Advertisement

Month: May 2024

ಕಾಡಿನ ಮನೆಯ ಅಕ್ಕರೆಯ ಕಾವು

ಕಾಜುಗಾರ ಅವರು ಕಾಜುವಾಡಾದ ಮನೆಯನ್ನು ಶಿಕ್ಷಕರಿಗೆ ಬಿಟ್ಟುಕೊಟ್ಟಿದ್ದಾರೆ.  ಸದ್ಯಕ್ಕೆ ಅವರ ಮನೆ ಶಿಕ್ಷಕರಿಂದ ತುಂಬಿದೆ. ನಾಲ್ಕೈದು ಜನ ಶಿಕ್ಷಕ ,ಶಿಕ್ಷಕಿಯರು, ಒಂದೇ ಗ್ಯಾಸ್ ಒಲೆಯಲ್ಲಿ ತಯಾರಾಗುವ ಸಾಮೂಹಿಕ ಭೋಜನ. ಅದು ಬೇಕು ಇದು ಇರಲಿ ಎಂಬ ಯಾವುದೇ ತಗಾದೆ ಇಲ್ಲ.  ಇದ್ದ ಸಾಮಾನು ಗಮನಿಸಿ ಆಯಾ ದಿನದ ಮೆನು ರೆಡಿಯಾಗುತ್ತಿತ್ತು. ಏಕೆಂದರೆ ಒಮ್ಮೊಮ್ಮೆ ಅಡುಗೆಗೆ ಬೇಕಾದ ಪದಾರ್ಥಗಳು ಅಣಶಿಯಲ್ಲಿ ಸಿಗುತ್ತಿರಲಿಲ್ಲ. ಅದನ್ನು ದೂರದ ಕುಂಬಾರವಾಡಾ, ಜೋಯಿಡಾದಿಂದ ತರಿಸಬೇಕಿತ್ತು. ಇದ್ದ ಸಾಮಾನಿನಲ್ಲಿಯೆ ‘ಅಗ್ದಿ’ ಬೆಸ್ಟ ಎನಿಸಿದ ‘ಉಂಚಾ ಕ್ವಾಲಿಟಿ’ಯ ಸಾಮಾನು ತೆಗೆದು ಆರಿಸಿ ಅಂಗಡಿಯ ದಿನಕರ ಮಾಮಾ ಅವರು  ಮಾಸ್ತರರಿಗೆ..”

Read More

ಕೃಷ್ಣ ದೇವಾಂಗಮಠ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

‘ಪ್ರೇಕ್ಷಕರಿಗೆ ರಂಗಭೂಮಿಯೇನೂ ಅನಿವಾರ್ಯವಲ್ಲ’

ರಂಗಭೂಮಿ ದಣಿದಿಲ್ಲ, ಬದಲಾಗಿ ತುಂಬ ಆ್ಯಕ್ಟಿವ್ ಆಗಿದೆ. ಈ ಕ್ಷೇತ್ರದಲ್ಲಿ ‘ಕೊಬ್ಬು’ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್‌ನೆಸ್ ಅದು ಎಂದು ನಾವು ಗ್ರಹಿಸಬೇಕು.  ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವ ಪ್ರಕ್ರಿಯೆಯೇ ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ.  -ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಅವರು ಡಾ. ಶ್ರೀಪಾದ ಭಟ್ ಅವರ ಲೇಖನಕ್ಕೆ ಪ್ರತಿಕ್ರಿಯೆ ದಾಖಲಿಸಿದ್ದಾರೆ.

Read More

ಆಶಾ ರಘು ಬರೆದ ‘ಮಾಯೆ’ ಕಾದಂಬರಿಯ ತುಣುಕು

ವಿಶಾಲವಾದ ಕೋಣೆ. ಕೆತ್ತನೆಯ ಕುಸುರಿ ಮಾಡಲಾದ ದೊಡ್ಡ ಮಂಚ. ಮೆತ್ತೆ.. ಎರಡು ದೊಡ್ಡ ದೊಡ್ಡ ಗವಾಕ್ಷಿಗಳು. ಅವಕ್ಕೆ ತೆಳುಪರದೆ. ಇನ್ನುಳಿದ ಗೋಡೆಯ ಭಾಗಗಳಲ್ಲಿ ನಾಲ್ಕಾರು ನೃತ್ಯ ಭಂಗಿಗಳ ಚಿತ್ರಪಟಗಳು. ಮೆತ್ತೆಯ ಮೇಲೆ ನನ್ನ ಪಕ್ಕದಲ್ಲಿ ಕುಳಿತು, ನನ್ನ ಕೈಗಳನ್ನು ಅವಳ ಕೈಗಳಲ್ಲಿ ಹಿಡಿದು ಮುಗುಳುನಕ್ಕಳು. ನನಗೆ ಅವಳ ಜಾಗದಲ್ಲಿ ವೈಶಾಲಿಯನ್ನು ಕಲ್ಪಿಸಿಕೊಂಡು ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು. ಆಶಾ ರಘು ಬರೆದ  ‘ಮಾಯೆ’ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆಯ ಓದುಗರಿಗಾಗಿ ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ