ಸುಜಯ್ ಪಿ. ಬರೆದ ಈ ಭಾನುವಾರದ ಕತೆ
ಹೂವು ಎಂದರೆ ಗೆಲುವು, ಕಾಯಿ ಎಂದರೆ ಅಂದಿನ ಕೋಳಿ ಕಾದಾಟದ ಪಂದ್ಯದಲ್ಲಿ ಸೋಲು ಎಂಬುದೊಂದು ಪುರಾತನ ನಂಬಿಕೆ. ಇದು ಅಂಗಾರ ಒಬ್ಬನ ನಂಬಿಕೆಯಲ್ಲ, ಕೋಳಿಅಂಕಕ್ಕೆ ಹೋಗುವ ಎಲ್ಲರೂ ಮನೆಯ ಪುಟ್ಟ ಮಕ್ಕಳ ಬಳಿ ಈ ಪ್ರಶ್ನೆ ಕೇಳಿ ಅಂಕಕ್ಕೆ ಹೊರಡುವುದು ವಾಡಿಕೆ. ಇದರ ಅರ್ಥ ತಿಳಿದ ಮೇಲೆ ಮುತ್ತ, ‘ಕಾಯಿ’ ಎಂದು ಉತ್ತರಿಸಿದ್ದೇ ಇಲ್ಲ. ಈ ದಿನ ಅಂಗಾರ ಬಲ್ನಾಡಿನ ಜಾತ್ರೆಯ ಕೊನೆಯ ದಿನದಂದು ನಡೆಯುವ ಕೋಳಿಅಂಕಕ್ಕೆ ಹೊರಟು ನಿಂತಿದ್ದ.
ಸುಜಯ್ ಪಿ. ಬರೆದ ಈ ಭಾನುವಾರದ ಕತೆ ‘ಕುಕ್ಕುಟ ಕದನ ಕಥನ’ ನಿಮ್ಮ ಓದಿಗಾಗಿ…
ಸ್ತ್ರೀವೇಷ: ನಾಗಶ್ರೀ ಶ್ರೀರಕ್ಷ ಕಥೆ
“ಅಪ್ಪಣ್ಣ, ಸಣ್ಣಗಿನ ನಿದ್ದೆ ಮುಗಿಸಿ ಸ್ನಾನ ಮಾಡಿ ಚಿನ್ನದ ಚೈನು ಹಾಕಿಕೊಂಡು ತನಗೆ ಒಳಗೆ ಆಗುತ್ತಿರುವ ಪುಳಕವನ್ನೋ ಪುಕ್ಕಲನ್ನೋ ತೋರಿಸದೆ ನೀಟಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದ. ಭಾಗೀರಥಮ್ಮ ಮುಖ ತೊಳೆದು ಪೌಡರ್ ಹಚ್ಚಿಕೊಳ್ಳುತ್ತಿದ್ದರು. ಸೆಖೆಗೆ ಬೆವರಿದ ಮುಖದಲ್ಲಿ ಅಲ್ಲಲ್ಲಿ ಬೆಳ್ಳಗಿನ ತೇಪೆ ಅಂಟಿಕೊಳ್ಳುತ್ತಿತ್ತು. ಹಣೆಯ ಲಾಲ್ಗಂಧವನ್ನು ಇನ್ನೂ ಉರುಟು ಮಾಡುತ್ತಾ ಮದುಮಗನಂತೆ ಕಾಣುತ್ತಿದ್ದ ಮಗನನ್ನು ನೋಡಿ “ದೇವರಿಗೊಂದು ನಮಸ್ಕಾರ ಮಾಡಿ ಹೊರಡು ಅಪ್ಪು”ಎಂದರು”
ನಾನಿನ್ನು ಹೋಗಿ ಬರ್ತೀನಿ…. ಅಮ್ಮಾ…!
ಹೌದು. ಅವನಿಗೆ ಸಂತೋಷಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ, ಅಮ್ಮನ ಜೊತೆ ಅವನೊಬ್ಬನೇ ಇದ್ದದ್ದರಿಂದ ಬಹಳ ಸಂತೋಷವಾಗಿತ್ತು. ಇದ್ದಕಿದ್ದ ಹಾಗೆ, ಇಷ್ಟೆಲ್ಲ ಭಯಂಕರ ತಿಂಗಳುಗಳ ನಂತರ ಅವನ ಮನಸ್ಸು ಬಹಳ ಮೃದುವಾಗಿತ್ತು. ಅಮ್ಮನ ಕಾಲಿಗೆ ಬಿದ್ದ, ಅಮ್ಮನ ಪಾದಕ್ಕೆ ಮುತ್ತಿಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು. ಈಗ ಅವಳಿಗೆ ಆಶ್ಚರ್ಯವಿರಲಿಲ್ಲ, ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಗವತಿ ಬರೆದ ಕತೆ
ಪ್ಯಾಟೀಗೆ ಬಂದಾಗ ಕರಬಸ್ಸಿಗೆ ನೆನಪಾದ್ರೂನೂ, ರೊಕ್ಕ ಕೊಡಲಾರದಂಗ ಹೊಳ್ಳಿ ಹೋಗಿರತಿದ್ದ. ಆದರ ಸಾವಕ್ಕನ ಗಂಡ ಹೇಮ್ಯಾನ್ನ ತಪ್ಪಿದ್ರ ಯಶವಂತನ್ನ ಕಳಿಸಿ ರೊಕ್ಕ ವಸೂಲ ಮಾಡಾತನಾ ಬಿಡ್ತಿರಲಿಲ್ಲ. ಈ ಮಾಬಾರ್ತದಾಗ ಗುದ್ದ್ಯಾಡಿ ಗುದ್ದ್ಯಾಡಿ ಸುಮ್ಮನಾಗಿಬಿಟ್ಟಿದ್ಲು ಸಾವಕ್ಕ. ನಡುಕ ತನಿಗೂ ಅರಿವಿ, ಪರಕಾರ ಹೊಲಸಿಗೆಣ ಹರಕತ್ತು ಇದ್ರೂನೂ ಹೊಳ್ಳಿ ಕೇಳಾದು ಬೇಶಿರಾದಿಲ್ಲ ಅನಿಸೇ ಅಕೀ ಹಿಂದಳ ಓಣಿ ಚನ್ನಮ್ಮಕ್ಕನ ಹತ್ರ ಅರಿವಿ ಕೊಟ್ಟು ತನಿಗೆ ಬೇಕಾದ್ದು ಹೊಲಸತಿದ್ಲು. ಇನ್ನ ಮಕ್ಕಳು ಅಂತೂ ಓದಾಕ….
ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ
‘ನಮ್ಜಯು ಜಾಣೆ; ಮನೆ ಕೆಲಸಾನೂ ಮಾಡಿ, ಅಂಗಡೀನೂ ನಿಭಾಯಿಸ್ತಾಳೆ’ ಎಂದು ಮನೆಮಂದಿಯೆಲ್ಲಾ ಕೊಂಡಾಡಿದವರೇ, ಮೆಚ್ಚಿ ಮುದ್ದಾಡಿದವರೇ… ಎಲ್ಲವೂ ಸರಿಯಿದ್ದಾಗ. ಮೊದಲ ಬಾರಿಯ ಲಾಕ್ಡೌನ್ ಹೇಗೋ ಕಳೆಯಿತು. ಎರಡನೇ ಬಾರಿ ಲಾಕ್ಡೌನ್ ಆಗುವುದಕ್ಕೆ ಒಂದು ವಾರ ಮೊದಲೇ, ಸಹಾಯಕ್ಕಿದ್ದ ಹುಡುಗಿಗೆ ಎರಡು ತಿಂಗಳ ಮುಂಗಡ ಹಣ ನೀಡಿ, ಬುಟಿಕ್ ಬಾಗಿಲು ಹಾಕಿದ್ದೆ. ಆದರೆ ಮುಂದಿನ ನಾಲ್ಕೇ ದಿನದಲ್ಲಿ ಜ್ವರ ಆರಂಭವಾಗಿತ್ತು.
ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ತೆಲುಗು ಕತೆ
ನಿಜ ಹೇಳಬೇಕೆಂದರೆ ಎಲ್ಲಿಕಾಟ್ ಸಿಟಿಯಲ್ಲಿ ಮನೆ ತೆಗೆದುಕೊಳ್ಳೋಣವೆಂದು ಪ್ರಸಾದ್ ಹೇಳಿದಾಗ ರಾಧಿಕಳೇ ಬೇಡ ಅದು ಮಿನಿ ಭಾರತ, ಎಲ್ಲಿ ನೋಡಿದರೂ ಮುಖ್ಯವಾಗಿ ತೆಲುಗಿನವರೇ. ಪ್ರತಿಯೊಂದಕ್ಕೂ ಮಕ್ಕಳು, ಮಹಿಳೆಯರು, ಗಂಡಸರ ನಡುವೆ ಅನಗತ್ಯ ಸ್ಪರ್ಧೆ. ಅದಕ್ಕೇ ಭಾರತೀಯರು ಕಡಿಮೆ ಇರುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳೋಣ ಎಂದು ಪಟ್ಟುಹಿಡಿದು ಇಲ್ಲಿಗೆ ಬಂದಿದ್ದಾರೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾ. ಹು. ಚಾನ್‍ಪಾಷ ಬರೆದ ಕತೆ
ಅವ್ರು ಮಾಡ್ತಿರೋದು ಸರೀನಾ! ಇವ್ನು ಮಾಡ್ತಿರೋದು ಸರೀನಾ!.. ಬೀಜ-ವೃಕ್ಷದ ಪ್ರಶ್ನೆ ಇದ್ದಹಾಗೆ ಇದು ಬಿಡಿಸಲಾಗದ ಪ್ರಶ್ನೆ ಎನಿಸಿತು. ಪ್ರತಿ ತಂದೆ-ತಾಯಿಗಳೂ ಸಹ ಮೊದಲು ಮಕ್ಕಳಾಗಿರುತ್ತಾರೆ ತಾನೆ!… ‘ಬೆಳೆದ ಪರಿಸರ, ಪಡೆದ ಸಂಸ್ಕಾರಗಳೇ ಮುಖ್ಯ ಅದೇ ಎಲ್ಲದಕ್ಕೂ ಮೂಲ’ ಎಂದು ಹೇಳುತ್ತಿದ್ದ ರಿಯಾಜ್‌ನ ಮಾತು ನೂರಕ್ಕೆ ನೂರು ಸತ್ಯ ಎನಿಸಿತು. ಏನು ಹೇಳಬೇಕು ಎಂದು ನನಗೆ ತೋಚಲಿಲ್ಲ. ಅವನೂ ಸಹ ಏನೂ ಆಡಲಿಲ್ಲ.
ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ
ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ…
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ
ಬೆಣ್ಣೆಯಲ್ಲಿ ಕೂದಲು ತೆಗೆದಂತೆ, ವಿನಯವೇ ಮೂರ್ತಿವೆತ್ತಂತೆ ಗಿಳಿ ಮಾತಾಡುವ ಜಿನೇಶನಲ್ಲಿ ಇಂಥ ರಾಕ್ಷಸನಿರುವ ಸಾಧ್ಯತೆ, ಈ ಆರದ ಗಾಯದ ಸಾಕ್ಷಿ ಇರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಅವಳ ಬಾಳು ಕನಸಲ್ಲಿ ನಡೆದಂತೆ ಸುಸೂತ್ರವಾಗಿ ಸೌಖ್ಯದಿಂದಿದೆ ಎಂದು ಭಾವಿಸಿದ್ದರೆ ಅದೆಷ್ಟು ನೋವುಗಳನ್ನು ಒಡಲಲ್ಲಿಟ್ಟು ಬೇಯುತ್ತಿದ್ದಾಳೆ ಎನಿಸಿ ಸುಮಾಳ ಹೊಟ್ಟೆಗೆ ಬೆಂಕಿ ಬಿದ್ದು, ಕಣ್ಣಲ್ಲಿ ನೀರು ತುಂಬಿತು.
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ “ಹಾಡು ಗುಬ್ಬಿ ಪಾಡು!”