ಕುಸಿದ ನೆಲದ ಕೆಳಗಿದ್ದ ಅದೃಷ್ಟ: ಎಚ್. ಗೋಪಾಲಕೃಷ್ಣ ಸರಣಿ
ಇಂದಿನವರೆಗೆ ಸುತ್ತ ಪರಿಸರ ಹೀಗಿರಬೇಕಾದರೆ ಚಾವಣಿಯ ಮೇಲೆ ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ಹಿಗ್ಗಿ ನಡೆ ಮುಂದೆ ಮಾಡುತ್ತಿದ್ದ ನಾನು ಎಲ್ಲೋ ಕಾಲು ಇಟ್ಟಿದ್ದೆ ಅಂತ ಕಾಣುತ್ತದೆ. ಏಕ್ ದಂ ಡಿವಿಜಿ ಪ್ರತ್ಯಕ್ಷ ಆದರು. ಪದ ಕುಸಿಯೆ ನೆಲವಿಹುದು… ಅಂತ ಅವರು ತಾನೇ ಹೇಳಿದ್ದು? ಕಾಲು ಕುಸಿಯಿತು ಮತ್ತು ನೆಲ ಸಹ ಇತ್ತು. ಆದರೆ ಅದು ಕೆಳಗೆ ಇದ್ದದ್ದು. ನಾನು ಸುಮಾರು ಹತ್ತು ಹನ್ನೆರೆಡು ಅಡಿ ಮೇಲಿಂದ ನೆಲಕ್ಕೆ ಕುಸಿದೆ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೊಂದನೆಯ ಕಂತು
ಮಳೆ ತಂದ ನೆನಪಿನ ಚಿತ್ರಮಾಲೆ!!: ಭವ್ಯ ಟಿ.ಎಸ್. ಸರಣಿ
ಶಾಲೆಗೆ ಹೋದೊಡನೆ ನಮ್ಮ ಕೊಪ್ಪೆ ತೆಗೆದು, ತೊಯ್ದು ತೊಪ್ಪೆಯಾದ ಯೂನಿಫಾರಂ ಲಂಗಗಳನ್ನು ಹಿಂಡಿ ಕೊಡವಿಕೊಂಡು ಹೋಗಿ ತರಗತಿಯಲ್ಲಿ ಕೂರುತ್ತಿದ್ದೆವು. ಇಡೀ ದಿನ ಸುತ್ತೆಲ್ಲ ಬಟ್ಟೆಯ ಹಸಿವಾಸನೆ ಹರಡಿರುತ್ತಿತ್ತು. ಜೋರಾಗಿ ಮಳೆ ಬರುವಾಗ ಮೇಷ್ಟ್ರು ಪಾಠ ಮಾಡುತ್ತಿರುವಾಗಲೂ ಗಲಾಟೆ ಮಾಡುತ್ತಿದ್ದೆವು. ಇನ್ನೂ ಶಿಕ್ಷಕರು ಬರದ ತರಗತಿಯಲ್ಲಿ ಮಳೆ ಸುರಿಯುವಾಗ ಮನಸೋ ಇಚ್ಛೆ ಕೂಗುತ್ತ ಮಳೆಯೊಂದಿಗೆ ಜುಗಲ್ ಬಂಧಿ ನಡೆಸುತ್ತಿದ್ದೆವು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆದಿನಗಳಲ್ಲಿ ಶಾಲಾಮಕ್ಕಳ ಸಂಭ್ರಮದ ಕುರಿತ ಬರಹ ನಿಮ್ಮ ಓದಿಗೆ
ಏಳು ಸುತ್ತಿನ ಕೋಟೆಯ ನಡುವೆ ಜಾಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಜಾಂಬಿಯಾದ ಸುಮಾರು ಅರುವತ್ತೇಳು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಕಾಡನ್ನು ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಪರ್‌ಬೆಲ್ಟ್‌ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿಯೇ ಮರಗಳನ್ನು ನೆಡಲಾಗಿದೆ. ಇಲ್ಲಿ ಪ್ರಮುಖವಾಗಿ ಸಾಫ್ಟ್‌ವುಡ್ ಮರಗಳಿವೆ. ನೈಋತ್ಯ ಭಾಗದಲ್ಲಿ ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ತೇಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಜಾಂಬಿಯಾದಲ್ಲಿ ಅರಣ್ಯ ನಾಶವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಡುಗೆಗಾಗಿ ಇದ್ದಿಲಿನ ಬಳಕೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಜಾಂಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ
“ಡೆಸರ್ಟ್ಸ್” ಮಾತ್ರ ಬೇಡಪ್ಪ….: ದರ್ಶನ್ ಜಯಣ್ಣ ಸರಣಿ
ಈ ಪ್ರಯಾಣದ ನಡುವೆಲ್ಲಾ ನನ್ನನ್ನು ಕಾಡಿದ ವಿಷಯ ಮಧ್ಯದಲ್ಲೆಲ್ಲೋ ಗಾಡಿ ಪಂಕ್ಚರ್ ಆದರೆ ಏನು ಮಾಡುವುದು? ಎಸಿ ಕೈಕೊಟ್ಟರೆ ಹೇಗೆ ಸಂಭಾಳಿಸುವುದು? ಮರಳ ಮಳೆ ಬಂದು ದಾರಿ ಕಾಣದಾದರೆ ಏನು ಗತಿ, ಇತ್ಯಾದಿ. ಹಾಗೇನೂ ಆಗದಿದ್ದರೂ ರಿಯಾದ್ ತಲುಪುವವರೆಗೂ ಮತ್ತು ಎರಡು ದಿನದ ನಂತರ ವಾಪಾಸು ಬರುವಾಗಲೂ ನನ್ನನ್ನು ಬಿಟ್ಟು ಬಿಡದೆ ಕಾಡಿದ ಪ್ರಶ್ನೆಗಳು ಇವು. ದಾರಿ ಅತ್ಯಂತ ಬ್ಯುಸಿಯಾಗಿದ್ದರೂ, ಅಲ್ಲಲ್ಲಿ ಹತ್ತಾರು ಕಿಲೋಮೀಟರ್‌ಗಳ ನಂತರವೇ ಪೆಟ್ರೋಲ್, ತಿಂಡಿ ತಿನಿಸು, ಪಂಕ್ಚರ್ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳು ನಿಗದಿತ ಜಾಗದಲ್ಲಿ ಮಾತ್ರವೇ ಇರುವುದು ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತ್ತು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿ
ಬೋಧಿಸುವಾಗ ಮಕ್ಕಳನ್ನು ನಿಭಾಯಿಸಿದ ರೀತಿ..: ಬಸವನಗೌಡ ಹೆಬ್ಬಳಗೆರೆ ಸರಣಿ
ಒಬ್ಬ ಹುಡುಗ ಮಾತ್ರ ‘ಡ್ಯಾನ್ಸಿಂಗ್’ ಪದ ಹೇಳಿದಾಗ ಜಾಸ್ತಿಯೇ ಕುಣಿಯುತ್ತಾ ಬಂದು ನನ್ನ ಹತ್ತಿರವೇ ಬಂದುಬಿಟ್ಟ. ನನಗೆ ತಕ್ಷಣಕ್ಕೆ ಸಿಟ್ಟು ಬಂದು ಒಂದು ಏಟನ್ನು ಕೊಟ್ಟುಬಿಟ್ಟೆ. ಅವನು ಜೋರಾಗಿ ಅಳಲು ಶುರು ಮಾಡಿದ. ಹಿಂದೆ ಪಾಠ ನೋಡಲು ಕುಳಿತ ಲೆಕ್ಚರ್ ನನಗೆ ಬಯ್ಯುತ್ತಾರೆಂದು ನಾನು ತಕ್ಷಣ ಅಳುತ್ತಿದ್ದ ಹುಡುಗನ ಬಳಿ ಹೋಗಿ ಮತ್ತೆ ಟಚ್ ಮಾಡಿದಂತೆ ಮಾಡಿ ‘ಬೀಟಿಂಗ್’ ಎಂದು ಹೇಳಿದೆ. ಹುಡುಗರೂ ‘ಬೀಟಿಂಗ್…… ಬೀಟಿಂಗ್’ ಎಂದರು. ಅವನು ಅಳುವುದನ್ನು ತೋರಿಸಿ ‘ಕ್ರೈಯಿಂಗ್.. ಕ್ರೈಯಿಂಗ್’ ಎಂದು ಹೇಳಿದೆನು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆಂಟನೆಯ ಕಂತು ನಿಮ್ಮ ಓದಿಗೆ
ಮನಸ್ಸರಳಿಸುವ ಮೋಹಕ ರಂಗೋಲಿ: ಸುಮಾವೀಣಾ ಸರಣಿ
ಭಾರತೀಯ ರಂಗೋಲಿಗಳಲ್ಲಿ ಪರ್ವತ ಪ್ರಾಂತ್ಯ, ಕರಾವಳಿ ಮತ್ತು ಮೈದಾನ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಮೂಡಿಬರುತ್ತವೆ. ಪರ್ವತ ಪ್ರಾಂತ್ಯ ಅಂದರೆ ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಇಲ್ಲಿ ಬಿಡಿಸುವ ರಂಗೋಲಿ ರೇಖೆಗಳನ್ನು ಕೂಡಿಕೊಂಡಿದ್ದು ಅಗಲದ್ದಾಗಿರುತ್ತದೆ. ಚಿಕ್ಕಚಿಕ್ಕ ರೇಖೆಗಳನ್ನು ಬಳಸಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯದವರು ಬಿಡಿಸುತ್ತಾರೆ. ಇವೆರಡರ ಜೊತೆಗೆ ಬಳ್ಳಿಗಳ ರಂಗೋಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿದೆ. ಕೇರಳದವರ ಪುಷ್ಪರಂಗೋಲಿಯಂತೂ ವಿಶ್ವವಿಖ್ಯಾತ. ಓಣಂ ಆಚರಣೆಯ ಅವಿಭ್ಯಾಜ್ಯ ಅಂಗ ಎಂದರೆ ಈ ಪುಷ್ಪರಂಗೋಲಿ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೆಂಟನೆಯ ಬರಹ ನಿಮ್ಮ ಓದಿಗೆ
ಎಕೆಲೋಫ಼್ ಎಂಬ “ಸರ್ರಿಯಲಿಸ್ಟ್” ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಎಕೆಲೋಫ಼್ ಅವರ ವೃತ್ತಿಜೀವನದ ಪ್ರತಿಯೊಂದು ತಿರುವಿನಲ್ಲೂ ಇದೇ ಕಥೆ ಪುನರಾವರ್ತನೆಯಾಗುತ್ತಿತು. ಮೂವತ್ತರ ದಶಕದ ಉತ್ತರಾರ್ಧದಲ್ಲಿ ಎಕೆಲೋಫ಼್ ಮಾನವ ವ್ಯಕ್ತಿನಿಷ್ಠೆಗೆ ಆಮೂಲಾಗ್ರ ಮತ್ತು ಹೆಚ್ಚು ಅಮೂರ್ತವಾದ ದೃಷ್ಟಿಕೋನದೆಡೆಗೆ ತಮ್ಮ ಕಾವ್ಯಪ್ರಯೋಗ ನಡೆಸುತ್ತಿದ್ದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಗುನ್ನಾರ್ ಎಕೆಲೋಫ಼್-ರವರ (Gunnar Ekelof, 1907-1968) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು
ಮೇಸ್ತ್ರಿಯೊಂದಿಗೆ ಗೆದ್ದ ಯುದ್ಧ…: ಎಚ್. ಗೋಪಾಲಕೃಷ್ಣ ಸರಣಿ
ನನ್ನ ತಲೆಯಿಂದ ದೊಡ್ಡ ಹೊರೆ ಇಳಿದ ಹಾಗನ್ನಿಸಿತು. ಸಾವಿರಾರು ರುಪಾಯಿ ಮಿಗಿಸಿದ ಸಂತೋಷ ಆಯ್ತು. ರೂಪಿ ಸೆವ್ಡ್ ಈಸ್ ರೂಪಿ ಅರ್ನ್‌ಡ್ ಎನ್ನುವ ಫಿಲಾಸಫಿ ನನ್ನದು ಆ ಕಾಲದಿಂದಲೇ…….! ಈ ಸಂತೋಷ ಒಂದುಕಡೆ ಮತ್ತು ಇಡೀ ಜೀವಮಾನ ಅನುಭವಿಸಬೇಕಿದ್ದ ಮಾನಸಿಕ ಒತ್ತಡ ಒಂದುಕಡೆ ನಿವಾರಣೆ ಆದ ಖುಷಿ ಸಿಕ್ತಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತನೆಯ ಕಂತು
ಮಳೆ ಹಿಡಿಯೋ ಮೊದ್ಲು…..: ಭವ್ಯ ಟಿ. ಎಸ್. ಸರಣಿ
ಮಳೆಗಾಲ ಬಂತೆಂದರೆ ಮೀನುಗಳ ಕಾಲವೂ ಬಂದಂತೆಯೇ. ಹತ್ ಮೀನು, ಅವ್ಲು, ಗೌರಿ ಮೊದಲಾದ ಹೊಳೆ ಮೀನುಗಳು ಸಿಗುವಾಗ ರುಚಿಕರವಾದ ಮೀನು ಸಾರಿಗೆ ಬೇಕಾದ ತರತರದ ಹುಳಿಗಳು ಈ ಮೇ ತಿಂಗಳಲ್ಲಿ ತಯಾರಾಗಬೇಕು. ಮಲೆನಾಡಿನ ಕಾಡುಗಳಲ್ಲಿ ವಾಟೆ ಮರ ಇರುತ್ತದೆ. ಈ ವಾಟೆ ಕಾಯಿಗಳನ್ನು ಉದುರಿಸಿ ತಂದು ಸಣ್ಣಗೆ ಹೆಚ್ಚಿ, ಒಣಗಿಸಿ, ಬೀಜ ತೆಗೆದು ಉಪ್ಪು ಹಾಕಿ ಡಬ್ಬಿಗಳಲ್ಲಿ ಸಂಗ್ರಹಿಸಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆ ಶುರುವಾಗುವ ಮುಂಚೆ ಮಾಡಿಟ್ಟುಕೊಳ್ಳುವ ಸಿದ್ಧತೆಗಳ ಕುರಿತ ಬರಹ ಇಲ್ಲಿದೆ
						








