ನಡುವೆ ಹತ್ತಿದವರು ನಡುವೆಯೇ ಇಳಿದುಹೋದರು: “ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್ ಕಲ್ಯಾಣಿ ಬರಹ
ಹೀಗೆ ಕಾಲ ಓಡಿತು. ಪತ್ರಗಳು ನಿಂತು ಹೋದವು. ಫೋನ್ ನಿಂತುಹೋಯಿತು. ಅವರವರ ಕೆಲಸದಲ್ಲಿ ಅವರವರು ಬ್ಯುಸಿ ಆದರು. ಓದು, ಕೆಲಸ ಹುಡುಕುವುದು, ಹಣಕಾಸಿನ ತಾಪತ್ರಯದಲ್ಲಿ ನಾವುಗಳು ಊರಿಗೆ ಹೋಗಿ ಬರುವುದು ಕಡಿಮೆಯಾಯಿತು. ಊರಿನಲ್ಲಿ ಮೊದಲು ದೊಡ್ಡ ದೊಡ್ಡಮ್ಮ, ನಂತರ ಹಿರಿಯಕ್ಕ ತೀರಿಕೊಂಡ ಸುದ್ದಿ ಹೇಗೋ ನಮ್ಮನ್ನು ತಲುಪಿತು. ಅಲ್ಲಿಗೂ ಇವಳು ಹೆಚ್ಚು ಹೋಗಿ ಬಂದು ಮಾಡುತ್ತಿರಲಿಲ್ಲ, ತನ್ನ ಗಂಡನ ಮುಂದೆ ತಾಯಿ ಮನೆಯ ಹೀನಾಯ ಪರಿಸ್ಥಿತಿ ಕಾಣಬಾರದೆಂದು ಭಾವಿಸಿ…. ಅವಳ ತಮ್ಮ ಹೆಂಡತಿಯೊಂದಿಗೆ ಕಿರಿಕಿರಿ ಮಾಡಿಕೊಂಡ. ಕುಡಿತ ಹೆಚ್ಚಾಯಿತು. ಬದುಕು ಮೂರಾ ಬಟ್ಟೆಯಾಯಿತು.
“ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್ ಕಲ್ಯಾಣಿ ಬರಹ
ರುಕ್ಮಣಮ್ಮಜ್ಜಿಯ ನೆನಪುಗಳು….: ಸುಮಾ ಸತೀಶ್ ಸರಣಿ
ಅಂಗಡೀಗೇ ಮಾರಾಕೆ ಮಾತ್ರ ನಮ್ಮಜ್ಜೀ ತಿಂಡೀಗ್ಳು ಮೀಸ್ಲಲ್ಲ. ಮಾರಾಕಿಂತ ರವಷ್ಟು ಜಾಸ್ತೀನೆ ದಾನ ಮಾಡ್ತಿತ್ತು. ಒಂದು ಬೇಸನ್ ತಿಂಡಿ ಮಾರಾಕಿಟ್ರೆ, ಎಲ್ಡು ಬೇಸನ್ ಅವ್ರಿವ್ರಿಗೆ ಕೊಡೋಕೇ ಸಾಲ್ತಿರ್ಲಿಲ್ಲ. ಆದ್ರೂ ಒಲೆ ಮುಂದೆ ಕುಂತ್ಕಣಾಕೆ ಎಂದ್ರೂ ಬ್ಯಾಸ್ರ ಪಟ್ಟಿದ್ದಿಲ್ಲ. ಪಕ್ಕದ್ ಮನ್ಯಾಗಿದ್ದ ವಾರ್ಗಿತ್ತೀಗೆ ಮನೆ ತುಂಬಾ ಮಕ್ಳು. ಅದ್ರಾಗೂ ಸಾಲಾಗಿ ಒಂಬತ್ತು ಹೆಣ್ಣುಮಕ್ಕಳು. ಅದ್ಕೇಯಾ ತಿಂಡೀ ತೀರ್ಥದಾಗೆ ಕೈ ಬಿಗಿ ಮಾಡ್ತಿದ್ರು. ನಮ್ಮಜ್ಜೀ ಜೀವ ನಿಲ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಅಜ್ಜಿ ರುಕ್ಮಣ್ಣಮ್ಮನವರ ಕುರಿತು ಬರೆದಿದ್ದಾರೆ
ಅನ್ನ, ನೀರಿಗೇಕೆ ಅನಾದರ ತೋರುವಿರಿ?: ಬಸವನಗೌಡ ಹೆಬ್ಬಳಗೆರೆ ಸರಣಿ
ದಿನಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯೊಂದರ ಪ್ರಕಾರ 2019 ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ! ಇದೇ ವರ್ಷ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ!! ಇದರಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣವೇ ಹೆಚ್ಚು ಎಂಬ ವರದಿಯಿದೆ. ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣ ವಾರ್ಷಿಕ ತಲಾವಾರು 50 ಕೆಜಿಯಷ್ಟು ಎಂದು ಅಂದಾಜಿಸಲಾಗಿದೆಯಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಒದ್ರೆ ತಾನೇ ಬೀಳೋದೂ…!: ಎಚ್. ಗೋಪಾಲಕೃಷ್ಣ ಸರಣಿ
ಅದು ಹೇಗೋ ಮನೆ ಒಂದು ರೂಪ ತಳೆದಿತ್ತು. ಅದೂ ಹೇಗೆ ಅಂದರೆ ಕಾಸ್ಟ್ ರೆಡಕ್ಷನ್‌ಗೆ ಒಂದು ಪ್ಲಾನ್ ಹಾಕಿದ್ದೆ ಅಂತ ಹೇಳಿದ್ದೆ ಅಲ್ಲವೇ? ಅದರ ಪ್ರಕಾರ ಶೋ ಕೇಸು ಕೆಲಸ ಬೇಡ ಅಂತ ನಿಲ್ಲಿಸಿದೆ. ಆದರೆ ಮಧ್ಯೆ ಹಲಗೆ ಬರಬೇಕಲ್ಲಾ ಅಂತ ಹಲಗೆ ಫ್ಯಾಕ್ಟರಿ ಸ್ಕ್ರ್ಯಾಪ್ ವುಡ್‌ನಲ್ಲಿ ತಂದಿದ್ದೆ ತಾನೇ? ಅದು ಈ ಸ್ಲಾಬ್‌ಗೆ ಉಪಯೋಗ ಆಯ್ತಾ? ಎರಡು ರೂಮಿನಿಂದ ಎರಡು ಕಬೋರ್ಡ್ ಆಗಬೇಕಿತ್ತು. ಅದಕ್ಕೆ ಬಾಗಿಲು ಬೇಡ ಅಂತ ನಿರ್ಧರಿಸಿ ಆಗಿತ್ತು. ಇದಕ್ಕೂ ಹಲಗೆ ಸ್ಕ್ರ್ಯಾಪ್ ವುಡ್‌ನಿಂದ ಅಡ್ಜೆಸ್ಟ್ ಆಯ್ತಾ? ಬಾಗಿಲು ಯಾಕೆ ಬೇಡ ಅಂದರೆ ಅದಕ್ಕೆ ಒಂದು ತುಂಬಾ ಬಲವಾದ ಕಾರಣ ಇತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಹೇಳಿದ್ದರೆ ಬದುಕು ಬದಲಾಗುತ್ತಿತ್ತಾ?: “ದಡ ಸೇರದ ದೋಣಿ” ಸರಣಿಯಲ್ಲಿ ಮಮತಾ ಅರಸೀಕೆರೆ ಬರಹ
ಇದು ಕೇವಲ ನನ್ನ ಆಲೋಚನೆಯಾದರೆ ಮಾತ್ರ ಸಾಕೆ. ಆ ಬದಿಯಲ್ಲೂ ನನ್ನ ಜೊತೆಯ ಬಾಂಧವ್ಯ ಘನತೆಯದೆಂದು ಅನಿಸಬೇಕಲ್ಲ, ನಂಬಿಕೆ ಬರಬೇಕಲ್ಲ ಎಂಬ ವಿಷಯ ಮಾರ್ದನಿಸುವಾಗ ಇದೆಲ್ಲಾ ಆಗದ ವಿಷಯ, ಗೊಂದಲ, ಸಿಕ್ಕು, ವಿಪರೀತ ಚಿಂತನೆಗಳಲ್ಲಿ ಮುಳುಗಿಹೋಗಿದ್ದಿದೆ. ಒಟ್ಟಿನಲ್ಲಿ ಈ ಅಭಿಪ್ರಾಯದ ವೈಪರೀತ್ಯ ಜಾಲದ ಮಧ್ಯೆ ಸಿಲುಕಿ ಕೊನೆಗೊಮ್ಮೆ ಏನೂ ಬೇಡವೆನಿಸಿ ತೆಪ್ಪಗಾಗುವುದು ಸೂಕ್ತವೇನೊ. ಬುದ್ಧಿ ಹಾಗೂ ಸ್ವಾಭಿಮಾನದ ಮಾತನ್ನು ನೆನಪಿಸಿಕೊಳ್ಳುತ್ತಾ ಶರಣಾಗತಿಯ ಮಾತು, ವ್ಯಕ್ತಪಡಿಸುವಿಕೆ ಅಸಹಜವೆಂದುಕೊಳ್ಳುವುದೂ ಅದೇ ವೇಳೆಗೆ ಪ್ರೇಮ, ಸ್ನೇಹವೇ ಬದುಕಿನ ಆತ್ಯಂತಿಕ ಉದ್ದೇಶ, ಅದಿಲ್ಲದೆ ಬದುಕು ಬರಡಾದೀತು ಅಂತಲೂ ಅನಿಸುವುದಿದೆ.
“ದಡ ಸೇರದ ದೋಣಿ” ಸರಣಿಯಲ್ಲಿ ಬಿ.ಎ. ಮಮತಾ ಅರಸೀಕೆರೆ ಬರಹ
ಮನೆಯಂಗಳದ ನಾಕವೀ ಹೂವಿನಲೋಕ: ಭವ್ಯ ಟಿ.ಎಸ್. ಸರಣಿ
ಈ ಹೂ ಮುಡಿಯುವ ವಿಷಯದಲ್ಲಿ ಒಂದು ರೀತಿಯ ಸ್ಪರ್ಧೆಯಿದ್ದ ಕಾಲವದು. ತಾವು ಮುಡಿದು, ಗೆಳತಿಯರಿಗೂ ತರುವವರೂ ಇದ್ದರು. ಆದರೆ ನನ್ನ ಜಡೆ ಏರುತ್ತಿದ್ದ ಈ ಸೊಬಗಿನ ಡೇರೆ ಹೂಗಳ ಮೇಲೆ ಗೆಳತಿಯರ ಕಣ್ಣು. ಅವರ ಆಸೆಗೆ ಮಣಿದು ಸಂಜೆಯಾದರೂ ಬಾಡದೇ ನಗುತ್ತಿದ್ದ ಡೇರೆ ಹೂವನ್ನು ಮುಡಿಯಿಂದ ತೆಗೆದು ಕೊಟ್ಟು ಬಂದದ್ದು ಇತ್ತು. ಈ ಡೇರೆಯ ವೈಜ್ಞಾನಿಕ ಹೆಸರು ಡೇಲಿಯಾ. ಇದು ಬೇಸಿಗೆಯಲ್ಲಿ ಬೆಳೆಯಲಾರದು. ಬೇಸಿಗೆಯಲ್ಲಿ ಇದರ ಗೆಡ್ಡೆಗಳನ್ನು ಒಣ ಮಣ್ಣಿನಲ್ಲಿ ಸಂಗ್ರಸಿಟ್ಟು, ಮಳೆ ಬಿದ್ದೊಡನೆ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಬೆಳೆಯುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ನಾಟಕಗಳ ನಾಟಕ: ಸುಮಾ ಸತೀಶ್ ಸರಣಿ
ನಮ್ಮಪ್ಪುಂಗೆ ನಾಟಕ ಅಂದ್ರೆ ಹುಚ್ಚು. ನಮ್ಮೂರ್ನಾಗೇನೂ ನಾಟಕದ ಕಂಪನಿ ಇರ್ಲಿಲ್ಲವಲ್ಲ. ವರ್ಸುಕ್ಕೆ ಒಂದೋ ಎಲ್ಡೋ ಆಟೇಯಾ. ಮಾಸ್ಟರ್ ಹಿರಣ್ಣಯ್ಯ ಅವುರ್ದು ಎಲ್ಲಾ ನಾಟಕದ ಕ್ಯಾಸೆಟ್ಟೂ ಇದ್ವು. ಟೇಪ್ ರೆಕಾರ್ಡರ್ ನಾಗೆ ಜಿನಾ ಅದ್ನೇ ಕೇಳೋದು. ಒಂದೊಂದು ನಾಟಕವೂ ನೂರಾರು ಸತಿ ಕೇಳಿದ್ವಿ. ಎಚ್ಚಮ ನಾಯಕ, ಕಪಿಮುಷ್ಟಿ, ಭ್ರಷ್ಟಾಚಾರ, ಲಂಚಾವತಾರ, ಫೋನಾವತಾರ, ದೇವದಾಸಿ, ನಡುಬೀದಿ ನಾರಾಯಣ…ಕೇಳೀ ಕೇಳೀ ನಮ್ಗೆ ಬಾಯಿ ಪಾಟ ಆಗೋಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತು ಬರೆದಿದ್ದಾರೆ
ಉಪವಾಸ ವ್ರತದ ಅನುಭವಗಳು: ದರ್ಶನ್ ಜಯಣ್ಣ ಸರಣಿ
ನನ್ನ ಹೆಂಡತಿಯನ್ನು ತೋರಿಸಿ “ಆಕೆ ಕ್ಯಾರಿಯಿಂಗ್” ಅಂದೆ. ಆಕೆಯ ಮುಖ ಪೆಚ್ಚಾಯಿತು! ಅವಳ ಸೂಪರ್ವೈಸರ್‌ಗೆ ಫೋನಾಯಿಸಿ ಕೇಳಿದಳು. ಒಂದಷ್ಟು ಮಾತೂ ಕಥೆಯಾದಮೇಲೆ ಕೊಟ್ಟಳು. ನಾನು ಧನ್ಯವಾದ ಹೇಳಿ ಅದನ್ನು ಪಡೆದು ಕ್ಯಾಪ್ ತೆಗೆಯುವಾಗ “ಸರ್ ಮ್ಯಾಡಂ ಪ್ಲೀಸ್ ಅದನ್ನು ಇಲ್ಲಿ ಕುಡಿಯಬೇಡಿ” ಅಂದಳು. ನಾನು “ಇದು ಕ್ಯಾಂಟೀನ್, ಇಲ್ಲಿ ಬೇಡ ಎಂದರೆ ಹೊರಗೆ ಸಾಧ್ಯವೇ ಇಲ್ಲ” ಎಂದು ನನ್ನ ಅಸಹಾಯಕತೆ ತೋರಿದೆ. ಅದಕ್ಕವಳು ನನ್ನ ಹೆಂಡತಿಯನ್ನು ಕುರಿತು “ಮ್ಯಾಡಂ ನೀವು ಅದನ್ನು ನಿಮ್ಮ ವ್ಯಾನಿಟಿ ಬಾಗ್‌ನಲ್ಲಿ ಇಟ್ಟುಕೊಂಡು, ಟಾಯ್ಲೆಟ್‌ನ ಒಳಗೆ ಹೋಗಿ ಕುಡಿದು ಬನ್ನಿ ಪ್ಲೀಸ್!” ಅಂದಳು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಆರನೆಯ ಕಂತು
ಮೌನ ಮಾತಾಡಿದಾಗ ಹೊತ್ತಾಗಿತ್ತು: “ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ
ಇದ್ದಕ್ಕಿದ್ದಂತೆ ರಾಮಕೃಷ್ಣ ನನ್ನನ್ನು ಹುಡುಕಿಕೊಂಡು ಬಂದ, ಅಳುತ್ತಿದ್ದ, ಏನಾಯ್ತು ಎಂದರೆ “ಸುಮಾಳ ಮದುವೆ ಫಿಕ್ಸ್ ಆಯಿತು.. ಹುಡುಗ ದೆಹಲಿಯಲ್ಲಿದ್ದಾನೆ. ಸಿಕ್ಕಾಪಟ್ಟೆ ದೊಡ್ಡ ಉದ್ಯೋಗವಂತೆ” ಎಂದವನೇ “ನನ್ನನ್ನು ಕ್ಷಮಿಸು, ನಿನಗೂ ಅನ್ಯಾಯ ಮಾಡಿದೆ. ನಿನಗೆ ಅಶ್ವಿನಿಯ ಮೇಲೆ ಮನಸ್ಸಾದರೆ ಸುಮಾ ನನ್ನನ್ನು ಒಲಿಯಬಹುದು ಅಂದುಕೊಂಡೆ” ಎಂದವನೇ ಅಪ್ಪಿ ಅಳತೊಡಗಿದ. ನಾನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮದುವೆಗೆ ಆಮಂತ್ರಣವೂ ಬರಲಿಲ್ಲ. ಮುಕೇಶ್ ನೆನಪಾದ. ಹಾಡಬೇಕೆಂದರೆ ಕೇಳುವವರು ಯಾರು ಎಂದೆನಿಸಿತು.
“ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ









