Advertisement

Month: May 2024

ಮರುಭೂಮಿಯ ಹೂ ರಕ್ಷಿಸಿದ “ಸಫಾ” ಎಂಬ ಮತ್ತೊಂದು ಹೂ

ವಾರಿಸ್ ಜಿಬೂತಿಗೆ ಬಂದಾಗ ಸಫಾಳಿಗೆ ಅವಳ ಸಾಂಗತ್ಯ ಸ್ವರ್ಗವನ್ನೇ ಸಿಕ್ಕಿದ ಹಾಗೆ ಮಾಡುತ್ತದೆ. ಹೋಟೆಲಿನಲ್ಲಿ ಸಿಗುವ ಬರ್ಗರ್ ಮತ್ತು ಇತರೇ ಮಾಂಸದ ಅಡುಗೆಗಳು ಅವಳಿಗೆ ತೀರಾ ಕೈಗೆಟುಕದ ವಸ್ತುಗಳಾಗಿದ್ದ ಕಾರಣ ಅತ್ಯಂತ ಖುಷಿಯಿಂದ ಆಸ್ವಾದಿಸುತ್ತಾಳೆ. ಆದರೆ ಅವಳು ಹೋಟೆಲಿನ ಈಜುಕೊಳದಲ್ಲಿ ಈಜುಡುಗೆ ಧರಿಸಿ ಈಜುವುದನ್ನು ನೋಡಿದಾಗ ಅಚಾನಕ್ಕಾಗಿ ಬಂದ ಅವಳ ತಂದೆ ಕ್ರುದ್ಧನಾಗುತ್ತಾನೆ. ಆದರೆ ಹಣ ಅವನ ಬಾಯನ್ನು ಸುಲಭವಾಗಿ‌ ಮುಚ್ಚಿಸುತ್ತದೆ. ನಿಧಾನಕ್ಕೆ ಸಫಾಳ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದ ವಾರಿಸ್ ಸಫಾಳನ್ನು ಕರೆದೊಯ್ಯುವ ಪ್ರಯತ್ನ ಮುಂದುವರೆಸುತ್ತಾರೆ.
ಗಿರಿಧರ್‌ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ

Read More

ಈ‌ ಒಂಟೆಗೇಕೆ ಮರಿಯ ಮೇಲಿಷ್ಟು ಸಿಟ್ಟು..

ಚಿತ್ರದ ಕಥಾವಸ್ತು ಹುಬ್ಬೇರಿಸುವಂಥಾದ್ದು. ಒಂಟೆಯೊಂದು ಬಿಳಿ ಬಣ್ಣದ ಮರಿ ಹಾಕಲು ಎರಡು ದಿನ ತೆಗೆದುಕೊಂಡ ನಂತರ ಮರಿಗೆ ಪ್ರೀತಿ ನಿರಾಕರಿಸಿ ಹಾಲು ಕುಡಿಯಲು ಬಿಡುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಕೊನೆಗೆ ತಾಯಿ ಒಂಟೆಗೆ ಅದರ ಮರಿಯ ಮೇಲೆ ಪ್ರೀತಿ ಹುಟ್ಟಿಸುವುದಕ್ಕೆ ಪಿಟೀಲು ವಾದನ ಕೇಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ರೀತಿಯಲ್ಲಿ ಚಿತ್ರ ಸುಖಾಂತ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಮಂಗೋಲಿಯ ʻದ ಸ್ಟೋರಿ ಆಫ್‌ ವೀಪಿಂಗ್‌ ಕ್ಯಾಮೆಲ್‌ʼ ಸಿನಿಮಾದ ವಿಶ್ಲೇಷಣೆ

Read More

ಚಲಂ ಆತ್ಮಕತೆಯ ಒಂದಿಷ್ಟು ಪುಟಗಳು

ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್‍ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶ ವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಫಲ್ಯ. ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ.
ತೆಲುಗು ಬರಹಗಾರ “ಚಲಂ” ಅವರ ಆತ್ಮಕತೆಯನ್ನು ಕನ್ನಡದ ಕವಿ ಲಕ್ಕೂರು ಆನಂದ್‌ ಕನ್ನಡಕ್ಕೆ ತಂದಿದ್ದು ಅದರ ಕೆಲವು ಪುಟಗಳು ನಿಮ್ಮ ಓದಿಗೆ ಇಲ್ಲಿವೆ. 

Read More

ಅರುವತ್ತು ವರ್ಷಗಳ ರಾಜಕೀಯ ಅರಿವು

ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 40ನೆಯ ಕಂತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ