ನಮ್ಮೊಳಗೂ ಒಂದು “ಬೌಲ್” ಇದೆಯೇ?: ಬಿ.ಕೆ. ಸುಮತಿ ಬರಹ
ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ?
ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿಯ ಕುರಿತು ಬಿ.ಕೆ. ಸುಮತಿ ಬರಹ