ಉತ್ಸಾಹ ಚಿಲುಮೆಯ ತೋಳಿಗೆ ಬಳ್ಳಿಯಾಗಿದ್ದ ನಾನು!
ಧರ್ಮಶಾಲಾದಿಂದ 112 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಆಕರ್ಷಿಸುತ್ತದೆ ಖಜ್ಜಿಯಾರ್ ಗಿರಿಧಾಮ. ದೌಲಾದರ ಪರ್ವತಶ್ರೇಣಿಯ ನಡುವೆ 12ನೆಯ ಶತಮಾನದಲ್ಲಿ ಚಂಬಾ ರಾಜಮನೆತನದವರು ಕಟ್ಟಿಸಿರುವ, ಸಂಪೂರ್ಣ ಮರದಿಂದ ಮಾಡಿರುವ ಅರಮನೆ. ಅದರ ಬಾಗಿಲುವಾಡಗಳಿಗೆ ಕಟ್ಟಿಕೊಂಡಿರುವ ಚಿನ್ನದ ತಗಡು, ಅರಮನೆಯ ಒಳಗೇ ಇರುವ ಖಾಜ್ಜಿ ನಾಗಮಂದಿರ. ಶಿವ ಮತ್ತು ಹಿಡಿಂಬೆಯ ಮೂರ್ತಿಗಳೂ ಇರುವುದು ಇಲ್ಲಿನ ಆಕರ್ಷಣೆ. ನವರಾತ್ರಿಯಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಬಾಕಿಯಂತೆ ದೈವಭಕ್ತ ಪ್ರವಾಸಿಗರು ತಾವೇ ಕುಂಕುಮವಿಟ್ಟು ಪೂಜೆ ಮಾಡಿ ಬರಬಹುದು.
ʻಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ