ಎಲ್ಲಿ ಹೋದರೇನು… ಮನ ಮರೆಯುವುದಿಲ್ಲ ನಿನ್ನನು
ಚಾಲಕ ಖಾನ್ ಅಲ್ಲಿಂದ ಒಂದು ಗಂಟೆ ಐದು ನಿಮಿಷಗಳ ಪ್ರಯಾಣದಲ್ಲಿ ತಲುಪಿಸಿದ್ದು ನೀರ್ದೇವನ ಪಾದಕ್ಕೆ. ಒಂದು ಬದಿ ಪ್ರಪಾತ ಮತ್ತೊಂದು ಬದಿ ಸಮುದ್ರ… ನಡುವೆ ಈ ನೀರ್ಮಕ್ಕಳ ಕಾಯ್ವ ದೇವನ ಪಳಿಯುಳಿಕೆ. ಸೂರ್ಯ ಮುಳುಗುತ್ತಿದ್ದ, ಬಂದಿದ್ದವರು ವಿಧವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಜೋರು ಗಾಳಿ, ತಂಪು ಸಮಯ ಸಮುದ್ರ ನೋಡುತ್ತಾ ಕೂರಲು ಒಂಟಿ ನಿಂತ ಸಣ್ಣ ಬಂಡೆ. ಅದೆಷ್ಟು ಚಂದಿತ್ತು ಅಲ್ಲಿ ಕೂತು ಇಹಪರವನ್ನು ಮರೆತಿದ್ದು. ಸಾಯಂಕಾಲ 6 ಗಂಟೆಯ ನಂತರ ಅಲ್ಲಿ ಇರಲು ಬಿಡುವುದಿಲ್ಲ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಗ್ರೀಸ್ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ