ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಬೇಲೂರು ರಘುನಂದನ್ ಬರೆದ ಕಥೆ
ಶರಾಬು ಪಾಕೀಟು ಸಿಗೋದು ಶೆಟ್ರು ತೋಟದಿಂದ ಬರೋಬ್ಬರಿ ಐದು ಮೈಲಿ ದೂರ. ಮಳೆ ಬೇರೆ. ನಡ್ಕಂಡು ಹೋಗಿ ಇವಳು ಶರಾಬು ಕುಡ್ದು ಏಡಿ ಹಿಡಿದು ತರೋ ಹೊತ್ಗೆ ಕತ್ತಲು ಕವಿದಿರುತ್ತೆ. ಹಂಗಾದ್ರೆ ರಾತ್ರಿ ಮಿಣಕ ಮಿಣಕ ಅನ್ನೊ ದೀಪದ ಬೆಳಕಲ್ಲಿ ಒಲೆ ಮುಂದೆ ಹೋಗೋದು ಸಾಧ್ಯವಿಲ್ಲ ಅಂತ ಎಣಿಸಿ ಶೆಟ್ರ ಹೆಂಡ್ತಿ ಬರ ಬರ ಒಳಗೋದ್ಲು. ಅಟ್ಟದ ಮೇಲಿಟ್ಟಿದ್ದ ಶೆಟ್ರ ಬಾಟ್ಲಿಲಿ ಅರ್ಧ ಇನ್ನೊಂದು ಬಾಟ್ಲಿಗೆ ಸುರ್ಕಂಡು ಅಮ್ಮಯ್ಯಂಗೆ ತಂದುಕೊಟ್ಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೇಲೂರು ರಘುನಂದನ್ ಬರೆದ ಕತೆ ‘ಏಡಿ ಅಮ್ಮಯ್ಯ’
ಶ್ರೀನಿವಾಸ ಜೋಕಟ್ಟೆ ಬರೆದ ಈ ಭಾನುವಾರದ ಕತೆ
ಅಂತೂ ಎಂದಿಗಿಂತ ಸ್ವಲ್ಪ ಬೇಗನೆ ರೈಲು ಇಳಿದರೂ ಸ್ಟೇಷನ್ ಹೊರಗಡೆ ರಿಕ್ಷಾ ಹಿಡಿಯಲು ಕ್ಯೂ ಬೇರೆ. ಎಂದಿಗಿಂತಲೂ ಕ್ಯೂ ಸ್ವಲ್ಪ ಹೆಚ್ಚೇ ಇತ್ತು. ತೀರಾ ಅಗತ್ಯದ ಸಾಮಾನುಗಳನ್ನು ಹಿಡಿದುಕೊಂಡು ಮನೆಗೆ ಬಂದರೆ ಆಗಲೇ ಚಿಕ್ಕಪ್ಪ, ಚಿಕ್ಕಮ್ಮ ಮನೆಗೆ ಬಂದಿದ್ದರು. “ಹೇಗಿದ್ದೀರಿ? ಪ್ರಯಾಣ ಕಷ್ಟವಾಯಿತಾ…..?” ಇತ್ಯಾದಿ ಔಪಚಾರಿಕವಾಗಿ ವಿಚಾರಿಸಿ ವಿಜಯೇಂದ್ರ ಸ್ನಾನಕ್ಕೆ ಹೋದ. ಸಹನಾ ಎಲ್ಲರಿಗೂ ರಾತ್ರಿಯ ಊಟಕ್ಕೆ ತಯಾರಿ ನಡೆಸಿದಳು. ಇವಳು ಹಪ್ಪಳ ಕಾಯಿಸಿದರೆ ಎಲ್ಲಾ ಅಡುಗೆ ಮುಗಿದಂತೆ ಎಂದು ಚಿಕ್ಕಮ್ಮನಲ್ಲಿ ಹೇಳಿದ.
ಶ್ರೀನಿವಾಸ ಜೋಕಟ್ಟೆ ಬರೆದ ಕತೆ ‘ಗುಡ್ಡ’.
ನನ್ನ ಮೆಚ್ಚಿನ ನನ್ನ ಕಥಾ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಕತೆ
ಆ ಹೆಂಗಸು ಯಾವ ಮಾತನ್ನೂ ಆಡದೆ ಸುಮಾರು ಅರ್ಧ ಗಂಟೆ ಹಾಗೆಯೇ ಕುಳಿತಿದ್ದಳು. ಅಕ್ಕನ ಕಾಲಿಗೆ ನಮಸ್ಕಾರ ಮಾಡಿ ‘ಹೋಗಿ ಬರುತ್ತೇನಮ್ಮ’ ಎಂದಳು. ನನ್ನಲ್ಲಿ ಯಾವ ಮಾತನ್ನೂ ಆಡಲಿಲ್ಲ. ಮಗುವನ್ನು ಜೋಯಿಸರ ಕುರ್ಚಿಯ ಎದುರು ಸಾಷ್ಟಾಂಗ ನಮಸ್ಕಾರ ಮಾಡಿಸಿದಳು. ತಾನೂ ಆ ಕುರ್ಚಿಗೆ ನಮಸ್ಕರಿಸಿದಳು. ‘ಬಸ್ಸಿಗೆ ತಡಾವಾಯಿತೋ ಏನೋ’ ಎಂದು ತನ್ನಷ್ಟಕ್ಕೆ ಎಂಬಂತೆ ಅಕ್ಕನಿಗೆ ಮತ್ತೊಮ್ಮೆ ಹೇಳಿ ಅವಸರದಲ್ಲಿ ನಡೆದು ಹೋದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಬರೆದ ಕತೆ ಜೋಯಿಸರ ಕುರ್ಚಿ ಈ ಭಾನುವಾರದ ನಿಮ್ಮ ಓದಿಗೆ
ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು
ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ
ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೋಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ಧವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು.”
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ
ಮಹಾಂತೇಶ ನವಲಕಲ್ ಬರೆದ ಈ ಭಾನುವಾರದ ಕತೆ
ಬೀಜವನ್ನು ರಕ್ಷಿಸುವ ಇಂತಹ ಅಮೂಲ್ಯವಾದ ಸಂಪತ್ತನ್ನು ಮುಂದಿನ ಕಾಲ ಘಟ್ಟದವರೆಗೆ ಕೊಂಡೊಯ್ಯುವ ಸಮರ್ಥ ವ್ಯಕ್ತಿಯನ್ನು ತಾತ, ನಮ್ಮ ತಂದೆಯಲ್ಲಿ ಕಾಣಲಿಲ್ಲ ಸರ್. ತಂದೆಯವರು ಸ್ವಲ್ಪ ಅಶಿಸ್ತು ಮತ್ತು ಕುಡಿತವನ್ನು ಅವಲಂಬಿಸಿರುವ ವ್ಯಕ್ತಿ. ನಾನು ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕ್ ತೆಗೆದುಕೊಂಡರೂ, ಎಂಬಿಬಿಎಸ್ ಸೀಟು ದೊರಕಿದರೂ..”
ಎಚ್.ಆರ್.ರಮೇಶ್ ಬರೆದ ಈ ಭಾನುವಾರದ ಕತೆ
ಒಂದು ಕಂದು ಬಣ್ಣದ ನಾಯಿ ಅವನ ಜೊತೆಗೆ. ಅದರ ಮೂತಿ ಕಪ್ಪಾಗಿದೆ. ನೆಲವನ್ನು ಮೂಸುತ್ತ ಬರುತ್ತಿದೆ. ಮೊಣಕಾಲು ಮಟ್ಟದ ಬರ್ಮುಡ ಮತ್ತು ಟಿ ಶರ್ಟ್ ಧರಿಸಿದ್ದಾನೆ. ಅದರ ತುಂಬ ಆಕರ್ಷಣೀಯವಾದ ಬಣ್ಣದಲ್ಲಿ ಮುದ್ರೆಯನ್ನು ಒತ್ತಿರುವ ಚಿತ್ರಗಳು. ಮುದ್ರೆ ಒತ್ತಿರುವ ಕಪ್ಪು ಬಣ್ಣದ ಕೆಂಪು ಚುಕ್ಕಿಗಳಿರುವ ಜೀರುಂಡೆ ಮತ್ತು ಕಪ್ಪು ಬಣ್ಣದ ಮಣ್ಣಿನ ದೀಪಗಳಿರುವ ಚಿತ್ರಗಳು. ಜೀರುಂಡೆಗಳ ಸಾಲು ನೇರವಾಗಿದೆ.”
ಡರ್ಬನ್ ಇದಿನಬ್ಬ: ಬಸಳೆ ಮಾರುವವನ ಕೂಗು
ಇದಿನಬ್ಬ ನಚ್ಚಬೆಟ್ಟು ಬಳಿಯ ಊರಿಗೆ ಹೊರಡುವ ಮೂತಾಪನ ದೋಣಿಗೆ ಮೂತಮ್ಮನ ಸಹಾಯದಿಂದ ಏರಿದ. ದೋಣಿ ಫಾತಿಮಾರ ಗಂಡ ಇಸ್ಮಾಯಿಲರದ್ದೇ, ಅಂದರೆ ಶಾಮಣ್ಣ ಗೌಡರ ದೋಣಿಗೆ ಅವರೇ ಅಂಬಿಗ. ಸದ್ಯ ಮುಂಗೋಪಿ ತಂದೆಯ ಕೈಯಿಂದ ಮಗನನ್ನು ರಕ್ಷಿಸಿದೆನಲ್ಲ ಎಂಬ ಖುಷಿ ಹಲೀಮಾರಿಗೆ. ಆದರೆ ಖುಷಿ ಬಹಳ ದಿನ ಉಳಿಯಲಿಲ್ಲ.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಾದಂಬರಿಯ ಎರಡನೆಯ ಕಂತು
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕಥೆ
ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ