[widget id=”annual_archive_widget-2″]
[widget id=”polls-widget-2″]
ವೈಶಿಷ್ಟ್ಯದ ಲೇಖನಗಳು
ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ
ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಕಣಗಾಲ ಮತ್ತು ಕಳ್ಳರು: ಎಸ್. ಗಂಗಾಧರಯ್ಯ ಅನುಭವ ಕಥನ
ಮೂರ್ತಿ ಚಕ್ಕನೆ ಎದ್ದವನೇ ನನ್ನನ್ನು `ಲೇ ಆ ಕಡಿಂದ ಓಡಿ ಬಾರೋ’ ಅಂತ ನನಗೆ ಕೂಗಿ ಹೇಳುತ್ತಾ ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಬೇಗನೇ ಮೇಲೆದ್ದರೂ ಇದು ನಾನು ನೋಡಿದ್ದ ಮೊದಲ ಕಳ್ಳ ಹಾಗೂ ಕಳ್ಳತನವಾದ್ದರಿಂದ ಒಂಚೂರು ಗಲಿಬಿಲಿಗೊಂಡು ಅವರತ್ತ ತಕ್ಷಣ ಓಡಲಾಗಲಿಲ್ಲ. ಅವರಿಬ್ಬರೂ ಆಗಲೇ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ಉಸುರುಯ್ದುಕೊಂಡು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. `
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎಂಟನೆಯ ಕಂತು
“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ
ನಮ್ಮ ಇಡೀ ಜೀವಮಾನದ ಮತ್ತು ಮುಂದಿನ ಹತ್ತೋ ಹನ್ನೆರಡು ಜನ್ಮದ ದುಡಿತ ಅದಕ್ಕೆ ಹಾಕಬೇಕು ಅನಿಸ್ತಾ? ಕೈನಲ್ಲಿ ಬಿಡಿಕಾಸು ಅಥವಾ ಒಂದೇ ಒಂದು ನಯಾಪೈಸೆ, ಇಲ್ಲದಿರುವಾಗ ಇಂತಹ ತಿಕ್ಕಲು ತಿಕ್ಕಲು ಐಡಿಯಾಗಳು ಮನಸಿಗೆ ಬರುತವೆ ಅಂತ ಒಬ್ಬರು ಗೊಣಗಿದರಾ….? ಕೈತುಂಬ ಕಾಸಿದ್ದು ಯಾವದಾದರೂ ಮಂತ್ರಿ ಪಂತ್ರಿನ ಇನ್ವಾಲ್ವ್ ಮಾಡಿದ್ದರೆ ಅಂವ ಲಾರಿಗಳಲ್ಲಿ ತುಂಬಿ ಜನರನ್ನ ಸಪ್ಲೈ ಮಾಡಬಹುದು! ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೦ನೇ ಬರಹ ನಿಮ್ಮ ಓದಿಗೆ
ಹಳೆಯ ಪುಟಗಳಿಂದ…” ಸರಣಿಯಲ್ಲಿ ಚನ್ನಕೇಶವ ಬರಹ
“ನೀನಾಸಂ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ರಂಗ ತಾಂತ್ರಿಕ ಸಮಸ್ಯೆಗಳನ್ನು ಬಹಳ ಸಮಾಧಾನವಾಗಿ ನಿಭಾಯಿಸುವ ನಮ್ಮ ಸಮಾಧಾನಿ ಬಂಗಾರಣ್ಣ, ಒಂದು ರೀತಿಯಲ್ಲಿ ‘ಸಕಲಕಲಾವಲ್ಲಭನ್’. ಇವರು ‘ನೀನಾಸಂಗೇ ದೊಡ್ಡವರು’. ಇವರು ಯಾವಯಾವ ವರ್ಷದಲ್ಲಿ ಯಾರುಯಾರು ಏನೇನು ಮಾಡಿದರು ಎಂಬುದನ್ನೆಲ್ಲಾ ಬಲ್ಲ ನಿಧಾನಿ. ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು”
ಹಳೆಯ ಪುಟಗಳು ಸರಣಿಯಲ್ಲಿ ಚನ್ನಕೇಶವ ಬರಹ

ಇತ್ತೀಚಿನ ಲೇಖನ
Twitter Feeds
[fts_twitter twitter_name=@CodeWebber tweets_count=3 twitter_height=300px cover_photo=no stats_bar=no show_retweets=no show_replies=no]
Facebook Feeds
[fts_facebook type=page id=codewebber posts=3 height=300px posts_displayed=page_only]




