”ಸುಂದರ್ ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ಬಾಚಿಕೊಂಡಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ”
ಕಲಾವಿದ ಸೃಜನ್ ತೆಲುಗಿನಿಂದ ಅನುವಾದಿಸಿದ ಡಾ. ವಿ. ಚಂದ್ರಶೇಖರರಾವ್ ನೀಳ್ಗತೆ ಈ ಭಾನುವಾರದ ನಿಮ್ಮ ಓದಿಗಾಗಿ 

 

1996

ಪೂರ್ಣಳನ್ನು ನಿದ್ರಿಸುವಾಗ ನೋಡುವುದು ಸುಂದರ್ ಗೆ ತುಂಬಾ ಇಷ್ಟ. ನಿದ್ರಿಸುವಾಗ ಆಕೆಯ ಮುಖ ನಿರ್ಮಲವಾದ ಸರೋವರದಂತಿರುತ್ತದೆ. ಇದ್ದಕ್ಕಿದ್ದಂತೆ ಆಕೆಯ ತುಟಿಗಳ ಮೇಲೆ ಮುಗುಳ್ನಗೆ ಅರಳುತ್ತದೆ. ಕನಸಲ್ಲಿ ದೇವರನ್ನು ನೋಡಿದಂತೆ ಆ ನಗು ತುಂಬಾ ಮನೋಹರವಾಗಿರುತ್ತದೆ. ಆಕೆಯನ್ನು ಹಾಗೆ ನೋಡಲೆಂದೇ ಸುಂದರ್ ನಿದ್ದೆ ಮಾಡದೇ ಸಾಕಷ್ಟು ರಾತ್ರಿಗಳನ್ನು ಕಳೆಯುತ್ತಾನೆ. ಅವರಿಬ್ಬರ  ಮದುವೆಯ ಮೊದಲ ವರ್ಷದ ದಿನಗಳಲ್ಲಿ ಪೂರ್ಣ ರಾತ್ರಿ ಒಂಬತ್ತಕ್ಕೆಲ್ಲಾ ಮಲಗಿಬಿಡುತ್ತಿದ್ದಳು. ಆಕೆ ಎದ್ದುಬಿಡುತ್ತಾಳೆಂಬ ಭಯದಿಂದ ಇಡೀ ರಾತ್ರಿ ಸುಂದರ್ ಎಚ್ಚರದಿಂದಿರುತ್ತಿದ್ದ. ಬರುಬರುತ್ತಾ ಆಕೆಯನ್ನು ಹಾಗೆ ನಿದ್ರಿಸುವಾಗ ನೋಡುವುದು ಅವನಿಗೆ ಅಭ್ಯಾಸವಾಗಿ ಬಿಟ್ಟಿತು. ದಣಿದು ಮೈಮರೆತು ಸಮಸ್ತವನ್ನು ಮರೆತು ಮಗುವಿನಂತೆ ಮಲಗಿರುತ್ತಿದ್ದಳು. ಕನಸುಗಳಲ್ಲಿ ಮೆರವಣಿಗೆ ಹೊರಟಿರುವಂತಿತ್ತು ಅವಳ ನಿದ್ರೆ. ಆ ದಿನಗಳಲ್ಲಿ ಒಂದು ಶುಕ್ರವಾರ ರಾತ್ರಿ ಇಬ್ಬರೂ ಮಧ್ಯರಾತ್ರಿ ಎರಡರವರೆಗೆ ಹರಟೆ ಹೊಡೆಯುತ್ತಾ ಸ್ಟ್ರಾಂಗ್ ಟೀ ಕುಡಿದು ಮಲಗಿದರು. ಮಾರನೇ ದಿನ ಮಧ್ಯಾಹ್ನ ಎರಡು ಗಂಟೆಗೆ ಆತ ನಿದ್ದೆಯಿಂದೆದ್ದಿದ್ದ. ಆಕೆ ಇನ್ನೂ ಮಲಗಿಯೇ ಇದ್ದಳು. ಎದ್ದು ಮುಖ ತೊಳೆದು ಕಾಫಿ ಕುಡಿದು, ತಿಂಡಿತಿಂದು ದೇವರ ಸಾಕ್ಷಾತ್ಕಾರಕ್ಕೆ ಕಾದಿರುವನಂತೆ, ಕ್ಷಣಹೊತ್ತು ತಡೆಯಲಾರದ ಮೋಹ ಪರವಶನಾಗಿ, ಆಕೆಯನ್ನು ಎಬ್ಬಿಸಿ, ಹತ್ತಿರ ಸೆಳೆದು, ಸಾವಿರ ವರ್ಷಗಳಿಂದ ಜಗತ್ತನ್ನು ಹೊತ್ತುಕೊಂಡಿರುವವಳಂತೆ, ಆಕೆಯ ಮುಖದಲ್ಲಿ ದಣಿವನ್ನು ಗಮನಿಸಿ ಆಕೆ ಎಚ್ಚರಗೊಳ್ಳುವವರೆಗೆ ನಿದ್ದೆಯಿಂದ ಎಬ್ಬಿಸಬಾರದೆಂದು ನಿರ್ಧರಿಸಿ, ಪ್ಯಾರಡೈಸ್‍ವರೆಗೆ ಹೋಗಿ ಎರಡು ಬಿರಿಯಾನಿ ಪೊಟ್ಟಣಗಳನ್ನು ತಂದು ಆಕೆಯ ಭುಜಗಳನ್ನು ಹಿಡಿದು ಮೇಲಕ್ಕೆಬ್ಬಿಸಿ, ಆಕೆ ಕಣ್ತೆಗೆದು ದೇವತೆಯಂತೆ ನಸುನಕ್ಕು ಅವನ ತುಟಿಗಳಿಗೆ ಮುತ್ತಿಟ್ಟು ಮತ್ತೇ ನಿದ್ದೆಗೆ ಜಾರುತ್ತಿದ್ದಳು. ಅವಳ ಪಕ್ಕದಲ್ಲೇ ಕೂತು ಆಕೆ ರಾತ್ರಿ ಮಲಗುವ ಮುನ್ನ ಅರ್ಧ ಓದಿ ಬಿಟ್ಟಿದ್ದ ಕಾದಂಬರಿಯನ್ನು ಶ್ರದ್ಧೆಯಿಂದ ಶಾಲಾ ವಿದ್ಯಾರ್ಥಿಯಂತೆ ಓದಿಮುಗಿಸುತ್ತಿದ್ದ. ಆ ಕಾದಂಬರಿ ಪೂರ್ತಿಯಾಗುವಷ್ಟರಲ್ಲಿ ಸಂಜೆ ಐದು ಗಂಟೆಯಾಗುತ್ತಿತ್ತು. ಆಕೆ ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ. ಸುಂದರ್‍ಗೆ ವಿಪರೀತ ಹಸಿವಾಗಿತ್ತು. ತನ್ನ ಪುಸ್ತಕ ಸಂಗ್ರಹದಿಂದ ‘ಅಮೃತಂ ಕುರಿಸಿನ ರಾತ್ರಿ’ ಹೊರತೆಗೆದ. ಜೋರು ದನಿಯಲ್ಲಿ ಕವಿತೆ ಓದಲು ಪ್ರಾರಂಭಿಸಿದ. ಸರಿಯಾಗಿ ಆರು ಗಂಟೆಗೆ ನಿದ್ದೆಯಿಂದೆದ್ದಳು ಪೂರ್ಣ. ನೈದಿಲೆಯಂತೆ ಕಣ್ಣರಿಳಿಸಿದಳು. “ಹಸಿವಾಗ್ತಾ ಇದೆ. ತಿನ್ನಲು ಪೋಯೆಟ್ರಿನಾ? ಇನ್ನೇನಾದರೂ ಇದೆಯಾ?” ಎಂದಳು ಮುಗುಳ್ನಗೆಯೊಂದಿಗೆ. ಇಬ್ಬರೂ ಬಿರಿಯಾನಿ ಪೊಟ್ಟಣಗಳನ್ನು ಬಿಚ್ಚಿದರು. ಆಕೆ ತಿನ್ನುವುದನ್ನು ಎಂಜಾಯ್ ಮಾಡುತ್ತಾಳೆ. ಕಣ್ಣುಗಳಲ್ಲಿ ಹೊಳಪು ತುಂಬಿಕೊಂಡು, ಚಿಕ್ಕ ಚಿಕ್ಕ ತುತ್ತುಗಳನ್ನು ಮಾಡಿಕೊಂಡು ತುಂಬಾ ನಾಜೂಕಾಗಿ ಇಷ್ಟದಿಂದ ಸವಿಯುತ್ತಾಳೆ.

ಭಾನುವಾರ ಸಂಜೆ ಅವರು ರಸ್ತೆಯಂಚಿನ ಪೇವ್‍ಮೆಂಟ್ ಮೇಲೆ ಹೆಜ್ಜೆ ಹಾಕುತ್ತಾ ನಡೆಯುತ್ತಿದ್ದರು. ಅವನ ಪ್ಯಾಂಟ್ ಜೇಬಿನಲ್ಲಿ ಪುಸ್ತಕವಿರುತ್ತಿತ್ತು. ಪೆರೇಡ್ ಗ್ರೌಂಡ್ಸ್ ಸುತ್ತಾಡಿ, ಮೂಲೆಯೊಂದರಲ್ಲಿ ಜನರಿಲ್ಲದ ಜಾಗದಲ್ಲಿ ಕೂಡುತ್ತಿದ್ದರು. ಅವನು ಪುಸ್ತಕ ತೆಗೆದು ಕವಿತೆ ಓದುತ್ತಿದ್ದ. ಓದುವಾಗ ಅವನ ತುಟಿಗಳು ಕದಲುತ್ತಾ, ತನ್ನಲ್ಲಿ ತಾನು ಏನೋ ಗೊಣಗಿಕೊಳ್ಳುತ್ತಿರುವಂತೆ ಕಾಣುತ್ತವೆ. ಇಳಿಸಂಜೆಯ ಚಳಿಗಾಳಿಗೆ ಸೆರಗನ್ನು ಪೂರ್ತಿಯಾಗಿ ಹೊದ್ದುಕೊಂಡು ಅವನೆಡೆ ಇಷ್ಟದಿಂದ ನೋಡುತ್ತಾ; ಕ್ರಮವಾಗಿ ನಿದ್ರೆಯ ಅಮಲು ಆಕೆಯನ್ನು ಆವರಿಸುತ್ತಿತ್ತು. ಅವನ ಭುಜದ ಮೇಲೆ ಒರಗುತ್ತಾ ಅವನು ಪುಸ್ತಕವನ್ನು ಮುಚ್ಚಿಟ್ಟು, ಆಕೆಯ ಅಸ್ತಿತ್ವವನ್ನು, ಸ್ಪರ್ಶವನ್ನು ಎಂಜಾಯ್ ಮಾಡುತ್ತಾ; ಅವೆಲ್ಲಾ ಅದ್ಭುತವಾದ ದಿನಗಳು ಅವರ ಬದುಕಿನಲ್ಲಿ.

ನಿದ್ರಿಸುವಾಗ ಆಕೆಯ ಮುಖ ನಿರ್ಮಲವಾದ ಸರೋವರದಂತಿರುತ್ತದೆ. ಇದ್ದಕ್ಕಿದ್ದಂತೆ ಆಕೆಯ ತುಟಿಗಳ ಮೇಲೆ ಮುಗುಳ್ನಗೆ ಅರಳುತ್ತದೆ. ಕನಸಲ್ಲಿ ದೇವರನ್ನು ನೋಡಿದಂತೆ ಆ ನಗು ತುಂಬಾ ಮನೋಹರವಾಗಿರುತ್ತದೆ. ಆಕೆಯನ್ನು ಹಾಗೆ ನೋಡಲೆಂದೇ ಸುಂದರ್ ನಿದ್ದೆ ಮಾಡದೇ ಸಾಕಷ್ಟು ರಾತ್ರಿಗಳನ್ನು ಕಳೆಯುತ್ತಾನೆ. ಅವರಿಬ್ಬರ  ಮದುವೆಯ ಮೊದಲ ವರ್ಷದ ದಿನಗಳಲ್ಲಿ ಪೂರ್ಣ ರಾತ್ರಿ ಒಂಬತ್ತಕ್ಕೆಲ್ಲಾ ಮಲಗಿಬಿಡುತ್ತಿದ್ದಳು. ಆಕೆ ಎದ್ದುಬಿಡುತ್ತಾಳೆಂಬ ಭಯದಿಂದ ಇಡೀ ರಾತ್ರಿ ಸುಂದರ್ ಎಚ್ಚರದಿಂದಿರುತ್ತಿದ್ದ. ಬರುಬರುತ್ತಾ ಆಕೆಯನ್ನು ಹಾಗೆ ನಿದ್ರಿಸುವಾಗ ನೋಡುವುದು ಅವನಿಗೆ ಅಭ್ಯಾಸವಾಗಿ ಬಿಟ್ಟಿತು. ದಣಿದು ಮೈಮರೆತು ಸಮಸ್ತವನ್ನು ಮರೆತು ಮಗುವಿನಂತೆ ಮಲಗಿರುತ್ತಿದ್ದಳು. ಕನಸುಗಳಲ್ಲಿ ಮೆರವಣಿಗೆ ಹೊರಟಿರುವಂತಿತ್ತು ಅವಳ ನಿದ್ರೆ.

ಆ ದಿನಗಳಲ್ಲಿ ಅವರಿಬ್ಬರಿಗಿಷ್ಟವಾದ ಮತ್ತೊಂದು ಅನುಭವವೆಂದರೆ, ಸಿ.ವಿ. ಯೊಂದಿಗೆ ಮಾತನಾಡುವುದು. ಅವರ ಮನೆಯಿಂದ ನಾಲ್ಕೈದು ಸ್ವಲ್ಪ ದೂರದಲ್ಲಿ ಕಿರಿದಾದ ಕೋಣೆಯೊಂದರಲ್ಲಿ  ವಾಸಿಸುತ್ತಿದ್ದ ಸಿ.ವಿ. ಅವನೊಬ್ಬ  ನಿರುದ್ಯೋಗಿ. ಅನಾರ್ಕಿಸ್ಟ್ ಮತ್ತು ಕವಿ ಇತ್ಯಾದಿ. ಮೀಸೆ ಅಂಟಿಸಿದ ಸೂರ್ಯನಂತೆ, ಹದೆ ಏರಿಸಿದ ಬಿಲ್ಲಿನಂತೆ ಅದ್ಭುತವಾದ ಭಾವನೆಗಳ ಸಂಗಮದಂತಿರುತ್ತಾನೆ. ಪ್ರಜ್ವಲಿಸುತ್ತಿರುತ್ತಾನೆ. ಅವನು ಆಟೋ, ಬಸ್ ಹತ್ತುವುದಿಲ್ಲ. ಎಲ್ಲಿಗಾದರೂ ನಡೆದುಕೊಂಡೇ ಹೋಗುತ್ತಾನೆ. ರಸ್ತೆ ಮೇಲೆ ನಡೆದು ಹೋಗುವಾಗ ತನ್ನ ಜೇಬಿನಲ್ಲಿಯ ಕೊನೆಯ ಹತ್ತು ರೂಪಾಯಿಯನ್ನು ಎದುರಿಗೆ ಕಂಡ ಭಿಕ್ಷುಕನಿಗೆ ಕೊಟ್ಟು ತಾನು ಆ ರಾತ್ರಿಯೆಲ್ಲಾ ಉಪವಾಸ ಮಲಗುತ್ತಾನೆ. ಅವನು ಕವಿತೆಗಳನ್ನು ಬರೆಯುತ್ತಾನೆ. ಆಗಾಗ ಅವು ಪ್ರಕಟಗೊಳ್ಳುತ್ತವೆ. ಆ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡ ದಿನ ಸುತ್ತಲಿನ ಜನರನ್ನು ಕರೆದು ದೊಡ್ಡ ದನಿಯಲ್ಲಿ ಕವಿತೆಯನ್ನು ಓದಿ ಅರ್ಥ ವಿವರಿಸುತ್ತಾನೆ. ಅವನ ಆ ಉತ್ಸಾಹ ಸುಂದರ್‍ಗೆ ತುಂಬಾ ಇಷ್ಟವಾಗುತ್ತಿತ್ತು. ‘ಯಾವುದೂ ಸರಿಯಾಗಿ ನಡೆಯುತ್ತಿಲ್ಲವೆಂದು’ ಗಂಟೆಗೊಮ್ಮೆಯಾದರೂ ಗೊಣಗಿಕೊಳ್ಳುತ್ತಾನೆ. ಸಿ.ವಿ. ನಿದ್ರೆ ಮಾಡುತ್ತಿರುವ ಪೂರ್ಣಳನ್ನು ನೋಡಿದರೆ ನಿಧಾನಗತಿಯಲ್ಲಿ ಹರಿವ ನದಿ ಮತ್ತು  ಹಚ್ಚಹಸಿರಿನ ದಟ್ಟ ಕಾಡುಗಳು ನೆನಪಿಗೆ ಬರುತ್ತವೆ ಎನ್ನುತ್ತಿದ್ದ. ಸಿ.ವಿ.ಯೊಂದಿಗೆ ಕಳೆದ ಎಷ್ಟೋ ತಾಸುಗಳು ಅವರಿಗೆ ಅತ್ಯಂತ ಇಷ್ಟವಾದ ನೆನಪುಗಳು. ಆರು ತಿಂಗಳ ಗೆಳೆತನದ ನಂತರ ಸಿ.ವಿ. ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟ. ಮಡಚಿದ ನ್ಯೂಸ್ ಪೇಪರ್‍ಗಳ ನಡುವೆ ಸುತ್ತಿದ ಫೋಟೋ ಫ್ರೇಮನ್ನು ಸುಂದರ್‍ಗೆ ಕೊಟ್ಟು, ಕೇಳುವ ಮುನ್ನವೇ ಆತುರದಿಂದ ಹೊರಟು ಹೋಗಿದ್ದ. ಅದು ನಿದ್ರೆ ಮಾಡುತ್ತಿರುವ ಪೂರ್ಣಳ ಪೇಯಿಂಟಿಂಗ್. ಆಕಾಶದಂಥ ದೀರ್ಘ ಶೂನ್ಯದಲ್ಲಿ ಒಬ್ಬಳೇ ಮೈಮರೆತು ನಿದ್ರಿಸುತ್ತಿರುವ ದೃಶ್ಯ. ಹೋಗುತ್ತಾ ಹೋಗುತ್ತಾ, ತನ್ನ ಕೋಣೆಯಲ್ಲಿನ ಪುಸ್ತಕಗಳು, ಮರದ ಕುರ್ಚಿ, ಬರೆಯುವ ಮೇಜು, ಚೆಂದನೆ ಮೆತ್ತನೆಯ ಬೂರಗದ ಹೂವಿನ ಹಾಸಿಗೆಯನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟು ಹೋಗಿದ್ದ. ಅವನು ಮಾಯವಾಗಿ ಹೋದ ನಂತರ ಆಗಾಗ ಅವನಿಂದ ಪತ್ರಗಳು ಬರುತ್ತಿದ್ದವು. ಅವನ ಪತ್ರಗಳು ಕೆಂಪು ಹಕ್ಕಿಗಳಂತಿರುತ್ತಿದ್ದವು. ಸುಮಾರು ಹತ್ತು ಇಪ್ಪತ್ತು ಪುಟಗಳಷ್ಟು ದೀರ್ಘವಾಗಿರುತ್ತಿದ್ದವು. ಸಿ.ವಿ. ಕೊಟ್ಟಿದ್ದ ಬಣ್ಣದ ಹಾಸಿಗೆಯನ್ನು ಅವರು ತುಂಬಾ ಅಪರೂಪದ ಕಾಣಿಕೆಯಂತೆ ಭಾವಿಸುತ್ತಿದ್ದರು. ಕೋಣೆಯ ನಡುವೆ ಹಾಸಿ ಅದನ್ನೊಂದು ‘ಯಾಂಟಿಕ್’ನಂತೆ ನೋಡತೊಡಗಿದರು. ಅದಕ್ಕೆ ‘ಪೊಯೆಟ್ಸ್ ಕಾರ್ನರ್’ಎಂದು ಹೆಸರಿಟ್ಟಿದ್ದರು. ಅದು ಅವರ ಕನಸಿನಲೋಕ. ಅವರ ಆತ್ಮಗಳ ಕನ್ನಡಿ. ಅವರ ದೇಹಗಳ ಮೇಲೆ ಬೀಸುವ ಜಾಜಿ ಮಲ್ಲಿಗೆಯ ಚಂಡಮಾರುತ. ಆ ಹಾಸಿಗೆ ಅವರ ಪುರಾತನ ವಾಂಛೆಗಳನ್ನು ನೆನಪಿಗೆ ತರುವ ಮೋಹಕ ರತ್ನಗಂಬಳಿ. ಅವರ ನಿದ್ರಾಗೃಹ.

2000

ಅವರ ಬದುಕಿನಿಂದ ಮಧುರ ಕ್ಷಣಗಳು ಅದೃಶ್ಯವಾಗುತ್ತಿದ್ದ ಸಮಯವದು. ಸುಂದರ್‍ಗೆ ಇಷ್ಟವಾದ ಚೆಗೆವಾರನ ಚಿತ್ರವಿದ್ದ ಟೀ-ಶರ್ಟ್ ಹರಿದು ತೂತಾದ್ದರಿಂದ ಅದನ್ನು ಭಿಕ್ಷುಕನೊಬ್ಬನಿಗೆ ಕಾಣಿಯಾಗಿ ಕೊಟ್ಟರು. ಹಾಸಿಗೆ ಕೆಳಗಿಟ್ಟಿದ್ದ ಸಿ.ವಿ. ಪತ್ರಗಳು ಕಣ್ಮರೆಯಾಗುತ್ತಿದ್ದವು. ಅವರಿಬ್ಬರ ಬದುಕಿನಲ್ಲಿ ಒಂದು ಮಗು ಬಂತು. ಹುಟ್ಟುವಾಗಲೇ ‘ಸಿಕ್’ ಆಗಿ ಹುಟ್ಟಿದ್ದಳು. ಉಸಿರುಗಟ್ಟಿದವಳಂತೆ ಯಾವಾಗಲೂ ಆಯಾಸಗೊಂಡಂತೆ ಇರುತ್ತಿದ್ದಳು. ಅವಳಿಗೆ ಗಾಳಿಯಾಡಲು ಇಡೀ ದಿನ ಬಾಗಿಲು, ಕಿಟಕಿಗಳನ್ನು ತೆರೆದಿಡುತ್ತಿದ್ದರು. ಚಿಟಿಕೆ ಉಸಿರಿಗಾಗಿ ಆ ಮಗು ಎದೆ ಬಿರಿಯುವಂತೆ ಅಳುತ್ತಿದ್ದಳು. ಅವರಿಬ್ಬರಿಗೂ ಕೂಡ ಗಾಳಿ ಬೀಸುವುದು ನಿಂತು ಹೋದಂತೆ, ಸುತ್ತಲೂ ಕಬ್ಬಿಣದ ಗೋಡೆಗಳು ತಲೆ ಎತ್ತಿದಂತೆ ಭಾಸವಾಗುತ್ತಿತ್ತು. ಏಪ್ರಿಲ್ ತಿಂಗಳಲ್ಲಿ ಮಗುವನ್ನು ಮನೆಯಿಂದ, ಆಸ್ಪತ್ರೆಯ ಐಸಿಯುಗೆ ಕರೆತಂದರು. ಪೂರ್ಣಳ ಕಂಗಳಲ್ಲಿ ಬೆಳಕು ಮಾಯವಾಯ್ತು. ಮಗುವಿನ ಪಕ್ಕದಲ್ಲೇ, ನಿರ್ಭಾವುಕ ನೋಟದಿಂದ ನಿದ್ರೆ ಕೂಡಾ ಮಾಡದೇ ಕೂತಿರುತ್ತಿದ್ದಳು. ಕೊಂಚ ಜೊಂಪು ಹತ್ತಿದರೂ ಬೆಚ್ಚಿಬಿದ್ದು ಎದ್ದು ಬಿಡುತ್ತಿದ್ದಳು.

ಮೇ ತಿಂಗಳ ಎಂಟನೇ ತಾರೀಖಿನ ಸಂಜೆ ಹೊತ್ತು ಎಲ್ಲ ದಿಕ್ಕಿನಿಂದಲೂ ಸೂರ್ಯನ ಪ್ರಖರತೆಯ ಬೆಂಕಿಯ ಕೆನ್ನಾಲಿಗೆಗಳು ಬೀಸುತ್ತಿದ್ದ ಸಮಯ. ಆಸ್ಪತ್ರೆಯಿಂದ ಅವರಿಬ್ಬರೇ ಮನೆಗೆ ಬಂದರು. ನಂತರ ಆ ಮನೆಯಲ್ಲಿ ಮಗು ಕಾಣಿಸಲೇ ಇಲ್ಲ.

ಆ ದಿನ ಪೂರ್ಣ ತುಂಬಾ ದಿನಗಳ ನಂತರ ನಿದ್ರೆ ಮಾಡಿದಳು. ಸುಮಾರು ಇಪ್ಪತ್ತಾರು ತಾಸು ನಿದ್ರೆ ಮಾಡಿದಳು. ಆದರೆ ಆ ನಿದ್ರೆಯಲ್ಲಿ ಸುಂದರ್ ಇಷ್ಟ ಪಡುವ ಸೌಂದರ್ಯವಿರಲಿಲ್ಲ. ಜೀವವಿಲ್ಲದ ವ್ಯಕ್ತಿಯಂತೆ ಹಾಸಿಗೆಯ ಮೇಲೆ ನಿಸ್ತೇಜಳಾಗಿ ಬಿದ್ದಿದ್ದಳು. ಸುಂದರ್ ತುಂಬಾ ಸಲ ಆಕೆಯ ಮೂಗಿನ ಬಳಿ ಕೈಯಿಟ್ಟು, ಶ್ವಾಸವಿದೆಯೇ ಇಲ್ಲವೇ ಎಂದು ನೋಡುತ್ತಿದ್ದ.

ಅವರಿಬ್ಬರ ಬದುಕಿನಲ್ಲಿ ಒಂದು ಮಗು ಬಂತು. ಹುಟ್ಟುವಾಗಲೇ ‘ಸಿಕ್’ ಆಗಿ ಹುಟ್ಟಿದ್ದಳು. ಉಸಿರುಗಟ್ಟಿದವಳಂತೆ ಯಾವಾಗಲೂ ಆಯಾಸಗೊಂಡಂತೆ ಇರುತ್ತಿದ್ದಳು. ಅವಳಿಗೆ ಗಾಳಿಯಾಡಲು ಇಡೀ ದಿನ ಬಾಗಿಲು, ಕಿಟಕಿಗಳನ್ನು ತೆರೆದಿಡುತ್ತಿದ್ದರು. ಚಿಟಿಕೆ ಉಸಿರಿಗಾಗಿ ಆ ಮಗು ಎದೆ ಬಿರಿಯುವಂತೆ ಅಳುತ್ತಿದ್ದಳು. ಅವರಿಬ್ಬರಿಗೂ ಕೂಡ ಗಾಳಿ ಬೀಸುವುದು ನಿಂತು ಹೋದಂತೆ, ಸುತ್ತಲೂ ಕಬ್ಬಿಣದ ಗೋಡೆಗಳು ತಲೆ ಎತ್ತಿದಂತೆ ಭಾಸವಾಗುತ್ತಿತ್ತು. ಏಪ್ರಿಲ್ ತಿಂಗಳಲ್ಲಿ ಮಗುವನ್ನು ಮನೆಯಿಂದ, ಆಸ್ಪತ್ರೆಯ ಐಸಿಯುಗೆ ಕರೆತಂದರು. ಪೂರ್ಣಳ ಕಂಗಳಲ್ಲಿ ಬೆಳಕು ಮಾಯವಾಯ್ತು.

2002

ಆ ದಿನ ಬೆಳಿಗ್ಗೆಯೇ ಸುಂದರ್ ಎಚ್ಚರಗೊಂಡ, ಪೂರ್ಣ ಆ ಹೊತ್ತಿಗಾಗಲೇ ಎದ್ದು ಪೂರ್ವಕ್ಕೆ ಮುಖ ಮಾಡಿ ಕೂತಿದ್ದಳು. ಕನಸುಗಳು ಆಕೆಯನ್ನು ವಿಚಲಿತಗೊಳಿಸಿದಾಗ ಆಕೆ ಹಾಗೆ ತೆರೆದ ಕಣ್ಣುಗಳೊಂದಿಗೆ ವಿಸ್ಮಯ ಮತ್ತು ಗೊಂದಲಗಳಿಂದ ಸುಸ್ತಾಗುತ್ತಾಳೆ.
“ಏನು ಕನಸು ಕಂಡಿದ್ದೀಯಾ?” ಕೇಳಿದ ಸುಂದರ್.
“ಕನಸಲ್ಲಿ ಸತ್ತು ಹೋದ ಮಗುವನ್ನು ಹಡೆದಂತೆ… ಮಗು ಸತ್ತಿಲ್ಲ ಮಲಗಿದೆ ಎಂದು ನೀನು ಹೇಳುತ್ತಿದ್ದೀ” ಎಂದಳು ಗಾಢವಾಗಿ ನಿಟ್ಟುಸಿರು ಬಿಡುತ್ತಾ. ಆ ದಿನ ಭಾನುವಾರ. ಸುಂದರ್‍ಗೆ ಹಸಿವಾಗಿತ್ತು. ಪೂರ್ಣ ಎದ್ದು ತಿಂಡಿ ತಯಾರಿಸುವ ಕಾರ್ಯಕ್ರಮದ ಗೊಡವೆಗೆ ಹೋಗಲಿಲ್ಲ. ಒಳ್ಳೆಯ ಕನಸಿಗಾಗಿ ಇನ್ನೊಂದೆರಡು ತಾಸು ಮಲಗಲು ನಿರ್ಧರಿಸಿದ್ದಳು. ಸುಂದರ್ ಹಸಿವೆ ತಡೆಯಲಾರದೇ ಎದ್ದು ಅಡುಗೆ ಕೋಣೆಗೆ ಹೋಗಿ ಆಮ್ಲೆಟ್ ಹಾಕಿಕೊಂಡು ತಿಂದ.

ಮಧ್ಯಾಹ್ನ ಅವರಿಬ್ಬರೂ ಸಿಟಿಯಲ್ಲಿ ಸುತ್ತಾಡಲು ನಿರ್ಧರಿಸಿದರು. ಪೂರ್ಣ ಲುಂಬಿನಿ ಪಾರ್ಕ್‍ನಲ್ಲಿ ಬೋಟ್ ರೈಡ್ ಮಾಡುತ್ತಿರುವಾಗ ಸುಂದರ್ ಕೋಠಿ ಕಡೆ ಹೋಗಿ ಫ್ರಾಯಿಡ್ ಬರೆದ ‘ಇಂಟರಪ್ಟೇಶನ್ಸ್ ಆಫ್ ಡ್ರೀಮ್ಸ್’ ಪುಸ್ತಕ ಕೊಂಡು ತಂದ. ಬರುವಾಗ ಇಬ್ಬರೂ ಇರಾನಿ ರೆಸ್ಟಾರೆಂಟ್‍ಗೆ ಹೋದರು. ಈಗಲೇ ಬರುತ್ತೇನೆಂದು ಹೇಳಿ ಹೋಗಿ, ಪಕ್ಕದ ಬಾರ್‍ನಲ್ಲಿ ಎರಡು ಪೆಗ್ ವಿಸ್ಕಿ ಸೇವಿಸಿ ಬಂದ. ಆ ಸಂಜೆ ಸುಂದರ್ ವಿಸ್ಕಿ ಕೊಟ್ಟ ಕಿಕ್‍ನಿಂದ ಪೂರ್ಣಳಿಗೆ ಉಚಿತವಾಗಿ ಸಮಕಾಲೀನ ರಾಜಕೀಯ ವಿಶ್ಲೇಷಣೆ ಕೊಟ್ಟ. ಜೇಬಿನಲ್ಲಿ ತುಂಬಾ ದಿನಗಳಿಂದ ಬಚ್ಚಿಟ್ಟುಕೊಂಡಿದ್ದ ಸಿ.ವಿ. ಪತ್ರವನ್ನು ದೊಡ್ಡ ದನಿಯಲ್ಲಿ ಓದಿದ. ಥಟ್ಟನೆ ದುಃಖ ಉಮ್ಮಳಿಸಿ ಬಂದು ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಜೋರಾಗಿ ಅತ್ತ. ಪೂರ್ಣಳಲ್ಲಿ ಯಾವುದೇ ಸ್ಪಂದನೆ ಇರಲಿಲ್ಲ. ಸಿನಿಮಾದ ದೃಶ್ಯವೊಂದನ್ನು ನೋಡುತ್ತಿರುವಂತೆ ಅವನನ್ನು ನೋಡಿದಳು.

ಆ ರಾತ್ರಿ ಸುಂದರ್ ‘ಫ್ರಾಯಿಡ್ ಕನಸುಗಳ ವಿಶ್ಲೇಷಣಾ ಪುಸ್ತಕವನ್ನು ಆಸಕ್ತಿಯಿಂದ ಓದಲಾರಂಭಿಸಿದ. ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ನಾಲ್ಕೈದು ರೀತಿಯಲ್ಲಿ ಬಾಚಿಕೊಂಡಳು. ಆರು ವರ್ಷಗಳ ಹಿಂದೆ ತನ್ನ ತಲೆಕೂದಲು ಎಷ್ಟೊಂದು ಒತ್ತಾಗಿ, ಉದ್ದವಾಗಿದ್ದುದುನ್ನು ನೆನಪಿಸಿಕೊಂಡು ದಿಗಿಲುಗೊಂಡಳು. ಪೂರ್ಣ ರಾತ್ರಿ ತನ್ನ ಕೂದಲಿಗೆ ಮೆಹಂದಿ ಹಚ್ಚಿಕೊಂಡಳು. ಕೂದಲನ್ನು ಒಣಗಿಸಿಕೊಳ್ಳುತ್ತಾ ಮಲಗುವ ಕೋಣೆಗೆ ಬಂದಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ.

“ಹೂ” ಎಂದಳು ಪೂರ್ಣ. ಸುಂದರ್ ಪಕ್ಕದಲ್ಲೇ ಮಲಗಿ ಫ್ಯಾನ್‍ಗಾಳಿಗೆ ಹಾರುತ್ತಿದ್ದ ಕೂದಲು ಸುಂದರ್ ಮುಖದ ಮೇಲೆ ಹರಡುತ್ತಿದ್ದಂತೆ ಪೂರ್ಣ ತನ್ನ ಹೊಸ ಕನಸಿನ ಕುರಿತು ಹೇಳಲಾರಂಭಿಸಿದಳು.
“ನಾನು ಮತ್ತೇ ತಾರ್ನಾಕಕ್ಕೆ ಹೋದೆ. ನನ್ನ ಕೈಯಲ್ಲಿ ಕ್ಯಾಮರಾ. ನಾವು ಸುತ್ತಾಡಿದ ಪ್ರದೇಶಗಳು, ನಮ್ಮ ಹಳೆಯ ಮನೆ, ಸಿ.ವಿ. ವಾಸಿಸುತ್ತಿದ್ದ ಕೋಣೆ, ನೆನಪಿರುವ ಪ್ರತಿಯೊಂದನ್ನು ಫೋಟೋ ತೆಗೆಯುತ್ತಿದ್ದೆ. ಯೂನಿವರ್ಸಿಟಿ ಹಾಸ್ಟೆಲ್ ಹತ್ತಿರ ಸಿ.ವಿ. ಕಾಣಿಸಿದ. ಅಲ್ಲಿನ ಬೆಂಚೊಂದರ ಮೇಲೆ ಮಲಗಿದ್ದ. ಎಬ್ಬಿಸಲು ಹತ್ತಿರ ಹೋಗುವಷ್ಟರಲ್ಲಿ ‘ಎಬ್ಬಿಸಬೇಡಿ ಎಬ್ಬಿಸಬೇಡಿ, ಗಾಢವಾದ ನಿದ್ರೆಯನ್ನು ಕನಸುತ್ತಿದ್ದಾನೆ’ ಎಂದರು ಯಾರೊ. ರಸ್ತೆ ಮೇಲೆ ಒಂದು ದೊಡ್ಡ ಮೆರವಣಿಗೆ. ‘ನಮ್ಮ ನಿದ್ರೆಯನ್ನು ನಮಗೆ ಕೊಡಿ’ ಎಂದು ಕೂಗುತ್ತಿದ್ದಾರೆ. ‘ಮೇಕ್ ಲವ್, ಸ್ಲೀಪ್‍ವೆಲ್’ ಎಂಬ ನಿನಾದಗಳನ್ನು ಮಾಡುತ್ತಿದ್ದರು. ‘ನಾವು ಮತ್ತೇ ಮದುವೆಯಾಗೋಣವೆಂದು’ ಎಸ್.ಎಮ್.ಎಸ್. ಮೂಲಕ ನನಗೆ ಪ್ರಪೋಜ್ ಮಾಡುತ್ತಿದ್ದೀ. ಅಷ್ಟರಲ್ಲಿ ಸಿ.ವಿ. ನಿದ್ರೆಯಿಂದೆದ್ದು ಶಾಲಿನ ಕೆಳಗೆ ಅವಿತಿಟ್ಟಿದ್ದ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಾ ಹೊರಟು ಹೋದ.”

ಪೂರ್ಣ ಲುಂಬಿನಿ ಪಾರ್ಕ್‍ನಲ್ಲಿ ಬೋಟ್ ರೈಡ್ ಮಾಡುತ್ತಿರುವಾಗ ಸುಂದರ್ ಕೋಠಿ ಕಡೆ ಹೋಗಿ ಫ್ರಾಯಿಡ್ ಬರೆದ ‘ಇಂಟರಪ್ಟೇಶನ್ಸ್ ಆಫ್ ಡ್ರೀಮ್ಸ್’ ಪುಸ್ತಕ ಕೊಂಡು ತಂದ. ಬರುವಾಗ ಇಬ್ಬರೂ ಇರಾನಿ ರೆಸ್ಟಾರೆಂಟ್‍ಗೆ ಹೋದರು. ಈಗಲೇ ಬರುತ್ತೇನೆಂದು ಹೇಳಿ ಹೋಗಿ, ಪಕ್ಕದ ಬಾರ್‍ನಲ್ಲಿ ಎರಡು ಪೆಗ್ ವಿಸ್ಕಿ ಸೇವಿಸಿ ಬಂದ. ಆ ಸಂಜೆ ಸುಂದರ್ ವಿಸ್ಕಿ ಕೊಟ್ಟ ಕಿಕ್‍ನಿಂದ ಪೂರ್ಣಳಿಗೆ ಉಚಿತವಾಗಿ ಸಮಕಾಲೀನ ರಾಜಕೀಯ ವಿಶ್ಲೇಷಣೆ ಕೊಟ್ಟ. ಜೇಬಿನಲ್ಲಿ ತುಂಬಾ ದಿನಗಳಿಂದ ಬಚ್ಚಿಟ್ಟುಕೊಂಡಿದ್ದ ಸಿ.ವಿ. ಪತ್ರವನ್ನು ದೊಡ್ಡ ದನಿಯಲ್ಲಿ ಓದಿದ. ಥಟ್ಟನೆ ದುಃಖ ಉಮ್ಮಳಿಸಿ ಬಂದು ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಜೋರಾಗಿ ಅತ್ತ. ಪೂರ್ಣಳಲ್ಲಿ ಯಾವುದೇ ಸ್ಪಂದನೆ ಇರಲಿಲ್ಲ. ಸಿನಿಮಾದ ದೃಶ್ಯವೊಂದನ್ನು ನೋಡುತ್ತಿರುವಂತೆ ಅವನನ್ನು ನೋಡಿದಳು.

ಆ ರಾತ್ರಿ ಅವರಿಬ್ಬರೂ ಕನಸುಗಳ ಬಗ್ಗೆ ತುಂಬಾ ಹೊತ್ತು ಮಾತಾಡಿಕೊಂಡರು. ಉತ್ಸಾಹದಿಂದ ಇಷ್ಟದಿಂದ ಪೂರ್ಣಳನ್ನು ಹತ್ತಿರ ಸೆಳೆದುಕೊಂಡ ಸುಂದರ್. ಸುಂದರ್ ಮಲಗಿದ ಮೇಲೂ ಎಚ್ಚರದಿಂದಿದ್ದಳು ಪೂರ್ಣ. ಈಗ ಆಕೆಗೆ ಮಲಗಿದ ತಕ್ಷಣ ನಿದ್ರೆ ಹತ್ತುತ್ತಿಲ್ಲ. ಎರಡು ಮೂರು ತಾಸು ಹಾಗೆಯೇ ಕಣ್ಮುಚ್ಚಿಕೊಂಡು ಸೀಲಿಂಗ್ ಫ್ಯಾನ್ ಕಡೆಗೋ, ದೂರದಲ್ಲಿ ಮಿನುಗುವ ದೀಪದ ಕಡೆಗೋ ನೋಡುತ್ತಿರುತ್ತಾಳೆ. ತುಂಬಾ ಸಲ ನಿಟ್ಟುಸಿರು ಬಿಡುತ್ತಾಳೆ. ವಿನಾಕಾರಣ ಕಣ್ಣಲ್ಲಿ ನೀರು ಉಕ್ಕುತ್ತದೆ. ಸುಂದರ್ ಮೆಲೆ ಕೋಪ ಬರುತ್ತದೆ. ಆಸ್ಪತ್ರೆ ಕೋಣೆ, ಮರಣಿಸಿದ ಮಗು, ಕಿಕ್ಕಿರಿದ ರಸ್ತೆಗಳು, ನಿರ್ಲಿಪ್ತವಾಗಿ ನಡೆಯುತ್ತಿರುವ ಜನ, ಲಾಠೀ ಚಾರ್ಜ್, ಮುಷ್ಕರ, ಮಾರ್ಚುರಿ, ಹೊರಗೆ ಮಲಗಿಸಿದ ಶವಗಳು ಹೀಗೆ ಹಲವಾರು ದೃಶ್ಯಗಳು ಕಣ್ಮುಂದೆ ಸುಳಿದು ಭಯ ಭೀತಳಾಗುತ್ತಾಳೆ ಪೂರ್ಣ. ಸುಂದರ್‍ನನ್ನು ಗಟ್ಟಿಯಾಗಿ ಅವಚಿ ಕೊಂಡು ಬಾರದ ನಿದ್ರೆಗಾಗಿ ಒದ್ದಾಡುತ್ತಾಳೆ.

ಆ ಮಾರನೆಯ ದಿನ ಸಾಯಂಕಾಲ ಪೂರ್ಣ ಆಫೀಸಿನಿಂದ ಬರುತ್ತಾ ಚಾಕಲೆಟ್, ಮಲ್ಲಿಗೆದಂಡೆ ಕೊಂಡು ಹ್ಯಾಂಡ್‍ಬ್ಯಾಗ್‍ನಲ್ಲಿಟ್ಟುಕೊಂಡಳು. ಯುದ್ಧಭೂಮಿಯಿಂದ ಬರುತ್ತಿದ್ದಂತೆ ಜನ, ಅವರನ್ನು ಹಾಯ್ದುಕೊಂಡು ಬಸ್ ಸ್ಟಾಪಿನಲ್ಲಿ ನಿಂತಿರುವಾಗ, ಮೋಟಾರ್ ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಹುಡುಗರು, ಆಕೆಯ ಪಕ್ಕದಲ್ಲಿ ಹೋಗುತ್ತಾ ಆಕೆಯ ಹ್ಯಾಂಡ್‍ಬ್ಯಾಗನ್ನು ಸರಕ್ಕನೆ ಎಳೆದು ಕ್ಷಣಗಳಲ್ಲಿ ಮಾಯವಾದರು. ಜನರೆಲ್ಲರೂ ಪೂರ್ಣಳನ್ನು ಸುತ್ತುವರೆದು, ಸಮಾಧಾನ ಹೇಳಿ, ಪೊಲೀಸ್ ಕಂಪ್ಲೇಂಟ್ ಕೊಡಲು ಸಲಹೆ ನೀಡಿದರು. ಅದರಿಂದ ಉಪಯೋಗವಿಲ್ಲವೆಂದು ಪೂರ್ಣಳಿಗೆ ಗೊತ್ತು. ತುಂಬಾ ಹೊತ್ತು ಅಲ್ಲೇ ನಿಂತಿದ್ದಳು ಆಕೆ. ಬಸ್ ಟಿಕೆಟ್‍ಗೆ ಸಹಿತ ಹಣವಿರಲಿಲ್ಲ. ಪೇವ್‍ಮೆಂಟ್ ಮೇಲೆ ನಡೆಯುತ್ತಾ ಮನೆ ಕಡೆ ಹೆಜ್ಜೆ ಹಾಕತೊಡಗಿದಳು.
“ಬದುಕು ಹೀಗಾದರೆ ಒಳ್ಳೆಯ ಕನಸುಗಳು, ಒಳ್ಳೆಯ ನಿದ್ರೆ ಬರುವುದಾದರೂ ಹೇಗೆ” ಎಂದು ಕೊಂಡಳು.

2004

ಸುಂದರ್‍ಗೆ ಆ ದಿನ ಸಂಜೆ ಐದು, ಆರು ಗಂಟೆಗಳ ನಡುವೆ ಸುಮಾರು ಇನ್ನೂರಕ್ಕೂ ಹೆಚ್ಚು ಎಸ್‍ಎಂಎಸ್ ಬಂದವು. ಎಲ್ಲ ಮೆಸೇಜ್‍ಗಳಲ್ಲಿ ಅವನನ್ನು ‘ಟ್ರೈಟರ್’ ಎಂದು, ‘ಬ್ರೋಕರ್’ ಎಂದು ‘ಥರ್ಡ್‍ರೇಟ್ ಪಿಂಪ್’ ಎಂದು ಹೇಳಲಾಗದ ಭಾಷೆಯಲ್ಲಿ ಅವನನ್ನು ಬೈಯುತ್ತಾ “ಹಣಕ್ಕಾಗಿ ಈ ಮಟ್ಟಕ್ಕೆ ಇಳಿಯಬೇಕೇ… ಹೋಗಲಿ’’ ಎಂದು ಪೂರ್ಣಳನ್ನು ಕುರಿತು ಅತ್ಯಂತ ಅಸಹ್ಯವಾದ ಬೈಗುಳ ಮೆಸೇಜ್ ನೋಡಿದ ನಂತರ, ಅವನ ಕಣ್ಣುಗಳಲ್ಲಿ ನೀರು ಉಕ್ಕಿಬಂದವು. ದುಃಖ ಮುದ್ರೆಯಲ್ಲಿರುವ ಗೌತಮನಂತೆ ತುಂಬಾ ಹೊತ್ತು ಕಳೆದು, ಮನೆಯಲ್ಲಿ ಉಳಿದಿದ್ದ ಕೊನೆಯ ನೂರು ರೂಪಾಯಿಗಳಿಗೆ ಪರೋಟ, ಒಂದು ಬಿಯರ್ ಪಾರ್ಸಲ್ ಮಾಡಿಸಿಕೊಂಡ. ಬಿಯರ್ ಪೂರ್ತಿಯಾಗಿ ಕುಡಿದು, ಬೆಡ್‍ರೂಮಿಗೆ ಹೋಗಿ ಹಾಸಿಗೆಯನ್ನು ಪ್ರೀತಿಯಿಂದ ನೇವರಿಸಿ, ಎರಡು ಮಸ್ಕಿಟೋ ಕಾಯಿಲ್‍ಗಳನ್ನು ಹೊತ್ತಿಸಿಕೊಂಡು ಏಳು ಗಂಟೆಗೆಲ್ಲಾ ನಿದ್ದೆ ಹೋದ. ನಿದ್ರೆಯಲ್ಲಿ ಅವನೊಬ್ಬ ಹೆಣ್ಣಿನ ಕುರಿತು ಕನಸುಕಂಡ(ಆಕೆ ಪೂರ್ಣಳಲ್ಲ). ಆ ಹೆಂಗಸು ನಗ್ನವಾಗಿ ಮಲಗಿದ್ದಳು. ದೇಹದ ತುಂಬಾ ನೂರರ ನೋಟುಗಳನ್ನು ಹೊದ್ದುಕೊಂಡಿದ್ದಳು. ಸುಂದರ್ ಆಕೆಯ ಮೇಲೆ ಬಾಗಿ, ಆಕೆಯ ತುಟಿಗಳನ್ನು ಚುಂಬಿಸಲು ಪ್ರಯತ್ನಿಸಿದ. ಆಕೆಯ ತುಟಿಗಳು ಕಬ್ಬಿಣದಂತೆ ತುಕ್ಕು ಹಿಡಿದ ವಾಸನೆ ಅಪ್ಪಳಿಸಿ, ಥೂ ಥೂ ಎಂದು ಉಗಿಯುತ್ತಾ ನಿದ್ದೆಯಿಂದೆದ್ದ. ತಣ್ಣನೆ ನೀರಿನಿಂದ ಮುಖ ತೊಳೆದ ಮೇಲೆ ಅವನಿಗೆ ತುಂಬಾ ವಿಷಯಗಳು ಅರ್ಥವಾದವು. ತಾನು ಜೈಲಲ್ಲಿದ್ದ ಹದಿನೈದು ದಿನಗಳಲ್ಲಿ ಸಾಕಷ್ಟು ಸಲ ಮನೆಯ ಮೇಲೆ ದಾಳಿ ನಡೆದಿವೆ. ಭಯಗೊಂಡ ಪೂರ್ಣ ತಿಂಗಳು ತುಂಬಿದ ಮಗುವಿನೊಂದಿಗೆ ತವರಿಗೆ ಹೋಗಿದ್ದಾಳೆ. ಮನೆಯೆಲ್ಲ ಧ್ವಂಸ ಮಾಡಲಾಗಿದೆ. ಸಿಕ್ಕಿದ್ದು ದೋಚಿದ್ದಾರೆ. ನೂರಾರು ಸಿಡಿಗಳು, ಕಂಪ್ಯೂಟರ್, ಮನೆ ಮುಂದಿನ ಮೋಟಾರ್ ಸೈಕಲ್, ಬಟ್ಟೆಗಳು, ಬೀರು ಯಾವುದನ್ನು ಉಳಿಸಿರಲಿಲ್ಲ.

ಸುಂದರ್ ಹಾಸಿಗೆಯ ಮೇಲೆ ನಿಸ್ತೇಜನಾಗಿ ಕುಳಿತುಕೊಂಡ. ಗೋಡೆಯ ಮೇಲಿನ ಫೋಟೋಗಳು, ಕೊನೆಗೆ ಮದುವೆ ಫೋಟೋ ಕೂಡಾ ಮಾಯವಾಗಿತ್ತು. ಎದೆಯಲ್ಲಿ ಸಣ್ಣದಾಗಿ ನೋವು, ಭರಿಸಲಾರದಷ್ಟಾಗಿ ಉನ್ಮಾದದಿಂದ ಜೋರಾಗಿ ಅತ್ತ.

ಈಗ ಆಕೆಗೆ ಮಲಗಿದ ತಕ್ಷಣ ನಿದ್ರೆ ಹತ್ತುತ್ತಿಲ್ಲ. ಎರಡು ಮೂರು ತಾಸು ಹಾಗೆಯೇ ಕಣ್ಮುಚ್ಚಿಕೊಂಡು ಸೀಲಿಂಗ್ ಫ್ಯಾನ್ ಕಡೆಗೋ, ದೂರದಲ್ಲಿ ಮಿನುಗುವ ದೀಪದ ಕಡೆಗೋ ನೋಡುತ್ತಿರುತ್ತಾಳೆ. ತುಂಬಾ ಸಲ ನಿಟ್ಟುಸಿರು ಬಿಡುತ್ತಾಳೆ. ವಿನಾಕಾರಣ ಕಣ್ಣಲ್ಲಿ ನೀರು ಉಕ್ಕುತ್ತದೆ. ಸುಂದರ್ ಮೆಲೆ ಕೋಪ ಬರುತ್ತದೆ. ಆಸ್ಪತ್ರೆ ಕೋಣೆ, ಮರಣಿಸಿದ ಮಗು, ಕಿಕ್ಕಿರಿದ ರಸ್ತೆಗಳು, ನಿರ್ಲಿಪ್ತವಾಗಿ ನಡೆಯುತ್ತಿರುವ ಜನ, ಲಾಠೀ ಚಾರ್ಜ್, ಮುಷ್ಕರ, ಮಾರ್ಚುರಿ, ಹೊರಗೆ ಮಲಗಿಸಿದ ಶವಗಳು ಹೀಗೆ ಹಲವಾರು ದೃಶ್ಯಗಳು ಕಣ್ಮುಂದೆ ಸುಳಿದು ಭಯ ಭೀತಳಾಗುತ್ತಾಳೆ ಪೂರ್ಣ.

ಆಗಸ್ಟ್ ತಿಂಗಳು 2004ನೇ ವರ್ಷ. ಮಳೆಗಾಲ ನಿಂತು ಹೋಗಿ ಮತ್ತೆ ಬೇಸಿಗೆ ಆರಂಭಗೊಂಡಿತ್ತು. ಬಿಸಿಲ ಬೇಗೆ, ತಡೆಯಲಾರದ ಸೆಖೆ. ಎಲ್ಲೂ ಎಳ್ಳಷ್ಟು ಗಾಳಿಯಿಲ್ಲ. ಒಂದು ವರ್ಷದ ಹಿಂದೆ ಸುಂದರ್ ಕೆಲಸ ಕಳೆದುಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ಆತ. ಏಳೆಂಟು ವರ್ಷದ ಮಕ್ಕಳು, ಮಕ್ಕಳ ನಡುವೆ ಕೂತು ಪಾಠ ಹೇಳಿಕೊಡೋದು ಆತನಿಗೆ ಇಷ್ಟ. ಒಬ್ಬನು ತಲೆಗೂದಲಿನಲ್ಲಿ ಕೈತೂರಿಸಿ ಆಟವಾಡಿಕೊಳ್ತಿದ್ದ. ಮತ್ತೊಬ್ಬ, ಸುಂದರನ ಬೆನ್ನ ಮೇಲೆ ಏಟು ಹಾಕುತ್ತಾ, ಇನ್ನೊಬ್ಬ ಆತನ ಜೇಬಿನಿಂದ ಪೆನ್ ತೆಗೆದು, ಆತನ ಕನ್ನಡಕವನ್ನು ಇಟ್ಟುಕೊಂಡು, ಸ್ವಲ್ಪ ಹೊತ್ತು ಆಟವಾಡಿ ಮಕ್ಕಳಿಗೆ ಒಂದಿಷ್ಟು ಪಾಠ ಹೇಳಿ ಕೊಟ್ಟು; ಆದರೆ ಹೆಡ್ ಮಾಸ್ತರರಿಗೆ ಇದು ಇಷ್ಟವಿರುತ್ತಿರಲಿಲ್ಲ. ಮಕ್ಕಳನ್ನು ದಂಡಿಸಿ, ಹೆದರಿಸಿ, ಓದು ಕಲಿಸಬೇಕೆಂದು ಆತನ ಥಿಯರಿ. ‘ಚರ್ಮ ಸುಲಿಯಿರಿ. ಹಾಳಾದವರನ್ನು’ ಎನ್ನುತ್ತಿದ್ದ. ಅದೇ ಹೆಸರಿನ ಶೀರ್ಷಿಕೆಯಿಂದ ಸುಂದರ್ ದಿನಪತ್ರಿಕೆಯೊಂದಕ್ಕೆ ಲೇಖನ ಬರೆದ. ಹೆಡ್‍ಮಾಸ್ತರ್ ಬಗ್ಗೆ, ಶಾಲೆಯ ಬಗ್ಗೆ ಒಟ್ಟು ವ್ಯವಸ್ಥೆಯನ್ನು ಜಾಲಾಡಿದ. ಆ ಲೇಖನ ಬರೆದದ್ದಕ್ಕೆ ಸುಂದರ್‍ಗೆ ಮೆಮೋ ಕೊಟ್ಟರು. ಮತ್ತೊಮ್ಮೆ ಹೆಡ್ ಮಾಸ್ಟರ್

ವಿದ್ಯಾರ್ಥಿಯೊಬ್ಬನನ್ನು ಬಿಸಿಲಲ್ಲಿ ಒಂಟಿ ಕಾಲಿನ ಮೇಲೆ ನಿಲ್ಲಿಸಿ ‘ಐ ಯಾಮ್ ಎ ಡಾಂಕಿ’ ಎಂದು ಬಾಯಿ ಪಾಠ ಮಾಡಿಸುತ್ತಿದ್ದರು. ಸಿಟ್ಟು ತಡೆದುಕೊಳ್ಳಲಾರದೇ ಸುಂದರ್, ಹೆಡ್‍ಮಾಸ್ತರ್‍ರ ಕಪಾಳಕ್ಕೆ ಬಾರಿಸಿದ. ನಂತರ ಸಸ್ಪೆನ್ಶನ್ ವಿಚಾರಣೆ, ಅಮಾನತು ಕೋರ್ಟ್‍ಕೇಸು ಇನ್ನೂ ನಡೆಯುತ್ತಿತ್ತು. ಸುಂದರ್‍ಗೆ ಕೆಲಸ ಹೋಗಿ ಆರು ತಿಂಗಳು ದಾಟಿತ್ತು. ಕೆಲಸ ಕಳೆದುಕೊಂಡ ಹೊಸತರಲ್ಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಬದುಕು ಸಾಗಿಸಬಹುದೆಂದು ಭಾವಿಸಿದ್ದ. ಅದು ಸಾಧ್ಯವಾಗದೆಂದು ಅರ್ಥವಾಯಿತು. ಪಾರ್ಟ್ ಟೈಂ ಕೆಲಸ ಹುಡುಕೋದು ತುಂಬಾ ಸರಳವೆಂದು ಭಾವಿಸಿದ್ದ. ಅದೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಪೂರ್ಣ ಬೋಟಿಕ್ ಅಂಗಡಿಯೊಂದರಲ್ಲಿ ಸೇಲ್ಸ್ ಲೇಡಿಯಾಗಿ ಸೇರಬೇಕಾಗಿಬಂತು.

ಮಳೆ ಬರುತ್ತಿದ್ದ ಒಂದು ರಾತ್ರಿ ಪೂರ್ಣ ಅವನ ಎದೆಯ ಮೇಲೆ ತಲೆಯಿಟ್ಟು ನಿದ್ರಿಸುತ್ತಿರುವಾಗ, ಸಣ್ಣದಾಗಿ ಮಳೆ ಹನಿಗಳು, ಗುಡುಗು ಸಿಡಿಲುಗಳು; ಎಚ್ಚರಗೊಂಡ ಪೂರ್ಣ ಹೊರಗೆ ಹೋಗಿ ಬಾಗಿಲು ತೆರೆದು ತಂಗಾಳಿ ಬೆರೆತ ಮಳೆಯಲ್ಲಿ ನೆನೆಯುತ್ತಾ ಹಾಡೊಂದನ್ನು ಹಮ್ ಮಾಡುತ್ತಾ; ಆ ಮಳೆ ಮನೋಹರವಾದ ಕನಸಿನಂತೆ ಪೂರ್ಣಳನ್ನು ಆವರಿಸಿ, ಅವಳನ್ನು ಟ್ರಾನ್ಸ್‍ನೊಳಕ್ಕೆ ಕರೆದೊಯ್ಯಿತು. ವರಂಡಾದ ಹೊರಗೆ ಮೋಹಕ ತಂಗಾಳಿಯ ಮತ್ತಿನಲ್ಲಿ ಹಾಗೆಯೇ ನಿದ್ರಾ ಪರವಶಳಾದಳು.

ನಡುರಾತ್ರಿ ಯಾವಾಗಲೋ ನಿದ್ರೆಯಿಂದೆದ್ದ ಸುಂದರ್ ಹಾಸಿಗೆಯನ್ನು ಸವರಿದ. ಹಾಸಿಗೆ ಪೂರ್ಣಳಂತೆ ವಾಸನೆ ಬಂತಾಗಲೀ, ಪೂರ್ಣ ಅಲ್ಲಿರಲಿಲ್ಲ. ಸುಂದರ್‍ಗೆ ಭಯವಾಯ್ತು. ಉದ್ಯೋಗವಿಲ್ಲವೆಂದು, ಬದುಕಲು ಅಸಾಧ್ಯವೆಂದೂ, ತನ್ನನ್ನು ಬಿಟ್ಟು ಹೋಗಿರಬಹುದೆಂದು… ಭಯದಿಂದ ಕೂಗಿದ ಸುಂದರ್.
“ಪೂರ್ಣ ಪೂರ್ಣಾ ಹೀಗೇಕೆ ಮಾಡಿದೆ?” ಎಂದು ಜೋರಾಗಿ ಅತ್ತ. ತುಂಬಾ ಹೊತ್ತು ಆ ರೀತಿ ಅತ್ತ ನಂತರ ಪೂರ್ಣ ಪ್ರತ್ಯಕ್ಷಳಾದಳು.
“ಕೆಟ್ಟ ಕನಸೇ? ಹೆದರಿ ಬಿಟ್ರಾ?” ಎಂದಳು.
“ಹಾಗೆ ಹೆದರಿ ಬಿಟ್ಟರೆ ಹೇಗೆ?” ಎಂದು ಮುಂದಕ್ಕೆ ಬಾಗಿ, ಅವನ ತಲೆಯನ್ನು ಮೃದುವಾಗಿ ಸವರಿದಳು. ಆ ಸಾಂತ್ವಾನ ಇನ್ನೂ ಸುಂದರ್‍ನಲ್ಲಿ ಇಳಿದಿರಲಿಲ್ಲ. ಅವನನ್ನು ಭಯ ಪೂರ್ತಿಯಾಗಿ ಆವಾಹಿಸಿತ್ತು. ಆ ಭಯದೊಳಗಿಂದ ಹೊಸ ಸುಂದರ್ ಅವತರಿಸಿದ. ಹಿಪ್ನಾಟಿಸಂನಲ್ಲಿ ಹದಿನೈದು ದಿನಗಳ ಕೋರ್ಸ್ ತೆಗೆದುಕೊಂಡ. ಸ್ವಲ್ಪ ತಂತ್ರಶಾಸ್ತ್ರ ಕಲಿತುಕೊಂಡ. ಕ್ರಮವಾಗಿ ಆತ ದೀರ್ಘವಾಗಿ ಆಲೋಚಿಸುವುದು, ತತ್ವಜ್ಞಾನಿಯಂತೆ ಮಾತನಾಡುವುದು(ದಟ್ಟವಾಗಿ ದಾಡಿ ಬೆಳೆಸಿದ), ಸಾಂಕೇತಿಕ ಕನಸುಗಳನ್ನು ಕಾಣಲಾರಂಭಿಸಿದ. ದಿನಪತ್ರಿಕೆಯಲ್ಲಿ ‘ನಿಮ್ಮ ಬದುಕನ್ನು ಬದಲಿಸುವ ಹತ್ತು ಸೂತ್ರಗಳಿಗಾಗಿ ಈ ಮೊಬೈಲ್‍ನಂಬರ್‍ಗೆ ಕರೆ ಮಾಡಿ’ ಎಂದು ಜಾಹಿರಾತು ಕೊಟ್ಟ.

ವಿದ್ಯಾರ್ಥಿಯೊಬ್ಬನನ್ನು ಬಿಸಿಲಲ್ಲಿ ಒಂಟಿ ಕಾಲಿನ ಮೇಲೆ ನಿಲ್ಲಿಸಿ ‘ಐ ಯಾಮ್ ಎ ಡಾಂಕಿ’ ಎಂದು ಬಾಯಿ ಪಾಠ ಮಾಡಿಸುತ್ತಿದ್ದರು. ಸಿಟ್ಟು ತಡೆದುಕೊಳ್ಳಲಾರದೇ ಸುಂದರ್, ಹೆಡ್‍ಮಾಸ್ತರ್‍ರ ಕಪಾಳಕ್ಕೆ ಬಾರಿಸಿದ. ನಂತರ ಸಸ್ಪೆನ್ಶನ್ ವಿಚಾರಣೆ, ಅಮಾನತು ಕೋರ್ಟ್‍ಕೇಸು ಇನ್ನೂ ನಡೆಯುತ್ತಿತ್ತು. ಸುಂದರ್‍ಗೆ ಕೆಲಸ ಹೋಗಿ ಆರು ತಿಂಗಳು ದಾಟಿತ್ತು. ಕೆಲಸ ಕಳೆದುಕೊಂಡ ಹೊಸತರಲ್ಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಬದುಕು ಸಾಗಿಸಬಹುದೆಂದು ಭಾವಿಸಿದ್ದ. ಅದು ಸಾಧ್ಯವಾಗದೆಂದು ಅರ್ಥವಾಯಿತು. ಪಾರ್ಟ್ ಟೈಂ ಕೆಲಸ ಹುಡುಕೋದು ತುಂಬಾ ಸರಳವೆಂದು ಭಾವಿಸಿದ್ದ. ಅದೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಪೂರ್ಣ ಬೋಟಿಕ್ ಅಂಗಡಿಯೊಂದರಲ್ಲಿ ಸೇಲ್ಸ್ ಲೇಡಿಯಾಗಿ ಸೇರಬೇಕಾಗಿಬಂತು.

‘ಗಾಢವಾಗಿ ನಿದ್ರಿಸುವುದು ಹೇಗೆ?’, ‘ವಿಜಯಪಥವನ್ನು ನಿಮ್ಮ ಗುಲಾಮನನ್ನಾಗಿ ಮಾಡಿಕೊಳ್ಳುವುದು ಹೇಗೆ?’ ‘ಆರು ತಿಂಗಳಲ್ಲಿ ಲಕ್ಷಾಧಿಪತಿಯಾಗುವುದು ಹೇಗೆ?, ‘ಬಯಸಿದ ಹೆಣ್ಣನ್ನು ಪಡೆಯುವುದು ಹೇಗೆ?’, ‘ಸೆಕ್ಸ್ ಜೀವನ ಕಹಿಯಾಗಿದೆಯೇ? ಅಮೃತವನ್ನು ಪಡೆಯುವುದು ಹೇಗೆ? ಎಂದು ಸಾಲಾಗಿ ಜಾಹೀರಾತುಗಳನ್ನು ಕೊಟ್ಟ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಅವನಿಗೆ ಎಸ್‍ಎಂಎಸ್‍ಗಳು ಬಂದವು. ಎಲ್ಲರಿಗೂ ನೂರು ರೂಪಾಯಿಗಳನ್ನು ಕಳಿಸಲು ಕೋರುತ್ತಿದ್ದ. ಇಪ್ಪತ್ತು ಪುಟಗಳ ಪುಸ್ತಕವನ್ನು (ಅವನು ಬರೆದದ್ದೇ) ಅವರಿಗೆ ಅಂಚೆಯಲ್ಲಿ ಕಳಿಸುತ್ತಿದ್ದ. ಅ ಪುಸ್ತಕದಲ್ಲಿ ಸೈಕಾಲಜಿ, ತಂತ್ರ, ತತ್ವಜ್ಞಾನ, ಒಂದಿಷ್ಟು ಪೋಯೆಟ್ರಿ ಇರುತ್ತಿತ್ತು. ಆಶ್ಚರ್ಯವೆಂದರೆ, ಅವುಗಳನ್ನು ಓದಿದವರು ತಮ್ಮ ಬದುಕಿನಲ್ಲಿ ಬದಲಾವಣೆ ಬಂದಿತೆಂದು ಹೇಳುತ್ತಿದ್ದರು. ವರ್ಷ ಕಳೆಯುವಷ್ಟರಲ್ಲಿ ಸುಂದರ್‍ನ ಆದಾಯ ಲಕ್ಷಗಳನ್ನು ದಾಟಿತ್ತು. ಅದೇ ಉತ್ಸಾಹದಿಂದ ‘ಆರ್ಟ್ ಆಫ್ ವಿನ್ನಿಂಗ್’ ಎಂದು ಟ್ರೈನಿಂಗ್ ಕ್ಲಾಸುಗಳನ್ನು ಪ್ರಾರಂಭಿಸಿದ. ಯೋಗಾ, ಮೆಮೊರಿ ಟೆಕ್ನಿಕ್ಸ್, ಪ್ರೀತಿಸುವುದು, ಪ್ರೀತಿಸಲ್ಪಡುವುದು…

ಸುಂದರ್ ಕೈಗಳು ವಿಶಾಲವಾದವು. ಊಹಿಸಲಾರದಷ್ಟು ಹಣ, ಖ್ಯಾತಿ ಬಂತು. ಪೂರ್ಣಳನ್ನು ಕೆಲಸದಿಂದ ಬಿಡಿಸಿದ. ಪೂರ್ಣ ಮತ್ತೆ ಗರ್ಭಧರಿಸಿದಳು. ತಿಂಗಳು ತುಂಬಿ ಮನೋಹರವಾದ ಕನಸಿನಂತಾದಳು. ಆಕೆಯನ್ನು, ಆ ನಿದ್ರೆಯನ್ನು ನೋಡಿ ಖುಷಿಪಡುವ ಸಮಯ ಸುಂದರ್‍ಗಿರಲಿಲ್ಲ. ಮೆಮರಿ ಪಿಲ್ಸ್ ದುಷ್ಪರಿಣಾಮದಿಂದ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆಸ್ಪತ್ರೆ ಸೇರಿದ. ‘ಪ್ರೀತಿಸಲ್ಪಡುವುದು’ನಲ್ಲಿ ಕೋರ್ಸ್ ಮಾಡಿದ ಕಾಲೇಜು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಯಾವ ಡಿಗ್ರಿ ಇಲ್ಲದೇ ಕ್ವಾಕ್‍ನಂತೆ ಸೈಕಾಲಜಿ ಕ್ಲಿನಿಕ್ ನಡೆಸುತ್ತಿದ್ದಾನೆಂದು ಪೊಲೀಸರು ಕೇಸ್ ಜಡಿದರು. ‘ಆರ್ಟ್ ಆಫ್ ವಿನ್ನಿಂಗ್’ ಮುಚ್ಚಲ್ಪಟ್ಟಿತು. ಕೋರ್ಸ್‍ಗಳಿಗೆ ಅಡ್ವಾನ್ಸ್ ಕೊಟ್ಟವರು ಅವನ ಮನೆಯ ಮೇಲೆ ದಾಳಿ ಮಾಡಿದರು.

ಆ ರಾತ್ರಿ ನಿರ್ಜನವಾದ ಮನೆಯ ವರಂಡಾದಲ್ಲಿ ಬೆಳಕಿಲ್ಲದ ಕೋಣೆಯಲ್ಲಿ, ಮೇಲ್ಛಾವಣಿಯಿಂದ ನೂರಾರು ಕೈಗಳು, ಅವನತ್ತ ಬೆರಳು ತೋರಿಸುತ್ತಾ, ‘ಟ್ರೈಟರ್’, ‘ಟ್ರೈಟರ್’ ಎಂದು ಕೋರಸ್‍ನಲ್ಲಿ ಕೂಗುತ್ತಾ, ಹೊರಗೆ ಬೆಳದಿಂಗಳು ಬಿಳುಚಿಕೊಂಡು, ರಾತ್ರಿ ನಿಸ್ತೇಜವಾಗಿ ಕಳೆದು ಕಾಲ ಅವನೆದುರು ಮೊಳಕಾಲೂರಿ ಹೀಗೇಕೆಂದು ಪ್ರಶ್ನಿಸುತ್ತಿರುವಂತೆ, ಆರಂಭದ ದಿನಗಳ ಪೂರ್ಣ ನೆನಪಿಗೆ ಬಂದು, ಮೃದುವಾಗಿ ಆತನ ತಲೆಗೂದಲನ್ನು ನೇವರಿಸುತ್ತಾ “ಎಲ್ಲಿ ಹೋದವು ಆ ಮಧುರವಾದ ದಿನಗಳು’ ಎಂದು ಕೇಳಿದಂತಾಗಿ ದುಃಖದಂತಹ, ಹೇಳಲಾರದಂಥ ಅಳಲು ಆತನನ್ನು ಸುತ್ತುವರೆದು ಆ ರಾತ್ರಿಯೆಲ್ಲಾ ವಿಲವಿಲನೆ ಒದ್ದಾಡಿದ. ಯಾವಾಗಲೋ ಬೆಳಗಿನ ಜಾವ ಒಂದು ನಿದ್ದೆಯ ಮೋಡ ಅವನನ್ನು ಅನುಕಂಪದಿಂದ ಆವರಿಸಿತು. ಆದರೆ ಅದು ಎಂತಹ ನಿದ್ರೆ? ದಯಾ ಮೇಘ ಮಲ್ಹಾರದ ಮೇಲೆ, ಮೋಹಲೋಕಗಳಲ್ಲಿ ಸಂಚರಿಸುವಂತಹ ನಿದ್ರೆಯಲ್ಲ. ಭೀಕರವಾದ ಬೇಸಿಗೆಯ ಬಿರು ಬಿಸಿಲಲ್ಲಿ ಕೆಂಪನೆಯ ಬಂಡೆಗಳ ಮೇಲೆ ಹೊರಳಿದಂತಹ ನಿದ್ರೆ ಅದು.

2005

ಪೂರ್ಣ ನಿದ್ರೆ ಮಾಡುವಾಗ, ಭೀಕರವಾಗಿ ಸದ್ದು ಮಾಡುತ್ತಾ ಹೋಗುವ ಸಿಟಿಬಸ್ ನೆನಪಿಗೆ ಬರುತ್ತದೆ. ಸೊಗಸಾಗಿ ಮಡಚಿಟ್ಟ ಸೀರೆಯ ರಾಶಿ ನೆನಪಿಗೆ ಬರುತ್ತವೆ. ವಿಶಾಲವಾದ ಹಾಸಿಗೆಯ ಮೇಲೆ ಒಂದು ಮೂಲೆಯಲ್ಲಿ ಮುದುರಿಕೊಂಡು ತಲೆಯನ್ನು ರೆಕ್ಕೆಗಳ ನಡುವೆ ಹುದುಗಿಸಿಕೊಂಡ ನೀರ ಬಾತುಕೋಳಿಯಂತೆ ಇರುತ್ತಾಳೆ. ಕನಸುಗಳೆಲ್ಲಾ ಖಾಲಿ ಮಾಡಲ್ಪಟ್ಟ ಕೇವಲ ನಿರ್ಜೀವವಾದ ನಿದ್ರೆ ಅದು.

ಸುಂದರ್ ಈಗ ಜಾಸ್ತಿ ನಿದ್ರೆ ಮಾಡುವುದಿಲ್ಲ. ಯಾವಾಗಲಾದರೂ ಹಾಗೆ ಕಣ್ಣುಮುಚ್ಚಿದರೆ ನಿದ್ರೆಯಲ್ಲಿ ಆಕಾಶದ ನೇಣುಹಗ್ಗಕ್ಕೆ ಜೋತುಬಿದ್ದ ಚಂದಿರ, ದಾರ ತುಂಡಾಗಿ ಗಾಳಿಯಲ್ಲಿ ಗಿರಕಿ ಹೊಡೆಯುತ್ತಿರುವ ಹಚ್ಚ ಹಸಿರಿನ ಗಾಳಿಪಟ, ಕೊಂಬೆಗಳು ಮತ್ತು ಎಲೆಗಳಿಲ್ಲದ ಬೋಳು ಮರಗಳು, ಕೈಕಾಲುಗಳಿಗೆ ಸರಪಳಿಯೊಂದಿಗೆ ಬೀದಿಗಳಲ್ಲಿ ಸಂಚರಿಸುವ ಮನುಷ್ಯರು, ಕನಸಿನ ರೂಪದಲ್ಲಿ ಸುಂದರ್‍ಗೆ ಎದುರಾಗುತ್ತಾರೆ.

ಆ ರಾತ್ರಿ ನಿರ್ಜನವಾದ ಮನೆಯ ವರಂಡಾದಲ್ಲಿ ಬೆಳಕಿಲ್ಲದ ಕೋಣೆಯಲ್ಲಿ, ಮೇಲ್ಛಾವಣಿಯಿಂದ ನೂರಾರು ಕೈಗಳು, ಅವನತ್ತ ಬೆರಳು ತೋರಿಸುತ್ತಾ, ‘ಟ್ರೈಟರ್’, ‘ಟ್ರೈಟರ್’ ಎಂದು ಕೋರಸ್‍ನಲ್ಲಿ ಕೂಗುತ್ತಾ, ಹೊರಗೆ ಬೆಳದಿಂಗಳು ಬಿಳುಚಿಕೊಂಡು, ರಾತ್ರಿ ನಿಸ್ತೇಜವಾಗಿ ಕಳೆದು ಕಾಲ ಅವನೆದುರು ಮೊಳಕಾಲೂರಿ ಹೀಗೇಕೆಂದು ಪ್ರಶ್ನಿಸುತ್ತಿರುವಂತೆ, ಆರಂಭದ ದಿನಗಳ ಪೂರ್ಣ ನೆನಪಿಗೆ ಬಂದು, ಮೃದುವಾಗಿ ಆತನ ತಲೆಗೂದಲನ್ನು ನೇವರಿಸುತ್ತಾ “ಎಲ್ಲಿ ಹೋದವು ಆ ಮಧುರವಾದ ದಿನಗಳು’ ಎಂದು ಕೇಳಿದಂತಾಗಿ ದುಃಖದಂತಹ, ಹೇಳಲಾರದಂಥ ಅಳಲು ಆತನನ್ನು ಸುತ್ತುವರೆದು ಆ ರಾತ್ರಿಯೆಲ್ಲಾ ವಿಲವಿಲನೆ ಒದ್ದಾಡಿದ. ಯಾವಾಗಲೋ ಬೆಳಗಿನ ಜಾವ ಒಂದು ನಿದ್ದೆಯ ಮೋಡ ಅವನನ್ನು ಅನುಕಂಪದಿಂದ ಆವರಿಸಿತು. ಆದರೆ ಅದು ಎಂತಹ ನಿದ್ರೆ? ದಯಾ ಮೇಘ ಮಲ್ಹಾರದ ಮೇಲೆ, ಮೋಹಲೋಕಗಳಲ್ಲಿ ಸಂಚರಿಸುವಂತಹ ನಿದ್ರೆಯಲ್ಲ. ಭೀಕರವಾದ ಬೇಸಿಗೆಯ ಬಿರು ಬಿಸಿಲಲ್ಲಿ ಕೆಂಪನೆಯ ಬಂಡೆಗಳ ಮೇಲೆ ಹೊರಳಿದಂತಹ ನಿದ್ರೆ ಅದು.

‘ಬದುಕು ತುಂಬಾ ಸುಂದರವಾಗಿದೆ. ಹೋಗು ಜಗತ್ತೆಲ್ಲಾ ಹೊರಗೇ ಇದೆ. ಹೆಜ್ಜೆ ಹೊರಗಿಡು’ ಎಂದು ತನಗೆ ತಾನೇ ಆಜ್ಞಾಪಿಸಿಕೊಳ್ಳುತ್ತಾನೆ. ಮನೆಯೊಳಗೂ ಹೊರಗೂ ರಸ್ತೆಯ ಮೇಲೆ ಮನುಷ್ಯರು ಮಚ್ಚುಗಳಿಂದ ಲಾಠಿಗಳಿಂದ ಓಡುತ್ತಿರುವಂತೆ, ಒಂದು ಕನಸು. ಮತ್ತೊಂದು ಕನಸು ಸುದೀರ್ಘವಾದುದು. ಅದರಲ್ಲಿ ಅವನ ಭವಿಷ್ಯ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕನಸಲ್ಲಿ ಅವನೊಬ್ಬ ರಿಯಲ್ ಎಸ್ಟೇಟ್ ಸೇಲ್ಸ್‍ಮನ್. ಅದ್ಭುತವಾದ ವಾಕ್ಚಾತುರ್ಯದಿಂದ, ಎಷ್ಟೋ ಮನೆಗಳನ್ನು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಾನೆ. ಜೊತೆಯಲ್ಲಿ ಆತ ವಾಸ್ತು ಪುಸ್ತಕಗಳನ್ನು ಬರೆಯುತ್ತಾನೆ. ವಾಸ್ತು ಮೇಲೆ ಲೆಕ್ಚರ್ ಕೊಡುತ್ತಾನೆ. ಕನಸಿನ ಕೊನೆಯಲ್ಲಿ ಅವನೊಬ್ಬ ಭಿಕಾರಿಯಾಗಿ, ಹರಿದ ಶರಟು, ಸವೆದು ಹೋದ ಚಪ್ಪಲಿಗಳಿಂದ ಕಾಣಿಸುತ್ತಾನೆ. ಕನಸು ಮುಗಿಯುವಷ್ಟರಲ್ಲಿ ಮೂಲೆಯ ಅಪಾರ್ಟ್‍ಮೆಂಟೊಂದರಲ್ಲಿ ಅವನು ಕೊಲೆ ಮಾಡಲ್ಪಟ್ಟಿರುತ್ತಾನೆ. ಅವನ ದೇಹ ಹಾಗೆಯೇ ತಿಂಗಳಗಟ್ಟಲೆ ಫ್ಲಾಟಿನಲ್ಲಿ ಕೊಳೆತು, ಭೀಕರವಾದ ದುರ್ಗಂಧ         ತಾಳಲಾರದೇ ಭಯದಿಂದ ಜೋರಾಗಿ ಕೂಗುತ್ತಾ ನಿದ್ದೆಯಿಂದೇಳುತ್ತಾನೆ.

ನಿಜ  ಹೇಳಬೇಕೆಂದರೆ  2005ರಲ್ಲಿ  ಸುಂದರ್‍ನ ಚರಿತ್ರೆ ಆ  ಕನಸಿನಿಂದಲೇ ಪ್ರಾರಂಭವಾಯ್ತು. ರಿಯಲ್‍ಎಸ್ಟೇಟ್ ಏಜೆಂಟ್, ವಾಸ್ತು ಪುಸ್ತಕಗಳು, ಪತ್ರಿಕೆಗಳಲ್ಲಿ ವಾಸ್ತುಕುರಿತ ಲೇಖನಗಳು; ಅವನು ಸಾವನ್ನು ಗೆಲ್ಲಲು ಯಾವ  ಕೆಲಸವನ್ನಾದರೂ ಮಾಡಲು ಸಿದ್ಧನಿದ್ದ. ಸದ್ಯ ಸುಂದರ್ ಸಿಕಂದರಾಬಾದ್ ರೇತಿಫೀಲ್ಡ್ ಬಜಾರ್‍ನಲ್ಲಿ ಮೂಲೆಯ ಪ್ರೆಸ್ಸೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಪ್ರೆಸ್‍ನಲ್ಲಿ ಸೆಕ್ಸ್ ಪತ್ರಿಕೆಗಳನ್ನು ರಹಸ್ಯವಾಗಿ ಮುದ್ರಿಸುತ್ತಾರೆ. ಅದರಲ್ಲಿನ ಕಥೆಗಳನ್ನೆಲ್ಲಾ ಸುಂದರ್‍ನೇ ಬರೆಯುತ್ತಾನೆ(ಅದ್ಭುತವಾದ ಕವಿತಾಶೈಲಿಯಲ್ಲಿ).

ಸುಂದರ್‍ಗೆ ಈಗ ಕನಸುಗಳೆಂದರೆ ಭಯ. ಅವನು ಬರೆದ ಕಥೆಗಳೆಲ್ಲಾ ಕನಸಿನಲ್ಲಿ ಬರುತ್ತವೆ. ಆ ಕನಸುಗಳಲ್ಲಿ ಪೂರ್ಣ ವಿಧ ವಿಧವಾದ ಭಂಗಿಗಳಲ್ಲಿ ಅನೇಕ ಮನುಷ್ಯರೊಂದಿಗೆ; ಸುಂದರ್ ರಾತ್ರಿ ಹೊತ್ತು ನಿದ್ರೆ ಮಾತ್ರೆ ತೆಗೆದುಕೊಂಡು ಮಲಗುತ್ತಾನೆ. ಗಾಢವಾದ ಕನಸುಗಳು ಬಾರದ ನಿದ್ದೆಗಾಗಿ. ಆತನ ಸದ್ಯದ ಬದುಕು ಒಂದು ಕನಸಿನೊಳಗಿನ ದೃಶ್ಯದಂತಿರುತ್ತದೆ.

ಮೂರು ತಿಂಗಳ ನಂತರ ಪ್ರೆಸ್ ಮಾಲೀಕ ‘ರೋಮ್ಯಾಂಟಿಕ್ ಟಾಕ್’ ಎಂದು ಟೆಲಿಫೋನ್‍ನಲ್ಲಿ ಶೃಂಗಾರ ಸಂಭಾಷಣೆಯ ವ್ಯಾಪಾರ ಶುರುಮಾಡಿದ. ಈಗ ಸುಂದರ್ ದನಿ ನೂರಾರು ಸೆಕ್ಸ್ ಮೇನಿಯಾಕ್‍ರಿಗೆ ತಲುಪುತ್ತಿದೆ. ಅತ್ಯಂತ ಹೇಯವಾದ, ಜಿಗುಪ್ಸೆ  ಹುಟ್ಟಿಸುವ ಸಂಭಾಷಣೆಯನ್ನು ದಿನವೆಲ್ಲಾ ಮಾತನಾಡಿ, ಅವನ ನಾಲಿಗೆ ಗಾಯಗೊಂಡಂತೆ, ಕೆಂಡವನ್ನು ಬಾಯಿಯಲ್ಲಿಟ್ಟುಕೊಂಡಂತೆ ಆತನ ಬಾಯಿ ಪ್ರತಿನಿತ್ಯ ಧಗಧಗಿಸುತ್ತಿರುತ್ತದೆ. ಫೋನ್ ಪಕ್ಕದಲ್ಲಿ ಕೂಲ್‍ಡ್ರಿಂಕ್ ಇಟ್ಟುಕೊಂಡು ಪದೇ ಪದೇ ಗುಟುಕರಿಸುತ್ತಾ ಮಾತುಗಳನ್ನು ಕಕ್ಕುತ್ತಿರುತ್ತಾನೆ.

ರಾತ್ರಿ ಹೊತ್ತು ಅವನ ಪರಿಸ್ಥಿತಿ ಮತ್ತಷ್ಟು ದುರ್ಭರವಾಗಿರುತ್ತದೆ. ಪ್ರೆಸ್‍ನಿಂದ ಬರುತ್ತಾ ಬಾರ್‍ನಲ್ಲಿ ಗುಂಡು ಹಾಕಿ(ವಿಸ್ಕಿಯಿಂದ ಒದ್ದೆ ಮಾಡಿದರೆ ಆ ನಾಲಿಗೆಯ ಉರಿ ಕಡಿಮೆಯಾಗೋದು) ಬಂದರೆ ಪೂರ್ಣ ಬೇಸರಿಸುತ್ತಿದ್ದಳು. ‘ಪ್ರತಿದಿನ ಈ ಕುಡಿತವೇನೆಂದು?’ ‘ಕುಡಿಯದಿದ್ದರೆ ಸತ್ತು ಹೋಗ್ತೀನಿ’ ಎನ್ನುತ್ತಿದ್ದ. ನಿದ್ರೆಗೆ ಮುಂಚೆ ಪೂರ್ಣಳಿಗೆ ಅವನೊಂದಿಗೆ ತುಂಬಾ ಹೊತ್ತು ಮಾತನಾಡಬೇಕೆನಿಸಿರುತ್ತದೆ. ಅವನು ಬಾಯಿ ತೆರೆಯುತ್ತಿರಲಿಲ್ಲ. ಅವನ ಭಾಷೆ ಸತ್ತು ಹೋಗಿತ್ತು. ಪದಗಳನ್ನೆಲ್ಲಾ ಮರೆತು ಹೋಗಿದ್ದ. ಅವನಿಗೆ ನೆನಪಿದ್ದುದು ಕೇವಲ ಸೆಕ್ಸ್ ಕುರಿತ ಒಂದಿಷ್ಟು ಮಾತುಗಳು. ಬಾಯಿ ತೆಗೆದರೆ ಆ ಮಾತುಗಳು ಎಲ್ಲಿ ಹೊರಗೆ ಬೀಳುವವೋ ಎಂದು ಭಯದಿಂದ ನಡುಗುತ್ತಿದ್ದ. ಪೂರ್ಣ ನಿದ್ರೆ ಹೋದ ನಂತರ ಸುಂದರ್ ಎದ್ದು ಕಿಟಕಿ, ಬಾಗಿಲು ತೆಗೆದು ಮೊಳಕಾಲ ಮೇಲೆ ತಲೆಯಿಟ್ಟುಕೊಂಡು ಕುಳಿತುಕೊಳ್ಳುತ್ತಿದ್ದ. ಬೆಳದಿಂಗಳಲ್ಲಿ ತೊಯ್ದ ತಂಗಾಳಿ ಅವನೊಳಗೆ ಪ್ರವೇಶಿಸಬೇಕೆಂದು, ಒಳಗೆ ಉರಿಯುತ್ತಿರುವ ಕಾಡನ್ನು ಆರಿಸಬೇಕೆಂದು ಕಾಯುತ್ತಿದ್ದ. ಯಾವಾಗಲೋ ನಡುರಾತ್ರಿ ನಿದ್ದೆ ಬಂದು ನಿದ್ರಿಸುತ್ತಿದ್ದ.

ಆ ದಿನಗಳಲ್ಲಿ ಸುಂದರ್ ಸಿ.ವಿ. ಕುರಿತ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ. ಅವನನ್ನು ಅರೆಸ್ಟ್ ಮಾಡಿದ್ದಾರೆಂದು, ವಿಶಾಖಪಟ್ಟಣ ಜೈಲಿನಲ್ಲಿಟ್ಟಿದ್ದಾರೆಂದು. ವೈಜಾಗ್ ಹೋಗಿ ಸಿ.ವಿ.ಯನ್ನು ಭೇಟಿಯಾಗಬೇಕೆಂದು ಆಸೆ ಪಟ್ಟ. ಧೈರ್ಯ ಸಾಲಲಿಲ್ಲ. ಅನಂತರ ‘ಜೈಲುಡೈರಿ’ ಹೆಸರಿಂದ ಸಿ.ವಿ. ಬರೆದ ಕವಿತೆಗಳು ಪತ್ರಿಕೆಗಳಲ್ಲಿ ಬಂದವು. ಹೈಕು ಮಾದರಿಯ ಕವಿತೆಗಳು. ಅವು ಆತ್ಮಕಥೆ ಹೇಳಿಕೊಂಡಂತೆ ಖಾಸಗಿಯಾಗಿದ್ದವು. ಬಾಲ್ಯ, ತಂದೆ ತಾಯಿಗಳು, ಗೆಳೆಯರು, ಬಾಲ್ಯದ ನೆನಪುಗಳು. ಆ ಕವಿತೆಗಳಲ್ಲಿ ಸುಂದರ್, ಪೂರ್ಣ ಕುರಿತ ಪ್ರಸ್ತಾಪ ಬಂದಾಗಲೆಲ್ಲ ಭಯದಿಂದ ನಡುಗುತ್ತಿದ್ದ ಸುಂದರ್. ಆ ದಿನ ಪ್ರೆಸ್‍ಗೆ ರಜೆ ಹಾಕಿ ಆ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಊರೆಲ್ಲ ಸುತ್ತಾಡಿದ. ಆ ನಾಲ್ಕೈದು ಸಾಲುಗಳು ದೂರ ಪ್ರದೇಶದಿಂದ ಬಂದ ಅಪರಿಚಿತ ಸಾವಿನ ಸುದ್ದಿಯಂತೆ ಅವನನ್ನು ವಿವಶನನ್ನಾಗಿ ಮಾಡಿದವು. ಅವನಿಗೆ ಒಂದು ರೂಪ ಕಣ್ಣಮುಂದೆ ನಿಲ್ಲುತ್ತಿತ್ತು. ಅದು ಜೈಲು ಗೋಡೆಗಳ ನಡುವೆ ಪೌರಾಣಿಕ ದೇವತಾ ಮೂರ್ತಿಯಂತೆ ಧಗಧಗನೇ ಹೊಳೆಯುತ್ತಾ ಸಿ.ವಿ. ರೂಪವಾಗಿತ್ತು. ತನ್ನ ಸುತ್ತಲೂ ಕೋಟಿ ಕೋಟಿ ಅಶ್ಲೀಲ ಪದಗಳು, ರಸ್ತೆ ನಡುವೆ ಹೆಜ್ಜೆ ಹಾಕುತ್ತಾ. ಒಂದು ಕಡೆ ನಿಂತು ಪತ್ರಿಕೆಯನ್ನು ಮುಖದ ಮೇಲೆ ಮುಚ್ಚಿಕೊಂಡು ದೊಡ್ಡದಾಗಿ ಅತ್ತ ಸುಂದರ್.


ರಾತ್ರಿ ಹೊತ್ತು ಅವನ ಪರಿಸ್ಥಿತಿ ಮತ್ತಷ್ಟು ದುರ್ಭರವಾಗಿರುತ್ತದೆ. ಪ್ರೆಸ್‍ನಿಂದ ಬರುತ್ತಾ ಬಾರ್‍ನಲ್ಲಿ ಗುಂಡು ಹಾಕಿ(ವಿಸ್ಕಿಯಿಂದ ಒದ್ದೆ ಮಾಡಿದರೆ ಆ ನಾಲಿಗೆಯ ಉರಿ ಕಡಿಮೆಯಾಗೋದು) ಬಂದರೆ ಪೂರ್ಣ ಬೇಸರಿಸುತ್ತಿದ್ದಳು. ‘ಪ್ರತಿದಿನ ಈ ಕುಡಿತವೇನೆಂದು?’ ‘ಕುಡಿಯದಿದ್ದರೆ ಸತ್ತು ಹೋಗ್ತೀನಿ’ ಎನ್ನುತ್ತಿದ್ದ. ನಿದ್ರೆಗೆ ಮುಂಚೆ ಪೂರ್ಣಳಿಗೆ ಅವನೊಂದಿಗೆ ತುಂಬಾ ಹೊತ್ತು ಮಾತನಾಡಬೇಕೆನಿಸಿರುತ್ತದೆ. ಅವನು ಬಾಯಿ ತೆರೆಯುತ್ತಿರಲಿಲ್ಲ. ಅವನ ಭಾಷೆ ಸತ್ತು ಹೋಗಿತ್ತು. ಪದಗಳನ್ನೆಲ್ಲಾ ಮರೆತು ಹೋಗಿದ್ದ. ಅವನಿಗೆ ನೆನಪಿದ್ದುದು ಕೇವಲ ಸೆಕ್ಸ್ ಕುರಿತ ಒಂದಿಷ್ಟು ಮಾತುಗಳು. ಬಾಯಿ ತೆಗೆದರೆ ಆ ಮಾತುಗಳು ಎಲ್ಲಿ ಹೊರಗೆ ಬೀಳುವವೋ ಎಂದು ಭಯದಿಂದ ನಡುಗುತ್ತಿದ್ದ.

2006

ಸಿ.ವಿ.ಸಾವಿನ ಕುರಿತು ಆ ದಿನ ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದ ಸುಂದರ್. ಇವನು ಸಾಯುವುದೇನು ಎಂದು ತುಂಬಾ ಹೊತ್ತು ಯೋಚಿಸಿದ. ಸ್ವಲ್ಪ ಹೊತ್ತಿನ ಮುಂಚೆ ಅವನೊಂದಿಗೆ ಮಾತನಾಡಿದಂತಿದೆ. ಪತ್ರಿಕೆಗಳಲ್ಲಿ ಸಿ.ವಿ. ಕುರಿತಾದ ಕಥನವನ್ನು ಓದಿದ ಸುಂದರ್‍ಗೆ ‘ಏತಕೆ?’ ಎಂಬ ಪ್ರಶ್ನೆ ಎದುರಾಯ್ತು. ಸಮುದ್ರವನ್ನು ಸೀಳಿ ಹಾಗೆ ನಡೆಯುವುದು ಏತಕೆ? ಜೈಲೊಳಗೆ, ಉಸಿರುಗಟ್ಟಿಸುವ ಸ್ಥಳಗಳಲ್ಲಿ ಹಾಗೆ ನಿರ್ಭಯವಾಗಿ ಹೋಗುವುದು ಏತಕೆ? ಕತ್ತಿ ಅಲಗಿನ ಮೇಲೆ ನಡೆಯುತ್ತಾ ಹೋಗುವ ಸಾಹಸಗಳೇತಕೆ? ಏತಕೆ? ಎಂಬ ಪ್ರಶ್ನೆಗಳೊಂದಿಗೆ ಸುಂದರ್‍ಗೆ ತನ್ನ ಬದುಕು ನೆನಪಿಗೆ ಬಂತು. ನಿನ್ನೆಯ ನವಿರಾದ ನಿದ್ರಾ ಸಮಯಗಳು ನೆನಪಿಗೆ ಬಂದವು. ಒಳಗೆ ಜ್ವರವನ್ನು ಹುದುಗಿಸಿಕೊಂಡಂಥ ಇಂದಿನ ನಿದ್ರೆ ನೆನಪಿಗೆ ಬಂದವು. ತುಂಬಾ ಹೊತ್ತು ಪ್ರಶ್ನೆಗಳ ಮರಕ್ಕೆ ಜೋತುಬಿದ್ದಿದ್ದ ಸುಂದರ್.

‘ಮನೆ’ ಎಂಬ ಯಂತ್ರ ಎಚ್ಚರಗೊಂಡಿತು. ಪೂರ್ಣ ಅಡುಗೆ ಮನೆಯಲ್ಲಿದ್ದಳು. ಟಿ.ವಿ.ಯಲ್ಲಿ ನಿರಂತರವಾಗಿ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. ತರಕಾರಿ ಮಾರುವವರ ಕೂಗು, ಆಟೋ ಸದ್ದು, ಎಚ್ಚರಗೊಂಡ ನಗರವೆಂಬ ರಕ್ಕಸಿ ದೊಡ್ಡ ದನಿಯಲ್ಲಿ ಆಕಳಿಸುತ್ತಿರುವ ಸದ್ದು. ಸುಂದರ್‍ಗೆ ಯಾಕೋ ಮನೆಯೆಲ್ಲಾ ಜೋಡಿಸಿಕೊಳ್ಳಬೇಕೆನಿಸಿತು. ಅಟ್ಟದ ಮೇಲಿದ್ದ ಪುಸ್ತಕಗಳನ್ನೆಲ್ಲಾ ಕೆಳಗಿಳಿಸಿ ದೂಳು ಜಾಡಿಸಿದ. ಇಬ್ಬರೂ ಸೇರಿ ಅಡುಗೆ ಮಾಡಿಕೊಂಡರು. ತಿಂಡಿ ತಿನ್ನುತ್ತಾ ಸಿ.ವಿ. ಬಗ್ಗೆ ತುಂಬಾ ಹೊತ್ತು ಮಾತನಾಡಿದರು. ಅಂಗಡಿಗೆ ರಜೆ ಹಾಕಿದಳು ಪೂರ್ಣ. ಅವಸರದಿಂದ ಬಟ್ಟೆ ಹಾಕಿಕೊಂಡು ಹೊರನಡೆದ ಸುಂದರ್. ಪ್ರೆಸ್, ಕೆಂಡ ಉಗುಳುವ ಫೋನ್ ಸಂಭಾಷಣೆ, ಬ್ಯಾಂಕ್ ಲೋನ್, ನಿದ್ದೆಬಾರದ ಕಾಯಿಲೆ, ಬರೆಯಬೇಕಾದ ಪತ್ರ, ಕಡಿಮೆಯಾಗದ ಬಿ.ಪಿ, ಕಪ್ಪಗಾದ ಇಂದಿನ ಆಕಾಶ, ಹಾವಿನ ಹುತ್ತಗಳಂತಹ ಅಪಾರ್ಟ್‍ಮೆಂಟ್ಸ್, ಗಾಳಿರೆಕ್ಕೆಗಳ ಮೇಲಿಂದ ಜಾರುವ ಬೆಳಗಿನ ಚಳಿ, ಇವೆಲ್ಲವುಗಳ ನಡುವೆ ಸುಂದರನನ್ನು ‘ಏತಕೆ?’ ಎಂಬ ಪ್ರಶ್ನೆ ಕಾಡುತ್ತಿತ್ತು. ಎಲ್.ಬಿ.ನಗರ್ ಕಡೆ ಸಿ.ವಿ.ಯ ಹಳೆಯ ಕೋಣೆಯ ದಿಕ್ಕಿನಲ್ಲಿ ಹೆಜ್ಜೆ ಹಾಕಿದ.ಆ ಬೀದಿಯಲ್ಲಿ ಹೆಜ್ಜೆ ಇಡುತ್ತಿದ್ದಂತೆಯೇ ಜ್ವರಬಂದಂತೆ ತೀವ್ರತೆ, ಮೈಯೆಲ್ಲಾ ಬೆವರಿದಂತೆ.

ಸಿ.ವಿ. ಇದ್ದ ಮನೆ ಈಗಿರಲಿಲ್ಲ. ಅಲ್ಲೊಂದು ಅಪಾರ್ಟ್‍ಮೆಂಟ್ ತಲೆ ಎತ್ತಿತ್ತು. ಎದುರಿನ ಚಹಾದಂಗಡಿಯಲ್ಲಿ ಕುಳಿತ ಸುಂದರ್. ಅಂಗಡಿಯ ಮಾಲೀಕನನ್ನು ಮಾತನಾಡಿಸಿದ. ಹೊಗೆ ಉಗುಳುವ ಟೀ ಗ್ಲಾಸನ್ನು ಹಿಡಿದು, ಬಿಸ್ಕಿಟ್ ನಂಜಿಕೊಳ್ಳುತ್ತಾ ಎದುರಿಗೆ ದೃಷ್ಟಿಹಾಯಿಸಿದ. ಎದುರು ಮನೆಯೊಳಗೆ ಸುಮಾರು ಹತ್ತುಜನ ಗಿರಾಕಿಗಳಿದ್ದರು. ಅವರು ಏನೇನೋ ಮಾತಾಡಿಕೊಳ್ಳುತ್ತಿದ್ದರು. ಮಧ್ಯಾಹ್ನದವರೆಗೆ ಅಲ್ಲೇ ಕಳೆದ ಸುಂದರ್. ಸಾಕಷ್ಟು ಸಲ ಟೀ ಕುಡಿದ. ಅಲ್ಲಿಗೆ ಬಂದು ಹೋಗುತ್ತಿದ್ದ ಜನರನ್ನು ನೋಡುತ್ತಿದ್ದ. ಅವರ ಮಾತುಗಳನ್ನು ಶ್ರದ್ಧೆಯಿಂದ ಕೇಳಿಸಿಕೊಂಡ. ಬದುಕಿನ ಕುರಿತು, ಸಮಸ್ಯೆಗಳು, ಕಷ್ಟಗಳು, ಎಲ್ಲೆಲ್ಲೂ ನಿಟ್ಟುಸಿರುಗಳು, ದುಗುಡಗಳು ಅವನ ಬದುಕಿನ ಪ್ರತಿರೂಪಗಳಂತೆ ನಕಲಿನಂತೆ ಗೋಚರಿಸತೊಡಗಿದವು. ತುಂಬಾ ಹೊತ್ತು ಅಲ್ಲಿ ಕುಳಿತ ನಂತರ, ಅವನ ಒಳಗಿನ ಸಂಘರ್ಷ ಸ್ವಲ್ಪ ಕಡಿಮೆಯಾದಂತನಿಸಿತು. ಮಧ್ಯಾಹ್ನ ಎರಡು ಗಂಟೆಗೆ ಮನೆ ಸೇರಿದ.

‘ಮನೆ’ ಎಂಬ ಯಂತ್ರ ಎಚ್ಚರಗೊಂಡಿತು. ಪೂರ್ಣ ಅಡುಗೆ ಮನೆಯಲ್ಲಿದ್ದಳು. ಟಿ.ವಿ.ಯಲ್ಲಿ ನಿರಂತರವಾಗಿ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. ತರಕಾರಿ ಮಾರುವವರ ಕೂಗು, ಆಟೋ ಸದ್ದು, ಎಚ್ಚರಗೊಂಡ ನಗರವೆಂಬ ರಕ್ಕಸಿ ದೊಡ್ಡ ದನಿಯಲ್ಲಿ ಆಕಳಿಸುತ್ತಿರುವ ಸದ್ದು. ಸುಂದರ್‍ಗೆ ಯಾಕೋ ಮನೆಯೆಲ್ಲಾ ಜೋಡಿಸಿಕೊಳ್ಳಬೇಕೆನಿಸಿತು. ಅಟ್ಟದ ಮೇಲಿದ್ದ ಪುಸ್ತಕಗಳನ್ನೆಲ್ಲಾ ಕೆಳಗಿಳಿಸಿ ದೂಳು ಜಾಡಿಸಿದ. ಇಬ್ಬರೂ ಸೇರಿ ಅಡುಗೆ ಮಾಡಿಕೊಂಡರು. ತಿಂಡಿ ತಿನ್ನುತ್ತಾ ಸಿ.ವಿ. ಬಗ್ಗೆ ತುಂಬಾ ಹೊತ್ತು ಮಾತನಾಡಿದರು. ಅಂಗಡಿಗೆ ರಜೆ ಹಾಕಿದಳು ಪೂರ್ಣ. ಅವಸರದಿಂದ ಬಟ್ಟೆ ಹಾಕಿಕೊಂಡು ಹೊರನಡೆದ ಸುಂದರ್.

ಪೂರ್ಣ ಮನೆಯೆಲ್ಲಾ ಜೋಡಿಸಿದ್ದಳು. ಹೊಸ ಕರ್ಟನ್‍ಗಳನ್ನು ಹಾಕಿದ್ದಳು. ಸಿ.ವಿ. ಉಡುಗೊರೆಯಾಗಿ ಕೊಟ್ಟಿದ್ದ ‘ನಿದ್ರೆ’ ಪೇಯಿಂಟಿಂಗನ್ನು ಶುಭ್ರವಾಗಿ ತೊಳೆದು ಗೋಡೆಗೆ ನೇತು ಹಾಕಿದಳು. ಹಾಸಿಗೆಗೆ ಹೊಸ  ಬಣ್ಣದ ಹೊದಿಕೆ ಹಾಸಿದ್ದಳು. ಮನೆಯೆಲ್ಲ ಹೊಸದಾಗಿ ಮತ್ತೆ ಹುಟ್ಟಿದಂತೆ ಭಾಸವಾಗುತ್ತಿತ್ತು. ಇಬ್ಬರೂ ಸೇರಿ ಊಟ ಮಾಡಿದರು. ಸಿ.ವಿ. ಬಗ್ಗೆ ಮಾತನಾಡುತ್ತಾ ಹಾಗೆಯೇ ನಿದ್ರೆ ಹೋದರು. ತುಂಬಾ ದಿನಗಳ ನಂತರ ಅವರಿಗೆ ಗಾಢ ನಿದ್ರೆ ಬಂತು.

ನಿದ್ರೆಯಲ್ಲಿ ಪೂರ್ಣ, ಹತ್ತು ವರ್ಷದ ಹಿಂದಿನ ಪೂರ್ಣಮಾಣಿಕ್ಯಳ ಕನಸು ಕಂಡಳು. ಅಂದಿನ ಪೂರ್ಣಮಾಣಿಕ್ಯ ಮರಳಿ ಬಂದು ಮನೆಯೆಲ್ಲಾ ಸುತ್ತಾಡಿದಂತೆ ಮನೆಯೆಲ್ಲಾ ಪೂರ್ಣಮಾಣಿಕ್ಯಳ ವಾಸನೆ ಬಂದಂತೆ ಸುಂದರ್‍ಗೆ ಕೂಡ ಅಂಥದೇ ಕನಸು  ಬಿತ್ತು.  ಪದ್ಯ  ಬರೆಯುತ್ತಿದ್ದ  ದಿನಗಳ  ಸುಂದರ್  ಕನಸಿನೊಳಗೆ  ಬಂದ. ಕನಸಿನಲ್ಲಿ ಸುಂದರ್ ಕವಿತೆಯೊಂದನ್ನು ಓದುತ್ತಿದ್ದಾನೆ. ಎಚ್ಚರವಾದ ಮೇಲೂ ಆ ಕವಿತೆ ಅವನನ್ನು ಹಿಂಬಾಲಿಸುತ್ತಲೇ ಇತ್ತು.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಡಾ. ವಿ. ಚಂದ್ರಶೇಖರರಾವ್
ಮಾರ್ಮಿಕತೆ,ಮ್ಯಾಜಿಕ್ ರಿಯಲಿಸಂ,ಮಿಸ್ಟಿಸಿಸಂ ಬೆರೆಸಿ ಕಥೆಯನ್ನು ಅಸಂಗತ ಕಲಾಕೃತಿಯಂತೆ ಚಿತ್ರಿಸಬಲ್ಲ ಕಥೆಗಾರರು. ಮೂರು ದಶಕಗಳ ತಮ್ಮ ಕಥಾಯಾನದಲ್ಲಿ ಸಮಾಜದ ಸಂಘರ್ಷಗಳನ್ನು, ಒತ್ತಡಗಳನ್ನು, ಸಂಕೀರ್ಣ ಸಂದರ್ಭಗಳ ಕುಸಿತವನ್ನು ತಮ್ಮ ಪಾತ್ರಗಳಮೂಲಕ ಹೇಳಿಸುತ್ತಲೇ ಬದುಕಿನ ಕುರಿತು ಸಹಾನುಭೂತಿ,ಭರವಸೆ,ಒಂದಿಷ್ಟು ನಂಬಿಕೆಯನ್ನು ಸೃಷ್ಟಿಸಿದವರು. ಜೀವನಿ,ಲೆನಿನ್ ಪ್ಲೇಸ್,ಮಾಯಾಲಾಂತರು,ದ್ರೋಹವೃಕ್ಷಂ ಇವರ ಕಥಾಸಂಕಲನಗಳು.’ಐದು ಹಂಸಲು’, ನಲ್ಲಮಿರಿಯಂ ಚೆಟ್ಟು’,ಆಕು ಪಚ್ಚನಿ ದೇಶಂ’ ಕಾದಂಬರಿಗಳು. ಜೂನ್ 8, 2017 ರಂದು ಕಾಲವಾದರು