ಸ್ವಾತಂತ್ರ್ಯ ಪೂರ್ವೋತ್ತರದ ಸಂಘರ್ಷ: ಬಿ. ಕೆ. ಮೀನಾಕ್ಷಿ ಬರಹ
ಒಂದು ಸ್ಥಳದಿಂದ ನಿರ್ಗತಿಕರಾಗಿ ಓಡಿಬಂದವರಿಗೆ ಅನ್ನ ಆಶ್ರಯ ನೀಡಿ ಬದುಕು ಕೊಟ್ಟವರ, ಬದುಕನ್ನೇ ಬುಡಮೇಲು ಮಾಡುವ ಕೆಲಸಗಾರರ ಚಿತ್ರಣ, ಅದಕ್ಕೆ ಕುಮ್ಮಕ್ಕು ನೀಡಿ ಜಮೀನನ್ನೆಲ್ಲ ತಮ್ಮ ವಶ ಮಾಡಿಕೊಳ್ಳುವ ಕೆಲಸಗಾರರ ದಬ್ಬಾಳಿಕೆ, ನಿಯತ್ತಿಗೆ ಹೊರತಾದ ಅವರ ಕಾರ್ಯಭಾರವೆಲ್ಲದರ ಚಿತ್ರಣ ಗಮನಿಸಿದರೆ, ದ್ರೋಹವೆಂಬುದು ಸಾರ್ವಕಾಲಿಕವಾದದ್ದು, ಮನುಷ್ಯನ ಕುಟಿಲತೆ, ನೀಚ ಪ್ರವೃತ್ತಿ ಸಾವಿರ ವರ್ಷ ಕಳೆದರೂ ಬದಲಾಗದಂತಹುದು ಎಂಬುದು ಕಠೋರ ಸತ್ಯವಾಗಿ ಮನಸ್ಸನ್ನು ಆವರಿಸುತ್ತದೆ.
ಶಶಿಧರ ಹಾಲಾಡಿ ಕಾದಂಬರಿ “ನದಿ ದಾಟಿ ಬಂದವರು” ಕುರಿತು ಬಿ.ಕೆ. ಮೀನಾಕ್ಷಿ ಬರಹ