Advertisement

ಗೀತಾ ಹೆಗಡೆ, ದೊಡ್ಮನೆ

ಅನ್ನ ದೇವರ ಮುಂದೆ ಇನ್ನ ದೇವರು ಉಂಟೆ?: ಅಂಜಲಿ ರಾಮಣ್ಣ ಪ್ರವಾಸ ಕಥನ

ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. ‘ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣ

Read More

ಅಂಜಲಿ ರಾಮಣ್ಣ ಪ್ರವಾಸ ಅಂಕಣ ‘ಕಂಡಷ್ಟೂ ಪ್ರಪಂಚ’ ಮತ್ತೆ ಶುರು…

ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು. ಶಿಲ್ಲಾಂಗ್‌ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮೇಘಾಲಯದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಬರಹ

Read More

ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…

ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

Read More

ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಜಿಪ್ಸಿಯಂತಿದ್ದ ಆತ ಎಲ್ಲರೊಡನೆ ಚಕ್ಕಲ್ಮಟ್ಟ್ಕೆ ಹಾಕಿಕೊಂಡು ಊಟ ಮಾಡುತ್ತಿದ್ದರು. ನನ್ನ ಕ್ಯಾಮೆರ ಲೆನ್ಸ್ ಆತನನ್ನು ನೋಡುತ್ತಿದ್ದದ್ದು ಗಮನಕ್ಕೆ ಬಂದೊಡನೆ ಒಂದು ನಗು ಒಂದು ಜ್ಞಾನ ಮುದ್ರೆಯನ್ನು ನನ್ನೆಡೆಗೆ ಬಿಸ್ಹಾಕಿದರು. ಈ ಮೇಳದ ಜಾಗದಲ್ಲಿ ಸ್ವಲ್ಪ ಹಳೇ ಹುಲಿಯಂತೆಯೇ ಕಂಡರವರು. ಕ್ಯಾಮೆರ ಮತ್ತು ಮೀಡಿಯಾವನ್ನು ಆಕರ್ಷಿಸಲು ಬೇಕಾದ ಹಾವಭಾವ ಅವರಲ್ಲಿತ್ತು ಅನ್ನಿಸಿತು.. ಮಾತು ಬೆಳೀತಾ ಬೆಳೀತಾ ಗೊತ್ತಾಯ್ತು ಆತ ಅಮೆರಿಕೆಯ ಅಲೆಮಾರಿ ಅಂತ. ಹಾಡು ನಟನೆ ಪ್ಯಾಷನ್. ಅದರಲ್ಲೇ ಜೀವನ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿದರೂ ಉಹುಂ, ಯಶಸ್ಸು ಒಲ್ಲೆ ಅಂತ ಹಠ ಹಿಡಿದಿತ್ತು. ಅಂಜಲಿ ರಾಮಣ್ಣ ಬರಹ

Read More

‘ವೈನು’ಗಾರಿಕೆಯ ಸೀಮೆಯಲಿ ಸುತ್ತಾಡುತಾ…

ಮಿನೋವನ್ ನಾಗರೀಕತೆಯನ್ನು ಯೂರೋಪ್ ಖಂಡದ ಮೊದಲ ಮುಂದುವರೆದ ನಾಗರೀಕತೆ ಎಂದು ಗುರುತಿಸಲಾಗಿದೆ. ಆಧುನಿಕ ಕಲೆ, ಸುಧಾರಿತ ಒಲೆ, ಎಲ್ಲಾ ಕಾಲಕ್ಕೂ ಸಲ್ಲುವ ಒಳಚರಂಡಿ ವ್ಯವಸ್ಥೆ, ತಮ್ಮದೇ ಆದ ಭಾಷೆ, ಲಿಪಿ, ವೈದ್ಯ ಪದ್ಧತಿ ಎಲ್ಲವನ್ನೂ ಹೊಂದಿದ್ದ ಜನ. ವಿಶೇಷತೆ ಎಂದರೆ ಅವರ ದ್ರಾಕ್ಷಿ ಮತ್ತು ಅಂಜೂರದ ಕೃಷಿ. ಕ್ರಿಸ್ತ ಪೂರ್ವದಿಂದಲೂ ಒಂದು ಜಾತಿಯ ದ್ರಾಕ್ಷಿ ಗಿಡದ ಬೇರನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಇಲ್ಲಿನ ಜನ. ಅದರಿಂದ ತಯಾರಿಸಿದ ವೈನ್ ಪೇಯ ಇಲ್ಲಿನ ವ್ಯಾಪಾರದ ಆಕರ್ಷಣೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ