“ಆ ಸಾವು ಮತ್ತು ಹಸಿವು”: ಮಾರುತಿ ಗೋಪಿಕುಂಟೆ ಸರಣಿ
ಅಂದು ಮಧ್ಯಾಹ್ನದ ಉಪ್ಪಿಟ್ಟು ತರುವವನು ಮಧ್ಯಾಹ್ನ ಒಂದುಗಂಟೆಯಾದರೂ ಬಂದಿರಲಿಲ್ಲ. ಈಗಿನಂತೆ ಅವಾಗ ಯಾವ ಫೋನು ಸಹ ಇರಲಿಲ್ಲ. ಹಾಗಾಗಿ ಅವನು ಯಾಕೆ ಬರಲಿಲ್ಲ ಎಂದು ತಿಳಿದುಕೊಳ್ಳುವುದು ಹೇಗೆ ಎಂದು, ಹಿರಿಯ ವಿದ್ಯಾರ್ಥಿಯೊಬ್ಬನನ್ನು ಸೈಕಲ್ಲಿನಲ್ಲಿ ಆತ ಬರುವ ಹಾದಿಗೆ ಹೋಗಿ ನೋಡಿಕೊಂಡು ಬರುವಂತೆ ಕಳುಹಿಸಲಾಯ್ತು. ಆದರೆ ರಸ್ತೆಯಲ್ಲಿ ಆತನ ಸುಳಿವಿರಲಿಲ್ಲ. ಆದರಲ್ಲಿ ಮಕ್ಕಳು ಮಧ್ಯಾಹ್ನದ ಫಲಹಾರಕ್ಕಾಗಿ ಕಾದಿದ್ದರು. ಕೆಲವರ ಮುಖಗಳು ಬಾಡಿಹೋಗಿದ್ದವು. ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ
ದೇವಸ್ಥಾನಗಳ ವಾಸಸ್ಥಾನ….: ಎಚ್. ಗೋಪಾಲಕೃಷ್ಣ ಸರಣಿ
ಆಗ ಮೈಸೂರು ರಾಜ್ಯದಲ್ಲಿ ಊದುಬತ್ತಿ ತಯಾರಿಕೆ ಮತ್ತು ಮಾರಾಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮುದ್ದಣ್ಣ ಬ್ರಾಂಡ್‌ನ ತುಂಬಾನೇ ದೊಡ್ಡ ಬೋರ್ಡ್ (ರಸ್ತೆ ಅಗಲದ್ದು) ಒಂದು ಚಿಕ್ಕ ಪೇಟೆಯಲ್ಲಿ ನೋಡಿದ್ದ ನೆನಪು ನನಗಿದೆ. ಪ್ರಕಾಶ ನಗರ, ಶ್ರಿರಾಮಪುರದ ಪ್ರತಿ ಮನೆಯ ಮುಂದೂ ಎಲ್ಲಾ ವಯಸ್ಸಿನ ಹೆಂಗಸರು ಊದು ಬತ್ತಿ ಹೊಸೆಯುತ್ತಾ ಕುಳಿತಿರುತ್ತಿದ್ದ ಗುಂಪನ್ನು ಕಾಣಬಹುದಿತ್ತು. ಅದೆಷ್ಟೋ ಸಾವಿರ ಕಡ್ಡಿ ಹೊಸೆದರೆ ಕೆಲವು ಆಣೆ ಕೂಲಿ. ಸಂಸಾರ ತೂಗಿಸುವಲ್ಲಿ ಮಹಿಳೆಯರೂ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ
ಕಣ್ಣ ಮುಂದೆ ಕುಳಿತ ಸಾವು ಕರಗಿತ್ತು..: ರಂಜಾನ್ ದರ್ಗಾ ಸರಣಿ
ರಹಮಾನ್ ಖಾನ್ ಅದೇನೋ ಹೇಳಿದ. ನಂತರ ನನಗೆ ಮಾತನಾಡಲು ತಿಳಿಸಿದ. ಅದು ನನ್ನ ಕೊನೆಯ ಭಾಷಣ ಎಂದು ಭಾವಿಸಿದೆ. ಬದುಕುಳಿಯುವ ಯಾವ ಸಾಧ್ಯತೆಯೂ ಇಲ್ಲ ಎನಿಸಿತು. ಅವರೆಲ್ಲ ‘ಏನು ಮಾತನಾಡ್ತಿಯೋ ನೋಡೋಣ’ ಎಂದು ಅಂದುಕೊಂಡವರ ಹಾಗೆ ಕುಳಿತಿದ್ದರು. ಅಂದೇ ಪ್ರಕಟವಾದ ಸಾಪ್ತಾಹಿಕ ಪುರವಣಿಯ ಪ್ರತಿ ಕೈಯಲ್ಲಿತ್ತು. ಆ ನನ್ನ ಲೇಖನ ಇಡೀ ಮುಖಪುಟ ತುಂಬಿತ್ತು. ಮೇಲೆ ಕೆಂಪು ಬಣ್ಣದಲ್ಲಿ ಕಲಾವಿದ ಸೂರಿ ಬರೆದ ಮುಸ್ಲಿಂ ಮಹಿಳೆಯ ಚಿತ್ರ ಲೇಖನದಲ್ಲಿನ ನೋವಿಗೆ ಪೂರಕವಾಗಿದ್ದು ಹೃದಯಸ್ಪರ್ಶಿಯಾಗಿತ್ತು. ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿ
ಮೊದ್ಲು ಕಾರ್ ಓಡ್ಸಿದ್ದು ಯಾರ್ ಗೊತ್ತಾ?!: ಗುರುದತ್ ಅಮೃತಾಪುರ ಸರಣಿ
ಕಾರ್ಲ್ ಬೆಂಜ್ ತನ್ನ ಪರಿಶ್ರಮದಿಂದ ನಿರ್ಮಿಸಿದ ಚಲಿಸುವ ವಾಹನದ ಬಗ್ಗೆ ಅವನಿಗೆ ಅನುಮಾನವಿತ್ತು. ಜೊತೆಗೆ ಸ್ಪಾರ್ಕ್ ಪ್ಲಗ್, ಬ್ಯಾಟರಿ ತಂತ್ರಜ್ಞಾನ ಇನ್ನೂ ಇರದ ಕಾರಣ, ನಿಂತಲ್ಲೇ ಕಾರನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಈ ಕಾರಿಗೆ ಸ್ಟಿಯರಿಂಗ್ ಕೂಡ ಇಲ್ಲ. ದಿಕ್ಕು ಬದಲಾಯಿಸಲು ಸೈಕಲ್ ಗಾಲಿಗೆ ಕೊಡುವ ರೀತಿಯ ಒಂದು ಹತೋಟಿ ಮಾತ್ರ ಇದೆ.
“ದೂರದ ಹಸಿರು” ಸರಣಿಯಲ್ಲಿ ಜೆರ್ಮನಿಯ ಕಾರು ಸಂಗ್ರಹಾಲಯದ ಕುರಿತು ಗುರುದತ್ ಅಮೃತಾಪುರ ಬರಹ
ಡಾ. ಚಂದ್ರಮತಿ ಸೋಂದಾ ಬರೆಯುವ ಸರಣಿ “ಮಾತು ಮಂದಲಿಗೆ” ಆರಂಭ
ಅದೃಷ್ಟದ ಪೆನ್ನು ಎಂದು ತಮ್ಮ ಪೆನ್ನಿನ ಬಗ್ಗೆ ಬಹಳ ಮುತುವರ್ಜಿವಹಿಸುವುದೂ ಇದೆ. ಅದೇನಾದರೂ ಕಳೆದುಹೋಯಿತು ಅಂದ್ರೆ ಆಗ ನೋಡಬೇಕು ಭೂಮಿ ಆಕಾಶ ಒಂದು ಮಾಡುವ ಥರಾ ಕೂಗಾಡುವುದನ್ನು. ಸಿಗಲಿಲ್ಲ ಅಂದರೆ ಮನೆಮಂದಿಗೆಲ್ಲ ಮಂತ್ರಾಕ್ಷತೆ ಬೇರೆ. ಅವರ ಅವತಾರ ನೋಡಿದ್ರೆ ಏನೋ ಆಗಬಾರದ್ದು ಆಗಿದೆ ಅನ್ನುವ ರೀತಿ ನಡವಳಿಕೆ. ಪೆನ್ನು ಕೈಗೆ ಬಂತು ಅಂದರೆ ಎಲ್ಲವೂ ತಣ್ಣಗೆ. ಕೆಲವರ ಸಹಿಯನ್ನಂತೂ ಯಾರಿಗೂ ನಕಲು ಮಾಡಲು ಆಗದಂತಹುದು.
ಡಾ. ಚಂದ್ರಮತಿ ಸೋಂದಾ ಬರೆಯುವ ಹಳೆ ಕಾಲದ ನೆನಪುಗಳ ಸರಣಿ “ಮಾತು ಮಂದಲಿಗೆ” ಇಂದಿನಿಂದ ಮೂರುವಾರಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಮಾವಿನ ತೋಪಿನ ಎರಡು ಕತೆಗಳು: ಮಾರುತಿ ಗೋಪಿಕುಂಟೆ ಸರಣಿ
ಅವನು ಓಡುವುದರಲ್ಲಿ ಯಾವಾಗಲೂ ಪ್ರಥಮ.. ಹಾಗಾಗಿ ಅವನೇನೊ ತಪ್ಪಿಸಿಕೊಂಡ. ಮರವನ್ನು ಹತ್ತುವುದರಲ್ಲಿ ಅಂತಹ ಅನುಭವವೇನು ಇಲ್ಲದ ನಾನು ನಿಧಾನವಾಗಿ ಮರ ಇಳಿಯುವುದರಲ್ಲಿ ಸಿಕ್ತಿಮ್ಮಜ್ಜ ಹತ್ತಿರವಾಗಿದ್ದ. ಅವನು ಹತ್ತಿರ ಬರುವುದು ಕಂಡದ್ದೇ ಎದೆಬಡಿತ ಜೋರಾಗಿತ್ತು. ಕೈ ಕಾಲುಗಳು ನಡುಗಲು ಪ್ರಾರಂಭಿಸಿದ್ದವು. ನನಗೆ ಬೇರೆ ದಾರಿ ಇರಲಿಲ್ಲ. ನಾನು ಮರದಿಂದ ಇಳಿಯಲಿಲ್ಲ, ಬದಲು ಅದರ ಮಧ್ಯದಲ್ಲಿ ಅವಿತುಕೊಂಡೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ರಾತ್ರಿ ತೀರಿಕೊಂಡ ತಾತ ಬೆಳಗ್ಗೆ ಎದ್ದು ಬಂದಿದ್ದರು!
ಎಲ್ಲರೂ ಕೂತು ತೂಕಡಿಸುತ್ತಾ ಇದ್ದೀವಿ. ಊರುಗೋಲು ಟಕ್ ಟಕ್ ಎಂದು ಹೆಜ್ಜೆ ಸಮೇತ ಶಬ್ದ ಕೇಳಿಸಿತು. ಕಣ್ಣು ಬಿಟ್ಟು ನೋಡಿದರೆ ಅದೇನು ಆಶ್ಚರ್ಯ ಅಂತೀರಿ… ತಾತ ಕೋಲು ಊರಿಕೊಂಡು ಬಚ್ಚಲಿಗೆ ಹೋಗುತ್ತಿದ್ದಾರೆ! ತಾತ ಬದುಕಿದೆ, ಸತ್ತಿಲ್ಲ. ಖುಷಿಯಿಂದ ಮೊಮ್ಮಕ್ಕಳು ಕುಣಿದಾಡಿದರು. ದೊಡ್ಡವರೂ ಸಹ ದೊಡ್ಡ ನಿಟ್ಟುಸಿರುಬಿಟ್ಟು ಮುಖದಲ್ಲಿ ನಗು ತಂದುಕೊಂಡರು. ಬೆಳಿಗ್ಗೆ ಎದ್ದ ಕೂಡಲೇ ಡಾಕ್ಟರ ಮನೆಗೆ ನನ್ನನ್ನೇ ಕಳಿಸಿದರು. ತಾತ ಬದುಕಿದೆ, ಹೀಗೆ ರಾತ್ರಿ ಒಂದೂವರೆಗೆ ಅವರೇ ಎದ್ದು ಒಂದಕ್ಕೆ ಹೋದರು ಅಂತ ಹಾವಭಾವ ಸಮೇತ ವಿವರಿಸಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ಕತ್ತಲಲಿ ಕಂಡ ಮಿನುಗುವ ಕಣ್ಣುಗಳು….
ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 64ನೇ ಕಂತು ನಿಮ್ಮ ಓದಿಗೆ
ಕಿನ್ನರಿ…
ಯಾವ ಪ್ರಚಾರವನ್ನೂ ಒಲ್ಲದ ತಮ್ಮ ಪಾಡಿಗೆ ತಾವಿರುವ ಈ ತಪಸ್ವಿನಿ ತಮ್ಮ ಪೂರ್ವಾಶ್ರಮದಲ್ಲಿ ಒಬ್ಬ ಶ್ರೇಷ್ಠ ಸಾಹಿತಿಯೂ ಆಗಿದ್ದರು. ನಾನು ಇವರ ಅದ್ಭುತ ವ್ಯಕ್ತಿತ್ವದ ಬಗ್ಗೆ ಬರೆದ ಒಂದು ಲೇಖನ ಇವರಿಗೆ ಮುಜುಗರ ತಂದಿತ್ತು. ಅಸಮಾಧಾನಕ್ಕೆ ಕಾರಣವಾಗಿತ್ತು. ಇಂತಹವರನ್ನು ಭೇಟಿ ಮಾಡಿಸಬೇಕೆಂದೂ ಅವರ ಸಮ್ಮುಖದಲ್ಲಿ ಒಂದು ಪತ್ರಿಕಾ ಸಭೆಯನ್ನು ಕರೆಯಬೇಕೆಂದೂ ನನ್ನ ಪರಿಚಯದ ಸಾಹಿತಿಯೊಬ್ಬರು ನನಗೆ ಬಹಳ ದಿನಗಳಿಂದ ದುಂಬಾಲು ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ಬದುಕುತ್ತಿರುವ ಇವರನ್ನು ನಾನು ಒಮ್ಮೆ ಭೇಟಿಯಾಗಿ ಬಂದಿದ್ದುದೇ ಇದಕ್ಕೆ ಕಾರಣವಾಗಿತ್ತು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿ









