Advertisement
ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ ‘ದ್ವೀಪಗಳು’

ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ ‘ದ್ವೀಪಗಳು’

ದ್ವೀಪಗಳು

ಆಕಸ್ಮಿಕಗಳ ಸಾಗರದಲಿ ತೆರಪಿಲ್ಲದ ಭೋರ್ಗರೆತದಾಟ
ಅಲೆಗಳ ಮೇಲೆ ವಿಲಕ್ಷಣ ದ್ವೀಪಗಳ ತೇಲಾಟ
ಅಲ್ಲಿ ಬೆಳಕು ನೆರಳಿನ ಕಣ್ಣು ಮುಚ್ಚಾಲೆಯಾಟ
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

ದ್ವೀಪಗಳಲಿ ವೈಚಿತ್ರ್ಯಗಳ ಸಾಲು ಸಾಲು ಮೆರವಣಿಗೆ
ಬಂಧನದಿ ಸಿಲುಕಿ ತಿಳಿಯದ ಹಗರಣಗಳ ಉರವಣಿಗೆ
ವ್ಯರ್ಥದಾಲಾಪ ಅರ್ಥೈಸಲಾಗದ ಒಣ ಒಗಟು
ಬಿಟ್ಟೋಡಲಾಗದ ಬಿಡದ ಸರಕು ಗಂಟು ಗಂಟು
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

ದ್ವೀಪಗಳ ಒಳಾಂಗಣದಲ್ಲಿ ಅಗಾಧ ತಾಕಲಾಟ
ತಪ್ಪಿಸದಂತೆ ಸಿಲುಕಿ ಹೆಣಗಾಟ ಬಿರುಗಾಳಿಯ ಆರ್ಭಟ
ಮೇರೆ ಮೀರದಂತೆ ಬಂಧಿಸಿಡುವ ಹೋರಾಟ
ಒಣ ತರಗೆಲೆಯೋ ಹಸಿ ಗರಿಕೆಯೋ ಮಿಸುಕದು ಗಟ್ಟಿ ಅಂಟು
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

ಆಕಸ್ಮಿಕಗಳ ಸಾಗರವೇ ದೊಡ್ಡ ಗೋಜಲಿನ ಮೂಟೆ
ಆ ದ್ವೀಪಗಳ ನಿರ್ಮಿತಿ ಇನ್ನೊಂದು ತರಲೆಗಳ ಮೂಟೆ
ಅಸ್ತಿತ್ವದ ಭರವಸೆ ನಂಬುಗೆ ಇಲ್ಲದ ಕಂತೆಗಳ ಕೂಟ
ಆದರೂ ಅನುಕ್ಷಣ ಅದೇನೋ ಆತುರದ ಹುಡುಕಾಟ
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

About The Author

ಸರೋಜಿನಿ ಪಡಸಲಗಿ

ಸರೋಜಿನಿ ಪಡಸಲಗಿ ಬೆಂಗಳೂರು ವಾಸಿ. ಕವಿತೆ, ಕತೆ ಪ್ರಬಂಧಗಳನ್ನು ಬರೆಯುವುದು ಜೊತೆಗೆ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವುದೂ ಇವರ ಹವ್ಯಾಸ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ