Advertisement

Month: April 2024

ನಿಂತಲ್ಲಿ ಕುಂತಲ್ಲಿ ಕಾಡುವ ಕಥೆ ಬರೆದ ದಾದಾ

ಇಲ್ಲಿರುವ ಎಲ್ಲಾ ಕತೆಗಳಿಗಿಂತ ಕೊನೆಯ ಕತೆ ‘ಎಲ್ಲೋ ಯಲ್ಲೋ’
ಕಥೆಯೇ ಯಾಕೆ ಜಾಸ್ತಿ ಇಷ್ಟವಾಯಿತು ಅಂದುಕೊಂಡರೂ ಯಾವುದ್ಯಾವುದೋ ಕಾರಣಗಳು ತೋಚುತ್ತವೆ. ಆದರೆ ಮುಖ್ಯವಾಗಿ ಇಷ್ಟವಾಗಿದ್ದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಸಹಜವಾದ ಗೆಳೆತನದ ರೀತಿ ಮತ್ತು ಒಬ್ಬಳು ಶಿಕ್ಷಕಿಯ ಗಂಡನಾಗಿ ಅವರ ಕಷ್ಟ‌ನಷ್ಟಗಳ ಬಗ್ಗೆ ಅರಿವಿರುವುದು. ಹೇಗೆ ಹುಡುಗ ಹುಡುಗ ಆತ್ಮೀಯ ಗೆಳೆಯರಾಗಿರಲು ಸಾಧ್ಯವೋ ಅದೇ ರೀತಿ ಹುಡುಗ ಹುಡುಗಿ ಕೂಡಾ ಅದೇ ಆತ್ಮೀಯತೆಯಲ್ಲಿರಲು ಸಾಧ್ಯ. ಸಮಾಜ ಈ ವಿಷಯದಲ್ಲಿ ಮುಂಚಿನಷ್ಟು ಮಡಿವಂತಿಕೆ ಇಟ್ಟುಕೊಂಡಿಲ್ಲವಾದರೂ ಪೂರ್ತಿ ಬದಲಾಗಿಯೂ ಇಲ್ಲ.
ಗಿರಿಧರ್‌ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ

Read More

ರಾಜಕೀಯ ಸ್ಥಿತಿಗೊಂದು ಪ್ರತಿಕ್ರಿಯೆ ಇರಾನ್‌ ನ ʻಕಾಂದಹಾರ್ʼ

ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದಿರಬೇಕಾಗಿತ್ತು. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇರಾನ್‌ ನ ʻಕಾಂದಹಾರ್ʼ ಸಿನಿಮಾದ ವಿಶ್ಲೇಷಣೆ

Read More

ನೆನಪುಗಳ ಮೆರವಣಿಗೆಯಲ್ಲಿ ಗಣಪತಿ ಬಪ್ಪಾ..

ಹಬ್ಬದ ದಿನ, ಕತ್ತಲೇರುತ್ತಿದ್ದಂತೆ ಮನೆ ತುಂಬಾ ಜನ. ಎಷ್ಟೆಂದರೆ, ೧೩ ಮನೆ ದಾಯ್ ಆಟಕ್ಕೆ ಬೇಕಾಗುವಷ್ಟು ಕೈ, ಮತ್ತೆ ಅವರಿಗೆ ಬೇಕಾದಂತೆ, ಕಾಫಿ ಚಾ ಮಾಡಲಿಕ್ಕೆ, ಹೊರಗಡೆ ನಿಲ್ಲುತ್ತಿದ್ದ ಮಂಡಕ್ಕಿ ಗಾಡಿಯಿಂದ ಮಸಾಲೆ ಮಂಡಕ್ಕಿ ತಂದು ಕೊಡೋಕೆ, ಮತ್ತೆ, ದೊಡ್ಡ-ದೊಡ್ಡ ಗಣಪತಿಗಳ ಮೆರವಣಿಗೆ ಬಂದಾಗ ಅವರಿಗೆ ಹೇಳಲಿಕ್ಕೆ ಬೇಕಾದಷ್ಟು ಜನ. ದಾಯ್ ಆಟದ ಮಂದಿ ಪಳಗಿದ ಕೈಗಳಾದ್ದರಿಂದ, ನಮ್ಮಂತ ಮಕ್ಕಳು ಒಂದೋ ಆಟಕ್ಕುಂಟು ಲೆಕ್ಕಕಿಲ್ಲ ಅಥವಾ ಅರ್ಜೆಂಟಿಗೆ ಒಂದಿಷ್ಟು ನಿಮಿಷ ಬೇಕಾದಾಗ ಕವಡೆಯ ಕರಡಿಗೆ ಮಗಚುವ ಕೈ. ಉಳಿದ ಸಮಯದಲ್ಲಿ, ಮಂಡಕ್ಕಿ-ಸೋಡಾ ಮಜಾ ಮಾಡುತ್ತಾ, ಗಣಪತಿಗಳ ಟ್ರಾಕ್ಟರ್ ಜೊತೆಗೆ, ತಿನ್ನುತ್ತಿದ ಮಂಡಕ್ಕಿ ಪ್ಯಾಕೇಟಿನ ಲೆಕ್ಕ ಇಡುವದು ನಮ್ಮ ಕೆಲಸ. ಗಣೇಶ ಹಬ್ಬದ ನೆನಪುಗಳಿಗೆ ಅಕ್ಷರ ರೂಪ ನೀಡಿದ್ದಾರೆ ಮುರಳಿ ಹತ್ವಾರ್.‌ 

Read More

‘ದುಡಿಯುವ ವರ್ಗಕ್ಕೆ ಒಂದೇ ಲಯ ಇದೆ’

ಈ ಯುದ್ಧದ ಸಂದರ್ಭದಲ್ಲಿ ನಮ್ಮ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅವರೆಲ್ಲ ಸೇರಿ ಮುಸ್ಲಿಮರನ್ನು ಹೀಯಾಳಿಸಿದರು. ನಾನು ಅಪಮಾನಿತನಾಗಿ ಎದ್ದು ‘ಬೆಳಿಗ್ಗೆ ಮಿಲಿಟರಿ ಸೇರುವೆ’ ಎಂದು ಹೇಳಿ ಹೊರಗೆ ಬಂದು ಸಿದ್ಧೇಶ್ವರ ಗುಡಿಗೆ ಹೋಗಿ, ಕಟ್ಟೆಯ ಮೇಲೆ ಮಲಗಿದೆ. ಚಳಿಯಿಂದಾಗಿ ರಾತ್ರಿಯಿಡಿ ಸರಿಯಾಗಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಸ್ಟೇಷನ್ ರೋಡ್‌ನಲ್ಲಿರುವ ಐಬಿ ಕಡೆಗೆ ಹೊರಟೆ. ಯುದ್ಧದ ಸಂದರ್ಭವಾಗಿದ್ದರಿಂದ 14 ವರ್ಷ ಮೀರಿದ ಬಾಲಕರನ್ನೂ ಅಲ್ಲಿ ಮಿಲಿಟರಿಗೆ ಸೇರಿಸಿಕೊಳ್ಳುತ್ತಿದ್ದರು. ನಾನು ಎಲ್ಲ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ ತೂಕ ಕಡಿಮೆ ಇತ್ತು. ಅಷ್ಟೊತ್ತಿಗೆ ನನ್ನ ಅಜ್ಜಿ ಮತ್ತು ತಾಯಿ ಬಂದು ಅಳುತ್ತ ನಿಂತಿದ್ದರು.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 44ನೇ ಕಂತು ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ