ಇಲ್ಲಿ ಎಲ್ಲವೂ ಸರಿ ಇದ್ಯಾ…?
ವಿನಯ ಅಲಿಶಾಳಿಗೆ ಪ್ರಪೋಸ್ ಮಾಡಿದ ಎಂಬ ಸುದ್ದಿ ಕೇಳಿದ ಮೂರು ದಿನಕ್ಕೇ ಅರವಿಂದನಿಗೆ ಲಘು ಹೃದಯಾಘಾತವಾಗಿತ್ತು. ಶಿಕಾಗೋದಿಂದ ಓಡಿಬಂದಿದ್ದರು, ವಿನಯ ಮತ್ತು ಅಲಿಶಾ ಇಬ್ಬರೂ. ಮನಸ್ಸಿನ ವ್ಯಾಪಾರವೇ ವಿಚಿತ್ರ. ವಿನಯ ಅಲಿಶಾಳನ್ನು ಮದುವೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಗೊತ್ತಿದ್ದರೂ ವಿನಯನ ಪ್ರಪೋಸಲ್ಲಿಗೂ, ಅರವಿಂದನ ಹಾರ್ಟ್ ಅಟ್ಯಾಕಿಗೂ ಕಾರ್ಯಕಾರಣ ಸಂಬಂಧ ಹುಡುಕಲು ವೈದ್ಯಕೀಯ ಪುರಾವೆಗಳ ಸಾಥ್ ಕೇಳಿದ್ದಳು, ಸುಕನ್ಯಾ.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್”ನ ಎರಡನೆಯ ಕಂತು ನಿಮ್ಮ ಓದಿಗಾಗಿ
ಗುರುಪ್ರಸಾದ್ ಕಾಗಿನೆಲೆ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್” ಇಂದಿನಿಂದ ಶುರು
‘ಥ್ಯಾಂಕ್ಸ್ ಗಿವಿಂಗ್’ ಈ ನೀಳ್ಗತೆಯನ್ನು ಬರೆದು ಸುಮಾರು ಎಂಟುವರ್ಷಗಳೇ ಆಗಿವೆ. ‘ಹಿಜಾಬ್’ ಕಾದಂಬರಿಯ ಬರವಣಿಗೆ ನನ್ನನ್ನು ಬಸವಳಿಸಿತ್ತು. ಕೆಲವೊಮ್ಮೆ ಏನೂ ಬರೆಯಲಾರೆ ಅನ್ನಿಸಿತ್ತು. ತಿಂಗಳುಗಟ್ಟಲೆ ಬರವಣಿಗೆಯನ್ನು ನಿಲ್ಲಿಸಿದ್ದೆ. ಅದನ್ನು ಮರು ಉದ್ದೀಪನಗೊಳಿಸಿಕೊಳ್ಳಲು ಅದಕ್ಕೆ ವಸ್ತು, ವಿಷಯ ಮತ್ತು ನಿರೂಪಣೆಯಲ್ಲಿ ಸಂಪೂರ್ಣ ಬೇರೆಯಾಗಿರುವುದನ್ನು ಬರೆಯಬೇಕೆನ್ನಿಸಿತು.
ಗುರುಪ್ರಸಾದ್ ಕಾಗಿನೆಲೆ ಬರೆದ ಹೊಚ್ಚಹೊಸ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್” ಕೆಂಡಸಂಪಿಗೆಯಲ್ಲಿ ಕೆಲವು ಕಂತುಗಳಲ್ಲಿ ಪ್ರತಿ ಶನಿವಾರ ಪ್ರಕಟವಾಗಲಿದೆ
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ
ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ.
ಕೆ. ಸತ್ಯನಾರಾಯಣ ಬರೆದ ಕಥೆ “ಪ್ರೀತಿ ಬೇಡುವ ರೀತಿ”
‘ಮಗಳ ಮದುವೆ’: ಪೂರ್ಣ ಮತ್ತು ಅಪೂರ್ಣ ಬದುಕಿನ ಮಾದರಿಗಳು
ರತ್ನಾಕರನ ಗೆಳೆಯನೂ ಸರಳ ಸಜ್ಜನನೂ ಆಗಿರುವ ರಂಗಣ್ಣನ ತಮ್ಮ ವೆಂಕಣ್ಣನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಇದ್ದರೂ ಚಳುವಳಿಗಾರರಾಗಿರುವ ಅವನ ಸಂಗಡಿಗರು ಪೋಲೀಸರೊಂದಿಗೆ ಕೈಜೋಡಿಸಿ ರತ್ನಾಕರನನ್ನು ಸೆರೆಮನೆಗೆ ತಳ್ಳುವಂತೆ ಮಾಡಲು ಹೇಸದಷ್ಟು ಧೂರ್ತರಾಗಿದ್ದಾರೆ. ಕುಮುದಳನ್ನು ಮದುವೆಯಾಗಲು ಯೋಗ್ಯನಾಗಿದ್ದ ರತ್ನಾಕರನು ತನ್ನ ಗೆಳೆಯರ ಕುಮ್ಮಕ್ಕಿನಿಂದಾಗಿ ಸೆರೆಮನೆಗೆ ತೆರಳಬೇಕಾಗುವ ಸಂದರ್ಭವು ಇದಕ್ಕೊಂದು ನಿದರ್ಶನ.
ಆನಂದಕಂದರ ‘ಮಗಳ ಮದುವೆ’ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕತೆ
ಅಲಾ.. ಒಂದ್ ಜಾಕೀಟ್ ಬಟ್ಟೆ ಅರ್ಸಕ್ಕೆ ವರ್ಸ ಪೂರ್ತಿ ದುಡ್ ವಟ್ಮಾಡಿ ಬಟ್ಟೆ ಅಂಗ್ಡಿಗ್ ವೋಗಿದೀನಿ. ಕದಿಯದಾಗಿದ್ರೆ ಇಷ್ಟು ಕಸ್ಟ ತಗೀಬೇಕಾ? ಆ ದೇವ್ರೂ ಈ ಅನ್ಯಾಯ ನೋಡ್ಕ್ಯಂತ ಸುಮ್ಕಿದಾನಾ ಅಂಗಾರೆ? ಅಲಾ ಈ ಸೀರೆ ವಯರ್ ಬುಟ್ಟಿಲಿ ಯಾವಾಗ್ ಬಂದ್ ಸರ್ಕಂತು ಅಂತ? ಬವುಶ್ಯ ನನ್ ಇಂದ್ಗಡೀಕೇ ನಿಂತ್ಕಂದಿದ್ನಲ್ಲ ಇವ್ನು.. ಇವ್ನೇ ಎಲ್ಲಾರೂ.. ಇವ್ನೇ ಇವ್ನೇ! ಇನ್ಯಾರ್ ಇಂತಾ ಕ್ಯಲ್ಸ ಮಾಡ್ತರೆ? ಅಲಾ.. ಅದ್ಯಾ ಮಾಯ್ಕದಲ್ಲಿ ವಯರ್ ಬುಟ್ಟಿಗೆ ಸೀರೆ ತಗ್ದು ಆಕಿಬುಟ್ಟಿದ್ನೋ ಅಂತ!
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕಥೆ “ತಲೆ ಮ್ಯಾಕೆ ವೂದ ನೀರು” ನಿಮ್ಮ ಈ ಭಾನುವಾರದ ಓದಿಗೆ
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
ಆನಂದನಿಗೆ ತಾನು ಅಭ್ಯಸಿಸುತ್ತಿದ್ದ ಕೆಲವು ಪುಸ್ತಕಗಳಲ್ಲಿ ‘ವೀರ್ಯನಾಶವೇ ಮೃತ್ಯು, ಬ್ರಹ್ಮಚರ್ಯವೇ ಜೀವನ’ ಎಂಬ ಉಕ್ತಿಗಳು ಪ್ರಭಾವ ಬೀರಿದವು. ಆದರೆ ‘ಎಲ್ಲ ಹೆಣ್ಣುಮಕ್ಕಳನ್ನು ಸೋದರಿಯರಂತೆ ಕಾಣುವುದು ದುಸ್ಸಾಧ್ಯ’ ಎಂಬ ಅನುಭವೂ ಕಾಡುತ್ತಿತ್ತು. ಅನೇಕ ಟೀಚರ್ಗಳಿಗೆ ಅಚ್ಚರಿಯಾಗುವಂತೆ ಪಿ.ಯು.ಸಿಯಲ್ಲಿ ಕಾಮರ್ಸ್ ತೆಗೆದುಕೊಂಡ. ಬಿ.ಕಾಂ. ಮಾಡಲು ಖರ್ಚು ಕಡಿಮೆ. ಬೇಗ ಕೆಲಸ ಸಿಗುವುದು. ತಮ್ಮನಾದ ಶೃಂಗ ಬೇಕಾದರೆ ಬಿ.ಇ. ಮಾಡಲಿ. ಅಪ್ಪನಿಗೆ ವಿ.ಆರ್.ಎಸ್. ಸಾಧ್ಯತೆ ಹೆಚ್ಚಿರುವುದರಿಂದ ತಾನು ಬೇಗನೆ ದುಡಿದು ಮನೆ ನೋಡಿಕೊಳ್ಳಬೇಕು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕತೆ
ಸಾತಪ್ಪಗ ಇಕಾಡಿದಿಕಾಡಿ ಕುಡಿಯೂ ಚಟಾ ಬಿದ್ದಂಗಿತ್ತು. ಮೊದ ಮೊದಲ ಅಪರೂಪಕ್ಕೊಮ್ಮ ಹೊಲದೊಳಗ ರಾಶಿ ಇದ್ದಾಗ… ಯಾರದರೇ ಕಣಕ್ಕ ಹೋದರ, ಇಲ್ಲಾಂದ್ರ ಭಜನಾಕ ಹೋದರ ಅಷ್ಟೇ ಕುಡೀತಿದ್ದ. ಈಗೀಗ ಎರಡು ದಿನಕ್ಕೊಮ್ಮ ಕುಡಿಯಾಕ ಸುರು ಮಾಡಿದ್ದ. ರೊಕ್ಕ ಈಡಾಗಲಿಲ್ಲಂದ್ರ ಅಲ್ಲಿ ಇಲ್ಲಿ ಸಾಲಾ ತಗೊಂತಿದ್ದ. ವಿಜಯಪುರದೊಳಗ ಒಂದಿಬ್ಬರು ಅಡತ ಅಂಗಡಿಯವರಿದ್ದರು. ಸಾತಪ್ಪನ ಅಪ್ಪ ಬೋಜಪ್ಪ ಇದ್ದಾಗಿನಿಂದಲೂ ಅಲ್ಲೇ ವ್ಯವಹಾರ ಮಾಡಕೊಂಡು ಬಂದವರು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕಥೆ “ಕೇಡುಗಾಲದ ಕುದುರೆ”
ಲಿಂಗರಾಜ ಸೊಟ್ಟಪ್ಪನವರ್ ಬರೆದ ಈ ಭಾನುವಾರದ ಕತೆ
ಮಜೀದ್ ಕ್ಯಾಷಲ್ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಕತೆ “ಪಾತ್ರ” ನಿಮ್ಮ ಭಾನುವಾರದ ಓದಿಗೆ
ಎಸ್. ಗಂಗಾಧರಯ್ಯ ಅನುವಾದಿಸಿದ ಹೆಮಿಂಗ್ವೆ ಕಥೆ “ಕನೇರಿ”
ಕನೇರಿ ತನ್ನ ಪುಕ್ಕಗಳನ್ನೊಮ್ಮೆ ಕೊಡವಿತು. ನಂತರ ಅವುಗಳನ್ನು ಕುಕ್ಕತೊಡಗಿತು. `ನಂಗೆ ಯಾವಾಗಲೂ ಹಕ್ಕಿಗಳೆಂದರೆ ಪಂಚ ಪ್ರಾಣ. ನಾನು ಈ ಕನೇರಿ ಹಕ್ಕೀನಾ ನನ್ನ ಪುಟ್ಟ ಮಗಳಿಗಾಗಿ ತಗಂಡು ಹೋಗ್ತಿದೀನಿ. ಹಾ, ಅಲ್ಲಿ ನೋಡಿ. ಅವನು ಈಗ ಹಾಡ್ತಾ ಇದಾನೆ,’ ಅಂದಳು ಅಮೇರಿಕನ್ ಹೆಂಗಸು. ಕನೇರಿ ಚಿಲಿಪಿಲಿಗುಟ್ಟತೊಡಗಿತು. ಅದರ ಗಂಟಲ ಮೇಲಿನ ಪುಕ್ಕಗಳು ನಿಮಿರಿ ನಿಂತವು. ನಂತರ ಅದು ತನ್ನ ಕೊಕ್ಕನ್ನು ಕೆಳಕ್ಕಾಕಿಕೊಂಡು ಪುಕ್ಕಗಳನ್ನು ಹೆಕ್ಕತೊಡಗಿತು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ನೆಸ್ಟ್ ಹೆಮಿಂಗ್ವೆಯ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕಥೆ “ಕನೇರಿ” ನಿಮ್ಮ ಓದಿಗೆ