ಹೆಚ್ಚಾನು ಹೆಚ್ಚು ಮಾತುಗಳಿಗೆ
ಮೌನದಲ್ಲಿ ಕತ್ತು ಹಿಸುಕುತ್ತದೆ
ಉಸಿರು
ಸತ್ತೇ ಬಿಡುವ ರೋಗಿಯೊಬ್ಬನಿಗೆ
ಬದುಕಲಿಕ್ಕೆ ಅದೆಷ್ಟು ಆಸೆ…?
ಕಣ್ಣಲ್ಲಿ ಅದೆಂತಾ ಕನಸು…?
ಓಮ್ಮೆ ಸಾಯಬೇಕು
ಮತ್ತೊಮ್ಮೆ ಬದುಕಬೇಕು
ಕನಿಷ್ಠ ಈ ಹೊತ್ತಿಗೆ ನಿದ್ರೆ ಬಂದರಷ್ಟೇ ಸಾಕು…!
ಅದೆಷ್ಟು ಮುದ್ದಾಮು
ಆ ಕ್ಷಣಕ್ಕೆ ಸುಮ್ಮನಿರುವುದು
ಎಲ್ಲೆಂದರಲ್ಲಿ ರೋಡಿನಲ್ಲಿ ಈ ನಾಯಿಗಳಿಗೆ ಹೆರಿಗೆಯಾಗುತ್ತದೆ
ನಾರ್ಮಲ್ಲೋ, ಸಿಸೇರಿಯನ್ನೋ
ಯಾವುದೋ ಒಂದು
ಯಪ್ಪಾ ದೇವರೇ!
ಕನಿಷ್ಠ ಶಿಸ್ತು ಇಲ್ಲದೇ ಎಂಗೆಂಗೋ ಬದುಕಿದರೆ
ಸೇಡು ತೀರಿಸಿಕೊಳ್ಳತ್ತದೆ ಸಾವು
ಬರಬರಾದ್ದನ್ನು ಬರಿಸಿ
ನೀವು ಕೇಳಬಹುದು
ಮಾತಿಗೂ ಮೌನಕ್ಕು
ಬೀದಿಯಲ್ಲಿ ಹುಟ್ಟುವ ನಾಯಿಗೂ
ಆಪರೇಷನ್ನಿಗೂ ಯಾವ ಸಂಬಂಧ
ಹೌದು ಸಾವಿಗೂ ಬದುಕಿಗೂ ಏನು ಸಂಬಂಧ?
ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ