ಅಪರಾಧಕ್ಕೆ ತಕ್ಕ ಶಿಕ್ಷೆ ಮತ್ತು…. ಮುಂದಿನ ಹಾದಿ
ಅಪರಾಧಿಯು ತಪ್ಪೊಪ್ಪಿಕೊಂಡ ಐದು ತಿಂಗಳ ನಂತರ ತೀರ್ಪು ಹೊರಬಂದಿತು. ರಝುಮಿಖಿನ್ ಸಾಧ್ಯವಾದಾಗಲೆಲ್ಲ ಸೆರೆಮನೆಗೆ ಹೋಗಿ ಅವನ ಭೇಟಿ ಮಾಡುತ್ತಿದ್ದ. ಸೋನ್ಯಾಳೂ ಅಷ್ಟೇ. ದೂರವಾಗುವ ದಿನ ಬಂದಿತು. ಶಾಶ್ವತವಾಗಿ ದೂರವಾಗುತ್ತಿಲ್ಲ ನಾವು ಎಂದು ದುನ್ಯಾ ಆಣೆ ಮಾಡಿ ಹೇಳಿದಳು ಅಣ್ಣನಿಗೆ. ರಝುಮಿಖಿನ್ ಕೂಡ ಅದನ್ನೇ ಹೇಳಿದ. ಕನಿಷ್ಠಪಕ್ಷ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಏನು ಮಾಡಬೇಕೆಂಬ ಬಗ್ಗೆ ಅವನ ಸ್ನೇಹಪೂರ್ಣ ಮನಸಿನಲ್ಲಿ ಆಗಲೇ ಒಂದು ಯೋಜನೆ ದೃಢವಾಗಿ ರೂಪುತಳೆದಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಕೊನೆಯ ನುಡಿಗಳು.
ಮುಂದಿನ ಬಿಡಾರಕ್ಕೆ ನಡೆಯುವ ಹಾದಿಯೇ ವಿಶ್ವವಿದ್ಯಾಲಯ
ಆಟ ಆಗುವಲ್ಲಿಗೆ ಮೇಳ ಹೋಗಿ ಆಟ ಆಡಿಸಲು ವೀಳ್ಯ ಕೊಡುವವರ ಮನೆಯಲ್ಲಿ “ತಾಳಮದ್ದಳೆ” ಹಾಕುವ ಕ್ರಮ ಹಿಂದೆ ಇತ್ತು. ಆಟ ಆಡಿಸುವವರ ಮನೆಯಲ್ಲಿ ದೀಪ ಸ್ಥಾಪನೆ ಮಾಡಿ ಭಾಗವತರು ಮತ್ತು ಮದ್ದಳೆಗಾರರು ಕುಳಿತು ಭಾಗವತರು ಒಂದೆರಡು ದೇವರ ಸ್ತುತಿಯನ್ನು ಹಾಡುತ್ತಿದ್ದರು. ಹೀಗೆ ತಾಳಮದ್ದಳೆ ಹಾಕುವ ಮೂಲಕ, ಅಂದಿನ ಆಟ ಆಡಿಸಬೇಕೆಂದು ಸೇವಾಕರ್ತರಲ್ಲಿ ಮನವಿ ಮಾಡುವುದು, ಭಾಗವತರ ಸಾಮರ್ಥ್ಯ ಮತ್ತು ನೈಪುಣ್ಯ ನೋಡಿ ಆ ಮನೆಯವರು ವೀಳ್ಯವನ್ನು ನಿರ್ಧರಿಸುವುದು ಇದೇ ಸಂದರ್ಭದಲ್ಲಿ. ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯ ಬರಹ.
ಸತ್ತವನು ಎದ್ದು ಬಂದಾಗ…
ಈಗ ಕಂಪ್ಯೂಟರ್ ಯುಗ ಬಂದು, ಎಲ್ಲಾ ದಾಖಲು ಡಿಜಿಟಲೀಕರಣ ಆಗಿ, ಪ್ರತಿ ರೋಗಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೊಡುವುದರಿಂದ, ಹಿಂದಿನ ದಿನಗಳಂತೆ ಸರ್ಟಿಫಿಕೇಟ್ ಕೊಡುವುದು ಸ್ಪಲ್ಪ ಕಷ್ಟ. ಹಾಗೆಯೇ ಈಗ, ಕೆ. ಪಿ. ಎಂ. ಇ. ಕಾನೂನಿನಲ್ಲಿ ಪ್ರತಿ ವೈದ್ಯರೂ, ತಾವು ಚಿಕಿತ್ಸೆ ನೀಡುವ ಎಲ್ಲಾ ರೋಗಿಗಳ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದು ಇಡಬೇಕು ಎಂದಿದೆ. ಹಾಗಾಗಿ ಈ ಮೊದಲಿನಂತೆ ಸರ್ಟಿಫಿಕೇಟ್ ಕೊಡಲು, ಈಗ ಈಗ ಬಹಳ ಪ್ರಯಾಸ ಪಡಬೇಕು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ನೆನಪುಗಳ ಮೆರವಣಿಗೆ ಸರಣಿಯ ಕಂತು ನಿಮ್ಮ ಓದಿಗೆ
ಗಂಟಿಚೋರರ ತುಡುಗಿನ ಲೋಕ
ಇದೊಂದು ಭಿನ್ನವಾದ ಕಳವು. ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು. ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಐದನೆಯ ಕಂತು ಇಲ್ಲಿದೆ.
ವಡ್ಡಾರಾಧನೆಯ ವಿದ್ಯುತ್ ಚೋರನೆಂಬ ರಿಸಿಯು ಗಂಟಿಚೋರನಿರಬಹುದೇ?
ಜೈನಧರ್ಮದ ಪಾರಮ್ಯವನ್ನು ಸಾರುವ ಕೃತಿಗಳು ಕಳ್ಳತನವನ್ನು ಪಾಪವೆಂದು ಹೇಳುತ್ತವೆ. ಈ ಹಿನ್ನೆಲೆಯನ್ನು ಗಮನಿಸುತ್ತಾ ಗಂಟಿಚೋರ್ ಸಮುದಾಯದ ಜತೆ ಇದನ್ನು ತಳಕುಹಾಕಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ. ಜಿನಧರ್ಮ ಕಳ್ಳತನವನ್ನು ‘ಪಾಪ’ ಎನ್ನುವುದಕ್ಕೆ ಪೂರಕವಾಗಿ ಎಂಬಂತೆ ಗಂಟಿಚೋರ್ ಸಮುದಾಯದಲ್ಲಿ ‘ಪಾಪನೋರು’ ಎನ್ನುವ ಬೆಡಗೊಂದು ಇರುವುದನ್ನು ಗಮನಿಸಬಹುದು. ಈ ಬೆಡಗು ತಮ್ಮನ್ನು ‘ಪಾಪದವರು’ ಅಥವಾ ಜಿನಧರ್ಮದ ಪ್ರಕಾರ ‘ಪಾಪ ಕಾರ್ಯದಲ್ಲಿ’ ತೊಡಗಿದವರು ಎನ್ನುವುದರ ಸಾಂಕೇತಿಕವಾಗಿ ಬಂದಿರಬಹುದೇ…
ಚಳಿಗಾಳಿ, ಸಿಹಿಗಾಳಿಯ ಕಂಪೆಲ್ಲ ಸೊಗಸಾಗಿ..
ಚಳಿಗಾಲಕ್ಕೆಂದೆ ಅರಳುವ ಕೆಲವು ಕಾಡ ಹೂಗಳಿಗೆ ಹೆಸರಿಲ್ಲದಿದ್ದರೂ ಬಣ್ಣಗಳಿವೆ. ಈ ಬಣ್ಣದ ಹೂಗಳಿಗೆ ಹೆಸರಿಡುವ ಕೆಲಸವೂ ಅಣಶಿ ಮಕ್ಕಳಿಂದ ಸದ್ದಿಲ್ಲದೆ ನಡೆಯುತ್ತದೆ. ಕೊರೆವ ಚಳಿಯಲ್ಲೂ ಮಕ್ಕಳೆಲ್ಲ ಹಳ್ಳದ ಅಂಚಿರುವ ಕಾಡ ಮರದ ತುದಿಯನ್ನೇರಿ ಹಳ್ಳದ ನೀರಿಗೆ ಧುಮುಕಿ ಈಜುವ ಸಾಹಸದ ಕ್ರೀಡೆಯಲ್ಲಿ ತಲ್ಲೀನರಾಗಿದ್ದಾರೆ. ಶಿಶಿರನ ಹೆಸರು ಕೇಳತ್ತಿದ್ದಂತೆಯೆ ನದಿಯೂ ಕೂಡ ನಲುಮೆಯ ಮಾತಾಡಿದೆ. ಪ್ರತಿ ಚಳಿಗಾಲಕ್ಕೆ ಕಾಂದಾಬಜ್ಜಿ ಬಿಸಿ ಬಿಸಿ ತಯಾರಿಸಿ ಮಾರುವ…
ಪ್ರತಿರೋಧ ಮಾರ್ಗಗಳ ಕತೆ ಹೇಳುವ ಸಿನಿಮಾ ʻಕೈರೋ 678’
ಫೈಜಾ಼ಳ ಗಂಡನಿಗೆ ಸರಿಯಾದ ಕೆಲಸವಿಲ್ಲ. ವರಮಾನದ ಅಭಾವವಿರುವ ಗಂಡ ಮತ್ತು ಸ್ಕೂಲಿಗೆ ಹೋಗುವ ಇಬ್ಬರು ಮಕ್ಕಳನ್ನು ಆಕೆ ನಿಭಾಯಿಸಬೇಕು. ಆದಾಯದ ಕೊರತೆ. ಅದಕ್ಕಾಗಿ ಸಂಬಳ ವಿತರಿಸುವವನೊಂದಿಗೆ ಮಾಡುವ ಚರ್ಚೆ ವ್ಯರ್ಥ. ಜೊತೆಗೆ ಪ್ರತಿದಿನದ ಲೈಂಗಿಕ ಹಿಂಸೆಯಿಂದ ರಾತ್ರಿ ಕಾಡಿ, ಬೇಡಿ ಬರುವ ಗಂಡನನ್ನು ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಗಂಡಸು ಎಂದರೆ ಸಾಕು ಉರಿದುಕ್ಕುವ ಹಿಂಸೆ ಆವರಿಸಿ ಗಂಡನನ್ನು ದೂರವಿಡಲು ಪ್ರತಿ ರಾತ್ರಿಯೂ ಈರುಳ್ಳಿ ತಿನ್ನುತ್ತಾಳೆ. ಗಂಡನಿಗೋ ಉಕ್ಕೇರಿ ಬರುವ ಅಭಿಲಾಷೆಯನ್ನು ಹತ್ತಿಕ್ಕುವ ಒದ್ದಾಟ.
ಅಪರಾಧ ಮತ್ತು ಶಿಕ್ಷೆ: ಸ್ಥಿಮಿತವಿಲ್ಲದ ಮನಸ್ಸು
ಈ ಎಲ್ಲ ಮಾತು ರಾಸ್ಕೋಲ್ನಿಕೋವ್‌ನನ್ನು ತಡೆದು ನಿಲ್ಲಿಸಿದವು. ಅವನ ನಾಲಗೆ ತುದಿಗೆ ಬಂದಿದ್ದ, ‘ನಾನು ಕೊಲೆಮಾಡಿದೆ,’ ಅನ್ನುವ ಮಾತು ಅಲ್ಲೇ ಹೆಪ್ಪುಗಟ್ಟಿತು. ಈ ಎಲ್ಲ ಉದ್ಗಾರ ಶಾಂತವಾಗಿ ಕೇಳಿಸಿಕೊಂಡ. ಹಿಂದೆ ತಿರುಗಿ ನೋಡದೆ ಪೋಲೀಸು ಸ್ಟೇಷನ್ನಿನ ರಸ್ತೆಯಲ್ಲಿ ನಡೆದ. ದಾರಿಯಲ್ಲಿ ಅವನ ಮುಂದೆಯೇ ಯಾವುದೋ ನೆರಳು ಹಾದು ಹೋದ ಹಾಗೆ ಅನ್ನಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಅವನು ಊಹಿಸಿದಂತಿತ್ತು. ಹೇಮಾರ್ಕೆಟ್ಟಿನಲ್ಲಿ ಎರಡನೆಯ ಬಾರಿ ಇಡೀ ಲೋಕಕ್ಕೆ….
ಇಂಗ್ಲಿಷ್ ಪಾಸು ಮಾಡಿಸುವ ‘ದಾತ’
ಹಾಸ್ಟೆಲ್‌ನಲ್ಲಿ ಓದುವುದಕ್ಕೆ ಬಿಎಸ್ಸಿ ಹುಡುಗರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಿದ್ದ ನಾವು, ರಾತ್ರಿ ಹಗಲೆನ್ನದೆ ಪುಸ್ತಕ ಹಿಡಿದೇ ಇರುತ್ತಿದ್ದೆವು. ಸದಾ ಕನ್ನಡಕ ಹಾಕುತ್ತ ಎಲ್ಲರಿಂದ ‘ಇಂಟಲಿಜೆಂಟ್’ ಎಂದು ಕರೆಸಿಕೊಳ್ಳುತ್ತಿದ್ದ ರಂಗನಾಥ್ ನಮ್ಮ ಓದನ್ನ ಕಂಡು ‘ನೀವು ಸೈನ್ಸ್ ತಗಬೇಕಾಗಿತ್ತು ಕಂಡ್ರಲ’ ಎನ್ನುತ್ತಿದ್ದ. ಓದಿ ಬಸವಳಿಯುತ್ತಿದ್ದ ನಮಗೆ ಮಧ್ಯೆ ಕರೆಂಟ್ ಹೋದರೆ ತಂಪೆನಿಸುತ್ತಿತ್ತು. ಆದರೆ ಅದನ್ನ ತೋರಗೊಡದೆ ಕರೆಂಟಿಗೆ ಶಪಿಸುವರಂತೆ ನಾಟಕವಾಡುತ್ತಿದ್ದೆವು. ಹೀಗೆ ಒಮ್ಮೆ ನಮಗೂ ಪ್ರಭನಿಗೂ ಚಾಲೆಂಜ್ ಬಿತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ಟ್ರಂಕು ತಟ್ಟೆ ಸರಣಿಯ ಬರಹ ಇಲ್ಲಿದೆ.










