ಒಂದಲ್ಲ… ಎರಡು…! : ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಏಳನೆಯ ಅಧ್ಯಾಯ
“ಹೆಜ್ಜೆ ಶಬ್ದ ದೂರದಿಂದ, ನೆಲ ಅಂತಸ್ತಿನ ಮೆಟ್ಟಿಲಿಂದ ಬರುತಿತ್ತು. ಅದು ಕಿವಿಗೆ ಬಿದ್ದ ತಕ್ಷಣವೇ ಯಾರೋ ಇಲ್ಲಿಗೇ, ನಾಲ್ಕನೆಯ ಮಹಡಿಗೇ, ಮುದುಕಿಯ ಮನೆಗೇ ಬರುತಿದ್ದಾರೆ ಅನ್ನುವ ಅನುಮಾನ ಹುಟ್ಟಿತು ಅನ್ನುವುದು ಆಮೇಲೂ ಕೂಡ ಅವನಿಗೆ ಸ್ಪಷ್ಟವಾಗಿ ನೆನಪಿತ್ತು. ಹೆಜ್ಜೆ ಸದ್ದು ಯಾಕೆ ಅಪಶಕುನದ ಹಾಗಿತ್ತೋ? ಭಾರವಾದ, ಆತುರವಿಲ್ಲದ ಹೆಜ್ಜೆಗಳು. ಮೊದಲ ಮಹಡಿ ದಾಟಿದ್ದವು. ಮೇಲೇರುತಿದ್ದವು. ಬರುತಿದ್ದವನ ಹೆಜ್ಜೆ ಶಬ್ದ ಜೋರಾಗುತಿತ್ತು.”
ಇಂಚಿಂಚು ಸಂಚು ರೂಪಿಸುತ್ತಾ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಆರನೆಯ ಅಧ್ಯಾಯ
“ರಾಸ್ಕೋಲ್ನಿಕೋವ್ ನ ಮನಸ್ಸು ಕದಡಿತ್ತು. ಅದು ಎಲ್ಲ ಯುವಕರೂ ಸಾಮಾನ್ಯವಾಗಿ ಆಡುವಂಥ ಮಾತು, ಮಾಡುವಂಥ ಯೋಚನೆ. ಅವನೇ ಅಂಥ ಮಾತನ್ನ ಎಷ್ಟೋ ಸಾರಿ, ಎಷ್ಟೋ ಸಂದರ್ಭದಲ್ಲಿ, ಎಷ್ಟೋ ವಿಷಯಗಳ ಬಗ್ಗೆ ಕೇಳಿಸಿಕೊಂಡಿದ್ದ. ಆದರೆ, ಸರಿಯಾಗಿ ಇಂಥವೇ ಮಾತು, ಸರಿಯಾಗಿ ಇಂಥದೇ ಹೊತ್ತಲ್ಲಿ, ಅವನ ತಲೆಯಲ್ಲೂ ಸುಮಾರಾಗಿ ಅಂಥದೇ ವಿಚಾರ ಇರುವಾಗ ಯಾಕೆ ಕಿವಿಗೆ ಬೀಳಬೇಕಾಗಿತ್ತು?”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”
ಸತ್ತ ಕುದುರೆಯ ಎದೆಗೆ ಮತ್ತೆಮತ್ತೆ ಬಡಿಯುತ: ʼಅಪರಾಧ ಮತ್ತು ಶಿಕ್ಷೆʼ ಐದನೆಯ ಅಧ್ಯಾಯ
“ರಾಸ್ಕೋಲ್ನಿಕೋವ್ ಭಯಂಕರವಾದ ಕನಸು ಕಂಡ. ಪುಟ್ಟ ಊರಿನಲ್ಲಿ ಮಗುವಾಗಿದ್ದಾಗಿನ ಕನಸು. ಈಗ ಅವನಿಗೆ ಏಳು ವರ್ಷ. ಯಾವುದೋ ಹಬ್ಬದ ದಿನ ಅಪ್ಪನ ಜೊತೆಯಲ್ಲಿ ಸಾಯಂಕಾಲದ ಹೊತ್ತು ಉರಾಚೆ ನಡೆದುಕೊಂಡು ಹೋಗುತ್ತಿದ್ದಾನೆ. ಧಗೆಯ ದಿನದ ಮಂಕು ಸಂಜೆ. ಹಳ್ಳಿ ಅವನ ನೆನಪಿನಲ್ಲಿ ಹೇಗೆ ಉಳಿದಿತ್ತೋ ಕನಸಿನಲ್ಲೂ ತದ್ವತ್ ಹಾಗೇ ಕಾಣುತ್ತಿತ್ತು. ನೆನಪಿನಲ್ಲಿ ಮಸುಕಾಗಿದ್ದ ಊರು ಕನಸಿನಲ್ಲಿ ಸ್ಪಷ್ಟವಾಗಿತ್ತು.”
ಫ್ಯದೊರ್ ದಾಸ್ತಯೇವ್ಸ್ಕಿಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ನಾಲ್ಕನೆಯ ಅಧ್ಯಾಯ
“ಹೀಗೆ ಪ್ರಶ್ನೆ ಹಾಕಿಕೊಂಡು ಹಿಂಸೆಮಾಡಿಕೊಳ್ಳುತ್ತಾ ಇದ್ದ. ಆಗುವ ಹಿಂಸೆಯಲ್ಲಿ ಒಂದು ಥರ ಸಂತೋಷವನ್ನೂ ಪಡುತ್ತಿದ್ದ. ಈ ಯಾವ ಪ್ರಶ್ನೆಗಳೂ ಹೊಸವಲ್ಲ. ಆ ತಕ್ಷಣಕ್ಕೆ ಹುಟ್ಟಿದವೂ ಅಲ್ಲ. ಈ ಪ್ರಶ್ನೆಗಳೆಲ್ಲ ಹಳೆಯ ನೋವಿನ ಹಾಗೆ ಹಿಂಸೆ ಕೊಟ್ಟು ಕೊಟ್ಟು ಮನಸ್ಸನ್ನು ನವೆಸಿಬಿಟ್ಟಿದ್ದವು. ಈ ನೋವು ಬಹಳ ಬಹಳ ಹಿಂದೆಯೇ ಹುಟ್ಟಿತ್ತು, ಬೆಳೆದಿತ್ತು, ಇತ್ತಿಚೆಗಷ್ಟೇ ಮಾಗಿತ್ತು, ದಟ್ಟೈಸಿತ್ತು..”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ
ಸಿಂಹದ ಮೂಗ ತುದಿಯ ಸವರಿದ ತೆಂಗಿನ ತೋಪಿನವನ ಕಥೆ
“ಕಣ್ಣಿಂದ ಕೆಲವೇ ಕಾಲದಲ್ಲಿ ಮರೆಯಾಗಲಿರುವ ಬಹಳಷ್ಟು ಸಂಗತಿಗಳು ಅಪರಿಮಿತ ಸೌಂದರ್ಯದಿಂದ ಕೂಡಿರುತ್ತವೆ ಎನ್ನುವುದು ಬಲ್ಲವರು ಹೇಳುವ ಮಾತು. ಕಳೆದ ಹದಿನೈದು ಮಾಸಗಳಿಂದ ವಾಸಿಸುತ್ತಿರುವ ಈ ಲಕ್ಷದ್ವೀಪ ಸಮೂಹದ ಕಡಲು ಮತ್ತು ಆಕಾಶದ ಅನೂಹ್ಯ ನೀಲ ನಿಚ್ಛಳ ಬಣ್ಣವನ್ನು ನೋಡುತ್ತಾ ಇದ್ದರೆ ನನಗೂ ಹಾಗೇ ಅನಿಸುತ್ತದೆ. ಹಾಗಾಗಿ ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ…”
ಫ್ಯದೊರ್ ದಾಸ್ತಯೇವ್ಸ್ಕಿಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಅಧ್ಯಾಯ
“ಅವತ್ತು ಮಾರ್ಫಾ ಅವರಿಬ್ಬರನ್ನೂ ತೋಟದಲ್ಲಿ ನೋಡುವ ಬಹಳ ಮೊದಲೇ ದುನ್ಯಾ ಅವನಿಗೆ ಬರೆಯಬೇಕಾಗಿ ಬಂದಿದ್ದ ಪತ್ರ ತೋರಿಸಿದ. ಅವನ ವಾಗ್ದಾನಗಳನ್ನೆಲ್ಲ ನಿರಾಕರಿಸಿ ಅವನು ಹೇಳಿದ ಹಾಗೆ ಗುಟ್ಟಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದಳು. ಅಲ್ಲದೆ ಅವನು ಮಾರ್ಫಾಗೆ ಅನ್ಯಾಯ ಮಾಡುತ್ತಿದ್ದಾನೆ, ಮಕ್ಕಳ ತಂದೆಯಾಗಿ…”
ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಅಧ್ಯಾಯ
“ಅವನ ಮಾತು ಅಲ್ಲಿದ್ದವರಲ್ಲಿ ಒಂದು ಥರ ಜಡವಾದ ಆಸಕ್ತಿ ಹುಟ್ಟಿಸಿತ್ತು. ಕೌಂಟರಿನಲ್ಲಿದ್ದ ಹುಡುಗರ ಮುಖದ ಮೇಲೆ ಗೇಲಿಯ ನಗು ಬಂದಿತ್ತು. ಅಂಗಡಿಯ ಯಜಮಾನ ‘ತಮಾಷೆ ಮನುಷ್ಯ’ನ ಕಥೆ ಕೇಳುವುದಕ್ಕೆಂದೇ ಮೇಲಿನ ರೂಮಿನಿಂದ ಇಳಿದು ಬಂದು, ಸ್ವಲ್ಪ ದೂರದಲ್ಲಿ ಕೂತು, ಆಗಾಗ ಸೋಮಾರಿತನದ ದೊಡ್ಡ ದೊಡ್ಡ ಆಕಳಿಕೆ ತೆಗೆಯುತ್ತಿದ್ದ. ಅಲ್ಲಿದ್ದವರಿಗೆಲ್ಲ ಮಾರ್ಮೆಲಡೋವ್…”
ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ಅಪರಾಧ ಮತ್ತು ಶಿಕ್ಷೆ: ಕನ್ನಡಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ
“ಎದೆ ಕುಸಿಯುತ್ತಿರಲು, ಮೈಯ ನರಗಳಲೆಲ್ಲ ನಡುಕ ಹುಟ್ಟಿರಲು ಆ ಯುವಕ ದೊಡ್ಡ ಇಮಾರತಿನ ಹತ್ತಿರ ಬಂದಿದ್ದ. ಇಮಾರತಿನ ಎದುರಿನಲ್ಲಿ ಕಾಲುವೆ, ಹಿಂಬದಿಯಲ್ಲಿ ಸದೋವಯ ರಸ್ತೆ ಇದ್ದವು. ಇಮಾರತಿನೊಳಗೆ ಪುಟ್ಟ ಪುಟ್ಟ ಮನೆಗಳಿದ್ದವು. ದರ್ಜಿಗಳು, ಬೀಗರಿಪೇರಿ ಮಾಡುವವರು, ಅಡುಗೆಯವರು, ಥರಾವರಿ ಜರ್ಮನರು, ಸೂಳೆಯರು, ಕಾರಕೂನರು ಇಂಥವರೆಲ್ಲ ವಾಸವಾಗಿದ್ದರು. ಬರುವವರು ಹೋಗುವವರು ಎಲ್ಲರೂ….
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧದ ಕೊನೆಯ ಕಂತು
” ಈ ಕಳೆದೊಂದು ದಶಕದ ಕಡೆಗೆ ಹಿಂತಿರುಗಿ ನೋಡಿದಾಗ. ನಾನೊಬ್ಬ ಅಲೆಮಾರಿಯೇ ಆಗಿಬಿಟ್ಟಿದ್ದೆನೆಂದು ಕಾಣುತ್ತದೆ. 1963ರಲ್ಲಿ, ನೀಲ್ ಮೆಕ್ ಕೇ ಮತ್ತು ಬ್ಯೂನೋಸ್ ಏರಿಸ್ ನ ಬ್ರಿಟಿಷ್ ಕೌನ್ಸಲ್ ಕಾರಣ, ನನಗೆ ಇಂಗ್ಲೆಂಡ್ ಮತ್ತು ಸ್ಕಾಟ್ಳೆಂಡನ್ನು ಭೇಟಿ ಮಾಡುವುದು ಸಾಧ್ಯವಾಯಿತು. ಅಲ್ಲಿಯೂ ಪುನಃ ನನ್ನ ಅಮ್ಮನ..”









