ಆಗ ಎನ್‌ಎಸ್‌ಡಿಯಲ್ಲಿ ಅಲ್ಕಾಜೀ ಎನ್ನುವವರು ಮುಖ್ಯಸ್ಥರಾಗದ್ದಿರು. ಶ್ರೀರಂಗರ ಕಾಗದದಿಂದಾಗಿ ಪ್ರಸನ್ನನಿಗೆ ಎನ್‌ಎಸ್‌ಡಿಯಲ್ಲಿ ಪ್ರವೇಶ ಸಿಕ್ಕಿತು. ಎನ್‌ಎಸ್‌ಡಿ ಎಂದರೆ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮ. ದೆಹಲಿಯಲ್ಲಿರುವ ಅತಿ ಪ್ರತಿಷ್ಠಿತ ನಾಟಕ ಕಲಿಸುವ ಶಾಲೆ. ಅದಕ್ಕೆ ಸೀಟುಗಳು ಬಹಳ ಕಡಿಮೆ ಇರುತ್ತದ್ದಿವು. ಇಡಿಯ ಭಾರತಕ್ಕೆ 8-10 ಸೀಟುಗಳು ಮಾತ್ರ ಇರುತ್ತದ್ದಿವು. ನಮ್ಮ ಈಗಿನ ಕಾಲದ ಅನೇಕ ಹೊಸ ಬಗೆಯ ಚಿತ್ರಗಳನ್ನು ಮಾಡುವ ನಿರ್ದೇಶಕರು ಮತ್ತು ನಟರು ಅಲ್ಲಿಂದಲೇ ಬಂದವರು. ಈಗ ಎನ್‌ಎಸ್‌ಡಿಯ ಬ್ರಾಂಚ್‌ಗಳು ದೇಶದ ನಾನಾ ಕಡೆ ಇವೆ. ಬೆಂಗಳೂರಿನಲ್ಲೂ ಒಂದಿದೆ.
ಟಿ.ಎನ್.‌ ಸೀತಾರಾಮ್‌ ಅವರ ಆತ್ಮಕಥನ “ಬದುಕಿನ ಪುಟಗಳು” ಕೃತಿಯ ಕೆಲವು ಪುಟಗಳು

ಆ ನಾಟಕ ಪ್ರದರ್ಶನಕ್ಕೆ ಎಲ್ಲರಿಂದ ದುಡ್ಡು ಸಂಗ್ರಹಿಸಿ ಅವರಿಗೆ ಟಿಕೆಟ್‌ ಕೊಡುವ ಐಡಿಯಾ ಕೊಟ್ಟಿದ್ದು ನಾಟಕಕಾರ, ನಿರ್ದೇಶಕ ಪ್ರಸನ್ನ. ಬಹಳ ಬುದ್ಧಿವಂತ. ಬಿ.ಎಸ್ಸಿ.ಯಲ್ಲಿದ್ದಾಗ ನಮ್ಮ ಜೊತೆಯೇ ಇದ್ದ. ಆಮೇಲೆ ಕೆಮಿಸಿ ವಿಷಯದಲ್ಲಿ ಎಂಎಸ್ಸಿ ಕಲಿಯುವುದಕ್ಕೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಕಾನ್‌ಪುರ್‌ಗೆ ಹೋದ. ಎಷ್ಟು ದೂರ ಹೋದರೂ ನಾಟಕದ ಸಹವಾಸ ಬಿಡುವುದಕ್ಕೆ ಅವನಿಂದ ಆಗಲಿಲ್ಲ. ಆಗಾಗ ಇಲ್ಲಿಗೆ ಬರುತ್ತದ್ದಿ. ನಾವು ನಾಟಕ ಪ್ರದರ್ಶನ ನೀಡುವುದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತದ್ದಿ.

ನಾನು ಆಗ ದೊಡ್ಡಬಳ್ಳಾಪುರದಲ್ಲಿ ಕೃಷಿ ಮಾಡುತ್ತಿದ್ದೆ. ಯಾವುದೋ ಒಂದು ಶನಿವಾರ ನನ್ನನ್ನು ಹುಡುಕಿಕೊಂಡು ಊರಿಗೆ ಬಂದ. ನಮ್ಮ ಜೊತೆ ಕುಳಿತು ಊಟ ಮಾಡಿದ. ಆಮೇಲೆ ಮಾತನಾಡುವಾಗ ಒಂದು ಆಘಾತಕರ ಸುದ್ದಿಯನ್ನು ಹೇಳಿದ.

`ನಾನೊಂದು ಬಹಳ ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಐಐಟಿ ಬಿಟ್ಟುಬಿಡೋಣ ಎಂದುಕೊಂಡಿದ್ದೇನೆ. ನಾನು ಮುಂದುವರಿಸುವುದಿಲ್ಲ ಎಂದು ಪತ್ರ ಕೂಡ ಬರೆದುಕೊಟ್ಟು ಬಂದಿದ್ದೇನೆ’ ಎಂದು ಹೇಳಿದ. ನನಗೆ ಆಶ್ಚರ್ಯವಾಯಿತು. ಅವನ ಕುಟುಂಬ ಎಲ್ಲಾ ನನಗೆ ತಿಳಿದಿತ್ತು. ತಂದೆ, ತಾಯಿ ಎಲ್ಲರೂ ಅವನು ಕಾನ್‌ಪುರದಲ್ಲಿ ಕೆಮಿಸಿ ಎಂ.ಎಸ್ಸಿ. ಮಾಡಬೇಕು ಎಂಬ ಆಸೆಯಲ್ಲಿ ಇದ್ದರು. ಇದನ್ನೆಲ್ಲಾ ಯೋಚಿಸಿ ನಾನು `ಯಾಕಯ್ಯಾ, ಮುಂದೇನು ಮಾಡುತ್ತೀಯಾ’ ಎಂದು ಕೇಳಿದೆ.

`ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ ಸೇರಬೇಕು. ನೀವು ಶ್ರೀರಂಗರಿಗೆ ಹೇಳಬೇಕು’ ಎಂದ. ಶ್ರೀರಂಗರು ಆಗ ಎನ್‌ಎಸ್‌ಡಿಯ ಮ್ಯಾನೇಜಿಂಗ್‌ ಕಮಿಟಿಯಲ್ಲಿ ಇದ್ದರು. ನನ್ನ ಬಗ್ಗೆ ಅವರಿಗೆ ತುಂಬಾ ಅಭಿಮಾನ. ನಾನು ಒಂದು ಮಾತು ಹೇಳಿದರೆ ಅದನ್ನು ತೆಗೆದುಹಾಕಲಾರರು ಅನ್ನುವುದು ಪ್ರಸನ್ನನ ಆಲೋಚನೆ. ಸರಿ ಎಂದು ಮರುದಿನ ಬೆಳಿಗ್ಗೆ ಪ್ರಸನ್ನನನ್ನು ಕರೆದುಕೊಂಡು ಶ್ರೀರಂಗರ ಮನೆಗೆ ಹೋದೆ. ಅವರ ಮನೆ ಮಲ್ಲೇಶ್ವರದಲ್ಲಿತ್ತು.


ನಮ್ಮನ್ನು ನೋಡಿದವರೇ, `ಬರ್ರೀ ಬರ್ರೀ’ ಎಂದರು. ಪತ್ನಿಯನ್ನು ಕರೆದು ಮೂವರಿಗೂ ಅರ್ಧರ್ಧ ಚಾ ಕೊಡು ಎಂದರು. `ಯಾರಿವರು, ಏನು ಬಂದಿದ್ದು’ ಎಂದು ಕೇಳಿದರು. ನಾನು ಅವರ ಬಳಿ, `ನೋಡಿ ಸರ್‌, ನೀವೇ ಅವನಿಗೆ ಬುದ್ಧಿ ಹೇಳಬೇಕು. ಕಾನ್‌ಪುರದಲ್ಲಿ ಎಂ.ಎಸ್ಸಿ. ಕೆಮಿಸಿ ಓದುವುದು ಬಿಟ್ಟು ನಾಟಕ ಮಾಡಬೇಕು ಎಂದು ಬಂದಿದ್ದಾನೆ. ಎನ್‌ಎಸ್‌ಡಿ ಸೇರಬೇಕು ಎಂದು ಆಸೆ ಪಡುತ್ತಿದ್ದಾನೆ’ ಎಂದೆ.

ಶ್ರೀರಂಗರು ಅವನನ್ನೊಮ್ಮೆ ನೋಡಿ, `ಬುದ್ಧಿ ಯಾಕ್ರೀ ಹೇಳೋದು. ಅವನು ಕರೆಕ್ಟಾಗಿ ಮಾಡ್ಯಾನ. ಆ ಕೆಮಿಸಿಗಿಂತ ನಾಟಕ ಛಲೋ ಅಲ್ಲೇನು’ ಎಂದರು. ಮತ್ತೆ `ನಾನು ಒಂದು ಕಾಗದ ಬರ್ಕೊಡ್ತೀನಿ, ಅದನ್ನು ಎನ್‌ಎಸ್‌ಡಿಯಲ್ಲಿ ಕೊಟ್ಟುಬಿಡಿ’ ಎಂದು ಬರೆದುಕೊಟ್ಟರು. ಆಗ ಎನ್‌ಎಸ್‌ಡಿಯಲ್ಲಿ ಅಲ್ಕಾಜೀ ಎನ್ನುವವರು ಮುಖ್ಯಸ್ಥರಾಗದ್ದಿರು. ಶ್ರೀರಂಗರ ಕಾಗದದಿಂದಾಗಿ ಪ್ರಸನ್ನನಿಗೆ ಎನ್‌ಎಸ್‌ಡಿಯಲ್ಲಿ ಪ್ರವೇಶ ಸಿಕ್ಕಿತು.
ಎನ್‌ಎಸ್‌ಡಿ ಎಂದರೆ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮ. ದೆಹಲಿಯಲ್ಲಿರುವ ಅತಿ ಪ್ರತಿಷ್ಠಿತ ನಾಟಕ ಕಲಿಸುವ ಶಾಲೆ. ಅದಕ್ಕೆ ಸೀಟುಗಳು ಬಹಳ ಕಡಿಮೆ ಇರುತ್ತದ್ದಿವು. ಇಡಿಯ ಭಾರತಕ್ಕೆ 8-10 ಸೀಟುಗಳು ಮಾತ್ರ ಇರುತ್ತದ್ದಿವು. ನಮ್ಮ ಈಗಿನ ಕಾಲದ ಅನೇಕ ಹೊಸ ಬಗೆಯ ಚಿತ್ರಗಳನ್ನು ಮಾಡುವ ನಿರ್ದೇಶಕರು ಮತ್ತು ನಟರು ಅಲ್ಲಿಂದಲೇ ಬಂದವರು. ಈಗ ಎನ್‌ಎಸ್‌ಡಿಯ ಬ್ರಾಂಚ್‌ಗಳು ದೇಶದ ನಾನಾ ಕಡೆ ಇವೆ. ಬೆಂಗಳೂರಿನಲ್ಲೂ ಒಂದಿದೆ.

ಮುಂದೆ ವಾರ್ಷಿಕ ರಜೆ ಇದ್ದಾಗ, ಪ್ರಸನ್ನ ಒಮ್ಮೆ ಬೆಂಗಳೂರಿಗೆ ಬಂದು ಜಡಭರತರ `ಕದಡಿದ ನೀರು’ ನಾಟಕ ಮಾಡಿಸಿದ. ಅದೊಂದು ಅದ್ಭುತ ಪ್ರದರ್ಶನವಾಯಿತು. ಹರಿಕೃಷ್ಣ, ವಿ. ರಾಮಮೂರ್ತಿ, ಸೋಮಶೇಖರ್‌ ರಾವ್‌ ಇವರೆಲ್ಲ ಮುಖ್ಯ ಪಾತ್ರಗಳಲ್ಲದ್ದಿರು. ಅದು ಹೃದಯವನ್ನು ಕರಗಿಸುವಂತಹ ನಾಟಕ. ನಾನು ಅದನ್ನು ಮೂರು ಬಾರಿ ನಾಡಿದ್ದೆ. ಆ ದೃಶ್ಯಗಳು ಈಗಲೂ ನನ್ನ ಮನಸ್ಸಿನಲ್ಲಿ ನಿಂತಿವೆ. ಪ್ರಸನ್ನ ವಯಸ್ಸಿನಲ್ಲಿ ನನಗಿಂತ ಚಿಕ್ಕವನಾಗದ್ದಿರೂ ಅವನ ಪ್ರತಿಭೆಯನ್ನು ನಾನು ತುಂಬಾ ಗೌರವದಿಂದ, ವಿಶ್ವಾಸದಿಂದ ನೋಡಿ ಒಮ್ಮೆ ಅವನಿಗೆ ನಮಸ್ಕರಿಸಿದ್ದೆ.
ನಂತರದ ದಿನಗಳಲ್ಲಿ ಪ್ರಸನ್ನ ಭಾರತದ ರಂಗಭೂಮಿಯ ಹೀರೋ ರೀತಿ ಆದ. ಅವನು ಮುಟ್ಟಿದ ನಾಟಕದ ಪ್ರದರ್ಶನಗಳೆಲ್ಲವೂ ಚಿನ್ನ. ಎಂದಿಗೂ ಸೋಲಾಗುತ್ತಿರಲಿಲ್ಲ. `ಗೆಲಿಲಿಯೋ’, `ಹುತ್ತವ ಬಡಿದರೆ’, ಗಾರ್ಕಿಯ `ತಾಯಿ’ ಮುಂತಾದ ಪ್ರದರ್ಶನಗಳು ಎಂದೆಂದಿಗೂ ನೆನಪಿಟ್ಟುಕೊಳ್ಳುವಂತಹದು. ಅವನು ಮತ್ತು ಸಿ.ಜಿ.ಕೆ. ಕಟ್ಟಿದ ಸಮುದಾಯ ತಂಡ ಮತ್ತು ಸಮುದಾಯ ಜಾಥಾ ಒಂದು ರೀತಿಯ ವಿಶೇಷ ಸಂಚಲನವನ್ನು ಕರ್ನಾಟಕದಲ್ಲಿ ಸೃಷ್ಟಿಸಿದವು. ನಂತರ `ದೇಸೀ’ ಎಂಬ ಸಂಸ್ಥೆಯನ್ನು ಹೆಗ್ಗೋಡಿನಲ್ಲಿ ಕಟ್ಟಿಕೊಂಡ. ಅಲ್ಲಿ ವಾಸ ಮಾಡ ತೊಡಗಿದ. ಹೆಗ್ಗೋಡಿನಲ್ಲಿಯೇ ಕೆ.ವಿ. ಸುಬ್ಬಣ್ಣನವರು ಕೂಡ ಇದ್ದದ್ದು. ಖ್ಯಾತ ವಿಮರ್ಶಕ ಡಿ.ಆರ್‌. ನಾಗರಾಜ್‌ ಆಗ ತಮಾಷೆಯಾಗಿ ಹೇಳುತ್ತಿದ್ದ:
`ಹೆಗ್ಗೋಡಿಗೆ ಹೋದರೆ, ಪ್ರಾಣೇಶಾಚಾರ್ಯರನ್ನು ನೋಡಿದ ಮೇಲೆ ನಾರಣಪ್ಪನನ್ನೂ ನೋಡಬೇಕು’ ಎಂದು. ಪ್ರಾಣೇಶಾಚಾರ್ಯರು ಎಂದರೆ ಕೆ.ವಿ. ಸುಬ್ಬಣ್ಣ, ನಾರಣಪ್ಪ ಎಂದರೆ ಪ್ರಸನ್ನ. ಅವೆರಡೂ ಅನಂತಮೂರ್ತಿಯವರ `ಸಂಸ್ಕಾರ’ ಕಾದಂಬರಿಯ ಪಾತ್ರಗಳು. ಒಂದು ಉತ್ತರ ಧ್ರುವವಾದರೆ ಮತ್ತೊಂದು ದಕ್ಷಿಣ ಧ್ರುವ. ಕಡೆಗೆ ಎರಡು ಪಾತ್ರಗಳೂ ಒಂದೇ ರೀತಿ ವರ್ತಿಸುವುದು ಆ ಕಾದಂಬರಿಯ ಮುಖ್ಯ ಘಟ್ಟ.

(ಕೃತಿ: ಬದುಕಿನ ಪುಟಗಳು (ಆತ್ಮಕಥನ), ಲೇಖಕರು: ಟಿ.ಎನ್.‌ ಸೀತಾರಾಮ್‌, ಪ್ರಕಾಶಕರು: ಸಾವಣ್ಣ ಬುಕ್ಸ್, ಬೆಲೆ: 550/- )