ಮಕ್ಕಳ ಆಟ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನೆದರ್‌ಲ್ಯಾಂಡ್ಸ್‌ನ ಮನೆಗಳಲ್ಲಿ ಇನ್ನೂ ಒಂದು ಸಂಗತಿಯನ್ನು ಗಮನಿಸಿದೆ. ಜೊತೆಯಲ್ಲಿ ಆಡಲು ಮಕ್ಕಳು ಸಿಗದೆ ಇರಬಹುದು. ಇದಕ್ಕೆ ಬದಲಾಗಿ, ಪ್ರತಿ ಮನೆಯಲ್ಲೂ ಒಂದೊಂದು ಶಿಶುವಿಹಾರಕ್ಕೆ ಆಗುವಷ್ಟು ಆಟದ ಸಾಮಾನುಗಳು, ಎಲೆಕ್ಟ್ರಾನಿಕ್ ಉಪಕರಣಗಳು ತುಂಬಿ ತುಳುಕುತ್ತಿರುತ್ತವೆ. ಮಕ್ಕಳು ಈ ಉಪಕರಣಗೊಳಡನೆಯೇ ಹೆಚ್ಚು ಸಮಯ ಕಳೆಯುತ್ತಾರೆ. ಆತ್ಮೀಯ ಸಂಬಂಧ ಸ್ಥಾಪಿಸಿಕೊಳ್ಳುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ
ಆಗ್ನೇಯ ಏಷ್ಯಾದ ಮಲೇಷ್ಯಾ ದೇಶ: ಡಾ ವೆಂಕಟಸ್ವಾಮಿ ಪ್ರವಾಸ ಕಥನ
ಅಲ್ಲಿಂದ ಇಳಿದು ಬಂದು ಕಟ್ಟಡದ ಮುಂದಿನ ಪ್ರಾಂಗಣದಲ್ಲಿ ನಿಂತುಕೊಂಡು ಅವಳಿ ಗೋಪುರಗಳನ್ನೇ ನೋಡತೊಡಗಿದೆವು. ಒಂದು ರೀತಿಯಲ್ಲಿ ತವರು/ಉಕ್ಕಿನ ಬಣ್ಣಹೊಂದಿರುವ ಕಟ್ಟಡದ ಮೇಲೆ ಚಂದ್ರನು ನಗುತ್ತಿದ್ದರೂ ಕಟ್ಟಡದ ಬೆಳಕಿನ ಮುಂದೆ ಅವನ ಮುಖ ಮಂಕಾದಂತೆ ಕಾಣಿಸುತ್ತಿತ್ತು. ಸುಮಾರು ಹೊತ್ತು ನಾವು ಆ ಕಟ್ಟಡದ ಕಡೆಗೆ ನೋಡುತ್ತಲೆ ನಿಂತಿದ್ದೆವು. ನಮ್ಮ ಸುತ್ತಲೂ ಮಂಗೋಲಿಯನ್ ಬಣ್ಣದ ತೆಳು ದೇಹಗಳ ಯುವ ಜೋಡಿಗಳು ಉಲ್ಲಾಸದ ಮಾತುಗಳಲ್ಲಿ ತೊಡಗಿಕೊಂಡಿದ್ದವು.
ಡಾ. ಎಂ. ವೆಂಕಟಸ್ವಾಮಿ ಮಲೇಷ್ಯಾ ಪ್ರವಾಸದ ಅನುಭವಗಳು ನಿಮ್ಮ ಓದಿಗೆ
ಮೂರು ಹಿಂಸಾ ಪ್ರಕರಣಗಳು: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನನ್ನ ಹೆಂಡತಿ ಇಂಗ್ಲಿಷ್‌ನಲ್ಲಿ ಇಷ್ಟೆಲ್ಲ ಹೇಳಿದಳು. ಇದು ಆಕೆಗೆ ಅರ್ಥವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ನಾಯಿಮರಿಯನ್ನು ಕಂಕುಳಿನಲ್ಲಿ ಬಿಗಿಯಾಗಿ ಇಟ್ಟುಕೊಂಡು ಕತ್ತನ್ನು ಹಿಸುಕುತ್ತಾ ತಲೆಯ ಮೇಲೆ ಜೋರಾಗಿ ಮೊಟಕುತ್ತಾ ಕರೆದುಕೊಂಡು ಹೋದಳು. ನಾಯಿಮರಿ ಕೂಡ ಬೊಗಳುತ್ತಲೇ ಕೊಸರಾಡುತ್ತಿತ್ತು. ನಾವು ನಾಲ್ಕೂ ಜನ ಮಂಕಾದೆವು, ಗಾಬರಿ ಬಿದ್ದೆವು. ವಾಯು ವಿಹಾರದ, ಆಟದ ಸಂತೋಷ ಮಾಯವಾಗಿತ್ತು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಒಂಭತ್ತನೆಯ ಬರಹ
ಬ್ರಸೆಲ್ಸ್‌ನಲ್ಲಿ ಸುತ್ತಾಟ (೨): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಕ್ಯಾಥೆಡ್ರಲ್ ಮೇಲೆ 14 ವೈಮಾನಿಕ ದಾಳಿಗಳನ್ನು ಅಂದರೆ 14 ಬಾಂಬ್‌ಗಳನ್ನು ಎಸೆಯಲಾಯಿತು ಎನ್ನಲಾಗಿದೆ. ಇಡೀ ನಗರ ಧ್ವಂಸವಾದರೂ ಕ್ಯಾಥೆಡ್ರಲ್ ಒಂದಷ್ಟು ಹಾನಿಗೆ ಒಳಗಾದರೂ ಅದರ ಸಂಪೂರ್ಣ ರಚನೆ ಮತ್ತು ಎರಡು ಸ್ಪೈರ್ಡ್ ಈಗಲೂ ಹಾಗೆಯೇ ಉಳಿದುಕೊಂಡಿವೆ ಎಂದು ನಮ್ಮ ಗೈಡ್ ಹೇಳಿದ. ಅದರ ಬಗ್ಗೆ ವಿವರಗಳನ್ನು ಅಂತರಜಾಲದಲ್ಲಿ ನೋಡಿದಾಗಲೂ ಅದೇ ರೀತಿ ಬರೆಯಲಾಗಿತ್ತು.
ಬ್ರಸೆಲ್ಸ್‌ನಲ್ಲಿ ಓಡಾಡಿದ ಮತ್ತಷ್ಟು ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ
ಕೋಟಿ ಸೈಕಲ್, ಎರಡು ರೈಲ್ವೆ ನಿಲ್ದಾಣ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಇದೇ ರೀತಿ ಸೈಕಲ್ ಉಪಯೋಗಿಸಲು ಕೂಡ ಮಗುವಿಗೆ ಒಂದೂವರೆ ವರ್ಷವಾಗಿರುವಾಗಲೇ ತರಬೇತಿ ಪ್ರಾರಂಭವಾಗುತ್ತದೆ. ನೀವು ಒಂದು ಸೈಕಲನ್ನು ಮಗುವಿಗೆ ಒಂದೂವರೆ-ಎರಡು ವರ್ಷವಾಗಿದ್ದಾಗ ಖರೀದಿಸಿದರೆ, ಅದರಲ್ಲಿರುವ ಬೇರೆ ಬೇರೆ ಭಾಗಗಳನ್ನು ಕ್ರಮೇಣವಾಗಿ ಉಪಯೋಗಿಸುತ್ತಾ ತುಂಬಾ ವರ್ಷ ಬಳಸಬಹುದು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಎಂಟನೆಯ ಬರಹ
ಬ್ರಸೆಲ್ಸ್‌ನಲ್ಲಿ ಸುತ್ತಾಟ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್‌ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು.
ಯೂರೋಪ್ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ
ಎರಡು ತಪ್ಪೊಪ್ಪಿಗೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
“ನೋಡು, ಡ್ಯಾಡಿ, ಬದಲಾವಣೆ ಅಂದರೆ, ಪ್ರಧಾನ ಮಂತ್ರಿಗಳ, ಸರ್ಕಾರಗಳ, ರಾಜಕೀಯ ಪಕ್ಷಗಳ ಬದಲಾವಣೆ ಅಲ್ಲ. ನಮ್ಮ, ನಮ್ಮ ಮನೆ, ಮನಸ್ಸುಗಳಲ್ಲಿ ಆಗುತ್ತಿರುವ ಬದಲಾವಣೆಗಳು. ಅದಕ್ಕೆ ನಮ್ಮ ಪ್ರತಿರೋಧ, ಹೊಂದಾಣಿಕೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಮಕ್ಕಳ ಲಾಲನೆ, ಪಾಲನೆ ಹೆಂಗಸರ ಕರ್ತವ್ಯ ಮಾತ್ರ ಎಂಬ ಧೋರಣೆಯೇ ಬದಲಾಗಬೇಕು, ಬದಲಾಗುತ್ತಿದೆ.”
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ
ಆಮ್‌ಸ್ಟರ್‌ಡ್ಯಾಮ್‌ನ ಕಾಲುವೆಗಳಲ್ಲಿ ವಿಹಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ.
ಆಮ್‌ಸ್ಟರ್‌ಡ್ಯಾಮ್‌ನ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ ನಿಮ್ಮ ಓದಿಗೆ
ಸ್ವಿಟ್ಜರ್ಲೆಂಡ್ ಮತ್ತು ಜಗತ್ತಿನ ಕಪ್ಪು ಹಣ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ದೀರ್ಘ ಕಾಲದಿಂದಲೂ ಸ್ವಿಟ್ಜರ್ಲೆಂಡ್ ತಟಸ್ಥತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಜಗತ್ತಿನ ಎಲ್ಲಾ ದೊಡ್ಡ ಬ್ಯಾಂಕ್‌ಗಳ ಮುಖ್ಯಕೇಂದ್ರಗಳು ಇಲ್ಲಿ ನೆಲೆಗೊಂಡಿದ್ದು ಸ್ವಿಸ್ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಅಭಿವೃದ್ಧಿಯನ್ನು ಹೊಂದಿದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಎರಡನೆಯ ಭಾಗ ಇಲ್ಲಿದೆ