನು ಇಡೀ ಬಿರಟೆಗೆ ದಪ್ಪಗೆ ಮೆತ್ತಿ, ಒಂದೆಡೆ ಬೆಂಕಿ ಹಾಕಿ ಅದರೊಳಗೆ ಈ ಅಂಡೆ ಇಡುತ್ತಿದ್ದರಂತೆ. ಮಣ್ಣು ಮೆತ್ತಿರುವುದರಿಂದ ಅಂಡೆ ಸುಡದೇ ಒಳಗಡೆಯ ಅಕ್ಕಿ ಬೆಲ್ಲ ಹಾಲುಂಡು ಮೆತ್ತಗೆ ಬೆಂದು ರುಚಿಕಟ್ಟಾದ ಪಾಯಸ ರೆಡಿಯಾಗುತ್ತಿತ್ತಂತೆ. ಕತ್ತಿಯಲ್ಲಿ ಬಿದರ ಅಂಡೆ ಸೀಳಿ, ಒಳಗಿನ ಪಕ್ವಾನವನ್ನು ಕಾಡೆಲೆಯ ಮೇಲೆ ಹರಡಿಕೊಂಡು ಎಲ್ಲರೂ ಸೇರಿ ಲೊಟ್ಟೆಹೊಡೆಯುತ್ತ ತಿನ್ನುತ್ತಿದ್ದರಂತೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹತ್ತೊಂಭತ್ತನೆಯ ಕಂತು

read more
ಮಹಿಳಾ ದಿನಾಚರಣೆ ಅಂದರೆ…: ಸುವರ್ಣ ಚೆಳ್ಳೂರು ಸರಣಿ

ಮಹಿಳಾ ದಿನಾಚರಣೆ ಅಂದರೆ…: ಸುವರ್ಣ ಚೆಳ್ಳೂರು ಸರಣಿ

ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು, ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು. ಆ ಗ್ವಾಡಿಯನ್ನ ನೋಡ್ತಾ ನೋಡ್ತೂ ಅದೆಷ್ಟೊ ಹೆಣ್ಮಕ್ಕಳು ಇದ್ರಲ್ಲೆ ಇರೋದು ನೋಡಿ, ಅವರ ಬಾಯಿಗೆ ಕಟ್ಟಿದ ಹೂವಿನಿಂದ ಸಿಂಗರಿಸಿದ್ದ ಹಗ್ಗ, ದಿನದಿಂದ ದಿನಕ್ಕೂ ಬೆಳಿಯೋದನ್ನ ನೋಡಿ, ಹಗ್ಗದ ಗಂಟು ದಿನ ದಿನಕ್ಕೂ ಬಿಗಿಯಾಗೋದನ್ನ ನೋಡಿ, ಇದ್ಯಾಕೆ ಇದನ್ನ ಯಾರೂ ಬಿಳಸೊಕೆ ಆಗ್ತಿಲ್ಲ? ಯಾರಿದನ್ನ ಹೊರಗಿಂದ ಕಟ್ತಿರೊದು? ಅನ್ನೊ ಪ್ರಶ್ನೆಗಳೆಲ್ಲಾ ತಲೆ ತುಂಬಿದ್ವು. ಆದ್ರ ಇವಾಗ ಸಾಲಿಗೆ ಹೋಗಬಹುದು ಅನ್ನೊದು ನೆನಸ್ಕೊಂಡು ಒಂಥರಾ ಖುಷಿ ಆಯ್ತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಆರನೆಯ ಬರಹ

read more
ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿವಾಯ್‌ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚಿಲೆ (Chile) ದೇಶದ ಮಾಪುಚೆ ಬುಡಕಟ್ಟಿಗೆ ಸೇರಿದ ಮಾಪುಜುಗುನ್‌ (Mapuzugun) ಭಾಷಾ ಕವಿ ಎಲಿಕುರಾ ಚಿವಾಯ್‌ಲಾಫ಼್-ರವರ (Elicura Chihuailaf, 1953) ಕಾವ್ಯದ ಕುರಿತ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ