Advertisement

Month: May 2024

ಕನಕ ಕನಸಿದ ‘ಕಲ್ಯಾಣ’: ಉದಾರಚರಿತದ ರೂಪಕ

ಕುರುಬ ಸಮುದಾಯದ’ಕನಕ’, ಕನಕದಾಸರಾಗಿದ್ದುದರ ಬಗ್ಗೆ ಅನೇಕ ಕಥನಗಳಿವೆ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು.

Read More

ವಚನ ನೀಡಿ ಮರೆತವರ ಕತೆ

ಎರಡನೆಯ ಅಧ್ಯಾಯ ಶುರುವಾಗುವುದು ರೇಚಲ್ ತೀರಿಕೊಂಡ ಹತ್ತು ವರ್ಷಗಳ ನಂತರ. ಮಣಿ ಹಾವು ಕಚ್ಚಿ ಮೃತನಾದಾಗ ಅವನ ಮಕ್ಕಳೆಲ್ಲ ಅಂತ್ಯಕ್ರಿಯೆಗಾಗಿ ಸೇರಿದಾಗ ಮತ್ತೆ ಸಲೋಮಿಯ ಹೆಸರಿಗೆ ಮನೆ ವರ್ಗಾಯಿಸುವ ಮಾತು ಬರುತ್ತದೆ. ಆಂಟನ್ ಆಮೋರಳ ಸಾಥ್ ನೀಡಿದರೂ ಹಿರಿಯಕ್ಕ ಆಸ್ಟ್ರಿಡ್ ಅಸಮ್ಮತಿ ಸೂಚಿಸುತ್ತಾಳೆ. ಅಷ್ಟಕ್ಕೂ ಸಲೋಮಿಯ ಹೆಸರಿನಲ್ಲಿಯೇ ಇರಬೇಕು ಎಂಬ ಹಠ ಏಕೆ?
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ ‘ದ ಪ್ರಾಮಿಸ್’ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಕಾವ್ಯಾ ಕಡಮೆ

Read More

ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ತೆಲುಗು ಕತೆ

ನಿಜ ಹೇಳಬೇಕೆಂದರೆ ಎಲ್ಲಿಕಾಟ್ ಸಿಟಿಯಲ್ಲಿ ಮನೆ ತೆಗೆದುಕೊಳ್ಳೋಣವೆಂದು ಪ್ರಸಾದ್ ಹೇಳಿದಾಗ ರಾಧಿಕಳೇ ಬೇಡ ಅದು ಮಿನಿ ಭಾರತ, ಎಲ್ಲಿ ನೋಡಿದರೂ ಮುಖ್ಯವಾಗಿ ತೆಲುಗಿನವರೇ. ಪ್ರತಿಯೊಂದಕ್ಕೂ ಮಕ್ಕಳು, ಮಹಿಳೆಯರು, ಗಂಡಸರ ನಡುವೆ ಅನಗತ್ಯ ಸ್ಪರ್ಧೆ. ಅದಕ್ಕೇ ಭಾರತೀಯರು ಕಡಿಮೆ ಇರುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳೋಣ ಎಂದು ಪಟ್ಟುಹಿಡಿದು ಇಲ್ಲಿಗೆ ಬಂದಿದ್ದಾರೆ.

Read More

ದಿನಾಚರಣೆಗಳ ಹಿಂದಿರುವ ಮಹಾನ್ ಆಶಯಗಳ ಮರೆಯದಿರೋಣ

ಒಂದು ಲೆಕ್ಕಾಚಾರದ ಪ್ರಕಾರ ವರ್ಷದ ಪ್ರತೀ ದಿನವೂ ಯಾವುದಾದರೂ ಒಂದು ದೇಶದಲ್ಲಿ ವಿಶೇಷ ದಿನವಾಗಿ ಆಚರಣೆಗೆ ಸಿದ್ಧವಾಗಿರುತ್ತದೆ. ನವೆಂಬರ್ ಹದಿನಾಲ್ಕು ಭಾರತದಲ್ಲಿ ಮಕ್ಕಳ ದಿನಾಚರಣೆ. ಎಲ್ಲಾ ಮಕ್ಕಳಿಗೂ ವಿಧವಿಧವಾದ ಉಡುಗೆಗಳನ್ನು ತೊಡಿಸಿ ಪ್ರಪಂಚದಾದ್ಯಂತ ಎಲ್ಲಾ ಭಾರತೀಯರು ಮಕ್ಕಳ ದಿನಾಚರಣೆಯನ್ನು ಆಚರಿಸಿ ಅವರವರ ಮಕ್ಕಳ ಛಾಯಾಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು.

Read More

ಕೊನೆಯ ಬುಲೆಟ್ಟು ಹಾರುವ ಮುನ್ನ….

ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ