Advertisement

Month: April 2026

ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ

ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಪ್ರಕಾಂಡ ಪಾಂಡಿತ್ಯದ ಬಿ. ಎಚ್. ಶ್ರೀಧರರು: ಗೀತಾ ಹೆಗಡೆ, ದೊಡ್ಮನೆ ಬರಹ

‘ಸರ್, ಧ್ವಜಾರೋಹಣ ಮಾಡುವಾಗ ಹಾಗೇ ಮಾಡುವದಕ್ಕಿಂತ ತಲೆಯ ಮೇಲೆ ಏನಾದರೂ ಧರಿಸಬೇಕುʼ ಎಂದಾಗ ಅವರಿಗೂ ಅದು ಸರಿಯೆನಿಸಿತು. ಅವರ ಮನೆಯೇನೋ ಸಮೀಪದಲ್ಲೇ ಇದ್ದಿತ್ತಾದರೂ, ಹೋಗಿ ಅಲ್ಲಿಂದ ತರೋಣವೆಂದರೆ ಧ್ವಜಾರೋಹಣದ ಸಮಯಪಾಲನೆ ತಪ್ಪಿಸುವಂತಿಲ್ಲ! ‘ಹೌದಲ್ಲ, ಈಗೇನು ಮಾಡೋದು?ʼ ಎಂದರಂತೆ. “ಈ ಖಾದೀ ಟೋಪಿ ಹಾಕಿಕೊಳ್ಳಿ ಸರ್ʼ ಎಂದಾಗ ‘ಸರಿʼ ಎಂದು ಆ ಖಾದೀ ಟೋಪಿ ಧರಿಸಿ ಧ್ವಜಾರೋಹಣ ಮಾಡಿದರಂತೆ..
ಹಿರಿಯ ಸಾಹಿತಿ ಬಿ. ಎಚ್.‌ ಶ್ರೀಧರರ ಬದುಕು ಮತ್ತು ಬರಹದ ಕುರಿತು ಗೀತಾ ಹೆಗಡೆ, ದೊಡ್ಮನೆ ಬರಹ

Read More

ಗಯಾನಾ ದೇಶದ ಕವಿ ಮಾರ್ಟಿನ್ ಕಾರ್ಟರ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಗಯಾನಾ (Guyana) ದೇಶದ ಖ್ಯಾತ ಕವಿ ಮಾರ್ಟಿನ್ ಕಾರ್ಟರ್-ರವರ (Martin Carter, 1927-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ

ಸುನಂದಕ್ಕಗೆ ಮದುವೆಯಾಗಿ ಒಂದು ವಾರವೂ ಆಗಿರಲಿಕ್ಕಿಲ್ಲ. ದಿವಾಕರ ಭಾವ ಅವಳಿಗೆ ಉದ್ದದ ಹೆರಳನ್ನು ಕತ್ತರಿಸಲು ಆಜ್ಞೆಮಾಡಿದ್ದು! ನಗುವನ್ನೆ ಕಳೆದುಕೊಂಡಂತಿದ್ದ ಸುನಂದಕ್ಕ ತನ್ನ ಹೆರಳನ್ನು ಮೋಟು ಜಡೆ ಮಾಡಿಸಿಕೊಂಡು ‘ಅನೂ ಪುಟ್ಟಾ’ ಎಂದು ಯಾವತ್ತೂ ಕರೆವಂತೆ ‘ಅಮ್ಮಗೆ ಹೇಳು ಇನ್ನು ಮುಂದೆ ನನಗೆ ಜಡೆಹಾಕುವಾಗ ಯಾವತ್ತೂ ಕೈ ಸೋಲು ಬರುವುದಿಲ್ಲ’ ಅಂದಿದ್ದಳು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ “ಅರ್ಥವಾಗುತ್ತಿದೆ ಎಲ್ಲ ಮೆಲ್ಲ ಮೆಲ್ಲನೆ”

Read More

ಎಲ್ಲ ಕಾಲದ ಮನುಷ್ಯರೂ ಒಂದೇ!: ರೂಪಶ್ರೀ ಕಲ್ಲಿಗನೂರ್‌ ಬರಹ

ಗಣಿತದಲ್ಲಿ ತಪ್ಪು ಲೆಕ್ಕ ಬರೆದ ಮಕ್ಕಳನ್ನು ಕರೆದು ಅಂಗೈ ಮುಂದೆ ಮಾಡಲು ಹೇಳಿ, ಗೆಣ್ಣಿಗೆ ಹೊಡೆಯುತ್ತಿದ್ದ ರೀತಿ ಇನ್ನೂ ಚೆನ್ನಾಗಿ ನೆನಪಿದೆ. ಒಮ್ಮೊಮ್ಮೆ ತೀರಾ ಸಿಟ್ಟಿನಲ್ಲಿ ರಪರಪ ಬಾರಿಸಿದ್ರೆ, ಇನ್ನೂ ಕೆಲವೊಮ್ಮೆ ಏನೋ ಮನಸ್ಸಿಲ್ಲದೇ, ತನ್ನ ಕರ್ತವ್ಯ ಪಾಲಿಸುವುದಕ್ಕಾಗಿ ಇಷ್ಟು ಜೋರಾಗಿ ಹೊಡಿತಿದ್ದೀನಿ ಅನ್ನುವಂತೆ ಮುಖ ಮಾಡಿಕೊಂಡು ಶಿಕ್ಷಿಸುತ್ತಿದ್ದರು. ಹಾಗವರು ಮೃಗೀಯವಾಗಿ ಹೊಡೆಯುವಾಗ, ಅವರ ಮಗು ಅಲ್ಲೇ ಪಕ್ಕದಲ್ಲಿ ತೊಟ್ಟಿಲಲ್ಲಿ ನೆಮ್ಮದಿಯಿಂದ ಮಲಗಿರುತ್ತಿತ್ತು. ಅಷ್ಟು ಚಿಕ್ಕ ಮಗುವಿನ ತಾಯಿಯೊಬ್ಬಳು, ಓದಿನಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಹೇಗೆ ಅಷ್ಟು ಮನುಷ್ಯತ್ವವಿಲ್ಲದೇ ಶಿಕ್ಷಿಸಲು ಸಾಧ್ಯ?
ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ