ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
ಹಾಗೇ ಒಂದು ಜೊಂಪು ಹತ್ತಿತ್ತು. ಕನಸಿನಲ್ಲಿ ತನ್ನಲ್ಲಿ ಉಳಿದಿದ್ದ ಟಿಕೆಟ್ ಒಂದಕ್ಕೆ ಲಕ್ಷ ರೂಪಾಯಿಯ ಬಂಪರ್ ಬಂದ ಹಾಗೆ, ಅದರಿಂದ ಬಂದ ಹಣದಲ್ಲಿ ತಂಗಿಯ ಮದುವೆ, ತನಗೊಂದು ಮೂರು ಚಕ್ರದ ಸ್ಕೂಟರ್, ಸಣ್ಣದೊಂದು ಲಾಟರಿ ಟಿಕೆಟ್ ಮಾರುವ, ಸ್ಟೇಷನರಿ ಅಂಗಡಿ. ಅದರಿಂದ ಬರುವ ಆದಾಯ. ಅಲ್ಲಿ ಹುಡುಗನೊಬ್ಬನನ್ನು ಕೆಲಸಕ್ಕೆ ಇರಿಸಿ ತಾನು ಬಿ.ಕಾಂ. ಮುಂದುವರಿಸಿದ ಹಾಗೆ……
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಬಂಪರ್ ಬಹುಮಾನ” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ
ನನಗೆ ಕಾಲವೇ ನಿಂತಂತಾಗಿ ಬಿಟ್ಟಿತ್ತು. ಕೈಕಾಲುಗಳೆಲ್ಲ ತಣ್ಣಗೆ. ಅಣ್ಣನ ಸಾವು ಕಣ್ಣಿಗೆ ಚಿತ್ರ ಕಟ್ಟಿದಂತಾಯಿತು. ಇವನೇನಾಗಿ ಹೋದ? ಮೂರುವರೆ ಲಕ್ಷಕ್ಕೆ ಸಾಯುವಂಥವನಾ? ನಾವ್ಯಾರು ಇರಲಿಲ್ಲವೇ ಅವನಿಗೆ? ಯಾರನ್ನು ನೆನಪಿಸದಷ್ಟು ಬ್ಯಾಂಕಿನ ಕಿರುಕುಳವಿತ್ತಾ? ಆಡಳಿತ ಯಂತ್ರ ಅಧಿಕಾರ ವರ್ಗ ರೈತರ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ರಾಜ್ಯದಲ್ಲಿ ಅದೆಷ್ಟು ರೈತರ ಸಾವುಗಳು? ಅವರ ಕುಟುಂಬಗಳಿಗೆ ಯಾರು ದಿಕ್ಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ “ಕರಕಲಾದ ಅನ್ನದಗುಳು” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಾಂತಿ ಅಪ್ಪಣ್ಣ ಕತೆ
ನಾನು ಒಡೆದು ಬಿದ್ದ ವೇಸಿನ ಚೂರನ್ನೆತ್ತಿ ಅದರತ್ತ ಬಲವಾಗಿ ಎಸೆದೆ. ಅದು ಗೋಡೆಗೆ ತಗುಲಿ ಗೋಡೆಯ ಕಣ್ಣಿಂದ ರಕ್ತ ಸೋರತೊಡಗಿತು. ತನ್ನ ಮೇಲೆ ಬೀಳಬಹುದಾಗಿದ್ದ ವೇಸಿನ ಏಟನ್ನು ಸರಕ್ಕನೆ ತಲೆತಿರುಗಿಸಿ ತಪ್ಪಿಸಿಕೊಂಡ ಅದೀಗ ಗಹಗಹಿಸಿ ನಗತೊಡಗಿತು. “ಇದಕ್ಕೇ ನಾ ನಿನ್ನ ಮುಟ್ಠಾಳ ಅಂದದ್ದು. ಹೀಗೆ ಸಣ್ಣ ಸಣ್ಣದಕ್ಕೂ ಓವರ್ ರಿಯಾಕ್ಟ್ ಮಾಡೋದನ್ನ ಮೊದಲು ನಿಲ್ಲಿಸು.”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಾಂತಿ ಅಪ್ಪಣ್ಣ ಕತೆ “ಬಾಹುಗಳು” ನಿಮ್ಮ ಓದಿಗೆ
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ
‘ನೀನು ಏನು ಬೇಕಾದರೂ ಮಾಡು, ಆದರೆ ನಿನ್ನ ಅವೆರೆಡನ್ನು ಮಾತ್ರ ಸಾರ್ವಜನಿಕವಾಗಿ ತೋರಿಸಬೇಡ ಎಂದು ಎಷ್ಟೇ ಬೇಡಿಕೊಂಡರೂ ಸಾಕುಂತಲೆ ರೊಚ್ಚಿಗೆದ್ದಾಗಲೆಲ್ಲಾ ಬೇಕಂತಲೇ ಅವುಗಳನ್ನು ದೊಡ್ಡದಾಗಿ ತೋರಿಸಿ ನನ್ನನ್ನು ಬೆಂಕಿಯ ಬಾಣಲೆಯಲ್ಲಿ ಹುರಿಯುತ್ತಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಆಕೆಗೆ ನಾನು ಅಂದರೆ ಬಹಳ ದೊಡ್ಡ ಎಡವಟ್ಟುಗಳ ಒಂದು ದೊಡ್ಡ ಮೊತ್ತ. ಒಂದು ಎಡವಟ್ಟಿನ ನಂತರ ಇನ್ನೊಂದು ಅದರ ನಂತರ ಮತ್ತೊಂದು ಮಗದೊಂದು ನೂರಾ ಒಂದು….
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಒಂಟಿ ಪಿಶಾಚಿ” ನಿಮ್ಮ ಓದಿಗೆ
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ
ಬಟ್ಟೆ ಅಂಗಡಿಯಲ್ಲಿದ್ದ ಸುಮುಖ ಪ್ಯಾಂಟೊಂದರ ಕಡೆಗೆ ಕೈ ತೋರಿಸಿದ್ದ. ಬಟ್ಟೆ ತೋರಿಸುತ್ತಿದ್ದ ಯುವತಿ ಇವನು ಕೈತೋರಿಸಿದೆಡೆಗೆ ನೋಡಿದಳು. ಆರು ಜೇಬುಗಳು, ಸುತ್ತಮುತ್ತೆಲ್ಲಾ ಉದ್ದುದ್ದ ಬಳ್ಳಿ ಬೆಳೆದಂತಿದ್ದ ಗಿಲಿಗಿಲಿ ಪ್ಯಾಂಟೊಂದು ಅಲ್ಲಿತ್ತು. ಅದು ಸುಮುಖ ಯಾವಾಗಲೂ ಹೋಗುತ್ತಿದ್ದ ಬಟ್ಟೆ ಅಂಗಡಿ. ಅದರ ಮಾಲೀಕರಿಂದ ಹಿಡಿದು ಎಲ್ಲರನ್ನೂ ಪರಿಚಯವಿತ್ತು ಸುಮುಖನಿಗೆ. ಈಗ ಬಟ್ಟೆ ತೋರಿಸುತ್ತಿದ್ದ ಯುವತಿಯೂ ಸಹ ಇವನ ಪರಿಚಯದವಳೇ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಕತೆ “ಸುಮುಖ ಮತ್ತು ಗಾಂಧಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕತೆ
ಅಲ್ಲಿಂದ ತಿರುಗಿ ಬರುವಾಗ, ಭೆಟ್ಟಿಯಾದವರೆಲ್ಲ ಮಾತಾಡಿಸಿದರು. ಮಾವನ ಭಕ್ತರು ಇವರೆಲ್ಲ. ಮಾವ ಈ ಊರಿನ ಕುಲದೇವತೆಗಳಲ್ಲಿ ಒಬ್ಬ. ಊರ ಜನರೆಲ್ಲ ಒಂದು ರೀತಿಯಿಂದ ಅವನಿಗೆ ಋಣಿ. ಮದುವೆ-ಮುಂಜಿವೆ, ಸಾವು-ಹುಟ್ಟು, ದಾನ-ದಕ್ಷಿಣೆ, ಜಾತ್ರೆ, ಕುಸ್ತೀ ಕಣ, ಚುನಾವಣೆ, ಅಧಿಕಾರಿಗಳಿಗೆ ಕೋಳೀ ಪಾರ್ಟಿ ಎಲ್ಲವೂ ಮಾವ-ದತ್ತವೇ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕತೆ “ಮಾವ” ನಿಮ್ಮ ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಿವಕುಮಾರ ಚನ್ನಪ್ಪನವರ ಕತೆ
ತನ್ಗ ಸರಿಯಾಗಿ ಹನ್ನೆಲ್ಡು ವರ್ಷ ಇರಬೇಕು ಅಪ್ಪಯ್ಯ ತನ್ನ ಮ್ಯಾಲ ಕೈಮಾಡಿ, ‘ಬೋಸುಡಿಕೆ ಹೆಣಗನಂಗ್ಯಾಕ್ಲೆ ಆಡ್ತಿ ಗಂಡದಿ ಮಗ್ನ ಹಂಗಿರು ಅದ್ನ ಬಿಟ್ಟು ಇನ್ನೊಂದು ಸಲ ಹೆಂಗಸರ ಸಂದ್ಯಾಗಿದ್ದೆಂದ್ರ ಕೆರ ಕಿತ್ತು ಹೊಕ್ಕಾವು’ ಅಂತೆಲ್ಲಾ ಬೈದು ಹೊಡೆದಿದ್ದ. ಕಾಡ್ಸಕಂತಲೇ ಹೆಣಗ ಅಂತ ಅಂಗ್ಸೋ ಹುಡುಗ್ರು, ಅಪ್ಪ ಎಲ್ಲೋದ್ರು ನಿನ್ನ ಮಗ ಹೆಣುಗನಂತೆ ಹೌದಾ..? ಅನ್ನೋ ಜನ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಿವಕುಮಾರ ಚನ್ನಪ್ಪನವರ ಕತೆ “ಕರಿಯೆತ್ತ ಕಾಳಿಂಗ… ಬಿಳಿಯೆತ್ತ ಮಾಲಿಂಗ” ನಿಮ್ಮ ಓದಿಗೆ
ಗೌತಮ ಜ್ಯೋತ್ಸ್ನಾ ಬರೆದ ಈ ಭಾನುವಾರದ ಕತೆ
ವತ್ಸನ ಹೊಟ್ಟೆಯೊಳಗೆ ಏನೋ ಚುಚ್ಚಿದ ಹಾಗೆ ನೋವು, ಇಡೀ ಶರೀರ ಬಿಗಿಯಾಗುತ್ತಿದ್ದ ಭಾವ. ಆ ಬಾರಿನ ದೀಪದ ಬುರುಡೆಗಳು ಈಗ ದಟ್ಟ ಹಳದಿ ಪ್ರಭೆಯಲ್ಲಿ ಧಗಧಗಿಸುತ್ತಿದ್ದವು, ಯಾವುದೋ ಅನ್ಯ ಗ್ರಹದಲ್ಲಿ ಗ್ರಹಣವಾದಾಗ ಮಬ್ಬಾಗಿ ಬೆಳಕಾದಂತೆ.
ಗೌತಮ ಜ್ಯೋತ್ಸ್ನಾ ಹೊಸ ಕಥಾ ಸಂಕಲನ “ಜಕ್ಕಿಣಿ” ಬಿಡುಗಡೆಯಾಗುತ್ತಿದ್ದು, ಈ ಸಂಕಲನದ ಒಂದು ಕತೆ “ಮಾರೀಚ
ಅಥವಾ ಒಂದು ಅಪಾಯಕಾರಿ ಮನಸ್ಸಿನ ಪ್ರಣಯ ಪ್ರಸಂಗ” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ
ಇಷ್ಟು ಸುಖ ಕೊಡುವ ಸಂಬಂಧ ನನ್ನ ಪಾಲಿಗೆ ಎಂದೆಂದಿಗೂ ಇಲ್ಲವಾಗುವುದು ಎಂಬ ಅರಿವಿನಿಂದ ನಾನು ತೀರಾ ವಿಹ್ವಲಳಾಗುತ್ತಿದ್ದೆ. ಆದರೆ ಅವನು? ಅವನ ಪಾಲಿಗೆ ಇದೇ ಕೊನೆಯಲ್ಲವಲ್ಲ? ಇಷ್ಟಾಗಿ ನನ್ನ ವೈಯಕ್ತಿಕ ನೋವುಗಳನ್ನು ಅವನೊಂದಿಗೆ ಹೇಳಿಕೊಳ್ಳುವುದಾಗಲೀ, ನನ್ನನ್ನೇ ಮದುವೆಯಾಗು ಎಂದು ಅತ್ತು ಕರೆಯುವುದಾಗಲೀ ನನಗೆ ಸಾಧ್ಯವಿರಲಿಲ್ಲ. ನಮ್ಮ ಸಂಬಂಧ ಎಲ್ಲ ಸಾಮಾನ್ಯ ಸಂಬಂಧಗಳಂತಾಗಿ ಬಿಡುವುದೂ ನನಗೆ ಬೇಕಾಗಿರಲಿಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ “ಹೀಗೇ ಒಂದು ಪ್ರೇಮದ ಕಥೆ”