Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

“ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ.. “

Read More

ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

“ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ… “

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕತೆ

“ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು….”

Read More

ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಡ್ಪಿ ವಾಸುದೇವ ಶೆಣೈ ಬರೆದ ಕತೆ

“ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು.”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ