Advertisement

Month: April 2026

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಯಾರ್ಯಾರಿಗೆ ಕನಸುಗಳು
ಬಹುಶಃ ಎಂದೋ ಕಂಡ
ಅಥವಾ ಕಾಣಬಯಸಿದ್ದು
ಇದ್ದಿರಬಹುದವು… ಅಥವಾ
ಆಗಾಗ ಹೇಗೋ ನುಸುಳಿ, ಕದ್ದು
ತೂರಿಬಂದಂಥವು..” -ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ

ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್‌ಕಾಮ್‌ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್‌ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ “ಹಾವಾಡಿಗ”

Read More

ಫೋಟೋದಲ್ಲಿ ಬಂಧಿಯಾದ ಸೆಲ್ವಂ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಶಿಲಾಸ್ಫೋಟವಾದಾಗ ಬಹುಶಃ ನೀರಿನ ಮಟ್ಟ ಒಮ್ಮೆಲೆ ಮೇಲಕ್ಕೆ ಬಂದು ಮತ್ತೆ ಕೆಳಕ್ಕೆ ಹೋದಾಗ ಮೂವರೂ ಕಳ್ಳರನ್ನು ನೀರಿನ ಅಲೆಗಳು ಸುರಂಗಗಳಲ್ಲಿ ಎಲ್ಲೋ ಆಳಕ್ಕೆ ಎಳೆದುಕೊಂಡು ಹೋಗಿರಬೇಕು. ಆಗ ಅವರ ದೇಹಗಳು ಎಲ್ಲೋ ಆಳದ ಸುರಂಗಗಳಲ್ಲಿ ಇಲ್ಲ ಸ್ಟೋಪ್‌ಗಳಲ್ಲಿ ಶಿಲೆಗಳ ಮಧ್ಯೆ ಸಿಕ್ಕಿಕೊಂಡಿರಬೇಕು ಎಂದು ಊಹಿಸಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಸೌದಿ ದೇಶದ ಹಿನ್ನೆಲೆ…: ದರ್ಶನ್‌ ಜಯಣ್ಣ ಸರಣಿ

ಈ ದೇಶದ ಮೊದಲ ಹೆಸರು ನಜ್ದ್ ಮತ್ತು ಹೇಜಾಜ್ ಎಂದಾಗಿತ್ತು. ಹೆಜಾಜ್‌ನಲ್ಲಿಯೇ ಮೆಕ್ಕಾ- ಮದೀನಾ ಎಲ್ಲ ಇರುವುದು ಮತ್ತು ನಜ್ದ್ ಎಂದರೆ ಇಂದಿನ ಸೌದಿಯ ಮಧ್ಯ ಭಾಗವಾಗಿದೆ. ಅಬ್ದುಲ್ ಅಜೀಜ್(1875 – 1953) ಈ ಎರಡು ಭಾಗಗಳ ಜೊತೆಗೆ ತಂಪಾದ ಬೆಟ್ಟಗುಡ್ಡಗಳಿಂದ ಕೂಡಿರುವ ಯೆಮೆನ್‌ಗೆ ಹೊಂದಿಕೊಂಡಿರುವ ದಕ್ಷಿಣದ ನಜ್ರನ್, ಅಸಿರ್ ಮತ್ತು ಉತ್ತರದ ಅಂದರೆ ಸಿರಿಯಾ ಇರಾಕ್‌ನ ಕಡೆಯ ನಾರ್ದರ್ನ್ ಗಡಿಯನ್ನು ಹಾಗೆಯೇ ಇಂದಿನ ತೈಲದ ತೊಟ್ಟಿಲಾದ ಈಸ್ಟರ್ನ್ ಪ್ರಾವಿನ್ಸ್ ಅನ್ನು ನಂತರದ ವರ್ಷಗಳಲ್ಲಿ ದಂಗೆ ಹೊರಟು ಸೌದಿಗೆ ಸೇರಿಸಿಕೊಳ್ಳುತ್ತಾನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ನಾಲ್ಕನೆಯ ಬರಹ

Read More

ಬದುಕಿನ ಪಲಕುಗಳನ್ನು ಹಾಡಾಗಿಸಿದ ಕವಿ: ಶಿವ ಹಿತ್ತಲಮನಿ ಬರಹ

ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್.‌ ಎಸ್.‌ ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ