Advertisement

Month: May 2024

ಮಧ್ಯಮ ವರ್ಗದ ತಳಮಳಕ್ಕೆ ಕಥನರೂಪ ಕೊಡುವ ʻತ್ರೀ ಮಂಕೀಸ್ʼ

ಮಗ ಇಸ್ಮಾಯಿಲ್ ಗೆ ಮನೆಯ ಹತ್ತಿರ ಇರುವ ರೈಲ್ ಲೈನಿನ ಬದಿಯಲ್ಲಿರುವ ಸಿಮೆಂಟ್‌ ಕಂಬಗಳ ಕಾಂಪೌಂಡ್ ಮೇಲೇರಿ ದಾಟಿ ಹೋಗುವ ಅಭ್ಯಾಸ. ಅವನ ಮನಸ್ಸಿನ ಪರಿಯನ್ನು ನಿರೂಪಿಸುವ ಈ ದೃಶ್ಯ ರೂಪಕ್ಕೆ ಬೆಂಬಲವಾಗಿ, ಓಡುವ ರೈಲಿನ ಶಬ್ದವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ರೈಲಿನಲ್ಲಿ ಕುಳಿತು ಗಾಳಿಗೆದುರಾಗಿ ಮುಖವಿಟ್ಟು, ಮನಸ್ಸು ಹರಿಬಿಟ್ಟು‌, ತನ್ನದೇ ಲೋಕ ರಚಿಸಿಕೊಳ್ಳುವ ಸ್ಥಿತಿಯಲ್ಲಿದ್ದಾನೆ ಅವನು.

Read More

ಮೊದಲ ಮಹಿಳಾ ಭಾಗವತರ ಆತ್ಮಕಥೆಯ ಒಂದೆರಡು ಪುಟಗಳು

ಪುರುಷರ ಪ್ರಾಬಲ್ಯವೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ ಮಹಿಳೆಯರು ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರಾಗಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಸುಮಾರು ಐದು ದಶಕಗಳ ಹಿಂದೆಯೇ ಲೀಲಾವತಿ ಬೈಪಡಿತ್ತಾಯರು  ಮಹಿಳಾ ಭಾಗವತರಾಗಿ ರಂಗಸ್ಥಳದಲ್ಲಿ ಪಡಿಯೇರಿದ್ದಷ್ಟೇ ಅಲ್ಲದೆ, ಮೇಳದ ತಿರುಗಾಟಕ್ಕೂ ಸೈ ಎಂದವರು. ಯಕ್ಷಗಾನ ಕ್ಷೇತ್ರದ ಮೊದಲ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯರ ಜೀವನ ಕಥನವನ್ನು ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ  ನಿರೂಪಿಸಿದ್ದಾರೆ. ‘ಯಕ್ಷಗಾನ ಲೀಲಾವಳಿ’ ಎಂಬ ಆ ಕೃತಿಯು ಕೇವಲ ಆತ್ಮಕಥೆಯಷ್ಟೇ ಆಗಿರದೆ, ಯಕ್ಷಗಾನದ ಇತರ ಆಯಾಮಗಳನ್ನೂ ತೆರೆದಿಡುವ ಕೃತಿ. ಈ ಕೃತಿಯ ಒಂದು ಅಧ್ಯಾಯ ಇಲ್ಲಿದೆ. 

Read More

ಸುಜಾತ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ

“ನಂಜನ್ನೇ ಸುರಿದು ಹಚ್ಚಿದ ಬೆಂಕಿಯಲಿ
ವಿಷಕನ್ಯೆಯಾಗಿಯೇ ಅಗ್ನಿಯುಗುಳುತ
ಸುಟ್ಟುಕೊಳ್ಳುತ್ತಲೆ ಬೆಳಗಿಕೊಳ್ಳುತ್ತಾ
ನೋವುಣ್ಣುತ್ತಲೆ ಬೆಳಕಾದವಳನು
ಮಳೆ ಚಳಿಯೇನು ಮಾಡಿತ್ತು!?”- ಸುಜಾತ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ

Read More

ಗುಲಾಬ್ ಜಾಮೂನು ಕೊಡಿಸಿದ್ದ ಬಾಬುಮಾಮಾ

ಶ್ರೀಮಂತರಿಗೆ ಮತ್ತು ಮಧ್ಯಮವರ್ಗದವರಿಗೆ ಸಕ್ಕರೆಯ ಹುಚ್ಚು ಹಿಡಿದಿತ್ತು. ಬಾಬು ಮಾಮಾ ತನ್ನದೇ ರೀತಿಯಲ್ಲಿ ಪ್ಲ್ಯಾನ್ ಮಾಡಿದ. ನಾವು ಮೊದಲಿಗೆ ಇದ್ದ ಮದ್ದಿನಖಣಿ ಓಣಿಯಲ್ಲಿನ ನಮ್ಮ ಪರಿಚಯಸ್ಥರ ಮನೆಗೆ ಹೋಗಿ ‘ನಮಗೆ ಸಕ್ಕರೆ ಬೇಡ, ನಿಮಗೆ ಬೇಕಾದರೆ ತಂದು ಕೊಡುವುದಾಗಿ ತಿಳಿಸುತ್ತಿದ್ದ. ಅವರು ಕೈಚೀಲದೊಂದಿಗೆ ರೇಷನ್ ರೇಟಿಗಿಂತಲೂ ಹೆಚ್ಚಿಗೆ ಹಣ ಕೊಡುತ್ತಿದ್ದರು. ಆ ಮೇಲೆ ಕೈಚೀಲವೂ ಇಲ್ಲ, ಸಕ್ಕರೆಯೂ ಇಲ್ಲ. ಹೀಗೆ ದಿನಕ್ಕೊಬ್ಬರಾದರೂ ನಮ್ಮ ಮನೆ ಹುಡುಕಿಕೊಂಡು ಬರುತ್ತಿದ್ದರು….

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ