ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”
ಮಗುವಿಗೆ ಒಂದು ವರ್ಷ ತುಂಬಿದಾಗ ಮಾತನಾಡಲು ಶುರುಮಾಡಿತು. ಅವಳು ತನ್ನ ಮಗು ಅಮ್ಮ ಎನ್ನಲಿ ಎಂದು ಕಾಯುತ್ತಿದ್ದಳು. ಆದರೆ ಅದು “ಓನ್ಯಾಸಿ” ಎನ್ನತೊಡಗಿತು. ಇದ್ಯಾವ ಶಬ್ದ, ಭಾಷೆ ಎಂದು ಅವಳಿಗೆ ತಕ್ಷಣ ಹೊಳೆಯಲಿಲ್ಲ. ತನ್ನ ನೆನಪುಗಳನ್ನು ಹರವಿ ಪರಿಶೀಲಿಸಿದಾಗ ಅದು ರಾಜೀವ್ 747 ಅವಳಿಗೆ ಹೇಳಿದ ಮೊದಲ ಪದವಾಗಿತ್ತು. ನಾನೇ ಹೆತ್ತು ಹೊತ್ತು ಸಾಕಿದರೂ ಅವನ ಭಾಷೆ ಮಾತನಾಡುತ್ತಿದೆಯಲ್ಲ ಎಂದು ಅವಳಿಗೆ ದುಃಖವಾಯಿತು, ಸಿಟ್ಟೂ ಬಂತು.
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”
ಸಂಜೋತಾ ಪುರೋಹಿತ್ ಅನುವಾದಿಸಿದ ರಾಬರ್ಟ್ ಬಾರ್ರ್ ಕತೆ
ಹ್ಯಾಂಗಿಂಗ್ ಒವರ್‌ಲುಕ್ ತಲುಪಲು ಕೆಲವೇ ಹೆಜ್ಜೆಗಳು ಬಾಕಿಯಿದ್ದವು. ಅದನ್ನು ತಲುಪುವವರೆಗೂ ಆಕೆ ‘ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಮತ್ತೆ ಮತ್ತೆ ತನಗೊಬ್ಬಳಿಗೇ ಕೇಳಿಸುವಂತೆ ಹೇಳಿಕೊಂಡಳು. ಜಾನ್ ಬೋಡಮ್ಯಾನ್ ಶಿಥಿಲವಾಗಿದ್ದ ಆ ಗೋಡೆಯ ಮೇಲೆ ಕುಳಿತ. ಕೈಯ್ಯಲ್ಲಿದ್ದ ಕೋಲನ್ನು ಬಂಡೆಯ ಮೇಲಿಟ್ಟು ಆಕೆ ಅತ್ತಿಂದಿತ್ತ ಓಡಾಡಿದಳು. ಅವಳ ಹೆಜ್ಜೆಗಳಲ್ಲಿ ಭಯ ಇಣುಕುತ್ತಿತ್ತು.
ಸಂಜೋತಾ ಪುರೋಹಿತ್ ಅನುವಾದಿಸಿದ ಸ್ಕಾಟಿಶ್- ಕೆನಡಿಯನ್ ಕತೆಗಾರ ರಾಬರ್ಟ್ ಬಾರ್ರ್ ಕತೆ “ಒಂದು ಆಲ್ಪೈನ್ ವಿಚ್ಛೇದನ” ನಿಮ್ಮ ಓದಿಗೆ
ಮಹಮದ್ ರಫೀಕ್ ಕೊಟ್ಟೂರು ಬರೆದ ಈ ಭಾನುವಾರದ ಕಥೆ “ಅಮೀನಾ”
ಮುರುಳಿಯ ಹೆಸರು ಹೇಳುತ್ತಲೇ ಮೆತ್ತಗಾಗಿದ್ದ ಅಮೀನಾ ತನ್ನ ಕತೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಯೋಚಿಸಲಾರಂಭಿಸಿದಳು ‘ನಂಗೆ ನೆನಪಿರುವಂತೆ ನನ್ನ ಅಪ್ಪ ಲಾಡ್ ಸಾಬ್ ಗುಜುರಿ ಕೆಲಸ ಮಾಡುತ್ತಿದ್ದ, ದುಡಿದದ್ದಕ್ಕಿಂತ ಸೈಕಲ್ ತುಳಿದದ್ದೇ ಹೆಚ್ಚು. ಸೈಕಲ್ಲು ಚಲಿಸಿದರೆ ನಮ್ಮ ಬದುಕೂ ಚಲಿಸುತ್ತಿತ್ತು. ಅಮ್ಮಿ ಮನೇಲಿ ಬೀಡಿಯ ಜೊತೆ ನಮ್ಮ ಬದುಕನ್ನೂ ಕಟ್ಟುತ್ತಿದ್ದಳು…”
ಮಹಮದ್ ರಫೀಕ್ ಕೊಟ್ಟೂರು ಬರೆದ ಈ ಭಾನುವಾರದ ಕಥೆ
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕಥೆ “ಜಾದೂ”
‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್ ಸೇ ತಾಲಿ ಬಜಾವೋʼ ಅಂದ.
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ “ಜಾದೂ” ನಿಮ್ಮ ಓದಿಗೆ
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
2042 ಏಪ್ರಿಲ್ ಏಳನೇ ತಾರೀಕು. ಅಮ್ಮನನ್ನು ಕಳಿಸಿ ಒಂದು ವಾರವಾಗಿತ್ತು. ಹಳೆಯ ದೃಶ್ಯದ ಪುನರಾವರ್ತನೆ ಆಯಿತು. ಒಂದು ಬದಲಾವಣೆ ಎಂದರೆ ಅಮ್ಮ ಮನೆಯಲ್ಲಿ ಇರಲಿಲ್ಲ. ಬಂದವರು ಫಾರ್ಮಾಲಿಟಿ ಮುಗಿಸಿ ಚೆಕ್ ಹಾಗೂ ಸೂಟ್ಕೇಸ್‌ನೊಂದಿಗೆ ಅವನಿಯನ್ನು ಕರೆದುಕೊಂಡು ವಾಹನದಲ್ಲಿ ಹೊರಟರು. ಹೊರಡುವ ಮುನ್ನ ಅವನಿ ಕೇಳಿದಳು “ಅಮ್ಮನನ್ನು ಕಳಿಸುವೆ ಎಂದಲ್ಲವೇ ನನ್ನ ಸಹಿ ಪಡೆದದ್ದು… ಈ ಮಸಲತ್ತು ತಿಳಿದಿರಲಿಲ್ಲ, ಅದಕ್ಕೇನಾ ಎರಡು ಪೇಪರ್‌ಗೆ ಸಹಿ ಹಾಕಿಸಿಕೊಂಡದ್ದು… ಸರಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಗುಡ್ ಬೈ.” ಎಂದು ಹೊರಟು ಹೋದಳು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಹಳೆ ಪಾತ್ರೆ… ಹಳೆ ಕಬ್ಬಿಣ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ
ಸಾಲಿಗೆ ಹೋಗೋ ಮಕ್ಕಳಿಗಂತೂ ಈ ಕೊಲೆ ಸುದ್ದಿ ತಾವು ನೋಡಿದ ಸಿನೆಮಾ ಕಥಿ ಹಂಗ ಕಂಡಿತು. ಕೆಲವೊಬ್ಬರಂತೂ ‘ಪುಟಾಣಿ ಏಜಂಟ್’ ಆಗಿಬಿಟ್ಟರು. ಕೊಲೆಗಾರರನ್ನು ಹಿಡಿಲಿಕ್ಕೆ ಪೊಲೀಸರು ನಾಯಿ ತೊಗೊಂಡು ಬಂದಾರಂತ, ಅವು ಅಪರಾಧಿಗಳ ವಾಸನಿ ಹಿಡಿದು ಹುಡಿಕಿಕೊಂಡು ಊರು ಹೊರಗ ಹರೀತಿದ್ದ ನದಿ ತನಕ ಹೋಗಿ ನಿಂತವು ಅಂತೆಲ್ಲ ಮಾತಾಡಿಕೊಂಡರು. ಅದೇ ಸಾಲಿಯೊಳಗ ಐದನೇತ್ತಿ ಓದ್ತಿದ್ದ ಪುಟ್ಟಿ ಈ ಮಾತುಗಳನ್ನೆಲ್ಲ ಕೇಳಿಸಿಕೊಂಡಾಗ ಆಕಿಗೆ ಹಿಂದಿನ ರಾತ್ರಿ ಸಬ್ ಇನ್ಸಪೆಕ್ಟರ್ ರವಿ ಅವರ ಮನಿಗೆ ಬಂದಿದ್ದು ನೆನಪಾಯಿತು.
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಶಿಕ್ಷೆ” ನಿಮ್ಮ ಓದಿಗೆ
ಚೈತ್ರ ಬರೆದ ಈ ಭಾನುವಾರದ ಕಥೆ
ಸಮುದ್ರ ತೀರದಲ್ಲಿ ಗಾಳಿ. ಜನರೆಲ್ಲ ವಾಕಿಂಗ್ ಮಾಡಲು ಬಂದಿದ್ದಾರೆ. ಕರ್ಚೀಫುಗಳನ್ನು ಬೀಸುತ್ತಿದ್ದಾರೆ. ನಾಚಿಕೆಯಿಲ್ಲದ ಜನ. ಅವರನ್ನು ನೋಡುವುದು ನನ್ನ ಕೆಲಸ. ನಾಯಿಗಳೂ ಓಡಾಡುತ್ತಿವೆ. ಶಂಖಗಳನ್ನು ಮೂಸುತ್ತಿವೆ. ಸಮುದ್ರದ ಗಾಳಿ ಮೂಗನ್ನು ಹೊಗುತ್ತಿತ್ತು. ಸಮುದ್ರ ಕಳೆ ನೀರಿನಲ್ಲಿ ತೇಲಾಡುತ್ತಿತ್ತು. ತಿಮಿಂಗಲವೊಂದು ಮೇಲೆ ಬಂಬಂದು ತಿರುಗಿ ಮರಳಿ ಹೋಗುತ್ತಿತ್ತು. ಪಕ್ಕದ ಗುಡ್ಡದ ಮೇಲೆ ಗಾಳಿಗೆ ಮರಗಳು ಓಲಾಡುತ್ತಿದ್ದವು. ಸೂರ್ಯ ಮುಳಗುತ್ತಿದ್ದ. ಬೇಡ ಎಂದರೆ ಜನ ಮನೆಯಲ್ಲಿ ಕೂತಾರೆಯೆ? ಯಾರೋ ಬಲೂನು ಮಾರುತ್ತಿದ್ದಾರೆ.
ಚೈತ್ರ ಬರೆದ ಕತೆ “ಭಾಗ್ಯ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ
ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ
ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಈ ಭಾನುವಾರದ ಕತೆ
ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಮಯ ಮುಂದುವರಿಯಲಾಗಲಿಲ್ಲ ಅಕರಿಗೆ. ಭಾವನೆಯ ನಿರಂತರತೆಗೆ ಒಗ್ಗಿಹೋಗಿದ್ದ ಅವಳಿಗೆ ಭಾವನೆಗಳನ್ನು ತುಂಡುತುಂಡಾಗಿಸಿ ಜೋಡಿಸಿಕೊಳ್ಳುವ ಬಗೆ ಅರ್ಥವಾಗುತ್ತಲೇ ಇರಲಿಲ್ಲ. ಪಾತ್ರವೇ ತಾನಾಗಿ, ಪರಕಾಯಪ್ರವೇಶ ಮಾಡಿ, ಅಭಿನಯಿಸುತ್ತಿದ್ದ ಅವಳಿಗೆ ಬಿಡಿ ಬಿಡಿ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದು ಇಷ್ಟವಾಗುತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಅಸಹನೀಯ ಎನಿಸತೊಡಗಿತ್ತು. ಸಂಪಾದನೆಯೇನೋ ಆಗುತ್ತಿತ್ತು. ಆದರೆ ಕೆಲಸದಿಂದ ದೊರೆಯುವ ಆನಂದ ಕಳೆದುಹೋಗಿತ್ತು.
ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಕತೆ “ಕರುಳಬಳ್ಳಿ ಬಾಡಿಗೆಗಿದೆ!”